ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿದೆ. ನಿನ್ನೆಯಷ್ಟೇ ಅನುಷಾ ಅವರು ಎಲಿಮಿನೇಟ್ ಆಗಿ ಹೊರ ನಡೆದಿದ್ದಾರೆ. ಎಂಟನೇ ವಾರದ ಮೊದಲ ದಿನವೇ ನಾಮಿನೇಷನ್ ಕಾವು ಜೋರಾಗಿದೆ. ಎಲಿಮಿನೇಷನ್ನ ನಾಮಿನೇಷನ್ ಗದ್ದಲದಲ್ಲಿ ಮನೆಮಂದಿಯ ಮನಸ್ಸು ಕದಲಿದೆ. ಸ್ನೇಹ ಮುರಿದುಬಿದ್ದಿದೆ. ಒಳಗಿನ ಕಿಚ್ಚು ಹೊರ ಬಂದಿದೆ. ಮುಂದೇನಾಗಬಹುದು ಎಂಬ ಕುತೂಹಲದಲ್ಲಿ ಕನ್ನಡಿಗರಿದ್ದಾರೆ.
''ನಾಮಿನೇಷನ್ನಲ್ಲಿ ಒಡೆಯಿತಾ ಸದಸ್ಯರ ಒಗ್ಗಟ್ಟು?'' ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಎಂಬ ಕ್ಯಾಪ್ಷನ್ನೊಂದಿಗೆ ಬಿಗ್ ಬಾಸ್ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಳಿಸಿದೆ.
ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಶೋಭಾ ಶೆಟ್ಟಿ ಮತ್ತು ರಜತ್ ಎಂಟ್ರಿ ಕೊಟ್ಟಿದ್ದಾರೆ. ಮನೆಗೆ ಅವರ ಎಂಟ್ರಿ ಬಹಳ ಅದ್ಧೂರಿಯಾಗೇ ನಡೆದಿದೆ. ಮನೆಗೆ ಬರುತ್ತಿದ್ದಂತೆ ತಮ್ಮ ನೇರನುಡಿಗಳಿಗೆ ಸ್ಪರ್ಧಿಗಳಿಗೆ ಶಾಕ್ ಕೊಟ್ಟಿದ್ದಾರೆ. ಇದರ ನಡುವೆಯೇ ಬಂದ ನಾಮಿನೇಷನ್ ಪ್ರೊಸೆಸ್ ಮನೆಯ ಕಾವನ್ನು ಮತ್ತಷ್ಟು ಹೆಚ್ಚಿಸಿದೆ. ಮನದೊಳಗೆ ಅದುಮಿಟ್ಟುಕೊಂಡಿದ್ದ ಆಕ್ರೋಶ ಈಗ ಬಹಿರಂಗವಾಗೇ ವ್ಯಕ್ತವಾಗಿದೆ.
ಮಡಿಕೆ ಒಡೆದು ನಾಮನೇಷನ್ ಹೆಸರು ಸೂಚಿಸುವಂತೆ ಸ್ಪರ್ಧಿಗಳಿಗೆ ಬಿಗ್ ಬಾಸ್ ಸೂಚಿಸಿದ್ದಾರೆ. ಅದರಂತೆ ಮಂಜಣ್ಣನ ಕೆಲ ಮಾತುಗಳು ನನ್ನನ್ನು ಕುಗ್ಗಿಸಿವೆ ಎಂದು ಮೋಕ್ಷಿತಾ ತಿಳಿಸಿದ್ದಾರೆ. ಇದು ಮಂಜು ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಈವರೆಗೆ ಮಂಜು, ಗೌತಮಿ, ಮೋಕ್ಷಿತಾ ಆಪ್ತ ಸ್ನೇಹಿತರಾಗಿ ಗುರುತಿಸಿಕೊಂಡಿದ್ದರು. ಆದರೆ ಕಳೆದ ವಾರವಷ್ಟೇ ನಾನೆಲ್ಲೋ ಸೈಡ್ಲೈನ್ ಆಗುತ್ತಿದ್ದೇನೋ ಎಂಬ ಭಾವನೆಯನ್ನು ಮೋಕ್ಷಿತಾ ಮನೆಯ ಇತರ ಸ್ಪರ್ಧಿಗಳೊಂದಿಗೆ ಹಂಚಿಕೊಂಡಿದ್ದರು. ಇದೀಗ ಮನದೊಳಗಿನ ಅಸಮಾಧಾನ ಎಲ್ಲರೆದುರು ಬಹಿರಂಗವಾಗಿದೆ.
ಮೋಕ್ಷಿತಾ ಕೊಟ್ಟ ಕಾರಣಗಳಿಂದ ಅಸಮಾಧಾನಗೊಂಡ ಮಂಜು, ಇನ್ನು ಮುಂದೆ ನನ್ನನ್ನು ಅಣ್ಣ ಎಂದು ಕರೆಯಬೇಡಿ. ಅಣ್ಣ ಪದವನ್ನು ಬಳಕೆ ಮಾಡಬೇಡಿ ಎಂದು ಕೈಮುಗಿದು ಕೇಳಿಕೊಂಡಿದ್ದಾರೆ. ಇವರು ಮೂವರೇ ಹೆಚ್ಚಾಗಿ ಸಮಯ ಕಳೆಯುತ್ತಾರೆ. ಉಳಿದವರೊಂದಿಗೆ ಬೆರೆಯುವುದಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಇದೀಗ ಈ ಸ್ನೇಹದಲ್ಲಿ ಬಿರುಕು ಮೂಡುವಂತೆ ತೋರುತ್ತಿದೆ.
ಇದನ್ನೂ ಓದಿ: 'ಟೈಗರ್ ಶ್ರಾಫ್ ಕಾಣುವುದಕ್ಕಿಂತಲೂ ಹೆಚ್ಚು ಅದ್ಭುತ': 'ಬಾಘಿ 4' ನಿರ್ದೇಶಕ ಹರ್ಷ ಹೇಳಿದ್ದಿಷ್ಟು
ಇನ್ನು ನಾಮಿನೇಷನ್ ವಿಚಾರವಾಗಿ ಮಂಜು ಮತ್ತು ತ್ರಿವಿಕ್ರಮ್ ನಡುವೆ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ. ಪರ್ಸನಲ್ ಟಾರ್ಗೆಟ್ ಎಂದು ತ್ರಿವಿಕ್ರಮ್ ಹೇಳಿದ್ರೆ, ಇನ್ನೊಬ್ಬರನ್ನು ತುಳಿದು ಮೇಲೆ ಬರುತ್ತಾರೆ ಎಂದು ಮಂಜು ಆರೋಪಿಸಿದ್ದಾರೆ. ರೊಚ್ಚಿಗೆದ್ದ ತ್ರಿವಿಕ್ರಮ್ ದನಿ ಏರಿಸಿ ಮಾತನಾಡಲು ನಮಗೂ ಬರುತ್ತದೆ. ನೀವೇನು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಶಿವರಾಜ್ಕುಮಾರ್ 'ಭೈರತಿ ರಣಗಲ್'ಗೆ ಭರ್ಜರಿ ರೆಸ್ಪಾನ್ಸ್: ಮೊದಲ 3 ದಿನದ ಕಲೆಕ್ಷನ್ ಮಾಹಿತಿ ಇಲ್ಲಿದೆ
ಇದಕ್ಕೂ ಮುನ್ನ ''ಡಬಲ್ ವೈಲ್ಡ್ ಕಾರ್ಡ್ ಎಂಟ್ರಿಗೆ ಯಾರೆಲ್ಲಾ ಶೇಕ್ ಆದ್ರು?'' ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನೊಂದಿಗೆ ಬಿಗ್ ಬಾಸ್ ಪ್ರೋಮೋ ಅನಾವರಣಗೊಳಿಸಿತ್ತು. ವೈಲ್ಡ್ ಕಾರ್ಡ್ ಮೂಲಕ ಬಂದ ಶೋಭಾ ಶೆಟ್ಟಿ ಮತ್ತು ರಜತ್ ಕಿಶನ್ ತಮ್ಮ ನೇರನುಡಿಗಳಿಂದ ಸ್ಪರ್ಧಿಗಳಿಗೆ ಶಾಕ್ ಕೊಟ್ಟಿದ್ದಾರೆ.