ETV Bharat / entertainment

ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆಯಂದೇ ಅಯೋಧ್ಯೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ನಿಖಿಲ್ ಕುಮಾರಸ್ವಾಮಿ - birthday in Ayodhya

ಶ್ರೀ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ತೆರಳಿರುವ ನಟ ನಿಖಿಲ್​ ಕುಮಾರಸ್ವಾಮಿ ಅವರು ಅಯೋಧ್ಯೆಯಲ್ಲೇ ತಾತ, ಅಜ್ಜಿ, ತಂದೆ ಜೊತೆಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

Nikhil Kumaraswamy celebrated his birthday in Ayodhya
ಅಯೋಧ್ಯೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ನಿಖಿಲ್​ ಕುಮಾರಸ್ವಾಮಿ
author img

By ETV Bharat Karnataka Team

Published : Jan 22, 2024, 2:45 PM IST

Updated : Jan 22, 2024, 3:37 PM IST

ಅಯೋಧ್ಯೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ನಿಖಿಲ್​ ಕುಮಾರಸ್ವಾಮಿ

ಜಾಗ್ವಾರ್​ ಹಾಗೂ ಸೀತಾರಾಮ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಬ್ರ್ಯಾಂಡ್​ ಕ್ರಿಯೇಟ್​ ಮಾಡಿಕೊಂಡ ನಟ ನಿಖಿಲ್​ ಕುಮಾರಸ್ವಾಮಿ. ಸದ್ಯ ತಮಿಳು​ ಸಿನಿರಂಗದ ಪ್ರತಿಷ್ಠಿತ ಲೈಕಾ ಸಿನಿಮಾ ನಿರ್ಮಾಣ ಸಂಸ್ಥೆಯ ಜೊತೆ, ಇನ್ನೂ ಹೆಸರಿಡದ ಸಿನಿಮಾವೊಂದರಲ್ಲಿ ಅಭಿನಯಿಸುತ್ತಿರುವ ನಿಖಿಲ್​ ಕುಮಾರಸ್ವಾಮಿ ಅವರು ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

33ನೇ ವಸಂತಕ್ಕೆ ಕಾಲಿಟ್ಟಿರುವ ನಿಖಿಲ್ ಕುಮಾರಸ್ವಾಮಿ ಕಳೆದ ವರ್ಷ ಅಭಿಮಾನಿಗಳ ಜೊತೆ ಜೆ.ಪಿ ನಗರದ ನಿವಾಸದಲ್ಲಿ ಗ್ರ್ಯಾಂಡ್ ಆಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದರು. ಆದರೆ, ಈ ವರ್ಷ ನಿಖಿಲ್ ಕುಮಾರಸ್ವಾಮಿ ವಿಶೇಷವಾಗಿ ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ.

ಹೌದು, ಇಂದು ಭಾರತದಾದ್ಯಂತ ರಾಮ ಸ್ಮರಣೆ ಮಾಡುತ್ತಿದ್ದು, ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ನಡೆದಿದೆ. ಶ್ರಿ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ನಿಖಿಲ್​ ಕುಮಾರಸ್ವಾಮಿ ಹಾಗೂ ಕುಟುಂಬಕ್ಕೂ ಆಹ್ವಾನ ಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಿಖಿಲ್ ಕುಮಾರಸ್ವಾಮಿ ಅವರು, ತಂದೆ ಹೆಚ್​.ಡಿ.ಕುಮಾರಸ್ವಾಮಿ ಹಾಗೂ ತಾತ ಹೆಚ್​.ಡಿ.ದೇವೇಗೌಡ ಹಾಗೂ ಅಜ್ಜಿ ಚೆನ್ನಮ್ಮ ಅವರ ಜೊತೆಗೆ ಭಾನುವಾರವೇ ವಿಶೇಷ ವಿಮಾನದಲ್ಲಿ ಅಯೋಧ್ಯೆಗೆ ತೆರಳಿದ್ದಾರೆ.​

ಹಾಗಾಗಿ ಈ ಬಾರಿ ನಿಖಿಲ್​ ಕುಮಾರಸ್ವಾಮಿ ಅವರು ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಆಗಿಲ್ಲ. ಬದಲಾಗಿ ಇಂದು ಅಯೋಧ್ಯೆಯಲ್ಲಿ ತಂದೆ, ತಾತ ಹಾಗೂ ಅಜ್ಜಿ ಜೊತೆಗೆ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ತಾತ, ಅಜ್ಜಿ ಹಾಗೂ ತಂದೆಯ ಆಶೀರ್ವಾದ ಪಡೆದು, ಅವರುಗಳ ಕೈಯಲ್ಲೇ ಕೇಕ್​​​ ಕಟ್​ ಮಾಡಿಸುವ ಮೂಲಕ ತಮ್ಮ ಬರ್ತ್​ ಡೇ ಆಚರಣೆ ಮಾಡಿಕೊಂಡಿದ್ದಾರೆ.

ಈ ವೇಳೆ ನಿಖಿಲ್ ಕುಮಾರಸ್ವಾಮಿ ಮಾತನಾಡಿ, "ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ದಿನವೇ ಪುಣ್ಯಭೂಮಿ ಅಯೋಧ್ಯೆಯಲ್ಲಿ ಜನ್ಮದಿನ ಆಚರಿಸಿಕೊಂಡಿದ್ದು ನನ್ನ ಪುಣ್ಯ. ಈ ಸಂತೋಷದ ಗಳಿಗೆಯಲ್ಲಿ ‌ತಂದೆಯವರಾದ ಕುಮಾರಸ್ವಾಮಿ ಹಾಗೂ ತಾತ ದೇವೇಗೌಡ ಮತ್ತು ಅಜ್ಜಿ ಚೆನ್ನಮ್ಮ ಜೊತೆಯಲ್ಲಿ ಇದ್ದದ್ದು ಮತ್ತಷ್ಟು ಸಂಭ್ರಮ ಹೆಚ್ಚಿಸಿದೆ" ಎಂದರು.

ಲೈಕಾ ನಿರ್ಮಾಣದ ಇನ್ನೂ ಹೆಸರಿಡದ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿನಯಸುತ್ತಿದ್ದು, ಚಿತ್ರಕ್ಕೆ ಲಕ್ಷ್ಮಣ್ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಚಿತ್ರೀಕರಣ ಭರದಿಂದ ಸಾಗಿದ್ದು, ನಾಯಕಿಯಾಗಿ ಯುಕ್ತಿ ತರೇಜಾ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಮೂಲಕ ಲೈಕಾ ಸಂಸ್ಥೆ ಮೊದಲ ಬಾರಿಗೆ ಕನ್ನಡ ಇಂಡಸ್ಟ್ರಿಯ ಸಿನಿಮಾದ ಮೇಲೆ ಬಂಡವಾಳ ಹೂಡುತ್ತಿದೆ.

ಇದನ್ನೂ ಓದಿ: ಹನುಮಾನ್​ ಗಢಿ ದೇಗುಲದಲ್ಲಿ ನಟಿ ಕಂಗನಾ ರಣಾವತ್​ ಸೇವಾ ಕಾರ್ಯ

Last Updated : Jan 22, 2024, 3:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.