ಜನಪ್ರಿಯ ಕಾಮಿಡಿಯನ್ ಕಪಿಲ್ ಶರ್ಮಾ ಅವರ ಹೊಸ ನೆಟ್‌ಫ್ಲಿಕ್ಸ್ ಕಾರ್ಯಕ್ರಮ, 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ'ನಲ್ಲಿ ಹಿರಿಯ ನಟಿ ನೀತು ಕಪೂರ್ ತಮ್ಮ ಮಗ ರಣ್ಬೀರ್ ಕಪೂರ್ ಅವರನ್ನು 'ಸಂಸ್ಕಾರವಂತ' ಎಂದು ಹೇಳಿರುವುದೀಗ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಕಾರ್ಯಕ್ರಮ ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ. ವಿಶೇಷವಾಗಿ ನೀತು ಕಪೂರ್ ಅವರ ಹೇಳಿಕೆಯೊಂದು ಸಿಕ್ಕಾಪಟ್ಟೆ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಮಗನನ್ನು ಗುಣಗಾನ ಮಾಡಿರುವುದರ ಬಗ್ಗೆ ಪರ-ವಿರೋಧ ಚರ್ಚೆ ಆಗುತ್ತಿದೆ.
ನೀತು ಕಪೂರ್ ಹೇಳಿಕೆ ಬಗ್ಗೆ ಸೋಷಿಯಲ್ ಮೀಡಿಯಾ (Reddit) ಬಳಕೆದಾರರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ರಣ್ಬೀರ್ ಅವರನ್ನು ಸಂಸ್ಕಾರಿ ಹುಡುಗ ಎಂದು ಕರೆಯೋ ನೀತು ಬಗ್ಗೆ ಬೇಸರಗೊಂಡಿದ್ದಾರೆ. ಕಾರ್ಯಕ್ರಮದಲ್ಲಿ ವಿನಮ್ರವಾಗಿ ಕಾಣಿಸಿಕೊಂಡಿರುವ ರಣ್ಬೀರ್ ಅವರ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವರು ನೀತು ತಮ್ಮ ಮಗನ ಬಗ್ಗೆ ಹೊಗಳಿದ್ದರ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದಾರೆ. ಹಲವರು ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್ ಅವರೊಂದಿಗಿನ ರಣ್ಬೀರ್ ಅವರ ಹಿಂದಿನ ಸಂಬಂಧಗಳನ್ನು ಈ ವೇಳೆ ಎಳೆದು ತಂದಿದ್ದಾರೆ.
ನೆಟ್ಟಿಗರೋರ್ವರು ನೀತು ಅವರ ದೃಷ್ಟಿಕೋನವನ್ನು ಸಮರ್ಥಿಸಿಕೊಂಡಿದ್ದಾರೆ. ನಟಿಯ ದೃಷ್ಟಿಕೋನದಲ್ಲಿ, ರಣ್ಬೀರ್ ಓರ್ವ ಕರ್ತವ್ಯನಿಷ್ಠ ಮಗ. ವಿಶೇಷವಾಗಿ ಕಠಿಣ ಸಮಯದಲ್ಲಿ ತಾಯಿಯನ್ನು ಭಾವನಾತ್ಮಕವಾಗಿ ಬೆಂಬಲಿಸಿದ್ದಾರೆ. ರಣ್ಬೀರ್ ಲವ್ ರಿಲೇಶನ್ಶಿಪ್ಸ್ ವಿಚಾರಗಳಲ್ಲಿ ಉತ್ತಮವಾಗಿಲ್ಲದಿದ್ದರೂ, ಕುಟುಂಬದ ಬಗ್ಗೆ ಸಾಕಷ್ಟು ಕಾಳಜಿ ಉಳ್ಳ ವ್ಯಕ್ತಿ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ ಎಂದು ನಟನ ಪರ ವಾದಿಸಿದರು.
ಮತ್ತೋರ್ವ ಬಳಕೆದಾರರು ನೀತು ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಹಲವು ಲವ್ ರಿಲೇಶನ್ಶಿಪ್ಗಳ ಹೊರತಾಗಿಯೂ, ತಾಯಿಯಾಗಿ ಮಗನನ್ನು ಹೊಗಳಿದ್ದಾರೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಗನಾಗಿ, ನೀತು ಅವರ ಜೀವನದಲ್ಲಿ ರಣ್ಬೀರ್ ಧನಾತ್ಮಕ ಪಾತ್ರ ನಿರ್ವಹಿಸಿದ್ದಾರೆ. ಪ್ರತಿಯೋರ್ವರ ಜೀವನದಲ್ಲೂ ಸಂಕೀರ್ಣತೆಗಳಿರುತ್ತವೆ. ಒಂದು ಅಂಶದಲ್ಲಿ ಉತ್ತಮವಾಗಿದ್ದರೆ, ಮತ್ತೊಂದರಲ್ಲಿ ಕೊರತೆಯಿರುತ್ತದೆ ಎಂದು ನಟನ ಪರ ವಾದಿಸಿದರು.
ಇದನ್ನೂ ಓದಿ: ಮಂಗಳವಾರ ಸೆಟ್ಟೇರಲಿದೆ ರಣ್ಬೀರ್, ಸಾಯಿಪಲ್ಲವಿ, ಯಶ್ ನಟನೆಯ 'ರಾಮಾಯಣ' - Ramayana
ನೀತು ಅವರಿಗೆ ರಣ್ಬೀರ್ ಒಬ್ಬ ಒಳ್ಳೆಯ ಮಗ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ರಣ್ಬೀರ್ ಹೆಚ್ಚಾಗಿ ತಾಯಿಯ ಇಷ್ಟಗಳು ಮತ್ತು ಇಷ್ಟಪಡದಿರುವ ವಿಚಾರಗಳ ಬಗ್ಗೆ ಗಮನ ಹರಿಸುತ್ತಾರೆ. ತಾಯಿಗೆ ಭಾವನಾತ್ಮಕವಾಗಿ ಬೆಂಬಲವಾಗಿರಬಹುದು. ಅಲ್ಲದೇ, ನಟನೆಗೆ ಮರಳಲು ಪ್ರೋತ್ಸಾಹಿಸಿದ್ದಾರೆ. ಹೀಗಿದ್ದಲ್ಲಿ ಓರ್ವ ತಾಯಿಯಾಗಿ ಮಗನನ್ನು ಏಕೆ ಹೊಗಳುವುದಿಲ್ಲ ಹೇಳಿ? ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: '12th ಫೇಲ್' ನಟ ವಿಕ್ರಾಂತ್ ತಮಗೆ ಸಿಕ್ಕ 'ವರ್‌ದಾನ್'ಗೆ ಖುಷಿ ವ್ಯಕ್ತಪಡಿಸಿದ್ದು ಹೀಗೆ - Vikrant Massey Tattoo
ಕಾಫಿ ವಿತ್ ಕರಣ್ ಸೀಸನ್ 8ರಲ್ಲಿ ಸೈಫ್ ಅಲಿ ಖಾನ್ ಅವರೊಂದಿಗೆ ತಾಯಿ, ಹಿರಿಯ ನಟಿ ಶರ್ಮಿಳಾ ಠಾಗೋರ್ ಕಾಣಿಸಿಕೊಂಡಿದ್ದರು. ಆ ಶೋಗೂ ಕಪಿಲ್ ಶರ್ಮಾ ಅವರ ಈ ಶೋಗೂ ಹೋಲಿಸಿ, ನೀತು ಕಪೂರ್ ಹೇಳಿಕೆ ಸರಿಯೇ ಎಂದು ಹಲವರು ಪ್ರಶ್ನಿಸಿದ ಹಿನ್ನೆಲೆ ವಾದ-ವಿವಾದ ಉಲ್ಬಣಗೊಳ್ಳಲು ಕಾರಣವಾಯಿತು. ಕೆಲವರು ರಣ್ಬೀರ್ ಅವರ ತೀರಾ ವೈಯಕ್ತಿಕ (ಪ್ರೇಮ ಸಂಬಂಧಗಳು) ವಿಚಾರಗಳನ್ನು ಇಲ್ಲಿ ಎಳೆದು ತಂದು ಟೀಕಿಸಿದರು. ಹಳೆಯ ರಿಲೀಶನ್ಶಿಪ್ ಬಗ್ಗೆಯೂ ಇಲ್ಲಿ ಚರ್ಚೆ ನಡೆಸಲಾಗಿದೆ.