ETV Bharat / entertainment

ಹಿರಿಯ ಚಲನಚಿತ್ರ ನಿರ್ದೇಶಕ, ರಂಗಕರ್ಮಿ ಎಂ.ಎಸ್.ಸತ್ಯು ಅವರಿಗೆ 'ಜೀವಮಾನ ಸಾಧನೆ' ಪ್ರಶಸ್ತಿ - Lifetime Achievement Award

15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 'ಜೀವಮಾನ ಸಾಧನೆ' ಪ್ರಶಸ್ತಿಗೆ ಎಂ.ಎಸ್.ಸತ್ಯು ಅವರು ಆಯ್ಕೆಯಾಗಿದ್ದಾರೆ.

MS Satyu
ಎಂ.ಎಸ್.ಸತ್ಯು
author img

By ETV Bharat Karnataka Team

Published : Mar 6, 2024, 7:08 AM IST

ಬೆಂಗಳೂರು: ಅಂತಾರಾಷ್ಟ್ರೀಯ ಖ್ಯಾತಿಯ ಚಲನಚಿತ್ರ ನಿರ್ದೇಶಕ, ಹಿರಿಯ ರಂಗಕರ್ಮಿ ಹಾಗೂ ಕಲಾ ನಿರ್ದೇಶಕರಾದ ಮೈಸೂರು ಶ್ರೀನಿವಾಸ ಸತ್ಯು (ಎಂ.ಎಸ್.ಸತ್ಯು) ಕಲಾ ಜಗತ್ತಿಗೆ ಸಲ್ಲಿಸಿರುವ ಅನನ್ಯ ಸೇವೆಯನ್ನು ಗುರುತಿಸಿ, ಅವರನ್ನು 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 'ಜೀವಮಾನ ಸಾಧನೆ' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಸತ್ಯು ಅವರ ನಿರ್ದೇಶನದ ಹಿಂದಿ ಚಿತ್ರ 'ಗರಂ' ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದ್ದರೆ, ಕನ್ನಡದ 'ಬರ' ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದಿತ್ತು. ಕಲಾ ನಿರ್ದೇಶಕರಾಗಿ ನಿರ್ದೇಶಿಸಿದ ಮೊದಲ ಚಲನಚಿತ್ರ 'ಹಕೀಕತ್' ಫಿಲ್ಮ್ ಫೇರ್ ಪ್ರಶಸ್ತಿ ಗೆದ್ದಿತ್ತು. 'ದಾರಾಶೀಕೋ' ನಾಟಕ ಆಧುನಿಕ ಕಾಲಘಟ್ಟದ ಉತ್ಕೃಷ್ಟ ನಾಟಕವೆಂದು ಗುರುತಿಸಲ್ಪಟ್ಟಿದೆ.

ಸಿಎಂ ಅಭಿನಂದನೆ: "ನಮ್ಮೂರಿನಲ್ಲಿ ಹುಟ್ಟಿದ ಮೇರು ಸಾಧಕ, ಹಿರಿಯ ರಂಗಕರ್ಮಿಯೊಬ್ಬರು ಈ ಪ್ರಶಸ್ತಿಗೆ ಆಯ್ಕೆಯಾಗಿರುವುದು ಅತ್ಯಂತ ಖುಷಿಯ ವಿಚಾರ. ನನ್ನ ಹೃತ್ಪೂರ್ವಕ ಅಭಿನಂದನೆಗಳು" ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಆಸ್ಕರ್​ಗೆ ಅತ್ಯಧಿಕ ನಾಮ ನಿರ್ದೇಶನಗೊಂಡರೂ ಪ್ರಶಸ್ತಿ ಗೆಲ್ಲದ ಐದು ಸಿನಿಮಾಗಳು ಬಗ್ಗೆ ನಿಮಗೆ ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.