ETV Bharat / entertainment

'Mr ನಟ್ವರ್ ಲಾಲ್' ಸಿನಿಮಾ ಟ್ರೇಲರ್ ಬಿಡುಗಡೆ - ತನುಷ್ ಶಿವಣ್ಣ

'Mr ನಟ್ವರ್ ಲಾಲ್' ಟ್ರೇಲರ್ ಹಾಗೂ ಹಾಡುಗಳು ಸಿನಿಮಾಪ್ರಿಯರ ಮೆಚ್ಚುಗೆ ಗಳಿಸುತ್ತಿವೆ.

Mr ನಟ್ವರ್ ಲಾಲ್ ಸಿನಿಮಾ ತಂಡ
Mr ನಟ್ವರ್ ಲಾಲ್ ಸಿನಿಮಾ ತಂಡ
author img

By ETV Bharat Karnataka Team

Published : Feb 12, 2024, 10:02 PM IST

ತನುಷ್ ಸಿನಿಮಾಸ್ ಲಾಂಛನದಲ್ಲಿ ತನುಷ್ ಶಿವಣ್ಣ ನಿರ್ಮಿಸಿ, ನಾಯಕನಾಗಿ ನಟಿಸಿರುವ ಹಾಗೂ ವಿ.ಲವ ನಿರ್ದೇಶನದ 'Mr ನಟ್ವರ್ ಲಾಲ್' ಚಿತ್ರದ ಟ್ರೇಲರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಕುಣಿಗಲ್ ಶಾಸಕ ಡಾ.ರಂಗನಾಥ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್, ನಿರ್ಮಾಪಕರಾದ ಭಾ.ಮ.ಹರೀಶ್, ಶಿಲ್ಪ ಶ್ರೀನಿವಾಸ್, ಟಿ.ಪಿ.ಸಿದ್ದರಾಜು, ಚಿಂಗಾರಿ ಮಹದೇವ್, ಕುಶಾಲ್, ಭಾ.ಮ.ಗಿರೀಶ್, ವಿತರಕರ ವಲಯದ ಅಧ್ಯಕ್ಷ ವೆಂಕಟೇಶ್, ನಿರ್ದೇಶಕ ಹಾಗೂ ಗೀತೆ ರಚನೆಕಾರ ಬಹದ್ದೂರ್ ಚೇತನ್ ಮುಂತಾದವರು ಸಮಾರಂಭಕ್ಕೆ ಆಗಮಿಸಿ ಟ್ರೇಲರ್ ಬಿಡುಗಡೆಗೊಳಿಸಿ ಶುಭಕೋರಿದರು.

Mr ನಟ್ವರ್ ಲಾಲ್ ಸಿನಿಮಾ ತಂಡ
Mr ನಟ್ವರ್ ಲಾಲ್ ಸಿನಿಮಾ ತಂಡ

ನಿರ್ದೇಶಕ ವಿ.ಲವ ಮಾತನಾಡಿ, ಇದೊಂದು ಕ್ರೈಂ ಥ್ರಿಲ್ಲರ್, ಆ್ಯಕ್ಷನ್ ಚಿತ್ರ. ಬೆಂಗಳೂರಿನಲ್ಲಿ ನಡೆದ ನೈಜ ಘಟನೆ ಚಿತ್ರಕ್ಕೆ ಸ್ಪೂರ್ತಿ. ತನುಷ್ ಶಿವಣ್ಣ ನಾಯಕ. ಸೋನಾಲ್ ಮೊಂತೆರೊ ನಾಯಕಿ. ನಾಗಭೂಷಣ, ಕಾಕ್ರೋಜ್ ಸುಧಿ, ಯಶ್ ಶೆಟ್ಟಿ, ರಾಜೇಶ್ ನಟರಂಗ, ರಘು ರಾಮನಕೊಪ್ಪ, ಹರಿಣಿ ಶ್ರೀಕಾಂತ್, ಸುಂದರರಾಜ್, ಕಾಂತರಾಜು ಕಡ್ಡಿಪುಡಿ, ಸುಜಯ್ ಶಾಸ್ತ್ರಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಧರ್ಮವಿಶ್ ಸಂಗೀತ ನಿರ್ದೇಶನ, ವಿಲಿಯಂ ಡೇವಿಡ್ ಛಾಯಾಗ್ರಹಣ ಹಾಗೂ ಕೆ‌.ಎಂ.ಪ್ರಕಾಶ್ ಸಂಕಲನವಿದೆ. ಟ್ರೇಲರ್​ನಲ್ಲಿ ಚಿತ್ರದ ಎರಡನೇ ಭಾಗದ ಸುಳಿವು ಕೂಡ ನೀಡಿದ್ದೇವೆ. ನಮಗೆ ಪ್ರೋತ್ಸಾಹವಿರಲಿ ಎಂದು ಹೇಳಿದರು.

Mr ನಟ್ವರ್ ಲಾಲ್ ನಾನು ನಾಯಕನಾಗಿ ನಟಿಸಿರುವ ನಾಲ್ಕನೇ ಚಿತ್ರ. ಎಂಟು ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ನಿರ್ಮಾಣ ಕೂಡ ನನ್ನದೇ. ಒಂದು ಹಂತದಲ್ಲಿ ಹಣದ ಸಮಸ್ಯೆಯಿಂದಾಗಿ ಸಿನಿಮಾ ನಿಲ್ಲಿಸಿಬಿಡೋಣ ಅಂದುಕೊಂಡಿದ್ದೆ. ಆದರೆ ನಾನು ನಂಬಿರುವ ಅಮ್ಮನವರ ದಯೆಯಿಂದ ಅನೇಕ ಸ್ನೇಹಿತರು ಸಹಾಯಕ್ಕೆ ಬಂದರು. ಅವರೆಲ್ಲರ ಸಹಾಯ ಹಾಗೂ ನನ್ನ ಇಡೀ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ಇದೇ ತಿಂಗಳ 23ರಂದು ಬಿಡುಗಡೆಯಾಗುತ್ತಿದೆ ಎಂದು ನಾಯಕ ಹಾಗೂ ನಿರ್ಮಾಪಕ ತನುಷ್ ಶಿವಣ್ಣ ಹೇಳಿದರು.

Mr ನಟ್ವರ್ ಲಾಲ್ ಸಿನಿಮಾ ತಂಡ
Mr ನಟ್ವರ್ ಲಾಲ್ ಸಿನಿಮಾ ತಂಡ

ನಂದಿನಿ ಎಂಬುದು ನನ್ನ ಪಾತ್ರದ ಹೆಸರು ಎಂದು ನಾಯಕಿ ಸೋನಾಲ್ ಮೊಂತೆರೊ ತಿಳಿಸಿದರು. ಚಿತ್ರದಲ್ಲಿ ಅಭಿನಯಿಸಿರುವ ಹರಣಿ ಶ್ರೀಕಾಂತ್, ರಘು ರಮಣಕೊಪ್ಪ, ಕಾಕ್ರೋಜ್ ಸುಧೀ, ವಿಜಯ್ ಚೆಂಡೂರ್ ಹಾಗೂ ಛಾಯಾಗ್ರಾಹಕ ವಿಲಿಯಂ ಡೇವಿಡ್ ಮುಂತಾದವರು ಮಾತನಾಡಿದರು.

ಈಗಾಗಲೇ ಟೀಸರ್ ಹಾಗೂ ಹಾಡುಗಳು ಮೆಚ್ಚುಗೆ ಪಡೆದುಕೊಂಡಿವೆ. ಟ್ರೇಲರ್ ಕೂಡ ಸಖತ್ತಾಗಿದೆ. ನಾನು ಎರಡು ಹಾಡುಗಳನ್ನು ಬರೆದಿದ್ದೇನೆ ಎಂದು ಬಹದ್ದೂರ್ ಚೇತನ್ ಹೇಳಿದರು.

ಇದನ್ನೂ ಓದಿ: 'ಫೋಟೋ' ಜೊತೆಗೆ ಪ್ರಕಾಶ್ ರಾಜ್: ಲಾಕ್​ಡೌನ್ ಸಂಕಷ್ಟದ ಕಥೆ ಪ್ರಸೆಂಟ್ ಮಾಡ್ತಿದ್ದಾರೆ ಬಹುಭಾಷಾ ನಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.