ETV Bharat / entertainment

'ಮಾಡರ್ನ್ ಮಾಸ್ಟರ್ಸ್' ಟ್ರೈಲರ್ ಔಟ್: ಟಾಲಿವುಡ್‌ನಿಂದ ಹಾಲಿವುಡ್‌ ವರೆಗೆ.. ರಾಜಮೌಳಿ ಟ್ಯಾಲೆಂಟ್​ ಬಣ್ಣಿಸಿದ ಸಿನಿ ಪ್ರಮುಖರು - Modern Masters trailer out

author img

By ETV Bharat Karnataka Team

Published : Jul 22, 2024, 6:12 PM IST

ರಾಜಮೌಳಿ ಅವರ ದೂರದೃಷ್ಟಿ ಮತ್ತು ಸಿನಿ ಪ್ರಯಾಣ ಕುರಿತ ‘ಮಾಡರ್ನ್ ಮಾಸ್ಟರ್ಸ್’ ಡಾಕ್ಯುಮೆಂಟರಿ ಟ್ರೇಲರ್ ಇಂದು ಬಿಡುಗಡೆಯಾಗಿದೆ.

'ಮಾಡರ್ನ್ ಮಾಸ್ಟರ್ಸ್' ಟ್ರೈಲರ್ ಔಟ್
'ಮಾಡರ್ನ್ ಮಾಸ್ಟರ್ಸ್' ಟ್ರೈಲರ್ ಔಟ್ (Netflix documentary Documentary Poster)

ಹೈದರಾಬಾದ್​: ಜನಪ್ರಿಯ ಒಟಿಟಿ ಕಂಪನಿ ನೆಟ್‌ಫ್ಲಿಕ್ಸ್ ಟಾಲಿವುಡ್​ನ ಖ್ಯಾತ ನಿರ್ದೇಶಕ ಎಸ್​.ಎಸ್​ ರಾಜಮೌಳಿ ಅವರ ಕುರಿತ ಸಾಕ್ಷ್ಯಚಿತ್ರ (ಡಾಕ್ಯುಮೆಂಟರಿ) ಸರಣಿಯನ್ನು ತಯಾರಿಸಿದೆ. ರಾಜಮೌಳಿ ಅವರ ದೂರದೃಷ್ಟಿ ಮತ್ತು ಸಿನಿ ಪ್ರಯಾಣ ಕುರಿತ ‘ಮಾಡರ್ನ್ ಮಾಸ್ಟರ್ಸ್’ ಡಾಕ್ಯುಮೆಂಟರಿ ಟ್ರೇಲರ್ ಇಂದು ಬಿಡುಗಡೆಯಾಗಿದೆ. ‘ಮಾಡರ್ನ್ ಮಾಸ್ಟರ್ಸ್’ ಸಿದ್ಧವಾಗಿದ್ದು ಆಗಸ್ಟ್ 2ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

"ನಾನು ನಂಬಲಸಾಧ್ಯವಾದ ಕಥೆಯನ್ನು ಹೇಳಲು ಬಯಸುತ್ತೇನೆ. ಇಂತಹ ಚಲನಚಿತ್ರಗಳನ್ನು ಜನರು ನೋಡಬೇಕೆಂದು ನಾನು ಹೇಳಲು ಬಯಸುತ್ತೇನೆ" ಎಂಬ ರಾಜಮೌಳಿ ಅವರ ವಾಯ್ಸ್ ಓವರ್​ನಿಂದ ಟ್ರೇಲರ್ ಪ್ರಾರಂಭವಾಗಿದೆ.

ಅವತಾರ್ ಖ್ಯಾತಿಯ ಹಾಲಿವುಡ್‌ ನಿರ್ದೇಶಕ ಜೇಮ್ಸ್ ಕೆಮರೂನ್, ಮಾರ್ವೆಲ್ ಖ್ಯಾತಿಯ ಜೋ ರುಸ್ಸೋ, ಕರಣ್ ಜೋಹರ್, ಪ್ರಭಾಸ್, ರಾಮಚರಣ್, ಜೂನಿಯರ್ ಎನ್‌ಟಿಆರ್, ಎಂ.ಎಂ. ಕೀರವಾಣಿ, ರಮಾ ರಾಜಮೌಳಿ, ರಾಣಾ ದಗ್ಗುಬಾಟಿ ಸೇರಿದಂತೆ ಅನೇಕ ಗಣ್ಯರು ರಾಜಮೌಳಿ ಅವರ ಬಗ್ಗೆ ಮಾತನಾಡಿದ್ದಾರೆ. ಕರಣ್ ಜೋಹರ್ ರಾಜಮೌಳಿ ಅವರನ್ನು 'ಲೆಜೆಂಡ್' ಎಂದು ಟ್ಯಾಗ್ ಮಾಡಿದ್ದಾರೆ, ಜೂನಿಯರ್ ಎನ್‌ಟಿಆರ್, " ಇಲ್ಲಿಯವರೆಗೆ ಯಾರೂ ಹೇಳದ ಮತ್ತು ತೋರಿಸದ ಕಥೆಗಳನ್ನು ಜಗತ್ತಿಗೆ ಹೇಳಲು ರಾಜಮೌಳಿ ಹುಟ್ಟಿದ್ದಾರೆ" ಎಂದು ಬಣ್ಣಿಸಿದ್ದಾರೆ.

ತಮ್ಮ ಚಲನಚಿತ್ರ ವೃತ್ತಿಜೀವನದುದ್ದಕ್ಕೂ ಮತ್ತು ಆರ್​ಆರ್​ಆರ್​ ನತಂಹ ಸಿನಿಮಾದೊಂದಿಗೆ ರಾಜಮೌಳಿ ಹಲವಾರು ಕೌಶಲ್ಯಗಳನ್ನು ಕರಗತ ಮಾಡಿಕೊಂಡಿದ್ದಾರೆ, ಇದಕ್ಕಾಗಿ ಅವರು ಆಸ್ಕರ್ ಪ್ರಶಸ್ತಿಯನ್ನು ಸಹ ಗಳಿಸಿದ್ದಾರೆ. ನಿರ್ಮಾಪಕರಾದ ಅನುಪಮಾ ಚೋಪ್ರಾ ಪ್ರಸ್ತುತಪಡಿಸಿದ ಡಾಕ್ಯುಮೆಂಟರಿಯಲ್ಲಿ ಜೇಮ್ಸ್ ಕ್ಯಾಮರೂನ್ ಮತ್ತು ಜೋ ರುಸ್ಸೊ ಅವರಂತಹ ಜಾಗತಿಕ ತಾರೆಗಳು ಮಾತನಾಡಿರುವುದು ರಾಜಮೌಳಿ ಅವರ ಪ್ರತಿಭೆಯನ್ನು ವಿಶ್ವಕ್ಕೆ ಸಾರುವಂತೆ ಮಾಡಿದೆ.

ಡಾಕ್ಯುಮೆಂಟರಿಯನ್ನು ಫಿಲ್ಮ್ ಕಂಪ್ಯಾನಿಯನ್ ಸ್ಟುಡಿಯೋಸ್ ಸಹಯೋಗದೊಂದಿಗೆ ನೆಟ್‌ಫ್ಲಿಕ್ಸ್‌ ಮತ್ತು ಅಪ್ಲಾಸ್ ಎಂಟರ್‌ಟೈನ್‌ಮೆಂಟ್ ಜಂಟಿಯಾಗಿ ನಿರ್ಮಾಣ ಮಾಡಿವೆ. ರಾಘವ್ ಖನ್ನಾ ಡಾಕ್ಯುಮೆಂಟರಿಯನ್ನು ನಿರ್ದೇಶಿಸಿದ್ದಾರೆ. ಇದುವರೆಗಿನ ಮಾಸ್ಟರ್ ಕಥೆಗಾರನ ಪ್ರಯಾಣ, ಅವರ ದೂರದೃಷ್ಟಿ ಮತ್ತು ಭಾರತೀಯ, ಜಾಗತಿಕ ಚಲನಚಿತ್ರಗಳ ಮೇಲೆ ಅವರ ಪ್ರಭಾವವನ್ನು ಸಿನಿಮಾ ದಿಗ್ಗಜರ ದೃಷ್ಟಿಕೋನದಿಂದ ತಿಳಿಸುವ ಗುರಿಯನ್ನು ಈ ಡಾಕ್ಯುಮೆಂಟರಿ ಹೊಂದಿದೆ. ಇದು ಸಂದರ್ಶನಗಳು ಮತ್ತು ತೆರೆಮರೆಯ ದೃಶ್ಯಗಳ ತುಣುಕುಗಳನ್ನು ಒಳಗೊಂಡಿದೆ. ಟ್ರೇಲರ್ ಭಾರಿ ಕುತೂಹಲ ಮೂಡಿಸಿದ್ದು, ರಾಜಮೌಳಿ ಅವರ ಬಗ್ಗೆ ಇನ್ನೂ ಹೊರಜಗತ್ತಿಗೆ ಗೊತ್ತಿರದ ಅನೇಕ ಸಂಗತಿಗಳನ್ನು ವೀಕ್ಷಕರಿಗೆ ತೆರೆದಿಡಲಿದೆ ಎನ್ನಲಾಗಿದೆ.

ಇದನ್ನೂ ಓದಿ: ಯಶಸ್ವಿ 25ನೇ ದಿನಕ್ಕೆ ಕಾಲಿಟ್ಟ ಕಲ್ಕಿ 2898 AD: ಹಲವು ದಾಖಲೆಗಳು ಉಡೀಸ್​ - Kalki 2898 AD Box Office Collection

ETV Bharat Logo

Copyright © 2024 Ushodaya Enterprises Pvt. Ltd., All Rights Reserved.