ETV Bharat / entertainment

ವಾರಕ್ಕೂ ಮೊದಲೇ ಮನೀಶ್​ ಮಲ್ಹೋತ್ರಾ ಮನೆಯಲ್ಲಿ ದೀಪಾವಳಿ ಸಡಗರ: ಬೆಳಕಿನ ಜೊತೆಗೆ ಫ್ಯಾಷನ್​ ಸಂಭ್ರಮ - MANISH MALHOTRA DIWALI

ದೀಪಾವಳಿಯ ಸಮಾರಂಭದ ಈ ಸುಂದರ ಸಂಜೆಯಲ್ಲಿ ಮನೀಶ್​ ಮನೆಯಲ್ಲಿ ದೀಪದ ಬೆಳಕಿನ ಜೊತೆಗೆ ಸ್ಟೈಲ್​, ಫ್ಯಾಷನ್​ ಕೂಡ ಮಿಂಚಿದ್ದು ವಿಶೇಷವಾಗಿತ್ತು

Celebs at Manish Malhotra Diwali Bash
ಬಾಲಿವುಡ್​ ಸೆಲೆಬ್ರಿಟಿಗಳು (ಈಟಿವಿ ಭಾರತ್​)
author img

By ETV Bharat Entertainment Team

Published : Oct 23, 2024, 1:15 PM IST

ಹೈದರಾಬಾದ್​: ದೀಪಾವಳಿ ಎಂದರೆ ಅದು ಬೆಳಕಿನ ಸಂಭ್ರಮ. ಈ ಹಬ್ಬದ ಸಂತಸ ಬಾಲಿವುಡ್​ನಲ್ಲಿ ಜೋರಾಗಿಯೇ ಆರಂಭವಾಗಿದೆ. ದೀಪಾವಳಿಗೆ ವಾರಕ್ಕೆ ಮುನ್ನವೇ ಖ್ಯಾತ ವಸ್ತ್ರ ವಿನ್ಯಾಸಕ ಮನೀಶ್​ ಮಲ್ಹೋತ್ರಾ ಹಬ್ಬದ ಸಮಾರಂಭಕ್ಕೆ ಮುನ್ನುಡಿ ಬರದಿದ್ದು, ಈ ಬೆಳಕಲ್ಲಿ ಬಾಲಿವುಡ್​ ಮಂದಿ ಮಿಂಚಿದ್ದಾರೆ. ಅಕ್ಟೋಬರ್​ 22ರಂದು ಮನೀಶ್​ ಮಲ್ಹೋತ್ರಾ ಆಯೋಜಿಸಿದ್ದ ಹಬ್ಬದ ಆಚರಣೆಯ ಸಮಾರಂಭದಲ್ಲಿ ಬಾಲಿವುಡ್​ ಮಂದಿ ಭಾಗಿಯಾಗಿದ್ದು, ವರ್ಣರಂಜಿತ ಫ್ಯಾಷನ್​ ಉಡುಗೆಯಲ್ಲಿ ಕಂಡರು.

ನಟಿ ಆಲಿಯಾ ಭಟ್​ ತಮ್ಮ ಮದುವೆಯ ಮೆಹಂದಿ ಸಮಾರಂಭದ ಉಡುಗೆಯೊಂದಿಗೆ ಕಾರ್ಯಕ್ರಮದಲ್ಲಿ ಹಾಜರಾಗಿದ್ದಾರೆ. ಗುಲಾಬಿ, ಬಂಗಾರದ ಬಣ್ಣದ ದಿರಿಸಿನಲ್ಲಿ ಹೊಳೆಯುವ ಕಿವಿಯೋಲೆ ತೊಟ್ಟು ಎಂದಿನಂತೆ ಕ್ಯಾಮೆರಾ ಮುಂದೆ ಮಂದಹಾಸ ಚೆಲ್ಲಿದರು. ಈಕೆಯ ಹಿಂದೆಯೇ ತಮ್ಮ ಸ್ನೇಹಿತ ಒರಿಯೊಂದಿಗೆ ಆಗಮಿಸಿದ ಅನನ್ಯಾ ಪಾಂಡೆ ಕೂಡ ಬಿಳಿ ಬಣ್ಣದ ಸೀರೆಯಲ್ಲಿ ಸರಳ ಸುಂದರ ಸ್ಥಿಗ್ದ ನಗುವಿನಿಂದ ಮನಗೆದ್ದಿದರು.

ಕಾರ್ಯಕ್ರಮಕ್ಕೆ ಆಗಮಿಸಿದ ಬಾಲಿವುಡ್​ ತಾರೆಯರು (ಈಟಿವಿ ಭಾರತ್​)

ಇತ್ತೀಚೆಗಷ್ಟೇ ಪೋಷಕರಾಗಿ ಬಡ್ತಿ ಪಡೆದಿರುವ ನಟ ವರಣ್​ ದವನ್​ ಮತ್ತು ನತಾಶಾ ದಲಾಲ್​ ಕೂಡ ಈ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಚೆಂದದ ಗೊಂಬೆಯಂತೆ ಕಾರ್ಯಕ್ರಮಕ್ಕೆ ಆಗಮಿಸಿದ ನಟಿ ಜಾನ್ವಿ ಕಪೂರ್​ ಹೊಳೆಯುವ ನೀಲಿ ಮೆಟಾಲಿಕ್​ ಸೀರೆಯಲ್ಲಿ ಅಪ್ಸರೆಯಂತೆ ಕಂಗೊಳಿಸಿದರು.

ಘಟಾನುಘಟಿಗಳಿಂದ ಫ್ಯಾಷನ್​ ಝಲಕ್​: ಇವರ ಹೊರಾಗಿ ಬಾಲಿವುಡ್​ನ ಘಟಾನುಘಟಿಗಳಾದ ಕಾಜೋಲ್​, ಗೌರಿ ಖಾನ್​, ಕರಣ್​ ಜೋಹರ್​, ತಮನ್ನಾ ಭಾಟಿಯಾ, ವಿಜಯ್​ ವರ್ಮಾ ಕೂಡ ಭಾಗಿಯಾದರು. ಇನ್ನು ಇಳಿ ವಯಸ್ಸಿನಲ್ಲೂ ಸ್ಟೈಲ್​ ಐಕಾನ್​ ಆಗಿ ಗುರುತಿಸಿಕೊಂಡಿರುವ ನಟಿ ರೇಖಾ ತಾವು ಫ್ಯಾಷನ್​ನಲ್ಲಿ ತಾವೆಂದು ಹಿಂದೆ ಬೀಳುವುದಿಲ್ಲ ಎಂದು ಸಾರುವಂತೆ ದಿರಿಸು ತೊಟ್ಟು ಕ್ಯಾಮೆರಾಗೆ ಫೋಸ್​ ನೀಡಿದ್ದಾರೆ. ಕಿತ್ತಳೆ ಬನಾರಸಿ ಸೇರೆಯಲ್ಲಿ ಅವರು ಎಲ್ಲರನ್ನು ಸೆಳೆದರು.

ಸೊಗಸಾಗಿ ಕಂಡು ಬಂದ ಕಿಯಾರಾ - ಸಿದ್ದಾರ್ಥ್​ ಜೋಡಿ: ಕಿಯಾರಾ ಅದ್ವಾನಿ ಸಿದ್ಧಾರ್ಥ್​​ ಮಲ್ಹೋತ್ರಾ ದಂಪತಿಗಳು ಕೂಡ ಕಾರ್ಯಕ್ರಮದಲ್ಲಿ ಸೊಗಸಾಗಿ ಕಂಡರು. ನಟಿ ಬಂಗಾರದ ಬಣ್ಣದ ಮಿನುಗುವ ಸೀರೆಯುಟ್ಟಿದ್ದರೆ, ನಟ ಸಿದ್ಧಾರ್ಥ್​​ ಬಹು ಬಣ್ಣದ ಕಸೂತಿಯ ಕುರ್ತಾ ಧರಿಸಿದ್ದರು. ಶಾರುಖ್​ ಪುತ್ರಿ ಸುಹಾನಾ ಖಾನ್​ ಕೂಡ ಕೆಂಪು ಬಣ್ಣದ ಸೀರೆಯಲ್ಲಿ ಸಖತ್​ ಬೋಲ್ಡ್​ ಆಗಿ ಹೆಜ್ಜೆಹಾಕಿದರು. ನಟಿ ತಮನ್ನಾ ಕೂಡ ಕೆಂಪು ಬಣ್ಣದ ಸೀರೆ ಜೊತೆಗೆ ವಜ್ರದ ಆಭರಣಗಳೊಂದಿಗೆ ಕಾರ್ಯಕ್ರಮಕ್ಕೆ ಹಾಜರಾದರು.

ಸಾಂಪ್ರದಾಯಿಕ ಸೊಗಡಿನಲ್ಲಿ ಜೆನಿಲಿಯಾ -ರಿತೀಶ್​ ದಂಪತಿ: ಬಾಲಿವುಡ್​ನ ಮತ್ತೊಂದು ಕ್ಯೂಟ್​ ಜೋಡಿಯಾಗಿರುವ ರಿತೇಶ್​ ದೇಶ್​​ಮುಖ್​ ಜೆನಿಲಿಯಾ ಡಿಸೋಜಾ ಸಂಪ್ರದಾಯಿಕ ಉಡುಗೆಯಲ್ಲಿ ತಮ್ಮ ಸ್ಟೈಲ್​ ಬಿಂಬಿಸಿದರು. ರಿತೇಶ್​ ಕಪ್ಪು ಬಣ್ಣದ ಉಡುಗೆಯಲ್ಲಿ ಕಂಡರೆ, ನಟಿ ಜೆನಿಲಿಯಾ ಹಳದಿ ಮತ್ತು ಪೀಚ್ ಬಣ್ಣದ​​ ಲೆಹೆಂಗಾದಲ್ಲಿ ತೊಟ್ಟಿದ್ದರು.

ದೀಪಾವಳಿಯ ಸಮಾರಂಭದ ಈ ಸುಂದರ ಸಂಜೆಯಲ್ಲಿ ಮನೀಶ್​ ಮನೆಯಲ್ಲಿ ದೀಪದ ಬೆಳಕಿನ ಜೊತೆಗೆ ಸ್ಟೈಲ್​, ಫ್ಯಾಷನ್​ ಕೂಡ ಮಿಂಚಿದ್ದು ವಿಶೇಷವಾಗಿತ್ತು

ಇದನ್ನೂ ಓದಿ: 'ಲಕ್ಷ್ಮೀ ನಿವಾಸ' ಧಾರಾವಾಹಿ ನಟ ಈಗ 'ಮಿಸ್ಟರ್​ ರಾಣಿ' ಚಿತ್ರದ ಹೀರೋ(ಯಿನ್)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.