ETV Bharat / entertainment

'ಅಮ್ಮ' ಅಧ್ಯಕ್ಷ ಸ್ಥಾನಕ್ಕೆ ಸೂಪರ್​ಸ್ಟಾರ್ ಮೋಹನ್​​ ಲಾಲ್​​ ರಾಜೀನಾಮೆ - Actor Mohanlal Resigns

ಲೈಂಗಿಕ ಕಿರುಕುಳ ಆರೋಪಗಳಿಂದ ಮಲಯಾಳಂ ಚಿತ್ರರಂಗದಲ್ಲಿ ತಲ್ಲಣ ಉಂಟಾಗಿದೆ. ಇದರ ಪರಿಣಾಮ ಎಂಬಂತೆ ಒಬ್ಬೊಬ್ಬರಾಗಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಿದ್ದಾರೆ. ಕಲಾವಿದರ ಸಂಘದ ಅಧ್ಯಕ್ಷ ಮೋಹನ್ ಲಾಲ್ ಸೇರಿದಂತೆ ಆಡಳಿತ ಮಂಡಳಿಯ ಎಲ್ಲಾ ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ.

Mohanlal
ನಟ ಮೋಹನ್​ಲಾಲ್​ (ETV Bharat)
author img

By ETV Bharat Karnataka Team

Published : Aug 27, 2024, 3:56 PM IST

ಕೊಚ್ಚಿ (ಕೇರಳ): ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಮಲಯಾಳಂ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದೆ. ಮಲಯಾಳಂ ಚಲನಚಿತ್ರ ನಟರ ಸಂಘದ (Association of Malayalam Movie Actors - AMMA) ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಅಮ್ಮ ಅಧ್ಯಕ್ಷ ಮತ್ತು ಭಾರತೀಯ ಚಿತ್ರರಂಗದ ಖ್ಯಾತ ನಟ ಮೋಹನ್​​ಲಾಲ್ ಸೇರಿದಂತೆ ಆಡಳಿತ ಮಂಡಳಿಯ 17 ಜನರು ರಾಜೀನಾಮೆ ನೀಡಿದ್ದಾರೆ.

ಇಂದು ನಡೆದ ಆನ್‌ಲೈನ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಮ್ಮ ಸಂಘಟನೆಯ ಕೆಲ ಸದಸ್ಯರ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳು ಕೇಳಿಬಂದಿದ್ದವು. ನಂತರ ಸಂಘಟನೆಯ ಸಭೆಯ ಬಗ್ಗೆ ಗೊಂದಲಗಳಿದ್ದವು. ಚಿತ್ರರಂಗದ ಪ್ರಮುಖ ವ್ಯಕ್ತಿಗಳ ವಿರುದ್ಧ ದೊಡ್ಡ ಮಟ್ಟದಲ್ಲಿ ಲೈಂಗಿಕ ಕಿರುಕುಳ ಆರೋಪಗಳು ಕೇಳಿಬಂದ ಹಿನ್ನೆಲೆ ಮಲಯಾಳಂ ಚಲನಚಿತ್ರ ನಟರ ಸಂಘ ಬಿಕ್ಕಟ್ಟಿಗೆ ಸಿಲುಕಿತ್ತು.

AMMA press release
ಅಮ್ಮ ಪತ್ರಿಕಾ ಪ್ರಕಟಣೆ (ETV Bharat)

ವಾರದ ಹಿಂದಷ್ಟೇ ಮಲಯಾಳಂ ಚಿತ್ರರಂಗದಲ್ಲಿ ನಟಿಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಆಘಾತಕಾರಿ ಅಂಶಗಳನ್ನೊಳಗೊಂಡ ವರದಿ ಬೆಳಕಿಗೆ ಬಂತು. ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯನ್ನು ಕೇರಳ ಸರ್ಕಾರ ಕಳೆದ ಸೋಮವಾರ ಬಿಡುಗಡೆ ಮಾಡಿತ್ತು. ಅಂದಿನಿಂದ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಸಾಕಷ್ಟು ನಟಿಯರು ದೌರ್ಜನ್ಯಕ್ಕೊಳಗಾಗಿದ್ದಾರೆ ಎಂಬ ಅಂಶವನ್ನು ಈ ವರದಿ ಒಳಗೊಂಡಿತ್ತು.

ಪ್ರಸ್ತುತ ಮಲಯಾಳಂ ಚಲನಚಿತ್ರ ನಟರ ಸಂಘವು ಆರೋಪಗಳ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದೆ ಎಂದು ಅಸೋಸಿಯೇಷನ್ ತನ್ನ ​​ಹೇಳಿಕೆಯಲ್ಲಿ ತಿಳಿಸಿದೆ.

ಜನಪ್ರಿಯ ನಟ ಮೋಹನ್ ಲಾಲ್ ಅವರಲ್ಲದೇ ಉಪಾಧ್ಯಕ್ಷರುಗಳಾದ ಜಯನ್ ಚೇರ್ತಲ, ಜಗದೀಶ್, ಜಂಟಿ ಕಾರ್ಯದರ್ಶಿ ಬಾಬುರಾಜ್ ಸೇರಿದಂತೆ ಸಂಸ್ಥೆಯ ಕಾರ್ಯಕಾರಿ ಸದಸ್ಯರು ರಾಜೀನಾಮೆ ನೀಡಿದ್ದಾರೆ. ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡುವವರೆಗೆ ಪ್ರಸ್ತುತ ಆಡಳಿತ ಮಂಡಳಿ ಸ್ಟ್ಯಾಂಡ್​ ಬೈ ಆಗಿ ಮುಂದುವರಿಯಲಿದೆ. ಸಂಘ ಸಭೆ ನಡೆಸಿ, ಎರಡು ತಿಂಗಳೊಳಗೆ ನೂತನ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲಿದೆ.

ಇದನ್ನೂ ಓದಿ: 'ಚಿತ್ರರಂಗ ಮಹಿಳೆಯರಿಗೆ ಸುರಕ್ಷಿತ ಸ್ಥಳವಾಗಬೇಕು': ಮಲಯಾಳಂ ಚಿತ್ರರಂಗದ ಕರಾಳತೆ ಬಗ್ಗೆ ಪೃಥ್ವಿರಾಜ್ ಸುಕುಮಾರನ್ ಪ್ರತಿಕ್ರಿಯೆ - Prithviraj Sukumaran

ಕೇರಳ ಸರ್ಕಾರ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯನ್ನು ಬಹಿರಂಗಗೊಳಿಸಿದ ನಂತರ, ಹಲವಾರು ಮಹಿಳಾ ಕಲಾವಿದರು ತಾವು ಎದುರಿಸಿದ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ. ಈ ಹಿನ್ನೆಲೆ, ನಿರ್ದೇಶಕ ರಂಜಿತ್ ಅವರು ಕೇರಳ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮತ್ತೊಂದೆಡೆ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ನಟ ಸಿದ್ದಿಕ್ ಕೆಳಗಿಳಿದಿದ್ದಾರೆ.

ಇದನ್ನೂ ಓದಿ: ಮಲಯಾಳಂ ಚಿತ್ರ ನಿರ್ದೇಶಕ ರಂಜಿತ್ ವಿರುದ್ಧ ದೂರು ದಾಖಲಿಸಿದ ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ - Case Registered Against Ranjith

ಇನ್ನೂ ನಿರ್ದೇಶಕ ರಂಜಿತ್ ವಿರುದ್ಧ ಬಂಗಾಳಿ ನಟಿ ಶ್ರೀಲೇಖಾ ಮಿತ್ರ ಅವರು ಕೊಚ್ಚಿ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. 2009ರಲ್ಲಿ ರಂಜಿತ್ ತಮಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಇಮೇಲ್ ಮೂಲಕ ದೂರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.