ETV Bharat / entertainment

ಮಗಧೀರ ವಿಲನ್ ಈಗ ಹೀರೋ: 'ಅಹೋ ವಿಕ್ರಮಾರ್ಕ'ನಾಗಿ ಅದೃಷ್ಟ ಪರೀಕ್ಷೆಗಿಳಿದ ದೇವ್ ಗಿಲ್​ - Aho Vikramaarka - AHO VIKRAMAARKA

'ಮಗಧೀರ'ದಲ್ಲಿ ರಣದೇವ್ ಬಿಲ್ಲಾ ಎನ್ನುವ ಖಳನಾಯಕನ ಪಾತ್ರದಲ್ಲಿ ಗಮನ ಸೆಳೆದಿದ್ದ ನಟ ದೇವ್ ಗಿಲ್ ಅವರೀಗ ಹೀರೋ ಆಗಿ 'ಅಹೋ ವಿಕ್ರಮಾರ್ಕ' ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರಮೋಶನಲ್​ ಈವೆಂಟ್​​ ನಡೆಯಿತು.

'Aho Vikramaarka' promotion
'ಅಹೋ ವಿಕ್ರಮಾರ್ಕ' ಈವೆಂಟ್​ (ETV Bharat)
author img

By ETV Bharat Entertainment Team

Published : Aug 8, 2024, 7:18 PM IST

ತೆಲುಗು ಚಿತ್ರರಂಗದ ಸೂಪರ್ ಹಿಟ್ ಸಿನಿಮಾ 'ಮಗಧೀರ'ದಲ್ಲಿ ರಣದೇವ್ ಬಿಲ್ಲಾ ಎನ್ನುವ ಖಳನಾಯಕನ ಪಾತ್ರದಲ್ಲಿ ಗಮನ ಸೆಳೆದಿದ್ದ ನಟ ದೇವ್ ಗಿಲ್, ಹೀರೋ ಆಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 'ಅಹೋ ವಿಕ್ರಮಾರ್ಕ' ಸಿನಿಮಾದಲ್ಲಿ ದೇವ್ ಗಿಲ್ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ.

ಈ ಆಗಸ್ಟ್​​ ಪ್ರೇಕ್ಷಕರಿಗೆ ಸಿನಿಸುಗ್ಗಿ ಎಂದೇ ಹೇಳಬಹುದು. ಸ್ಟಾರ್ ನಟರಿಂದ ಹಿಡಿದು ಹೊಸಬರ ಸಿನಿಮಾಗಳು ಸಾಲು ಸಾಲಾಗಿ ಬಿಡುಗಡೆ ಆಗಲಿವೆ. 'ಅಹೋ ವಿಕ್ರಮಾರ್ಕ' ಕೂಡಾ ಆಗಸ್ಟ್ 30ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿದ್ದು, ಪ್ರಚಾರ ಕಾರ್ಯ ಭರದಿಂದ ಸಾಗಿದೆ.

ಕನ್ನಡದಲ್ಲಿಯೂ ರಿಲೀಸ್ ಆಗಲಿರುವ 'ಅಹೋ ವಿಕ್ರಮಾರ್ಕ' ಪ್ರಚಾರಕ್ಕಾಗಿ ದೇವ್ ಗಿಲ್ ಬೆಂಗಳೂರಿಗೆ ಆಗಮಿಸಿದ್ದರು. ಊರ್ವಶಿ ಚಿತ್ರಮಂದಿರದಲ್ಲಿ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು 'ಅರ್ಚನಾ' ಸಾಂಗ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಸಾಥ್ ಕೊಟ್ಟರು. ಸಿನಿಮಾ ಯಶಸ್ಸು ಕಾಣಲಿ ಎಂದು ತಂಡಕ್ಕೆ ಶುಭ ಹಾರೈಸಿದರು.

ಸಾಂಗ್​ ರಿಲೀಸ್​ ಬಳಿಕ ಮಾತನಾಡಿದ ಸಂಗೀತ ನಿರ್ದೇಶಕ ರವಿ ಬಸ್ರೂರ್, ದೇವ್ ಗಿಲ್ ಅವರನ್ನು ಸ್ಕ್ರೀನ್​​ನಲ್ಲಿ ನೋಡಿದಾಗ ಭಯವಾಗುತ್ತಿತ್ತು. ನಮ್ಮ ಮನೆಗೆ ಬಂದಾಗ ಅವರ ಸರಳತೆ ಹಾಗೂ ವಿನಯತೆ ನನಗಿಷ್ಟವಾಯ್ತು. ಒಂದು ಸಿನಿಮಾದಿಂದ ಮೂರರಿಂದ ನಾಲ್ಕುವರೆ ಸಾವಿರ ಕುಟುಂಬಗಳು ಬದುಕುತ್ತವೆ. ನಾವು ವಿಭಿನ್ನ ರೀತಿಯಲ್ಲಿ ಟ್ರೈ ಮಾಡಿದ್ದೇವೆ. ನಿಮ್ಮ ಸಪೋರ್ಟ್ ಬೇಕು ಎಂದು ಕೇಳಿಕೊಂಡರು.

'Aho Vikramaarka' poster
'ಅಹೋ ವಿಕ್ರಮಾರ್ಕ' ಪೋಸ್ಟರ್ (ETV Bharat)

ನಟ ದೇವ್ ಗಿಲ್ ಮಾತನಾಡಿ, ಮೊದಲಿನಿಂದಲೂ ನಮ್ಮ ಸಿನಿಮಾಗಳಿಗೆ ಬೆಂಬಲ ನೀಡುತ್ತಿದ್ದೀರಿ. ಇದೀಗ ಅಹೋ ವಿಕ್ರಮಾರ್ಕ ಚಿತ್ರಕ್ಕೂ ನಿಮ್ಮ ಆಶೀರ್ವಾದವಿರಲಿ ಎಂದು ಮನವಿ ಮಾಡಿದರು.

ಇದನ್ನೂ ಓದಿ: ವಿನಯ್​​ ರಾಜ್​ಕುಮಾರ್​ 'ಪೆಪೆ': ಜೇನು ಕುರುಬರ ಕುರಿತ ಹಾಡಿಗೆ ಫ್ಯಾನ್ಸ್ ಫಿದಾ - Vinay Rajkumar Pepe

ಹಾಡಿನಲ್ಲಿ ದೇವ್​​ ಗಿಲ್, ನಾಯಕಿ ಚಿತ್ರ ಶುಕ್ಲಾ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಕನ್ನಡ ಹಾಡಿಗೆ ವರದರಾಜು ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿದ್ದು, ರವಿ ಬಸ್ರೂರ್ ಸಂಗೀತ ನಿರ್ದೇಶನವಿದೆ. ಮನೀಶ್ ದಿನಕರ್ ಧ್ವನಿಯಾಗಿದ್ದಾರೆ.

'Aho Vikramaarka' promotion
'ಅಹೋ ವಿಕ್ರಮಾರ್ಕ' ಈವೆಂಟ್​ (ETV Bharat)

ಇದನ್ನೂ ಓದಿ: ತಮಿಳುನಾಡಿನಲ್ಲಿ ಷಷ್ಠಿಪೂರ್ತಿ ಪೂಜೆಯಲ್ಲಿ ಭಾಗಿಯಾದ ಶಿವ ರಾಜ್​​ಕುಮಾರ್ ದಂಪತಿ- ವಿಡಿಯೋ - Shiva Rajkumar

ಇನ್ನೂ ಈ ಸಿನಿಮಾಗೆ ನಿರ್ದೇಶಕ ತ್ರಿಕೋಟಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರವೀಣ್ ತಾರ್ಡೆ, ತೇಜಸ್ವಿನಿ ಪಂಡಿತ್, ಪೋಸಾನಿ ಮುರಳಿ ಕೃಷ್ಣ, ಬಿಟ್ಟಿರಿ ಸತ್ತಿ, ಸಯಾಜಿ ಶಿಂಧೆ, ಕಾಲಕೇಯ ಪ್ರಭಾಕರ್, ವಿಕ್ರಮ್ ಶರ್ಮಾ ತಾರಾಬಳಗದಲ್ಲಿದ್ದಾರೆ. ಆರತಿ ದೇವಿಂದರ್ ಗಿಲ್, ಮೀಹಿರ್ ಕುಲಕರ್ಣಿ, ಅಶ್ವಿನಿ ಕುಮಾರ್ ಮಿಶ್ರಾ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.