ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಜೂನ್ 23 ರಂದು ಕುಟುಂಬ ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾದರು. ನಟಿಯ ಮದುವೆಯಲ್ಲಿ ಆಕೆಯ ಪೋಷಕರು ಶತ್ರುಘ್ನ ಸಿನ್ಹಾ ಮತ್ತು ಪೂನಂ ಸಿನ್ಹಾ ಕಾಣಿಸಿಕೊಂಡಿದ್ದಾರೆ. ಆದರೆ, ಸೋನಾಕ್ಷಿ ಸಿನ್ಹಾ ಅವರ ಇಬ್ಬರು ಸಹೋದರರು ಎಲ್ಲಿಯೂ ಕಾಣಿಸಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಸೋನಾಕ್ಷಿ- ಜಹೀರ್ ಜೊತೆಗಿನ ಮದುವೆಯಿಂದ ಆಕೆಯ ಸಹೋದರರಾದ ಲವ್ ಮತ್ತು ಕುಶ್ ಸಂತೋಷವಾಗಿಲ್ಲ ಎಂಬ ವದಂತಿಗಳು ಹರಡಿದ್ದವು. ಇದೀಗ ಈ ನಟಿಯ ಸಹೋದರ ಲವ್ ಸಿನ್ಹಾ ಈ ವದಂತಿಗಳ ಬಗ್ಗೆ ಮೌನ ಮುರಿದು ಮಾತನಾಡಿದ್ದಾರೆ.
The reasons are very clear as to why I didn’t attend, and would not associate with some people no matter what. I’m glad a member of the media did their research instead of relying on creative stories being put out by a PR team.
— Luv S Sinha (@LuvSinha) July 1, 2024
ಮೌನ ಮುರಿದ ಲವ್ ಸಿನ್ಹಾ: ಜೂನ್ 23 ರಂದು ನಡೆದ ಸೋನಾಕ್ಷಿ ಮತ್ತು ಜಹೀರ್ ಇಕ್ಬಾಲ್ ಅವರ ಮದುವೆಗೆ ಗೈರು ಹಾಜರಾಗಿರುವ ಕುರಿತಂತೆ ಮೌನ ಮುರಿದು, ನಟಿಯ ಸಹೋದರ ಲವ್ ಸಿನ್ಹಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. "ನಾನು ಇದರಲ್ಲಿ ಭಾಗವಹಿಸಲು ಏಕೆ ಆಯ್ಕೆ ಮಾಡಬಾರದು? ನನ್ನ ವಿರುದ್ಧ ಸುಳ್ಳು ಆನ್‌ಲೈನ್ ಅಭಿಯಾನವನ್ನು ಪ್ರಾರಂಭಿಸುವುದನ್ನು ಬದಲಾಯಿಸುವುದಿಲ್ಲ. ನನ್ನ ಕುಟುಂಬವು ಯಾವಾಗಲೂ ನನಗೆ ಮೊದಲು ಬರುತ್ತದೆ" ಎಂದು ಲವ್ ಸಿನ್ಹಾ ಬರೆದುಕೊಂಡಿದ್ದಾರೆ.
''ನಾನು ಏಕೆ ಹಾಜರಾಗಲಿಲ್ಲ ಎಂಬುದಕ್ಕೆ ಕಾರಣಗಳು ಸ್ಪಷ್ಟವಾಗಿವೆ ಮತ್ತು ಏನೇ ಆದರೂ ಕೆಲವು ಜನರೊಂದಿಗೆ ಬೆರೆಯುವುದಿಲ್ಲ. PR ತಂಡವು ಹಾಕುವ ಸೃಜನಶೀಲ ಕಥೆಗಳನ್ನು ಅವಲಂಬಿಸುವ ಬದಲು ಮಾಧ್ಯಮದ ಸದಸ್ಯರು ತಮ್ಮ ಸಂಶೋಧನೆ ಮಾಡಿರುವುದು ನನಗೆ ಖುಷಿ ತಂದಿದೆ'' ಎಂದು ಸಾಮಾಜಿಕ ಜಾಲತಾಣವಾದ ಏಕ್ಸ್ ಖಾತೆಯಲ್ಲಿ ಲವ್ ಸಿನ್ಹಾ ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಮಾಧ್ಯಮವೊಂದರ ವರದಿಯ ಪ್ರಕಾರ, ನೀವು ಸೋನಾಕ್ಷಿಯ ಮದುವೆಗೆ ಏಕೆ ಹಾಜರಾಗಲಿಲ್ಲ ಎಂದು ಲವ್ ಸಿನ್ಹಾ ಅವರನ್ನು ಕೇಳಿದಾಗ, "ನನಗೆ ಒಂದು ಅಥವಾ ಎರಡು ದಿನ ಸಮಯ ನೀಡಿ. ನನಗೆ ಬಿಡುವಾದಾಗ ನಾನು ನಿಮ್ಮ ಪ್ರಶ್ನೆಗೆ ಉತ್ತರಿಸುತ್ತೇನೆ, ಪ್ರಶ್ನೆಯನ್ನು ಕೇಳಿದ್ದಕ್ಕಾಗಿ ಧನ್ಯವಾದಗಳು" ಈ ಹಿಂದೆ, ತನ್ನ ಸಹೋದರಿಯ ಮದುವೆಯ ಬಗ್ಗೆ ಮತ್ತೊಂದು ಮಾಧ್ಯಮ ಇದೇ ಪ್ರಶ್ನೆ ಕೇಳಿದಾಗ, 'ಈ ವಿಷಯದಲ್ಲಿ ಯಾವುದೇ ಕಾಮೆಂಟ್ ಮಾಡಲು ಇಷ್ಟಪಡುವುದಿಲ್ಲ' ಎಂದು ತಿಳಿಸಿದ್ದರು.
ವದಂತಿಗಳನ್ನು ತಳ್ಳಿಹಾಕಿದ ಕುಶ್ ಸಿನ್ಹಾ: ಸೋನಾಕ್ಷಿ ಮತ್ತು ಜಹೀರ್ ಇಕ್ಬಾಲ್ ಅವರ ಮದುವೆಗೆ ಗೈರು ಹಾಜರಾಗಿರುವ ವದಂತಿಗಳ ಕುರಿತಂತೆ ಸೋನಾಕ್ಷಿ ಅವರ ಇನ್ನೊಬ್ಬ ಸಹೋದರ ಕುಶ್ ಸಿನ್ಹಾ, ಮಾಧ್ಯಮವೊಂದರ ಜೊತೆಗೆ ಮೌನ ಮುರಿದ್ದಾರೆ. ಅವರು ಮದುವೆಗೆ ಹಾಜರಾಗಿಲ್ಲ ಎಂಬ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಸಮಾರಂಭಕ್ಕೆ ಹಾಜರಾಗದಿರುವ ಕುರಿತು ಆಗಿರುವ ಸುದ್ದಿ ತಪ್ಪು ಮಾಹಿತಿ’ ಯಿಂದ ಕೂಡಿದೆ ಎಂದು ಕಿಡಿಕಾರಿದರು. ''ಇದು ಕುಟುಂಬಕ್ಕೆ ಸಂವೇದನಾಶೀಲ ಸಮಯ. ನಾನು ಖಾಸಗಿ ವ್ಯಕ್ತಿಯಾಗಿದ್ದೇನೆ ಮತ್ತು ನಾನು ಸಾರ್ವಜನಿಕವಾಗಿ ಹೆಚ್ಚು ಕಾಣಿಸುತ್ತಿಲ್ಲ. ಇದರಿಂದ ನಾನು ಮದುವೆ ಕಾರ್ಯಕ್ರಮದಲ್ಲಿ ಇರಲಿಲ್ಲ ಎಂದು ಅರ್ಥವಲ್ಲ" ಎಂದು ತಿಳಿಸಿದರು.