ETV Bharat / entertainment

ಲವ್​ ಸ್ಟೋರಿಯಾನ್ ವೆಬ್​ ಸಿರೀಸ್: ಅಸಾಧಾರಣ ರೀತಿಯಲ್ಲಿ ವಾಸಿಸುವ ಮತ್ತು ಪ್ರೀತಿಸುವ ಸಾಮಾನ್ಯ ಜನರ ಕಥೆಗಳು

ನೈಜ ಪ್ರೇಮಕತೆಗಳ​​​​​ 'ಲವ್​ ಸ್ಟೋರಿಯಾನ್​​' ವೆಬ್​ ಸಿರೀಸ್ ಅಸಾಧಾರಣ ರೀತಿಯಲ್ಲಿ ವಾಸಿಸುವ ಮತ್ತು ಪ್ರೀತಿಸುವ ಸಾಮಾನ್ಯ ಜನರ ಕಥೆಗಳನ್ನು ಹೇಳುತ್ತದೆ.

author img

By ETV Bharat Karnataka Team

Published : Feb 21, 2024, 11:02 PM IST

Love Storiyaan
ಲವ್​ ಸ್ಟೋರಿಯಾನ್

ನೈಜ ಪ್ರೇಮಕಥೆಗಳನ್ನು ಆಧರಿಸಿದ ಹೃದಯಸ್ಪರ್ಶಿ 'ಲವ್ ಸ್ಟೋರಿಯನ್' ವೆಬ್​ ಸಿರೀಸ್ ಸಾಕಷ್ಟು ಸದ್ದು ಮಾಡುತ್ತಿದೆ. ಅಮೆಜಾನ್ ಪ್ರೈಮ್‌ನಲ್ಲಿ ಫೆಬ್ರವರಿ 14ರ ವ್ಯಾಲೆಂಟೈನ್ ಡೇಯಂದು ಬಿಡುಗಡೆಯಾದ ಓಟಿಟಿ ಸಿರೀಸ್ ಬಂಗಾಳಿ ಹಬ್ಬ ದುರ್ಗಾ ಪೂಜೆಯ ದೃಶ್ಯದೊಂದಿಗೆ ಪ್ರಾರಂಭವಾಗುತ್ತದೆ. ಕೆಂಪು ಮತ್ತು ಬಿಳಿ ಸೀರೆಗಳನ್ನುಟ್ಟ ಯುವತಿಯರು ಹಾಗೂ ಅವರ ಹಣೆಯನ್ನು ಕೆಂಪು ಬಿಂದಿಗಳು ಅಲಂಕರಿಸಿರುತ್ತವೆ ಮತ್ತು ಸಿಂಧೂರದೊಂದಿಗೆ ಓಕುಳಿಯಲ್ಲಿ ತೊಡಗಿರುತ್ತಾರೆ.

ಕಾಲಿನ್ ಡಿಕುನ್ಹಾ ನಿರ್ದೇಶಿಸಿದ ಈ ಸಿರೀಸ್ ಕೋಲ್ಕತ್ತಾದ ತೃತೀಯಲಿಂಗಿ ದಂಪತಿಯಾದ ತಿಸ್ತಾ ದಾಸ್​ ಮತ್ತು ದೀಪನ್ ಚಕ್ರವರ್ತಿ ಪ್ರಣಯ ಪ್ರಯಾಣವನ್ನು ಬಿಂಬಿಸುತ್ತದೆ. ಚಕ್ರವರ್ತಿ ತಮ್ಮ ಲಿಂಗ ಪರಿವರ್ತನೆಯ ಶಸ್ತ್ರಚಿಕಿತ್ಸೆಗೆ ಒಳಗಾದ ಅವರು ಪ್ರೀತಿಸುತ್ತಿದ್ದರು. ಹುಟ್ಟಿನಿಂದಲೇ ಗಂಡಾಗಿದ್ದ ಚಕ್ರವರ್ತಿ ಅವರಲ್ಲಿ ಪರಿವರ್ತನೆ ಉಂಟಾಗುತ್ತದೆ. ಇದೇ ಸಮಯದಲ್ಲಿ ತಿಸ್ತಾ ಪರಿಚಯವಾಗಿ ಪ್ರೀತಿ ಅರಳುತ್ತದೆ. ಈ ದಂಪತಿ ಜೀವನದ ಮರುಸೃಷ್ಟಿಯೇ ಈ ಸಿರೀಸ್​.

ಈ ಎಪಿಸೋಡ್ ಬಿಡುಗಡೆಯಾದ ಕೆಲ ದಿನಗಳಲ್ಲೇ ಅಡೆತಡೆಗಳು ಎದುರಾಗಿವೆ. ಯುಎಇ, ಸೌದಿ ಅರೇಬಿಯಾ, ಟರ್ಕಿ, ಇಂಡೋನೇಷ್ಯಾ ಮತ್ತು ಈಜಿಪ್ಟ್ ಸೇರಿದಂತೆ ಆರು ದೇಶಗಳಲ್ಲಿ ಈ ಸರಣಿಯನ್ನು ನಿಷೇಧಿಸಲಾಗಿದೆ. ಯಾಕೆಂದರೆ, ಇದು LGBTQI+ (Lesbian, Gay, Bisexual, Transgender, Queer and Intersex) ದಂಪತಿಯ ಸಂಬಂಧವನ್ನು ಪ್ರದರ್ಶಿಸುತ್ತಿದೆ ಎಂಬುವುದು ಆ ರಾಷ್ಟ್ರಗಳ ಆಕ್ಷೇಪಣೆ.

'ಲವ್ ಸ್ಟೋರಿಯನ್' ಸಿರೀಸ್ ಅನ್ನು ಕರಣ್ ಜೋಹರ್ ನಿರ್ಮಿಸಿದ್ದರೆ, ಸೋಮೆನ್ ಮಿಶ್ರಾ ಅವರು ಇದನ್ನು ರಚಿಸಿದ್ದಾರೆ. ಆರು ಜೋಡಿಗಳ ನೈಜ ಪ್ರೇಮ ಕಥೆಗಳನ್ನು ಚಿತ್ರಿಸುವ ಆರು ನಿರ್ದೇಶಕರ ಕತೆಗಳನ್ನು ಹೊಂದಿದೆ. ಈ ಕಥೆಗಳು ಪತ್ರಕರ್ತ ದಂಪತಿಗಳಾದ ಪ್ರಿಯಾ ರಮಣಿ ಮತ್ತು ಸಮರ್ ಹಲರ್ನ್ಕರ್ ಹಾಗೂ ಇವರ ಇನ್ನೊಬ್ಬ ಸಹೋದ್ಯೋಗಿ ನಿಲೋಫರ್ ವೆಂಕಟರಾಮ್ ಅವರ 'ಇಂಡಿಯಾ ಲವ್ ಪ್ರಾಜೆಕ್ಟ್'ನ ಭಾಗವಾಗಿವೆ. ‘ಇಂಡಿಯಾ ಲವ್ ಪ್ರಾಜೆಕ್ಟ್’ ಎಂಬುದು ಪ್ರದೇಶ, ಧರ್ಮ, ಜಾತಿ ಮತ್ತು ಲಿಂಗದ ನಿಯಮಗಳನ್ನು ಅನುಸರಿಸಲು ನಿರಾಕರಿಸಿದ ಜನರು ತಮ್ಮ ಪ್ರೀತಿಯ ಕಥೆಗಳನ್ನು ಹಂಚಿಕೊಳ್ಳುವ ವೇದಿಕೆಯಾಗಿದೆ.

2020ರಲ್ಲಿ ಅಂತರ್ಧರ್ಮೀಯ ಪ್ರೇಮವನ್ನು ಬಿಂಬಿಸುವ ಜಾಹೀರಾತನ್ನು ಹಿಂತೆಗೆದುಕೊಳ್ಳುವಂತೆ ಆಭರಣ ಕಂಪನಿಯೊಂದಕ್ಕೆ ಬಲವಂತಪಡಿಸಿದ ನಂತರ ಈ 'ಇಂಡಿಯಾ ಲವ್ ಪ್ರಾಜೆಕ್ಟ್' ಪ್ರಾರಂಭಿಸಲಾಗಿದೆ. ಐದು ಅಂತಹುದೇ ಸಂಚಿಕೆಗಳು ಪ್ರೇಮಿಗಳ ದಿನದಂದು ಬಿಡುಗಡೆಯಾದ ಸಿರೀಸ್​ ನ ಭಾಗವಾಗಿವೆ. ಈ ಲವ್ ಸ್ಟೋರಿಗಳನ್ನು ಸಾಮಾನ್ಯತೆಯನ್ನು ಮೀರಿದ ಸಂಪರ್ಕಗಳು ಎಂದು ಕರಣ್ ಜೋಹರ್ ಕರೆಯುತ್ತಾರೆ.

ಇದನ್ನೂ ಓದಿ: 'ಬಿಗ್ ಬಾಸ್ ಒಟಿಟಿ' ವಿಜೇತೆ ದಿವ್ಯಾ ಅಗರ್ವಾಲ್ ಜೊತೆಗೆ ಅಪೂರ್ವ ಪಡ್ಗಾಂವ್ಕರ್ ಸರಳ ವಿವಾಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.