ETV Bharat / entertainment

'ಕಲ್ಕಿ 2898 ಎಡಿ' ಟ್ರೇಲರ್: 24 ಗಂಟೆಯೊಳಗೆ 13 ಮಿಲಿಯನ್​ ವೀಕ್ಷಣೆ; ಹೊಸ ಪೋಸ್ಟರ್ ರಿಲೀಸ್ - Klaki 2898 AD - KLAKI 2898 AD

ಸಖತ್​ ಸದ್ದು ಮಾಡುತ್ತಿರುವ 'ಕಲ್ಕಿ 2898 ಎಡಿ' ಟ್ರೇಲರ್​​ ಯೂಟ್ಯೂಬ್​ನಲ್ಲಿ 24 ಗಂಟೆಯೊಳಗೆ 13 ಮಿಲಿಯನ್​ಗೂ ಹೆಚ್ಚು ವೀಕ್ಷಣೆ ಕಂಡಿದೆ.

Klaki 2898 AD poster
ಕಲ್ಕಿ 2898 ಎಡಿ ಪೋಸ್ಟರ್ (Instagram)
author img

By ETV Bharat Karnataka Team

Published : Jun 11, 2024, 2:27 PM IST

ಈ ಸಾಲಿನ ಬಹುನಿರೀಕ್ಷಿತ ಚಿತ್ರ 'ಕಲ್ಕಿ 2898 ಎಡಿ' ಟ್ರೇಲರ್ ಬಿಡುಗಡೆಯಾಗಿ 24 ಗಂಟೆಯೊಳಗೆ 13 ಮಿಲಿಯನ್​ಗೂ ಹೆಚ್ಚು ವೀಕ್ಷಣೆಯಾಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳ, ಸಿನಿಪ್ರಿಯರ ಕುತೂಹಲ ಹೆಚ್ಚಿರುವ ಈ ಹೊತ್ತಲ್ಲಿ ಚಿತ್ರ ತಯಾರಕರು ಪೋಸ್ಟರ್ ಅನಾವರಣಗೊಳಿಸಿ ಇರುವ ಉತ್ಸಾಹವನ್ನು ದ್ವಿಗುಣಗೊಳಿಸಿದ್ದಾರೆ.

ಬಹುತಾರಾಗಣದ ಪ್ಯಾನ್ - ಇಂಡಿಯನ್ ಮೂವಿ ಜೂನ್ 27ರಂದು ವಿಶ್ವದಾದ್ಯಂತ ಬಿಗ್​ ಸ್ಕ್ರೀನ್​​​ನಲ್ಲಿ ಅಬ್ಬರಿಸಲು ಸಜ್ಜಾಗಿದೆ. ನಿನ್ನೆ ಅನಾವರಣಗೊಂಡ ಟ್ರೇಲರ್ ಸೋಷಿಯಲ್​ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ. ಭಾರತೀಯ ಚಿತ್ರರಂಗದಲ್ಲಿ ಹಿಂದೆಂದೂ ಕಾಣದ ದೃಶ್ಯಗಳನ್ನು ಈ ಟ್ರೇಲರ್​ ಒಳಗೊಂಡಿದೆ ಅಂತಾರೆ ಅಭಿಮಾನಿಗಳು.

ಮತ್ತೊಂದು ಟ್ರೇಲರ್ ಅನಾವರಣ? ಉತ್ಸಾಹ ಇಲ್ಲಿಗೆ ಮುಗಿಯಲ್ಲ. ನಿರ್ದೇಶಕ ನಾಗ್ ಅಶ್ವಿನ್ ನೇತೃತ್ವದ ಚಿತ್ರತಂಡ ಮತ್ತೊಂದು ಟ್ರೇಲರ್ ಅನಾವರಣಗೊಳಿಸುವ ಸಾಧ್ಯತೆಯಿದೆ. 2-ನಿಮಿಷ, 30-ಸೆಕೆಂಡ್​ಗಳ ಮತ್ತೊಂದು ಟ್ರೇಲರ್ ಅನ್ನು ಸಿನಿಮಾ ಬಿಡುಗಡೆಗೂ ಒಂದು ವಾರಕ್ಕೂ ಮುನ್ನ ರಿಲೀಸ್​​ ಮಾಡಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ. ಸಿನಿಮಾ ಸುತ್ತಲಿರುವ ಸುದ್ದಿಗಳ ಪ್ರಕಾರ, ಇದು ಮೊದಲನೆ ಟ್ರೇಲರ್​ಗೂ ಹೆಚ್ಚು ಆಕರ್ಷಿತ ದೃಶ್ಯಗಳನ್ನು ಒಳಗೊಂಡಿರಲಿದೆ.

ಸಾಗರೋತ್ತರ ಪ್ರದೇಶಗಳಲ್ಲಿ ಈಗಾಗಲೇ ಟಿಕೆಟ್ ಮಾರಾಟ ಪ್ರಾರಂಭವಾಗಿದೆ. ಐಮ್ಯಾಕ್ಸ್ (IMAX)​​ ವರ್ಷನ್​ನ ಭವ್ಯ ಬಿಡುಗಡಗೆ ಅನೇಕರು ಎದುರು ನೋಡುತ್ತಿದ್ದಾರೆ. ಐಮ್ಯಾಕ್ಸ್​​​ ಪರದೆಯಲ್ಲಿ ಕಲ್ಕಿ 2898 ಎಡಿ ವೈಭವವನ್ನು ಕಣ್ತುಂಬಿಕೊಳ್ಳಲು ಪ್ರಭಾಸ್ ಅಭಿಮಾನಿಗಳು ಮತ್ತು ಸಿನಿಪ್ರಿಯರು ಎದುರು ನೋಡುತ್ತಿದ್ದಾರೆ. ಅದರಂತೆ ಇಂದು ಕಲ್ಕಿ 2898 ಎಡಿ ಐಮ್ಯಾಕ್ಸ್ ಪೋಸ್ಟರ್ ಅನಾವರಣಗೊಳ್ಳುತ್ತಿದ್ದಂತೆ, ನೆಟಿಜನ್‌ಗಳು ಮತ್ತು ಪ್ರಭಾಸ್​​ ಸೇರಿ ಚಿತ್ರದಲ್ಲಿರುವ ಬಹುತಾರೆಯರ ಫ್ಯಾನ್ಸ್ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಉತ್ಸಾಹ ವ್ಯಕ್ತಪಡಿಸುತ್ತಿದ್ದಾರೆ. ನಾಗ್ ಅಶ್ವಿನ್​ ಅವರ ನಿರ್ದೇಶನಾ ಶೈಲಿಯನ್ನು ಗುಣಗಾನ ಮಾಡುವುದರಿಂದ ಹಿಡಿದು ಸಿನಿಮಾ ವೀಕ್ಷಿಸುವ ತಮ್ಮ ಕಾತುರವನ್ನು ಹೊರಹಾಕುತ್ತಿದ್ದಾರೆ.

ಇದನ್ನೂ ಓದಿ: 'ಕೋಟಿ': ಡಾಲಿ ವೃತ್ತಿಜೀವನದಲ್ಲೇ ಅತಿ ಹೆಚ್ಚು ದಿನಗಳ ಕಾಲ ಚಿತ್ರೀಕರಿಸಿದ ಚಿತ್ರ - Kotee Movie

ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್ ಜೊತೆ ಬಾಲಿವುಡ್​ ಸ್ಟಾರ್ಸ್ ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ, ಸೌತ್ ಸೂಪರ್ ಸ್ಟಾರ್ ಕಮಲ್ ಹಾಸನ್ ಚಿತ್ರದ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ವೈಜಯಂತಿ ಮೂವೀಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದೆ. ಪೌರಾಣಿಕ ಅಂಶಗಳನ್ನು ಒಳಗೊಂಡಿರುವ ಈ ಸೈನ್ಸ್ ಫಿಕ್ಷನ್​ ಸಿನಿಮಾವನ್ನು ನಾಗ್ ಅಶ್ವಿನ್ ಬರೆದು ನಿರ್ದೇಶಿಸಿದ್ದಾರೆ. ಅತ್ಯಾಧುನಿಕ ವಿಎಫ್​ಎಕ್ಸ್​ಗಳೊಂದಿಗೆ ಅದ್ಭುತ ಸಿನಿಮೀಯ ಅನುಭವ ನೀಡುವ ಭರವಸೆಯನ್ನು ಚಿತ್ರತಂಡ ನೀಡಿದೆ. ಸರಿಸುಮಾರು 600 ಕೋಟಿ ರೂ. ಬಜೆಟ್​ನ ಈ ಚಿತ್ರ ಇದೇ ಜೂನ್​ 27ರಂದು ಬಿಡುಗಡೆಯಾಗಲಿದೆ. ಸಿನಿಮಾ ಎಷ್ಟರ ಮಟ್ಟಿಗೆ ಗೆಲುವು ಕಾಣಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಯಾತ್ರಾರ್ಥಿಗಳ ಬಸ್ ಮೇಲೆ ಉಗ್ರರ ದಾಳಿ: ರಶ್ಮಿಕಾ, ಪರಿಣಿತಿ ಸೇರಿ ಸೆಲೆಬ್ರಿಟಿಗಳಿಂದ ಖಂಡನೆ - Celebrities Condemn Terror Attack

ETV Bharat Logo

Copyright © 2024 Ushodaya Enterprises Pvt. Ltd., All Rights Reserved.