ETV Bharat / entertainment

ಮೊದಲ ಮಗುವಿನ ನಿರೀಕ್ಷೆಯಲ್ಲಿ ಕೆಎಲ್​ ರಾಹುಲ್​ - ಅಥಿಯಾ ಶೆಟ್ಟಿ - ATHIYA SHETTY

ಬಾಲಿವುಡ್​​​ ನಟಿ ಅಥಿಯಾ ಶೆಟ್ಟಿ ಮತ್ತು ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್ ಶೀಘ್ರದಲ್ಲೇ ಪೋಷಕರಾಗಿ ಭಡ್ತಿ ಪಡೆಯಲಿದ್ದಾರೆ.

Athiya Shetty KL Rahul
ಪೋಷಕರಾಗುತ್ತಿರುವ ಖುಷಿಯಲ್ಲಿ ಕೆಎಲ್​ ರಾಹುಲ್ -​ ಅಥಿಯಾ ಶೆಟ್ಟಿ (Photo: Athiya Shetty Instagram post and IANS)
author img

By ETV Bharat Entertainment Team

Published : Nov 8, 2024, 5:54 PM IST

2023ರ ಆರಂಭದಲ್ಲಿ ವೈವಾಹಿಕ ಜೀವನ ಪ್ರಾರಂಭಿಸಿದ ಬಾಲಿವುಡ್​ ನಟಿ ಅಥಿಯಾ ಶೆಟ್ಟಿ ಹಾಗೂ ಸ್ಟಾರ್​ ಕ್ರಿಕೆಟರ್​ ಕೆಎಲ್ ರಾಹುಲ್ ಶೀಘ್ರದಲ್ಲೇ ಪೋಷಕರಾಗಿ ಬಡ್ತಿ ಪಡೆಯಲಿದ್ದಾರೆ. ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಸೊಷಿಯಲ್​ ಮೀಡಿಯಾ ಮೂಲಕ ತಮ್ಮ ಪ್ರೆಗ್ನೆನ್ಸಿ ಅನೌನ್ಸ್​ ಮಾಡಿದ್ದಾರೆ.

2 ವರ್ಷಗಳಿಂದ ಪ್ರೀತಿಯಲ್ಲಿದ್ದ ಅಥಿಯಾ ಶೆಟ್ಟಿ ಹಾಗೂ ಕೆಎಲ್ ರಾಹುಲ್ 2023ರ ಜನವರಿಯಲ್ಲಿ ಅದ್ಧೂರಿಯಾಗಿ ಮದುವೆಯಾದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಅಥಿಯಾ ಸಿನಿಮಾ ರಂಗದಿಂದ ಕೊಂಚ ದೂರವೇ ಉಳಿದಿದ್ದಾರೆ. ಮಹಾರಾಷ್ಟ್ರದ ಖಂಡಾಲದಲ್ಲಿರುವ ನಟ, ಅಥಿಯಾ ಅವರ ತಂದೆ ಸುನೀಲ್ ಶೆಟ್ಟಿ ಅವರ ಫಾರ್ಮ್‌ಹೌಸ್‌ನಲ್ಲಿ ಅದ್ಧೂರಿಯಾಗಿ ವಿವಾಹ ಸಮಾರಂಭ ನಡೆದಿತ್ತು. ಇದೀಗ ಪೋಷಕರಾಗುತ್ತಿರುವ ಖುಷಿಯಲ್ಲಿದ್ದಾರೆ. ನಮ್ಮ ಸುಂದರ ಆಶೀರ್ವಾದ 2025ಕ್ಕೆ ಆಗಮಿಸುತ್ತಿದೆ ಎಂದು ಸೋಷಿಯಲ್​ ಮೀಡಿಯಾ ಪೋಸ್ಟ್​ ಶೇರ್​ ಮಾಡಿದ್ದಾರೆ. ಅಭಿಮಾನಿಗಳು ಮತ್ತು ಸಿನಿ ಸ್ನೇಹಿತರು ಸ್ಟಾರ್ ಕಪಲ್​ಗೆ ಪ್ರೀತಿಯ ಧಾರೆಯೆರೆಯುತ್ತಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಅಭಿನಂದನೆ ಕೋರುತ್ತಿದ್ದಾರೆ.

ಇದನ್ನೂ ಓದಿ: 'ನವಗ್ರಹ' ಮರು ಬಿಡುಗಡೆ: ಸೆಲೆಬ್ರೇಷನ್​ ವಿಡಿಯೋ ನೋಡಿ; ದರ್ಶನ್ ಬಗ್ಗೆ ನಟ ನಾಗೇಂದ್ರ ಹೇಳಿದ್ದಿಷ್ಟು

ಇದೇ ಸಾಲಿನ ಮಾರ್ಚ್​​ ಏಪ್ರಿಲ್​ನಲ್ಲಿ ಅಥಿಯಾ ಶೆಟ್ಟಿ ಗರ್ಭಿಣಿ ಎಂದು ಹಲವರು ಊಹಿಸಿದ್ದರು. ಸೋಷಿಯಲ್​ ಮೀಡಿಯಾದಲ್ಲಿ ಹಲವು ಊಹಾಪೋಹಗಳೆದ್ದಿದ್ದವು. ಅತ್ಯಂತ ಜನಪ್ರಿಯರಾಗಿರುವ ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವೈಯಕ್ತಿಕ ಕ್ಷಣಗಳನ್ನು ಹೆಚ್ಚಾಗಿ ಹಂಚಿಕೊಳ್ಳುವುದಿಲ್ಲ. ಕಪಲ್​ ಫೋಟೋಗಳನ್ನು ಅಪಾರ ಸಂಖ್ಯೆಯ ಅಭಿಮಾನಿಗಳು ನಿರೀಕ್ಷಿಸಿದರೂ ಕೂಡಾ ಅಪರೂಪಕ್ಕೆ ತಮ್ಮ ಪ್ರವಾಸ, ಐಷಾರಾಮಿ ಜೀವನದ ಒಂದು ಸ್ಮಾಲ್​​ ಲುಕ್​ ಅನ್ನು ಫ್ಯಾನ್ಸ್​ಗಳೊಂದಿಗೆ ಹಂಚಿಕೊಂಡು ಸಾಕಷ್ಟು ಮೆಚ್ಚುಗೆ ಸ್ವೀಕರಿಸುತ್ತಾರೆ. ಆದ್ರೆ ಈ ವರ್ಷದ ಮಾರ್ಚ್​ ಕೊನೆಯಲ್ಲಿ ಅಥಿಯಾ ಪ್ರೆಗ್ನೆಂಟ್​ ಎಂಬ ವದಂತಿ ಹರಡಿತ್ತು.

ಇದನ್ನೂ ಓದಿ: ಹ್ಯಾಪಿ ಬರ್ತ್​​ಡೇ ಗೊಲ್ಲು: ತಮ್ಮನೊಂದಿಗಿನ ಫೋಟೋಗಳನ್ನು ಹಂಚಿಕೊಂಡ ರಾಧಿಕಾ ಪಂಡಿತ್​; ಯಶ್​ ಸಾಥ್

ಅಥಿಯಾ ಶೆಟ್ಟಿ ಅವರ ತಂದೆ ಸುನೀಲ್ ಶೆಟ್ಟಿ ಡ್ಯಾನ್ಸ್ ರಿಯಾಲಿಟಿ ಶೋ ಒಂದರಲ್ಲಿ ಮಾತನಾಡಿದ್ದು ವ್ಯಾಪಕವಾಗಿ ವೈರಲ್​ ಆಗಿತ್ತು. ಕಾರ್ಯಕ್ರಮವೊಂದರ ಜಡ್ಜ್​ ಆಗಿದ್ದ ಜನಪ್ರಿಯ ನಟ ಸುನೀಲ್​ ಶೆಟ್ಟಿ ಅವರಲ್ಲಿ ಅಜ್ಜ ಆಗುವ ಅನುಭವದ ಬಗ್ಗೆ ಪ್ರಶ್ನೆಯೊಂದನ್ನು ಕೇಳಲಾಗಿತ್ತು. ಪ್ರತಿಕ್ರಿಯಿಸಿದ್ದ ಸೂಪರ್​ ಸ್ಟಾರ್​, "ಹೌದು, ಮುಂದಿನ ಸೀಸನ್ ಬಂದಾಗ ನಾನು ವೇದಿಕೆಯ ಮೇಲೆ 'ನಾನಾ' (ಅಜ್ಜ) ನಂತೆ ನಡೆಯುತ್ತೇನೆ" ಎಂದು ಹೇಳಿ ಸುದ್ದಿಯಾಗಿದ್ದರು. ಇದು ವದಂತಿಗೆ ಕಾರಣವಾಗಿತ್ತು. ಹೀಗೆ ಕೆಲವು ಬಾರಿ ಅಥಿಯಾ ಶೆಟ್ಟಿ ಪ್ರೆಗ್ನೆಂಟ್​ ಎಂದು ಊಹಾಪೋಹಗಳೆದ್ದಿದ್ದವು. ಇದೀಗ ಸ್ವತಃ ಜನಪ್ರಿಯ ಜೋಡಿಯೇ ಅಧಿಕೃತವಾಗಿ ತಮ್ಮ ಪ್ರೆಗ್ನೆನ್ಸಿಯನ್ನು ಅನೌನ್ಸ್​​ ಮಾಡಿದ್ದಾರೆ. ಜೋಡಿಗೆ ಸೋಷಿಯಲ್​ ಮೀಡಿಯಾದಲ್ಲಿ ಅಭಿನಂದನೆಯ ಮಹಾಪೂರವೇ ಹರಿದುಬರುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.