ETV Bharat / entertainment

ಲಂಡನ್​​ನಲ್ಲಿ ಭಾರತೀಯ ನಟನನ್ನು ಕಂಡು ಭಾವುಕಳಾದ ಅಭಿಮಾನಿ: ಬಿಗಿದಪ್ಪಿ ಸಂತೈಸಿದ ಕಾರ್ತಿಕ್​​ ಆರ್ಯನ್​​ - Kartik Aaryan Fan - KARTIK AARYAN FAN

ಕಾರ್ತಿಕ್ ಆರ್ಯನ್ ತಮ್ಮ ಅಭಿಮಾನಿಗಳೊಟ್ಟಿಗಿರುವ ವಿಡಿಯೋವೊಂದು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

Kartik Aaryan
ಕಾರ್ತಿಕ್ ಆರ್ಯನ್ (IANS)
author img

By ETV Bharat Karnataka Team

Published : Jun 1, 2024, 9:42 AM IST

ಕಾರ್ತಿಕ್ ಆರ್ಯನ್, ಬಾಲಿವುಡ್​ನ ಯಂಗ್​​​ ಸೂಪರ್ ಸ್ಟಾರ್. ಒಂದರ ಹಿಂದೆ ಒಂದರಂತೆ ಹಿಟ್‌ ಚಿತ್ರಗಳನ್ನು ನೀಡುತ್ತಿರುವ ನಟ ಸದ್ಯ ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರ 'ಚಂದು ಚಾಂಪಿಯನ್‌' ಸಲುವಾಗಿ ಸುದ್ದಿಯಲ್ಲಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಸಿನಿಮಾ ಪ್ರಮೋಶನ್​ನ ವಿಡಿಯೋಗಳು ಸಖತ್​ ಸದ್ದು ಮಾಡುತ್ತಿವೆ.

ಫ್ರೀಸ್ಟೈಲ್ ಸ್ವಿಮ್ಮಿಂಗ್‌ನಲ್ಲಿ ಭಾರತದ ಮೊದಲ ಪ್ಯಾರಾಲಿಂಪಿಕ್ ಗೋಲ್ಡ್ ಚಾಂಪಿಯನ್ ಮುರಳಿಕಾಂತ್ ಪೇಟ್ಕರ್ ಅವರ ಜೀವನವನ್ನು ಆಧರಿಸಿದ ಚಿತ್ರವಿದು. ಕಬೀರ್ ಖಾನ್ ಆ್ಯಕ್ಷನ್​ ಕಟ್​ ಹೇಳಿರುವ ಚಿತ್ರದಲ್ಲಿ ಕಾರ್ತಿಕ್​​ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಚಿತ್ರತಂಡದವರು ಈಗಾಗಲೇ ಸಿನಿಮಾದ ಪ್ರಚಾರ ಪ್ರಾರಂಭಿಸಿದ್ದಾರೆ. ಪ್ರಸ್ತುತ, ನಾಯಕ ನಟ ಕಾರ್ತಿಕ್ ಅವರು ಲಂಡನ್‌ನಲ್ಲಿ ತಮ್ಮ ಬಹುನಿರೀಕ್ಷಿತ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ. ಸಾಗರೋತ್ತರ ಪ್ರದೇಶದಲ್ಲಿ ಭಾರತೀಯ ನಟನನ್ನು ಕಂಡ ಮಹಿಳಾ ಅಭಿಮಾನಿಯೋರ್ವರು ಭಾವುಕರಾಗಿದ್ದಾರೆ.

ಚಂದು ಚಾಂಪಿಯನ್ ಪ್ರಮೋಷನ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಯುವ ಅಭಿಮಾನಿಯೋರ್ವರು ಕಾರ್ತಿಕ್ ಆರ್ಯನ್ ಬಳಿ ನಿಂತು ಅಳುತ್ತಿರುವುದನ್ನು, ಕಾರ್ತಿಕ್ ಬೆಚ್ಚನೆಯ ಅಪ್ಪುಗೆ ಮೂಲಕ ತಮ್ಮ ಅಭಿಮಾನಿಯನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ನಟನೆ ನಡೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಕಾರ್ತಿಕ್ ಲಂಡನ್‌ನಿಂದ ತಮ್ಮ ಫೋಟೋ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ. ಚಂದು ಚಾಂಪಿಯನ್‌ನ ಶೂಟಿಂಗ್ ಲಂಡನ್‌ನಲ್ಲಿಯೇ ಪ್ರಾರಂಭವಾಯಿತು ಎಂಬುದನ್ನು ತಿಳಿಸಿದ್ದಾರೆ. ವಿಡಿಯೋ ಹಂಚಿಕೊಂಡ ಕಾರ್ತಿಕ್, ಚಂದು ಚಾಂಪಿಯನ್‌ನ ಪ್ರಯಾಣ ಪ್ರಾರಂಭವಾದ ನಗರ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ, ಕಾರ್ತಿಕ್ ಬ್ಲ್ಯಾಕ್​ ಪ್ಯಾಂಟ್​, ಲೈಟ್​ ಪಿಂಕ್​ ಶರ್ಟ್, ವೈಟ್ ಜಾಕೆಟ್ ಧರಿಸಿ ಡ್ಯಾಶಿಂಗ್ ಲುಕ್​ ಕೊಟ್ಟಿದ್ದಾರೆ.

ಇದನ್ನೂ ಓದಿ: ಹಿಂದಿ ಬಿಗ್ ಬಾಸ್ ಒಟಿಟಿ 3 ನಡೆಸಿಕೊಡಲಿದ್ದಾರೆ ಅನಿಲ್​ ಕಪೂರ್: ಪುತ್ರಿ ಸೋನಂ ಪ್ರತಿಕ್ರಿಯಿಸಿದ್ದು ಹೀಗೆ - Bigg Boss OTT 3

ಚಂದು ಚಾಂಪಿಯನ್, ಕಾರ್ತಿಕ್ ಆರ್ಯನ್​ ಮತ್ತು ಕಬೀರ್ ಖಾನ್ ಕಾಂಬಿನೇಶನ್​ನ ಚೊಚ್ಚಲ ಚಿತ್ರ. ಕ್ರೀಡಾಪಟುವಿನ ಕಥೆಯನ್ನಾಧರಿಸಿದ ಈ ಚಿತ್ರದ ಚಂದು ಪಾತ್ರದಲ್ಲಿ ಕಾರ್ತಿಕ್ ನಟಿಸಿದ್ದಾರೆ. ಕಬೀರ್ ಕೊನೆಯದಾಗಿ ರಣ್​​ವೀರ್ ಸಿಂಗ್ ಮುಖ್ಯಭೂಮಿಕೆಯ ಸ್ಪೋರ್ಟ್ಸ್ ಡ್ರಾಮಾ '83'ಗೆ ಆ್ಯಕ್ಷನ್​ ಕಟ್​ ಹೇಳಿದ್ದರು. ಸದ್ಯ 'ಚಂದು ಚಾಂಪಿಯನ್'​​ ಮೂಲಕ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: ಕಾಲೇಜು ದಿನಗಳನ್ನು ನೆನಪಿಸಲಿದೆ 'ಬ್ಯಾಕ್ ಬೆಂಚರ್ಸ್'; ಸಿನಿಮಾ ಸಾಂಗ್ ರಿಲೀಸ್​​ - Back Benchers

ಪ್ರೇಕ್ಷಕರ ಗಮನ ಸೆಳೆಯುತ್ತಿರುವ ಈ ಚಿತ್ರ, ಜೂನ್ 14ರಂದು ಚಿತ್ರಮಂದಿರ ಪ್ರವೇಶಿಸಲಿದೆ. ಚಿತ್ರಕ್ಕಾಗಿ ಕಾರ್ತಿಕ್ ದೈಹಿಕ ರೂಪಾಂತರಕ್ಕೆ ಒಳಗಾಗಿದ್ದಾರೆ. ಪಾತ್ರಕ್ಕೆ ತಕ್ಕ ದೇಹ ಹೊಂದಲು ಸಾಕಷ್ಟು ಶ್ರಮಿಸಿದ್ದಾರೆ. ಚಂದು ಚಾಂಪಿಯನ್ ಬಾಕ್ಸ್ ಆಫೀಸ್​ನಲ್ಲಿ ಚಾಂಪಿಯನ್ ಆಗುತ್ತೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.