ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಚಿ. ದತ್ತರಾಜ್ ಇಂದು ಮುಂಜಾನೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ನಿರ್ದೇಶಕರಿಗೆ 87 ವರ್ಷ ವಯಸ್ಸಾಗಿತ್ತು.
ಚಿ.ದತ್ತರಾಜ್ ಅವರು ಖ್ಯಾತ ಸಾಹಿತಿ ದಿ.ಚಿ. ಉದಯಶಂಕರ್ ಅವರ ಸಹೋದರ. ನಟಸಾರ್ವಭೌಮ ಡಾ. ರಾಜ್ಕುಮಾರ್ ಅಭಿನಯದ ಕೆರಳಿದ ಸಿಂಹ, ಕಾಮನಬಿಲ್ಲು, ಅದೇ ಕಣ್ಣು, ಶೃತಿ ಸೇರಿದಾಗ, ಶಿವರಾಜ್ಕುಮಾರ್ ಅಭಿನಯದ ಮೃತ್ಯುಂಜಯ, ಆನಂದ ಜ್ಯೋತಿ ಜೊತೆಗೆ ಹಿರಿಯ ನಟಿ ಮಂಜುಳ ನಟನೆಯ ರುದ್ರಿ ಸೇರಿದಂತೆ ಮೊದಲಾದ ಚಿತ್ರಗಳನ್ನು ಚಿ.ದತ್ತರಾಜ್ ನಿರ್ದೇಶಿಸಿದ್ದರು. ಮಧ್ಯಾಹ್ನ ಹರಿಶ್ಚಂದ್ರ ಘಾಟ್ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಒಂದೆಡೆ ಸೇರಿದ್ದಾರೆ.
ಇದನ್ನೂ ಓದಿ: ಸುದೀಪ್ ಗುಡ್ ಬೈ ಬೆನ್ನಲ್ಲೇ ಮನೆಯಿಂದ ಹೊರನಡೆದ ಬಿಗ್ ಬಾಸ್! ಸ್ಪರ್ಧಿಗಳ ಉಡಾಫೆತನದ ವಿರುದ್ಧ ರೊಚ್ಚಿಗೆದ್ದ Bigg Boss
90ರ ದಶಕದಲ್ಲಿ ಚಿ.ದತ್ತರಾಜ್ ಕನ್ನಡ ಚಿತ್ರರಂಗ ಪ್ರವೇಶಿಸಿದರು. ರಾಜ್ಕುಮಾರ್ ಅಭಿನಯದ ಕಾಮನ ಬಿಲ್ಲು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು. ಅನಂತ್ ನಾಗ್ ಮತ್ತು ಸರಿತಾ ಈ ಚಿತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರದಲ್ಲಿಯೇ ರಾಜ್ಕುಮಾರ್ ಅವರ ಯೋಗ ಪ್ರತಿಭೆಯನ್ನು ಕೂಡಾ ಪ್ರದರ್ಶಿಸಲಾಗಿತ್ತು.
ಇದನ್ನೂ ಓದಿ: ಮಲಯಾಳಂ ನಟ ಬಾಲಾ ಬಂಧನ : ದೂರು ನೀಡಿದ್ದ ಮಾಜಿ ಪತ್ನಿ, ಮಗಳು