ETV Bharat / entertainment

ಬಿಗ್‌ ಬಾಸ್ ಮನೆಯಲ್ಲಿ ರೇಡಿಯೋ ಸ್ಟೇಷನ್; ಯಾರು 'ಬೆಸ್ಟ್ ಜಾಕಿ'? - Kannada Bigg Boss

''ತುಕಾಲಿ ಅವರಿಗೆ ಬೆಸ್ಟ್ ಜಾಕಿ ಅವಾರ್ಡ್ ಸಿಗಬಹುದಾ?'' ಎಂಬ ಶೀರ್ಷಿಕೆಯಡಿ ಬಿಗ್​ ಬಾಸ್​​ ಪ್ರೋಮೋ ಅನಾವರಣಗೊಂಡಿದೆ.

Kannada Bigg Boss
ಕನ್ನಡ ಬಿಗ್​ ಬಾಸ್​
author img

By ETV Bharat Karnataka Team

Published : Jan 25, 2024, 12:17 PM IST

ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್​ ಬಾಸ್​' ಫೈನಲ್​ಗೆ ಇನ್ನೆರಡೇ ದಿನ ಬಾಕಿ. ಅಪಾರ ಸಂಖ್ಯೆಯ ಪ್ರೇಕ್ಷಕರು ಗ್ರ್ಯಾಂಡ್ ಫಿನಾಲೆ ವೀಕ್ಷಿಸಲು ಕಾತರರಾಗಿದ್ದಾರೆ. ಈ ಹೊತ್ತಿನಲ್ಲಿ ನಕ್ಕು ನಲಿಸುವ ಟಾಸ್ಕ್ ನೀಡೋ ಮುಖೇನ ಬಿಗ್​ ಬಾಸ್ ಪ್ರೇಕ್ಷಕರಿಗೆ​ ಮನರಂಜನೆಯ ರಸದೌತಣ ಉಣಬಡಿಸುತ್ತಿದೆ.

ಬಿಗ್​ ಬಾಸ್​ ಪ್ರೋಮೋ: ನಿನ್ನೆಯ ಎಪಿಸೋಡ್​​ನಲ್ಲಿ, ಆತ್ಮವಿಮರ್ಶೆ ನಂತರ ತಮ್ಮ ಸಹಸ್ಪರ್ಧಿಗಳ ಜೊತೆ ಮನಬಿಚ್ಚಿ ಮಾತನಾಡಿ ಹಗುರಾಗಿರುವ ಬಿಗ್‌ ಬಾಸ್ ಮನೆಯ ಸದಸ್ಯರಿಗೆ ಇಂದು ರಂಜನೀಯ ಟಾಸ್ಕ್ ಸಿಕ್ಕಿದೆ. ಅದೇನೆಂಬುದು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಸೆರೆಯಾಗಿದೆ. ''ತುಕಾಲಿ ಅವರಿಗೆ ಬೆಸ್ಟ್ ಜಾಕಿ ಅವಾರ್ಡ್ ಸಿಗಬಹುದಾ?'' ಎಂಬ ಶೀರ್ಷಿಕೆಯಡಿ ಪ್ರೋಮೋ ಅನಾವರಣಗೊಂಡಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸಲು ಪ್ರೇಕ್ಷಕರು ಕಾತುರರಾಗಿದ್ದಾರೆ.

ಬಿಗ್‌ ಬಾಸ್ ಮನೆಯೊಳಗೆ ರೇಡಿಯೋ ಸ್ಟೇಷನ್ ಸ್ಥಾಪಿತವಾಗಿದೆ. ಸ್ಟೇಷನ್‌ ಇಲ್ಲದೆಯೂ ರೇಡಿಯೋ ಕೆಲಸ ಮಾಡುತ್ತಿದ್ದ ತುಕಾಲಿ ಸಂತೋಷ್​​ ಅವರಿಗೆ ಮೈಕ್ ಸಿಕ್ಕರೆ ಕೇಳಬೇಕೆ?. 'ಹಾಯ್, ಹಲೋ ನಮಸ್ಕಾರ' ಎಂದು ಮಾತು ಶುರುಮಾಡಿದ ಅವರು ಮೊದಲು ಮಾತನಾಡಿಸಿದ್ದು ವರ್ತೂರು ಸಂತೋಷ್ ಅವರನ್ನೇ. ಇದಕ್ಕೆ ಪ್ರತಿಕ್ರಿಯಿಸಿದ ಸಂಗೀತಾ, 'ಬರೀ ಅವ್ರನ್ನೇ ಮಾತಾಡಿಸ್ಬೇಕಾ?' ಎಂದು ನಗುತ್ತಲೇ ತಮ್ಮ ಅಸಮಧಾನ ಹೊರಹಾಕಿದ್ದಾರೆ.

ಅಷ್ಟೇ ಅಲ್ಲ ಕಾರ್ತಿಕ್ ಅವರಿಗೆ, 'ಈ ಮನೆಯಲ್ಲಿ ತಲೆನೋವು ಎಂಬ ಪದಕವನ್ನು ಯಾರಿಗೆ ಕೊಡಲು ಬಯಸುತ್ತೀರಾ?' ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಕಾರ್ತಿಕ್, 'ಸಂಗೀತಾ' ಎಂದು ಉತ್ತರಿಸಿದ್ದಾರೆ. ಕೂಡಲೇ ಸಂಗೀತಾ ಮೊಗದಲ್ಲಿ ಅಸಮಧಾನದ ಗೆರೆಗಳು ಕಾಣಿಸಿಕೊಂಡಿವೆ. ಕಾರ್ತಿಕ್ ಅವರ ಉತ್ತರ ಕೇಳಿದ ತುಕಾಲಿ ಅವರು 'ಈ ಸಂದರ್ಭದಲ್ಲಿ ನನಗೊಂದು ಹಾಡು ನೆನಪಾಗ್ತಿದೆ' ಎಂದು ಹೇಳಿ 'ಏನೋ ಮಾಡಲು ಹೋಗಿ, ಏನು ಮಾಡಿದೆ ನೀನು' ಎಂದು ಹಾಡುವ ಮೂಲಕ ಟಾಂಗ್ ಕೊಟ್ಟಿದ್ದಾರೆ. ಕಾರ್ತಿಕ್ ಮಾತು ಕೇಳಿ ಸಂಗೀತಾ ನಿಜಕ್ಕೂ ಮುನಿಸಿಕೊಂಡರಾ?, ರೇಡಿಯೋ ಜಾಕಿ ಆಗಿ ಕುಳಿತಾಗ ತಕ್ಕ ಉತ್ತರ ಕೊಡ್ತಾರಾ?, ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಲು ಜಿಯೋ ಸಿನಿಮಾ ನೇರಪ್ರಸಾರ ನೋಡುತ್ತಿರಿ.

ಇದನ್ನೂ ಓದಿ: ಗ್ರ್ಯಾಂಡ್‌ ಫಿನಾಲೆ ಹೊಸ್ತಿಲಲ್ಲಿ ಬಿಗ್‌ ಬಾಸ್ ಕನ್ನಡ: ಟ್ರೋಫಿ ಗೆಲ್ಲುವ ಸ್ಪರ್ಧಿ ಯಾರು?

ಗೆಲ್ಲೋರು ಯಾರು?! ಸಂಗೀತಾ, ವರ್ತೂರ್ ಸಂತೋಷ್, ಪ್ರತಾಪ್​​, ಕಾರ್ತಿಕ್​​, ತುಕಾಲಿ ಸಂತೋಷ್​, ವಿನಯ್​​​ ಅವರು ಫೈನಲಿಸ್ಟ್​​ಗಳು. ವೋಟಿಂಗ್ ಲೈನ್‌ಗಳು ಶನಿವಾರ (27-1-24) ಬೆಳಗ್ಗೆ 11 ಗಂಟೆಯವರೆಗೂ ತೆರೆದಿರುತ್ತವೆ. ವೋಟ್​ ಮಾಡೋ ಮುಖೇನ ನಿಮ್ಮ ಮೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸುವ ಅವಕಾಶ ಇದೆ. ಕನ್ನಡ ಬಿಗ್​ ಬಾಸ್ ಸೀಸನ್​ 10ರ ವಿಜೇತರು ಯಾರಾಗಬಹುದು ಎಂಬ ಕುತೂಹಲ ಅಪಾರ ಸಂಖ್ಯೆಯ ಪ್ರೇಕ್ಷಕರಲ್ಲಿದೆ.

ಇದನ್ನೂ ಓದಿ: 'ಮೇಘ' ಚಿತ್ರದ ಕಥೆ ಕೇಳಿ ನನ್ನ ಅಪ್ಪನಿಗೆ ಬುಲೆಟ್ ಬೈಕ್ ಕೊಡಿಸಿದೆ: ಕನ್ನಡತಿ ಖ್ಯಾತಿಯ ಕಿರಣ್ ರಾಜ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.