ETV Bharat / entertainment

ಚಿತ್ರರಂಗದಲ್ಲಿ 'ದರ್ಶನ್' ಸಂಚಲನ: ಯಾವೆಲ್ಲ ಸ್ಟಾರ್ಸ್​ ಜೈಲು ಪಾಲಾಗಿದ್ದರು?, ಇಲ್ಲಿದೆ ಸಂಪೂರ್ಣ ಮಾಹಿತಿ - Actor Darshan Case

author img

By ETV Bharat Karnataka Team

Published : Jun 22, 2024, 8:57 PM IST

ನಟ ದರ್ಶನ್ ಪ್ರಕರಣವು ದೇಶದಲ್ಲಿ ಸಾಕಷ್ಟು ಸಂಚಲನ ಮೂಡಿಸುತ್ತಿದೆ. ಈ ಹಿಂದೆ ಬಾಲಿವುಡ್​, ಕಾಲಿವುಡ್, ಮಾಲಿವುಡ್​ ನಟರು ಸಹ ಜೈಲು ಸೇರಿದ ನಿದರ್ಶನಗಳು ಇವೆ. ಯಾವೆಲ್ಲ ಖ್ಯಾತನಾಮರು ಅಪರಾಧದಲ್ಲಿ ಭಾಗಿಯಾಗಿದ್ದರು ಎಂಬ ಮಾಹಿತಿ ಇಲ್ಲಿದೆ.

Indian Film Stars Arrested in Different Crimes
ವಿವಿಧ ಅಪರಾಧಗಳಲ್ಲಿ ಬಂಧಿತರಾಗಿದ್ದ ಸಿನಿಮಾ ತಾರೆಯರು (Getty Images)

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ತೂಗುದೀಪ್ ಅವರು ಅಪಹರಣ, ಕೊಲೆ ಮತ್ತು ಕ್ರಿಮಿನಲ್ ಸಂಚು ಆರೋಪ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಇಡೀ ಪ್ರಕರಣವು ಥ್ರಿಲ್ಲರ್​ ಕಥೆಯಂತೆ ತೆರೆದುಕೊಳ್ಳುತ್ತಿದೆ. ಈ ಘಟನೆಯು ಕೇವಲ ಕರ್ನಾಟಕ ಮಾತ್ರವಲ್ಲದೇ, ದೇಶದಲ್ಲಿ ಸಾಕಷ್ಟು ಸಂಚಲನ ಮೂಡಿಸುತ್ತಿದೆ. ಹಿಂಸಾತ್ಮಕ ಅಪರಾಧದ ಆರೋಪವು ನಟ ಅಭಿಮಾನಿಗಳ ಹೃದಯವನ್ನೂ ಒಡೆಯುವಂತೆ ಮಾಡಿದೆ.

ಚಲನಚಿತ್ರ ನಟರನ್ನು ಅಭಿಮಾನಿಗಳು ತುಂಬಾ ಆರಾಧಿಸುತ್ತಾರೆ. ದುಷ್ಟರನ್ನು ಸೋಲಿಸಿ ನ್ಯಾಯವನ್ನು ಎತ್ತಿಹಿಡಿಯುವ ತೆರೆಯ ಮೇಲಿನ ನಾಯಕರು ನಿರಂತರವಾಗಿ ಜನಮನದಲ್ಲಿರುತ್ತಾರೆ ಮತ್ತು ಅಷ್ಟೇ ಖ್ಯಾತಿಯನ್ನು ಸಹ ಗಳಿಸುತ್ತಾರೆ. ಆದರೆ, ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ನಟರು ಡ್ರಗ್ಸ್​, ಜೂಜು, ಕೊಲೆ, ಅತ್ಯಾಚಾರ, ಕೌಟುಂಬಿಕ ಹಿಂಸಾಚಾರ, ಕ್ರಿಮಿನಲ್​ ಬೆದರಿಕೆ ಮತ್ತು ಇತರ ಅಪರಾಧಗಳಂತಹ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ ಉದಾಹರಣೆಗಳು ಇವೆ.

ಎಂಕೆಟಿ ಭಾಗವತರ್ (ನವೆಂಬರ್​ 8, 1944): ತಮಿಳು ಸಿನಿಮಾ ಪತ್ರಕರ್ತ ಸಿ.ಎನ್.ಲಕ್ಷ್ಮೀಕಾಂತನ್ ಮೇಲೆ ಅಪರಿಚಿತರ ಗುಂಪು ದಾಳಿ ನಡೆಸಿತ್ತು. ಈ ವೇಳೆ ಅವರ ಹೊಟ್ಟೆಗೆ ಚಾಕುವನ್ನು ಸಹ ಇರಿಯಲಾಗಿತ್ತು. ಆಗಿನ ಮದ್ರಾಸ್​ (ಈಗ ಚೆನ್ನೈ)ನ ವೆಪೇರಿಯಲ್ಲಿ ಲಕ್ಷ್ಮೀಕಾಂತನ್ ಸ್ನೇಹಿತನನ್ನು ಭೇಟಿ ಮಾಡಿ, ತಮ್ಮ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ವರದಿಯಾಗಿತ್ತು.

ಕೆಲ ಲೇಖನಗಳು ನಟರಾದ ಎಂಕೆಟಿ ಭಾಗವತರ್ ಮತ್ತು ಎನ್​​ಎಸ್​ಕೆ ಅವರ ಅಸಮಾಧಾನಕ್ಕೆ ಕಾರಣವಾಗಿದ್ದು, ಹೀಗಾಗಿಯೇ ಲಕ್ಷ್ಮೀಕಾಂತನ್​ ಅವರನ್ನು ಕೊಲೆ ಮಾಡುವ ಸಂಚು ರೂಪಿಸಲಾಗಿತ್ತು ಎಂದು ಪ್ರಾಸಿಕ್ಯೂಷನ್ ವಾದ ಮಂಡಿಸಿದ್ದರು. ಅಲ್ಲದೇ, ನಟರ ವಿರುದ್ಧ ಪತ್ರಕರ್ತ ಲಕ್ಷ್ಮೀಕಾಂತನ್ ಬರೆದ ಲೇಖನೆಗಳನ್ನೇ ವಿಚಾರಣೆ ಸಂದರ್ಭದಲ್ಲಿ ಸಾಕ್ಷಿಯಾಗಿ ಸಲ್ಲಿಸಲಾಗಿತ್ತು.

MGR
ಎಂಜಿಆರ್ (Getty Images)

ಎಂಜಿಆರ್ ಮತ್ತು ಎಂ.ಆರ್. ರಾಧಾ (ಜನವರಿ 12, 1967): ತಮಿಳು ನಟ ಎಂ.ಆರ್ ರಾಧಾ ಅವರು ತಮ್ಮ ಸ್ನೇಹಿತ ವಾಸು ಅವರೊಂದಿಗೆ ಖ್ಯಾತ ಎಂ.ಜಿ. ರಾಮಚಂದ್ರನ್ ಅವರ ಚೆನ್ನೈ ಮನೆಗೆ ಭೇಟಿ ನೀಡಿದ್ದರು. ಎಂಜಿಆರ್ ಮತ್ತು ರಾಧಾ ಚಿರಪರಿಚಿತರಾಗಿದ್ದರು. ರಂಗಭೂಮಿಯಲ್ಲಿದ್ದ ದಿನಗಳಿಂದಲೂ ಒಬ್ಬರಿಗೊಬ್ಬರು ಅರಿತಿದ್ದರು. ಅನೇಕ ಯಶಸ್ವಿ ಚಲನಚಿತ್ರಗಳಲ್ಲಿ ತೆರೆ ಹಂಚಿಕೊಂಡಿದ್ದರು. ಆದರೆ, ಅಂದು ಮನೆಗೆ ಹೋದ ದಿನ ಸಂಜೆ ಸುಮಾರು 4 ಗಂಟೆಗೆ ತೀವ್ರ ವಾಗ್ವಾದಕ್ಕೆ ಇಳಿದ್ದರು.

ರಾಧಾ ಅವರು ತಮ್ಮ ಧೋತಿಯಲ್ಲಿದ್ದ ರಿವಾಲ್ವರ್​ ಹೊರತೆಗೆದು, ಎಂಜಿಆರ್ ತಮ್ಮ ವೃತ್ತಿಜೀವನವನ್ನು ಹಾಳುಮಾಡಿದ್ದಾರೆ ಎಂದು ಆರೋಪಿಸಿ ಸಮೀಪದಿಂದಲೇ ಗುಂಡು ಹಾರಿಸಿದ್ದರು. ಇದರ ಪರಿಣಾಮ ಎಂಜಿಆರ್ ಅವರ ಎಡ ಕಿವಿ ಮತ್ತು ಕುತ್ತಿಗೆಗೆ ಗುಂಡುಗಳು ತಾಗಿದ್ದವು. ಈ ವೇಳೆ, ವಾಸು ಅವರು ರಾಧಾ ಮೇಲೆ ಹಲ್ಲೆ ನಡೆಸಿ ತಡೆಯಲು ಯತ್ನಿಸಿದ್ದರು.

ಆದರೆ, ರಾಧಾ ತಮ್ಮನ್ನು ತಾವು ಬಿಡಿಸಿಕೊಂಡು ಬಳಿಕ ಸ್ವತಃ ಗುಂಡು ಹಾರಿಸಿಕೊಂಡಿದ್ದರು. ಶಸ್ತ್ರಚಿಕಿತ್ಸೆಯ ನಂತರ ಇಬ್ಬರೂ ಬದುಕುಳಿದಿದ್ದರು. ಈ ಘಟನೆ ಸಂಬಂಧ ರಾಧಾ ಅವರಿಗೆ ಏಳು ವರ್ಷ ಜೈಲು ಶಿಕ್ಷೆಯಾಗಿತ್ತು. ಕೊನೆಗೆ ಈ ಶಿಕ್ಷೆಯನ್ನು ನಾಲ್ಕು ವರ್ಷ, ಮೂರು ತಿಂಗಳಿಗೆ ಇಳಿಸಲಾಗಿತ್ತು.

Salman Khan
ಸಲ್ಮಾನ್ ಖಾನ್ (Getty Images)
  • ಸಲ್ಮಾನ್ ಖಾನ್ (ಸೆಪ್ಟೆಂಬರ್ 28, 2002): ಬಾಲಿವುಡ್ ನಟ ಸಲ್ಮಾನ್ ಖಾನ್ ಹಿಟ್ ಅಂಡ್ ರನ್ ಕೇಸ್ ದೇಶದಲ್ಲಿ ದೊಡ್ಡ ಸದ್ದು ಮಾಡಿತ್ತು. ಮುಂಬೈ ಫುಟ್‌ಪಾತ್‌ ಮೇಲೆ ಲ್ಯಾಂಡ್ ಕ್ರೂಸರ್ ಹರಿಸಿದ ಪರಿಣಾಮ ಮಲಗಿದ್ದ ಕಾರ್ಮಿಕ ಸಾವನ್ನಪ್ಪಿ ಹಾಗೂ ಇತರ ನಾಲ್ವರು ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರನ್ನು ಅಜಾಗರೂಕತೆ ಮತ್ತು ನಿರ್ಲಕ್ಷ್ಯದ ಚಾಲನೆಗಾಗಿ ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಅಲ್ಲದೇ, ಜೋಧಪುರದ ಕಂಕಣಿ ಗ್ರಾಮದಲ್ಲಿ ಅಳಿವಿನಂಚಿನಲ್ಲಿರುವ ಎರಡು ಕೃಷ್ಣಮೃಗಗಳ ಹತ್ಯೆ ಆರೋಪದಲ್ಲೂ ಸಲ್ಮಾನ್​ ಜೈಲು ಸೇರಿದ್ದರು.
    Sanjay Dutt
    ಸಂಜಯ್ ದತ್ (Getty Images)
  • ಸಂಜಯ್ ದತ್ (ಏಪ್ರಿಲ್ 19, 1993): ಬಾಲಿವುಡ್​ ನಟ ಸಂಜಯ್ ದತ್ 1993ರ ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಐದು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದರು. ದತ್ ಅವರನ್ನು 1993ರ ಏಪ್ರಿಲ್​ನಲ್ಲಿ ಟಾಡಾ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಅಡಿಯಲ್ಲಿ ಬಂಧಿಸಲಾಯಿಸಲಾಗಿತ್ತು. ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದಕ್ಕಾಗಿ ಶಸ್ತ್ರಾಸ್ತ್ರ ಕಾಯ್ದೆಯ ಉಲ್ಲಂಘನೆಯಡಿ ಅವರಿಗೆ ಶಿಕ್ಷೆ ವಿಧಿಸಲಾಗಿತ್ತು.
  • ಮನ್ಸೂರ್ ಅಲಿ ಖಾನ್ (ಮಾರ್ಚ್ 27, 2001): ಅತ್ಯಾಚಾರದ ಆರೋಪದಡಿ ಮನ್ಸೂರ್ ಅಲಿ ಖಾನ್ ದೋಷಿ ಎಂದು ಸೆಷನ್ಸ್ ನ್ಯಾಯಾಲಯ ಘೋಷಿಸಿ, ಏಳು ವರ್ಷ ಶಿಕ್ಷೆಗೆ ವಿಧಿಸಿತ್ತು. ಬಳಿಕ 2012ರಲ್ಲಿ ಮದ್ರಾಸ್ ಹೈಕೋರ್ಟ್​​ ಮಹಿಳೆಯು ಸುಳ್ಳು ಆರೋಪ ಮಾಡಿದ್ದು, ದುರುದ್ದೇಶಪೂರಿತ ಕಾನೂನು ಕ್ರಮ ಮತ್ತು ಮಾನನಷ್ಟಕ್ಕಾಗಿ ನಟನಿಗೆ 50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿತ್ತು.
  • ದಿಲೀಪ್ (ಫೆಬ್ರವರಿ 17, 2017): ಮಲಯಾಳಂ ನಟ ದಿಲೀಪ್ 2017ರಲ್ಲಿ ನಟಿಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಆರೋಪದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದರು. ನಂತರ 14 ದಿನಗಳ ನ್ಯಾಯಾಂಗ ಬಂಧನಕ್ಕೂ ದಿಲೀಪ್ ಅವರನ್ನು ಕಳುಹಿಸಲಾಗಿತ್ತು.
  • ಸಂಗೀತಾ ಬಾಲನ್ (ಜೂನ್ 3, 2018): ತಮಿಳು ಟಿವಿ ನಟಿ ಸಂಗೀತಾ ಬಾಲನ್ ಅವರನ್ನು ಚೆನ್ನೈನ ರೆಸಾರ್ಟ್‌ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿತ್ತು.
    Raj Kundra
    ರಾಜ್ ಕುಂದ್ರಾ (Getty Images)
  • ರಾಜ್ ಕುಂದ್ರಾ: ಉದ್ಯಮಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ 2021ರಲ್ಲಿ ಬಂಧನಕ್ಕೆ ಒಳಗಾಗಿದ್ದರು. ಅಶ್ಲೀಲ ಚಲನಚಿತ್ರಗಳ ರಚನೆ ಮತ್ತು ವಿತರಣೆಯಲ್ಲಿ ತೊಡಗಿಸಿಕೊಂಡ ಆರೋಪದಡಿ ಬಂಧನಕ್ಕೆ ಒಳಗಾದ ನಂತರ ಅವರು ನಿರಂತರವಾಗಿ ವಿವಾದಗಳಲ್ಲಿ ಸಿಲುಕಿದ್ದರು. ಅಲ್ಲದೇ, ಡ್ರಗ್ಸ್ ಹೊಂದಿದ್ದ ಕಾರಣಕ್ಕೆ ಅಬುಧಾಬಿ ವಿಮಾನ ನಿಲ್ದಾಣದಲ್ಲಿ ಅವರನ್ನು ಬಂಧಿಸಲಾಗಿತ್ತು.
  • ಫರ್ದೀನ್ ಖಾನ್: ಬಾಲಿವುಡ್‌ನಲ್ಲಿ 'ಪ್ರೇಮ್ ಅಗ್ಗನ್' ಮತ್ತು 'ಜಂಗಲ್' ಮುಂತಾದ ಸಿನಿಮಾಗಳ ನಟ ಫರ್ದೀನ್ ಖಾನ್ ಭರವಸೆಯನ್ನು ಹುಟ್ಟಿಸಿದ್ದರು. ಆದರೆ, 2001ರಲ್ಲಿ ಕೊಕೇನ್ ಹೊಂದಿದ್ದಕ್ಕಾಗಿ ಬಂಧನಕ್ಕೆ ಒಳಾಗುವವ ಮೂಲಕ ಅವರ ವೃತ್ತಿಜೀವನವೇ ಹಳಿತಪ್ಪಿತ್ತು.
    Fardeen Khan
    ಫರ್ದೀನ್ ಖಾನ್ (Getty Images)
  • ಶೈನಿ ಅಹುಜಾ: ಬಾಲಿವುಡ್‌ ನಟ ಶೈನಿ ಅಹುಜಾ 2009ರ ಜೂನ್​ನಲ್ಲಿ 19 ವರ್ಷದ ಕೆಲಸದಾಕೆಯ ಮೇಲೆ ಅತ್ಯಾಚಾರ, ಕೂಡಿಹಾಕಿದ ಮತ್ತು ಬೆದರಿಕೆ ಆರೋಪದಲ್ಲಿ ಬಂಧನಕ್ಕೆ ಗುರಿಯಾಗಿದ್ದರು. ಐಪಿಎಸ್​ ಸೆಕ್ಷನ್ 376 (ಅತ್ಯಾಚಾರ), ಮತ್ತು ಸೆಕ್ಷನ್ 506 (ಕೊಲೆಯ ಬೆದರಿಕೆ) ಅಡಿ ಕೇಸ್​ ದಾಖಲಾಗಿತ್ತು.
    Shiney Ahuja
    ಶೈನಿ ಅಹುಜಾ (Getty Images)
  • ಮೋನಿಕಾ ಬೇಡಿ: ಬಹುಭಾಷಾ ನಟಿ ಮೋನಿಕಾ ಬೇಡಿ ಹಾಗೂ ಗ್ಯಾಂಗ್​ಸ್ಟರ್​ ಅಬು ಸಲೇಂ ಸೆಪ್ಟೆಂಬರ್ 2002ರಲ್ಲಿ ಬಂಧನಕ್ಕೆ ಒಳಗಾಗಿದ್ದರು. ಪೋರ್ಚುಗಲ್‌ನಲ್ಲಿ ನಕಲಿ ದಾಖಲೆಗಳ ಮೇಲೆ ಆ ದೇಶವನ್ನು ಪ್ರವೇಶಿಸಿದ್ದಕ್ಕಾಗಿ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು. ಅಲ್ಲದೇ, 2006ರಲ್ಲಿ ಬೇರೆ ಹೆಸರಿನಲ್ಲಿ ಪಾಸ್‌ಪೋರ್ಟ್ ಪಡೆದಿದ್ದಕ್ಕಾಗಿ ಬೇಡಿ ಅವರನ್ನು ದೋಷಿ ಎಂದು ಭಾರತದ ಕೋರ್ಟ್​ ಸಹ ಘೋಷಿಸಿತ್ತು.
    Monica Bedi
    ಮೋನಿಕಾ ಬೇಡಿ (Getty Images)
  • ಬಾಬಾ ಸೆಹಗಲ್: ಜನಪ್ರಿಯ ರಾಪರ್ ಮತ್ತು ನಟ ಬಾಬಾ ಸೆಹಗಲ್​ ಅಜಾಗರೂಕ ಚಾಲನೆ ಮತ್ತು ಹಿಟ್ ಆಂಡ್​ ರನ್ ಕೇಸ್​ನಲ್ಲಿ ಬಂಧನಕ್ಕೆ ಒಳಗಾಗಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
    ಕರೀಮ್ ಮೊರಾನಿ
    Karim Morani (Getty Images)
  • ಕರೀಮ್ ಮೊರಾನಿ: ನಿರ್ಮಾಪಕ ಕರೀಮ್ ಮೊರಾನಿ ವಿರುದ್ಧ 2017ರಲ್ಲಿ ದೆಹಲಿಯ 25 ವರ್ಷದ ಮಹಿಳೆಯೊಬ್ಬರು ಅತ್ಯಾಚಾರ ಆರೋಪದಡಿ ಹೈದರಾಬಾದ್​ನಲ್ಲಿ ಪೊಲೀಸ್​ ಕೇಸ್​ ದಾಖಲಿಸಿದ್ದರು. ಹೀಗಾಗಿ ಆ ವರ್ಷದ ಸೆಪ್ಟೆಂಬರ್​ 23ರಂದು ನಿರೀಕ್ಷಣಾ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಕಾರಣಕ್ಕೆ ಮೊರಾನಿ ಹೈದರಾಬಾದ್ ಪೊಲೀಸರ ಮುಂದೆ ಶರಣಾಗಿದ್ದರು.

ಇದನ್ನೂ ಓದಿ: ಪರಪ್ಪನ ಅಗ್ರಹಾರ ಸೇರಿದ ದರ್ಶನ್: ವಿಚಾರಣಾಧೀನ ಕೈದಿ ನಂಬರ್ 6106

ETV Bharat Logo

Copyright © 2024 Ushodaya Enterprises Pvt. Ltd., All Rights Reserved.