ನವದೆಹಲಿ: ಬಾಲಿವುಡ್ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರ ಬಹುನಿರೀಕ್ಷಿತ ಚಿತ್ರ 'ಎಮರ್ಜೆನ್ಸಿ' ಬಿಡುಗಡೆ ಹೊಸ್ತಿಲಿನಲ್ಲಿದೆ. ಆದ್ರೀಗ ನಟಿ ಅತ್ಯಾಚಾರ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಪ್ರತಿಕ್ರಿಯೆಯಾಗಿ ಇಂಥ ಬೆದರಿಕೆ ತಂತ್ರಗಳಿಂದ ನನ್ನನ್ನು ಮೌನಗೊಳಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಐಎಎನ್‌ಎಸ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ನಟಿ ಕಂಗನಾ ರಣಾವತ್, "ಕುಚ್ ಲೋಗೋ ನೆ ಬಂದೂಕೆ ತಾನ್ ದಿ ಹೈ, ಹಮಾರೆ ಮಾತೆ ಪೆ ತಾನ್ ದಿ ಹೈ. ಬಂದುಕೋಂ ಸೇ ಹಮ್ ಡರ್ನೆ ವಾಲೇ ಹೈ ನಹಿ (ಕೆಲವರು ನನ್ನ ಮೇಲೆ ಬಂದೂಕು ಚಲಾಯಿಸಲು ತರಬೇತಿ ಮಾಡಿದ್ದಾರೆ. ಆದ್ರೆ ನಾನು ಬುಲೆಟ್‌ಗಳು ಮತ್ತು ಬೆದರಿಕೆಗಳಿಗೆ ಹೆದರುವವಳಲ್ಲ). ನನಗಿಂದು ಅತ್ಯಾಚಾರ ಬೆದರಿಕೆಗಳು ಬರುತ್ತಿವೆ, ಆದರೆ ಅವರು ನನ್ನ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಪಂಜಾಬ್‌ನ ಮಾಜಿ ಸಂಸದರು ಮತ್ತು ಶಿರೋಮಣಿ ಅಕಾಲಿದಳದ (ಅಮೃತಸರ) ಮುಖ್ಯಸ್ಥ ಸಿಮ್ರಂಜಿತ್ ಸಿಂಗ್ ಮಾನ್ ಅವರ ಅತ್ಯಾಚಾರದ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ಕಂಗನಾ ಅವರ ಈ ಹೇಳಿಕೆ ಬಂದಿವೆ. ನಟಿಗೆ "ಅತ್ಯಾಚಾರದ ಸಾಕಷ್ಟು ಅನುಭವವಿದೆ" ಎಂದು ಸಿಮ್ರಂಜಿತ್ ಸಿಂಗ್ ಮಾನ್ ಹೇಳಿದ್ದಾರೆಂದು ವರದಿಯಾಗಿದೆ.
ತಮ್ಮ ಬಹುನಿರೀಕ್ಷಿತ ಚಿತ್ರ ಎಮರ್ಜೆನ್ಸಿ ಬಿಡುಗಡೆಗಾಗಿ ಎಲ್ಲಾ "ವಿರೋಧಗಳು ಮತ್ತು ಒತ್ತಡಗಳನ್ನು" ತಡೆದುಕೊಳ್ಳಲು ಸಿದ್ಧ. ಯಾವುದಕ್ಕೂ ಹೆದರುವುದಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: 'ಅಡ್ಜೆಸ್ಟ್ ಮಾಡಿಕೊಳ್ಳಲು ಒತ್ತಾಯಿಸುವವರಿಗೆ ಹೊಡೆಯುವ ಧೈರ್ಯ ನಟಿಯರಿಗಿರಬೇಕು': ನಟ ವಿಶಾಲ್ - Vishal on harassments
"ನನ್ನಂಥ ಕಲಾವಿದಳನ್ನು ಬೆದರಿಸಲು ಅಥವಾ ಮೌನಗೊಳಿಸಲು ಸಾಧ್ಯವಿಲ್ಲ. ನಾನು ನನ್ನ ಸಿನಿಮಾಗಾಗಿ ಹೋರಾಡುತ್ತೇನೆ ಮತ್ತು ಅಗತ್ಯ ಬಿದ್ದರೆ ನ್ಯಾಯಾಲಯದ ಮೆಟ್ಟಿಲೇರುತ್ತೇನೆ" ಎಂದು ಕಂಗನಾ ಐಎಎನ್‌ಎಸ್‌ಗೆ ತಿಳಿಸಿದ್ದಾರೆ. ''ಕಲಾವಿದರ ಸೃಜನಶೀಲ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಮತ್ತು ತಮ್ಮ ಸಿನಿಮಾ ಬಿಡುಗಡೆ ಮಾಡುವುದನ್ನು ತಡೆಯಲು ಸಾಧ್ಯವಿಲ್ಲ. ನಾನು ಬುಲೆಟ್ಸ್ ಮತ್ತು ಬೆದರಿಕೆಗಳಿಗೆ ಹೆದರುವವಳಲ್ಲ. ಅವರು ನನ್ನ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ" ಎಂದು ತಿಳಿಸಿದರು.
ಇದನ್ನೂ ಓದಿ: ಮಲಯಾಳಂ ಚಿತ್ರರಂಗದ 7 ನಟರ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲು - Case registered against 7 actors
ದಿವಂಗತ ಪ್ರಧಾನಿ ಇಂದಿರಾಗಾಂಧಿ ಅವರ ಜೀವನಾಧಾರಿತ 'ಎಮರ್ಜೆನ್ಸಿ' ಚಿತ್ರದಲ್ಲಿ ಕಂಗನಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪರದೆ ಮೇಲೆ ರಾಜಕಾರಣಿಯಾಗಿ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. ತಲೈವಿ (2021) ಚಿತ್ರದಲ್ಲಿ ನಟಿ-ರಾಜಕಾರಣಿ ದಿವಂಗತ ಜೆ ಜಯಲಲಿತಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 'ಎಮರ್ಜೆನ್ಸಿ' ಸೆಪ್ಟೆಂಬರ್ 6ರಂದು ತೆರಗಪ್ಪಳಿಸಲು ಸಜ್ಜಾಗಿದ್ದು, ಹಲವರಿಂದ ಆಕ್ರೋಶ ಎದುರಾಗಿದೆ. ಸಿನಿಮಾ ಬಿಡುಗಡೆಗೊಳ್ಳಬಾರದೆಂಬ ಒತ್ತಾಯಗಳು ಕೇಳಿಬಂದಿವೆ.