ETV Bharat / entertainment

'ಕಲ್ಕಿ 2898 ಎಡಿ' : 11ನೇ ದಿನ ಭಾರತೀಯ ಗಲ್ಲಾ ಪೆಟ್ಟಿಗೆಯಲ್ಲಿ 500, ವಿಶ್ವಮಟ್ಟದಲ್ಲಿ800 ಕೋಟಿ ರೂ. ಸಂಗ್ರಹ - kalki 11th day collection

ಜೂನ್​ 27 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದ್ದ 'ಕಲ್ಕಿ 2898 ಎಡಿ' ಚಿತ್ರ ತನ್ನ 11ನೇ ದಿನ ಭಾರತದಾದ್ಯಂತ ಒಟ್ಟು 500 ಕೋಟಿ ರೂ. ಗಳಿಸಿದೆ. ಒಟ್ಟಾರೆ ವಿಶ್ವಾದ್ಯಂತ 800 ಕೋಟಿ ರೂ ಕಲೆಕ್ಷನ್​ ಮಾಡಿದೆ.

author img

By ETV Bharat Karnataka Team

Published : Jul 8, 2024, 6:36 PM IST

'ಕಲ್ಕಿ 2898 ಎಡಿ' 11 ನೇ ದಿನದ ಸಂಗ್ರಹ
'ಕಲ್ಕಿ 2898 ಎಡಿ' 11 ನೇ ದಿನದ ಸಂಗ್ರಹ (ETV Bharat)

ಹೈದರಾಬಾದ್: 'ಕಲ್ಕಿ 2898 ಎಡಿ' ಕೇವಲ 11 ದಿನಗಳಲ್ಲಿ ಭಾರತದಲ್ಲಿ 500 ಕೋಟಿ ರೂಪಾಯಿಗಳ ಗಡಿ ದಾಟುವ ಮೂಲಕ ಗಲ್ಲಾ ಪೆಟ್ಟಿಗೆಯಲ್ಲಿ ಹೊಸ ದಾಖಲೆ ಬರೆಯಲು ಹೊರಟಿದೆ.

ನಾಗ್ ಅಶ್ವಿನ್ ಅವರ ನಿರ್ದೇಶನದ ಕಲ್ಕಿ ಸಿನಿಮಾವು ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್ ಜೊತೆ, ಬಹುಬೇಡಿಕೆ ತಾರೆಯರಾದ ದೀಪಿಕಾ ಪಡುಕೋಣೆ, ಅಮಿತಾಭ್​​​ ಬಚ್ಚನ್, ಕಮಲ್ ಹಾಸನ್ ಮತ್ತು ದಿಶಾ ಪಟಾನಿ, ವಿಜಯ್ ದೇವರಕೊಂಡ, ದುಲ್ಕರ್ ಸಲ್ಮಾನ್, ರಾಮ್ ಗೋಪಾಲ್ ವರ್ಮಾ, ಮಾಳವಿಕಾ ನಾಯರ್, ಮೃಣಾಲ್ ಠಾಕೂರ್ ಮತ್ತು ಅನ್ನಾ ಬೆನ್ ಅವರನ್ನು ಒಳಗೊಂಡಿದೆ.

ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ, ಭಾರತದಲ್ಲಿ ಕಲ್ಕಿ ಬಾಕ್ಸ್ ಆಫೀಸ್ ಕಲೆಕ್ಷನ್ 11ನೇ ದಿನಕ್ಕೆ 506.87 ಕೋಟಿ ರೂ. ಆಗಿದ್ದು, ಅಭಿಮಾನಿಗಳು 1000 ಕೋಟಿ ರೂ. ಕಲೆಕ್ಷನ್​ ನಿರೀಕ್ಷೆ ಇಟ್ಟಿದ್ದು, ಜಾಗತಿಕ ಬಾಕ್ಸ್​ ಆಫೀಸ್​​ ಕಲೆಕ್ಷನ್​ ಅಪ್​​ಡೇಟ್​ಗಾಗಿ ಕಾಯುತ್ತಿದ್ದಾರೆ. ಜೂನ್​ 27 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದ್ದ ಕಲ್ಕಿ ತನ್ನ ಭರ್ಜರಿ ಪ್ರದರ್ಶನವನ್ನು ಮುಂದುವರೆಸಿದೆ. ವರದಿಗಳ ಪ್ರಕಾರ, 'ಕಲ್ಕಿ 2898 AD' ತನ್ನ 11 ನೇ ದಿನದಂದು ಎಲ್ಲ ಭಾಷೆಗಳಲ್ಲಿ ಭಾರತದಾದ್ಯಂತ ಸರಿ ಸುಮಾರು 41.17 ಕೋಟಿಗಳಿಸಿದೆ. ದಿನ 1ರಿಂದ ಇಂದಿನವರೆಗಿನ ಒಟ್ಟು ದೇಶೀಯ ಆದಾಯ 506.87 ಕೋಟಿ ರೂ. ಆಗಿದೆ.

10 ನೇ ದಿನದಂದು ಕಲ್ಕಿ 34.15 ಕೋಟಿ ರೂಪಾಯಿ ಗಳಿಸಿ ಇಳಿಕೆ ಕಂಡರೂ, ಮತ್ತೆ ವಾರಾಂತ್ಯದಲ್ಲಿ ಬಲವಾಗಿ ಚೇತರಿಸಿಕೊಂಡಿದೆ. ಹೀಗಾಗಿ ಶೀಘ್ರದಲ್ಲೇ ಜಾಗತಿಕವಾಗಿ 1000 ಕೋಟಿ ರೂಪಾಯಿಗಳನ್ನು ದಾಟುವ ನಿರೀಕ್ಷೆ ಹೆಚ್ಚಿದೆ. ಪ್ರಮುಖವಾಗಿ ಉತ್ತರ ಅಮೆರಿಕದಲ್ಲಿ, ಕಲ್ಕಿ ಸಿನಿಮಾ ಡಾಲರ್​ 16 ಮಿಲಿಯನ್‌ಗಿಂತಲೂ ಹೆಚ್ಚಿನ ಕಲೆಕ್ಷನ್​​ನೊಂದಿಗೆ ದಕ್ಷಿಣ ಭಾರತದ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರವಾಗಿದೆ ಎಂದು ಅಮೆರಿಕದ ಪ್ರತ್ಯಂಗಿರಾ ಸಿನಿಮಾ ವಿತರಕ ಹೇಳಿದ್ದಾರೆ.

ವೈಜಯಂತಿ ಮೂವೀಸ್ ನಿರ್ಮಿಸಿರುವ ಕಲ್ಕಿ 2898 AD ಇದುವರೆಗೆ ತಯಾರಾದ ಅತ್ಯಂತ ದುಬಾರಿ ಭಾರತೀಯ ಚಲನಚಿತ್ರವಾಗಿದೆ. ಇದರ ಸಂಪೂರ್ಣ ಬಜೆಟ್ 600 ಕೋಟಿ ರೂ. ಆಗಿದೆ. ಪೌರಾಣಿಕ ಮತ್ತು ವೈಜ್ಞಾನಿಕವಾಗಿ ಮೂಡಿ ಬಂದಿರುವ ಸಿನಿಮಾ ಜೂನ್ 27 ರಂದು ತೆಲುಗು, ತಮಿಳು, ಮಲಯಾಳಂ, ಕನ್ನಡ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಜಾಗತಿಕವಾಗಿ ಪ್ರಥಮ ಪ್ರದರ್ಶನಗೊಂಡಿತು.

ಇದನ್ನೂ ಓದಿ: ಆ ಮೂವರ ಮುಖಾಮುಖಿ, ಅಲ್ಲಿಂದಲೇ ನಿಜವಾದ ಕಲ್ಕಿ ಕಥೆ ಪ್ರಾರಂಭ: ನಿರ್ದೇಶಕ ನಾಗ್​ ಅಶ್ವಿನ್ - Kalki Sequel

ETV Bharat Logo

Copyright © 2024 Ushodaya Enterprises Pvt. Ltd., All Rights Reserved.