ETV Bharat / entertainment

ಬೆಂಗಳೂರಿನಲ್ಲಿ ರಿಷಬ್​ ಶೆಟ್ಟಿ, ಪ್ರಶಾಂತ್​ ನೀಲ್​ ಭೇಟಿಯಾದ ಜೂ.ಎನ್​​ಟಿಆರ್​ - ಪ್ರಶಾಂತ್​​ ನೀಲ್​

ಆರ್‌ಆರ್‌ಆರ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಬೆಂಗಳೂರಿನಲ್ಲಿ ರಿಷಬ್ ಶೆಟ್ಟಿ ಮತ್ತು ಪ್ರಶಾಂತ್ ನೀಲ್ ಅವರನ್ನು ಭೇಟಿಯಾಗಿದ್ದಾರೆ.

Jr NTR met  Prashanth Neel, Rishab Shetty in Bangalore
ಬೆಂಗಳೂರಿನಲ್ಲಿ ರಿಷಬ್​ ಶೆಟ್ಟಿ, ಪ್ರಶಾಂತ್​ ನೀಲ್​ ಭೇಟಿಯಾದ ಜೂ.ಎನ್​​ಟಿಆರ್​
author img

By ETV Bharat Karnataka Team

Published : Mar 2, 2024, 4:17 PM IST

ಕಾಂತಾರ ಖ್ಯಾತಿಯ ರಿಷಬ್​ ಶೆಟ್ಟಿ, ಆರ್​ಆರ್​ಆರ್​ ಖ್ಯಾತಿಯ ಜೂನಿಯರ್ ಎನ್​​ಟಿಆರ್​, ಕೆಜಿಎಫ್​​​ ಖ್ಯಾತಿಯ ಪ್ರಶಾಂತ್​ ನೀಲ್ ಒಂದೆಡೆ ಸೇರಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಬಿರುಗಾಳಿ ಎದ್ದಿದೆ. ಮಾರ್ಚ್ 1, ಶುಕ್ರವಾರದಂದು ತೆಲುಗು ಸೂಪರ್‌ ಸ್ಟಾರ್ ಜೂನಿಯರ್ ಎನ್‌ಟಿಆರ್ ಬೆಂಗಳೂರಿನಲ್ಲಿ ಕನ್ನಡ ಚಿತ್ರರಂಗದ ಪ್ರತಿಭಾವಂತರನ್ನು ಭೇಟಿಯಾಗಿದ್ದಾರೆ. ತಾರೆಯರು ಹಂಚಿಕೊಂಡ ಹೊಸ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಂಡಿವೆ.

ಈ ಫೋಟೋಗಳು ಶೇರ್ ಆಗುವ ಮುನ್ನ ಜೂನಿಯರ್ ಎನ್​​ಟಿಆರ್​​ ಅವರ ವಿಡಿಯೋ ಹೈದರಾಬಾದ್ ವಿಮಾನ ನಿಲ್ದಾಣದಿಂದ ಹೊರಬಿದ್ದಿತ್ತು. ನಂತರ ಶೆಟ್ಟಿ ಮತ್ತು ಎನ್​ಟಿಆರ್​​ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದೊಂದು ಖಾಸಗಿ ಭೇಟಿ ಎಂದು ನಂಬಲಾಗಿದೆ. ಫೋಟೋ ಹಂಚಿಕೊಂಡ ತಾರೆಯರು, "ಬೆಂಗಳೂರು ಡೈರಿಸ್" ಎಂದು ಕ್ಯಾಪ್ಷನ್​​ ಕೊಟ್ಟಿದ್ದಾರೆ.

ಸಿನಿರಂಗದ ಪ್ರತಿಭಾನ್ವಿತರು ಶೇರ್ ಮಾಡಿರೋ ಈ ಪೋಸ್ಟ್‌ನಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹಾಗೂ ರಿಷಬ್​, ಪ್ರಶಾಂತ್​ ನೀಲ್ ಅವರ ಸಿನಿಮಾಗಳನ್ನು ನಿರ್ಮಿಸಿರೋ ಹೊಂಬಾಳೆ ಫಿಲ್ಮ್ಸ್ಸ್​​​ನ ನಿರ್ಮಾಪಕ ವಿಜಯ್ ಕಿರಗಂದೂರ್ ಕೂಡ ಜೊತೆಗಿದ್ದಾರೆ. ಅಲ್ಲದೇ ಸಿನಿ ದಿಗ್ಗಜರ ಬಾಳ ಸಂಗಾತಿಯರಾದ ಲಕ್ಷ್ಮಿ ಪ್ರಣತಿ, ಪ್ರಗತಿ ಶೆಟ್ಟಿ ಮತ್ತು ಲಿಕಿತಾ ನೀಲ್ ಕೂಡ ಇದ್ದಾರೆ.

ಇದನ್ನೂ ಓದಿ: 'ಕೆರೆಬೇಟೆ'ಗೆ ಬಿ.ವೈ ರಾಘವೇಂದ್ರ, ಆರಗ ಜ್ಞಾನೇಂದ್ರ ಸಾಥ್: ಟೈಟಲ್​​ ಸಾಂಗ್​​ ರಿಲೀಸ್

ಜೂನಿಯರ್ ಎನ್​ಟಿಆರ್​​ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ 'ದೇವರ'. ಕೊರಟಾಲ ಶಿವ ನಿರ್ದೇಶನದ ಈ ಆ್ಯಕ್ಷನ್​ - ಪ್ಯಾಕ್ಡ್ ಚಿತ್ರದ ಮೇಲೆ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. 2016ರಲ್ಲಿ ಬಂದ ಜನತಾ ಗ್ಯಾರೇಜ್ ಸಿನಿಮಾ ನಂತರ ಕೊರಟಾಲ ಶಿವ ಮತ್ತು ಜೂನಿಯರ್ ಎನ್​ಟಿಆರ್​​ ಕಾಂಬಿನೇಶನ್​ನ ಎರಡನೇ ಚಿತ್ರವಿದು. ಬಾಲಿವುಡ್​​ ಬೆಡಗಿ ಜಾಹ್ನವಿ ಕಪೂರ್ ಇದೇ ಮೊದಲ ಬಾರಿಗೆ ಜೂನಿಯರ್​ ಎನ್​ಟಿಆರ್​ ಜೊತೆ ಕೈ ಜೋಡಿಸಿದ್ದಾರೆ. ಅಲ್ಲದೇ, ನಟಿಗಿದು ತೆಲುಗಿನಲ್ಲಿ ಚೊಚ್ಚಲ ಚಿತ್ರ ಕೂಡ ಹೌದು.​​ ಸೈಫ್ ಅಲಿ ಖಾನ್, ಶೈನ್ ಟಾಮ್ ಚಾಕೊ ಕೂಡ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಖ್ಯಾತ ಗಾಯಕ ಅನಿರುಧ್ ರವಿಚಂದರ್ ಅವರ ಸಂಗೀತವಿದೆ.

ಇದನ್ನೂ ಓದಿ: ಅನಂತ್​ ಅಂಬಾನಿ ಗ್ರ್ಯಾಂಡ್​ ಪ್ರೀ ವೆಡ್ಡಿಂಗ್​​ ಸೆಲೆಬ್ರೇಶನ್​​ ಫೋಟೋಗಳಿಲ್ಲಿವೆ ನೋಡಿ

ಇದಲ್ಲದೇ, ಪ್ರಶಾಂತ್ ನೀಲ್ ಜೊತೆ ಸಿನಿಮಾ ಮಾಡಲಿದ್ದಾರೆ. ಈ ಚಿತ್ರವನ್ನು ತಾತ್ಕಾಲಿಕವಾಗಿ ಎನ್​ಟಿಆರ್​ 31 ಎಂದು ಹೆಸರಿಸಲಾಗಿದೆ. ಈ ಇಬ್ಬರ ಸದ್ಯದ ಸಿನಿಮಾಗಳು ಪೂರ್ಣಗೊಂಡ ಬಳಿಕವಷ್ಟೇ ಎನ್​ಟಿಆರ್​ 31 ಆರಂಭವಾಗಲಿದೆ. ಪ್ರಭಾಸ್ ನಟನೆಯ ಸಲಾರ್‌ 2 ನೀಲ್​ ಬಳಿ ಇದೆ. ಇನ್ನೂ ಕಾಂತಾರ ಮೂಲಕ ಸಾಕಷ್ಟು ಜನಪ್ರಿಯರಾಗಿರುವ ರಿಷಬ್ ಶೆಟ್ಟಿ ಪ್ರಸ್ತುತ ಅದರ ಸೀಕ್ವೆಲ್​​ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.