ETV Bharat / entertainment

'ಜಿಗ್ರಾ' vs 'ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ': ಆಲಿಯಾ ಮತ್ತು ರಾಜ್‌ಕುಮಾರ್ ರಾವ್, ತೃಪ್ತಿ ದಿಮ್ರಿ ಸಿನಿಮಾಗಳ ಕಲೆಕ್ಷನ್​

'ಜಿಗ್ರಾ' ಮತ್ತು 'ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ' ಸಿನಿಮಾಗಳ ಕಲೆಕ್ಷನ್​ ಮಾಹಿತಿ ಇಲ್ಲಿದೆ.

Jigra vs Vicky Vidya Ka Woh Wala
'ಜಿಗ್ರಾ' vs 'ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ' (Photo: Film posters)
author img

By ETV Bharat Karnataka Team

Published : Oct 12, 2024, 5:03 PM IST

ಆಲಿಯಾ ಭಟ್ ಮುಖ್ಯಭೂಮಿಕೆಯ 'ಜಿಗ್ರಾ' ಮತ್ತು ರಾಜ್‌ಕುಮಾರ್ ರಾವ್, ತೃಪ್ತಿ ದಿಮ್ರಿ ಅಭಿನಯದ 'ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ' ಅಕ್ಟೋಬರ್ 12 (ನಿನ್ನೆ) ರಂದು ಚಿತ್ರಮಂದಿರ ಪ್ರವೇಶಿಸಿತು. ಬಾಲಿವುಡ್​ನ ಎರಡು ಬಹುನಿರೀಕ್ಷಿತ ಚಿತ್ರಗಳು ಒಂದೇ ದಿನ ತೆರೆಕಂಡ ಹಿನ್ನೆಲೆ, ಬಾಕ್ಸ್ ಆಫೀಸ್‌ನಲ್ಲಿ ಮುಖಾಮುಖಿಯಾದವು. ಎರಡೂ ಚಿತ್ರಗಳು ವಿಭಿನ್ನ ಜಾನರ್​ಗಳಿಗೆ ಸೇರಿದವುಗಳಾಗಿದ್ದು, ಗಲ್ಲಾಪೆಟ್ಟಿಗೆ ಘರ್ಷಣೆಗೆ ಕಾರಣವಾಗಿದೆ. ಚಿತ್ರಗಳ ಮೊದಲ ದಿನದ ಕಲೆಕ್ಷನ್‌ಗಳು ಹೊರಬಿದ್ದಿದ್ದು, ವಾರಾಂತ್ಯದ ಗಳಿಕೆ ಮೇಲೆ ಎಲ್ಲರ ಗಮನ ಹರಿದಿದೆ.

ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ರಾಷ್ಟ್ರಪ್ರಶಸ್ತಿ ವಿಜೇತ ನಟಿ ಆಲಿಯಾ ಭಟ್​ ನಟಿಸಿ, ನಿರ್ಮಿಸಿರುವ 'ಜಿಗ್ರಾ' ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 4.25 ಕೋಟಿ ರೂಪಾಯಿ ಗಳಿಸಿದೆ. ಮತ್ತೊಂದೆಡೆ, 'ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ' ಕೊಂಚ ಮುನ್ನಡೆ ಸಾಧಿಸಿದೆ. ರಾಜ್‌ಕುಮಾರ್ ರಾವ್, ತೃಪ್ತಿ ದಿಮ್ರಿ ಅಭಿನಯದ ವಿವಿಕೆಡಬ್ಲ್ಯುಡಬ್ಲ್ಯುವಿ ಮೊದಲ ದಿನವೇ 5 ಕೋಟಿ ರೂ. ಗಳಿಸುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: ಚಿರಂಜೀವಿ ಮುಖ್ಯಭೂಮಿಕೆಯ ''ವಿಶ್ವಂಭರ'' ಟೀಸರ್​​: ಹನುಮಂತನ ಗದೆ ಹಿಡಿದ ಮೆಗಾಸ್ಟಾರ್

ಜಿಗ್ರಾ ಚಿತ್ರದಲ್ಲಿ ಆಲಿಯಾ ಭಟ್ ಅವರು ಸತ್ಯ ಆನಂದ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿದೇಶದಲ್ಲಿ ಬಂಧಿತನಾಗಿ, ಮರಣದಂಡನೆಗೆ ಗುರಿಯಾಗಿರುವ ಸಹೋದರ ಅಂಕುರ್ ಆನಂದ್​​​​ನನ್ನು ರಕ್ಷಿಸಲು ಹೋರಾಡುವ ಯುವತಿ. ಒಂದೊಳ್ಳೆ ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನೊಳಗೊಂಡಿರುವ ಚಿತ್ರದಲ್ಲಿ, ಸತ್ಯ ಅಂಕುರ್​ನನ್ನು ಜೈಲಿನಿಂದ ಹೊರತರಲು ಪ್ರತಿಜ್ಞೆ ಮಾಡುತ್ತಾಳೆ. ಇದು ಥ್ರಿಲ್ಲಿಂಗ್ ಚೇಸ್​ಗೆ ಕಾರಣವಾಗಿದೆ. ವಾಸನ್ ಬಾಲಾ ನಿರ್ದೇಶನದ ಈ ಚಿತ್ರದಲ್ಲಿ ಮನೋಜ್ ಪಹ್ವಾ ಮತ್ತು ರಾಹುಲ್ ರವೀಂದ್ರನ್ ಜೊತೆಗೆ ವೇದಾಂಗ್ ರೈನಾ ಅವರು ಆಲಿಯಾರ ಸಹೋದರನಾಗಿ ಕಾಣಿಸಿಕೊಂಡಿದ್ದಾರೆ. ಈ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವನ್ನು ಆಲಿಯಾ ಅವರ ಎಟರ್ನಲ್ ಸನ್‌ಶೈನ್ ಪ್ರೊಡಕ್ಷನ್ಸ್ ಮತ್ತು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ ಸೇರಿ ನಿರ್ಮಾಣ ಮಾಡಿವೆ.

ಇದನ್ನೂ ಓದಿ: ನಟರಾಕ್ಷಸ ಡಾಲಿ ಧನಂಜಯ್ ನಿರ್ಮಾಣದ 'JC' ಮೇಕಿಂಗ್ ವಿಡಿಯೋ ರಿಲೀಸ್

'ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ' 1990ರ ಭಾರತದ ಹಿನ್ನೆಲೆಯನ್ನೊಳಗೊಂಡ ಫ್ಯಾಮಿಲಿ ಕಾಮಿಡಿ ಡ್ರಾಮಾ. ರಾಜ್‌ಕುಮಾರ್ ರಾವ್ ಮತ್ತು ತೃಪ್ತಿ ದಿಮ್ರಿ ನಟಿಸಿರುವ ಈ ಸಿನಿಮಾದ ಕಥೆ ನವವಿವಾಹಿತ ದಂಪತಿಯ ಸುತ್ತ ಸಾಗುತ್ತದೆ. ಅವರು ತಮ್ಮ ಮದುವೆಯ ರಾತ್ರಿ ಮಾಡಿಕೊಂಡಿದ್ದ ಆ ವಿಡಿಯೋವನ್ನು ಆಕಸ್ಮಿಕವಾಗಿ ಕಳೆದುಕೊಳ್ಳುತ್ತಾರೆ. ಇದು ಹಾಸ್ಯಭರಿತ ಅವಘಡಗಳಿಗೆ ಕಾರಣವಾಗುತ್ತವೆ. ರಾಜ್ ಶಾಂಡಿಲ್ಯ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ರಾಝ್, ಮಲ್ಲಿಕಾ ಶರಾವತ್, ಅರ್ಚನಾ ಪುರಾಣ್ ಸಿಂಗ್ ಸೇರಿದಂತೆ ಇತರರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಕಾಮಿಡಿ ಸಿನಿಮಾ ಮಿಶ್ರ ವಿಮರ್ಶೆ ಸ್ವೀಕರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.