ETV Bharat / entertainment

'ಮಿಸ್ಟರ್ ಅಂಡ್ ಮಿಸಸ್ ಮಾಹಿ' ಟ್ರೇಲರ್​ ರಿಲೀಸ್: ಈ ತಿಂಗಳಾಂತ್ಯ ಜಾಹ್ನವಿ, ರಾಜ್‌ಕುಮಾರ್ ಸಿನಿಮಾ ತೆರೆಗೆ - Mr And Mrs Mahi - MR AND MRS MAHI

'ಮಿಸ್ಟರ್ ಅಂಡ್ ಮಿಸಸ್ ಮಾಹಿ' ಟ್ರೇಲರ್​ ಅನಾವರಣಗೊಂಡಿದೆ.

Janhvi Kapoor, Rajkummar Rao
ಜಾಹ್ನವಿ ಕಪೂರ್, ರಾಜ್‌ಕುಮಾರ್ ರಾವ್ (Photo: IANS)
author img

By ETV Bharat Karnataka Team

Published : May 12, 2024, 7:37 PM IST

ರಾಜ್‌ಕುಮಾರ್ ರಾವ್ ಮತ್ತು ಜಾಹ್ನವಿ ಕಪೂರ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಮಿಸ್ಟರ್ ಅಂಡ್ ಮಿಸಸ್ ಮಾಹಿ'. ಬಿಡುಗಡೆಗೆ ಸಜ್ಜಾಗಿರುವ ಸ್ಪೋರ್ಟ್ಸ್ ಡ್ರಾಮಾದ ಟ್ರೇಲರ್​​ ವೀಕ್ಷಿಸಲು ಅಭಿಮಾನಿಗಳು ಕಾತರರಾಗಿದ್ದರು. ಭಾನುವಾರ ಸಂಜೆ ಅಧಿಕೃತ ಟ್ರೇಲರ್ ಅನಾವರಣಗೊಳಿಸುವುದಾಗಿ ಚಿತ್ರತಂಡ ತಿಳಿಸಿತ್ತು. ಕೊಟ್ಟ ಭರವಸೆಯಂತೆ ನಿರ್ಮಾಪಕರಿಂದು 'ಮಿಸ್ಟರ್ ಅಂಡ್ ಮಿಸಸ್ ಮಾಹಿ' ಟ್ರೇಲರ್ ಬಿಡುಗಡೆಗೊಳಿಸಿದ್ದಾರೆ.

ಚಿತ್ರ ತಯಾರಕರು ಮೊದಲು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಮಿಸ್ಟರ್ ಅಂಡ್ ಮಿಸಸ್ ಮಾಹಿ ಟ್ರೇಲರ್​ನ ಫಸ್ಟ್ ಲುಕ್ ಅನ್ನು ರಿಲೀಸ್ ಮಾಡಿದ್ರು. ನಂತರ ಯೂಟ್ಯೂಬ್‌ನಲ್ಲಿ ಸಂಪೂರ್ಣ ಟ್ರೇಲರ್ ಅನಾವರಣಗೊಳಿಸಿದರು. ಟ್ರೇಲರ್​​ ಇಮ್​ಪರ್ಫೆಕ್ಟ್ಲಿ ಪರ್ಫೆಕ್ಟ್​​​ ರಿಲೇಶನ್​ಶಿಪ್​​ ಸಾರವನ್ನು ಒಳಗೊಂಡಿದೆ. ಹಲವು ಅಡೆತಡೆಗಳ ನಡುವೆ ದಂಪತಿಯ ಕ್ರಿಕೆಟ್‌ ಮೇಲಿನ ಒಲವು ಅವರನ್ನು ಒಗ್ಗೂಡಿಸಿದೆ.

ಸುಮಾರು 3-ನಿಮಿಷದ ಟ್ರೇಲರ್ ಸಿನಿಮಾದ ಒಂದು ಸಣ್ಣ ನೋಟ ಒದಗಿಸಿದೆ. ಉತ್ತರ ಭಾರತದ ಹಿನ್ನೆಲೆಯಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮಧ್ಯಮ ವರ್ಗ ಕುಟುಂಬದ ವಾತಾವರಣ, ನವದಂಪತಿಯ ಪ್ರೇಮ್​​​ಕಹಾನಿ ಇಲ್ಲಿದೆ. ಆರಂಭದಲ್ಲಿ, ಆಕಾಂಕ್ಷೆಗಳು, ಕನಸುಗಳು ಹಿನ್ನೆಡೆ ಕಾಣುತ್ತವೆ. ಪರಿಸ್ಥಿತಿಯನ್ನು ನವದಂಪತಿಗಳು ಹೇಗೆ ನಿಭಾಯಿಸುತ್ತಾರೆ ಅನ್ನೋದೇ ಕಥೆ.

  • " class="align-text-top noRightClick twitterSection" data="">

ಚಿತ್ರದಲ್ಲಿ ರಾಜ್‌ಕುಮಾರ್ ಮತ್ತು ಜಾನ್ಹವಿ ಇಬ್ಬರನ್ನೂ ಮಾಹಿ ಎಂದು ಹೆಸರಿಸಲಾಗಿದೆ. ಮದುವೆಯ ನಂತರ ಸಾಕಷ್ಟು ಅಡೆತಡೆಗಳ ನಡುವೆಯೂ ಕ್ರಿಕೆಟ್‌ ಮೇಲಿನ ಒಲವನ್ನು ಈ ದಂಪತಿ ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ: ಮನರಂಜನೆಯ ರಸದೌತಣ ಉಣಬಡಿಸಲು ಬರುತ್ತಿದ್ದಾರೆ 'ಮೂರನೇ ಕೃಷ್ಣಪ್ಪ': ಟ್ರೇಲರ್ ನೋಡಿ - Moorane Krishnappa

ಕ್ರಿಕೆಟಿಗನಾಗಬೇಕೆಂಬ ಕನಸು ಕಂಡಿದ್ದ ರಾಜ್‌ಕುಮಾರ್ ರಾವ್​ ಪಾತ್ರಕ್ಕೆ ಜೀವನದಲ್ಲಿ ಬೇರೆ ದಾರಿಯಲ್ಲಿ ಸಾಗುವಂತೆ ತಂದೆ ಒತ್ತಾಯಿಸಿದ ವೇಳೆ ತನ್ನ ಕನಸುಗಳನ್ನು ತ್ಯಜಿಸಬೇಕಾಯಿತು. ವೃತ್ತಿಯಲ್ಲಿ ವೈದ್ಯೆ ಆಗಿದ್ದ ಜಾಹ್ನವಿ ಕಪೂರ್​ ಪಾತ್ರಕ್ಕೆ ಕ್ರಿಕೆಟಿಗಳಾಗುವ ಸಾಮರ್ಥ್ಯವಿದೆ ಎಂದು ತಿಳಿಸಿದ್ದೇ ರಾಜ್‌ಕುಮಾರ್ ರಾವ್. ಜಾಹ್ನವಿ ವೃತ್ತಿಪರವಾಗಿ ಆಡುವುದನ್ನು ನೋಡಲು ರಾಜ್‌ಕುಮಾರ್ ಇಚ್ಛಿಸುತ್ತಾನೆ. ನಂತರ ನವದಂಪತಿಯ ಕ್ರಿಕೆಟ್​ ಪಯಣ ಸಾಗುತ್ತದೆ.

ಇದನ್ನೂ ಓದಿ: 'ಪ್ರಭಾಸ್ ನಾವು ಹೇಳಿದ ಪಾತ್ರದ ಬದಲಾಗಿ, ಅವರಿಷ್ಟದ ರೋಲ್ ಆಯ್ದುಕೊಂಡರು': ವಿಷ್ಣು ಮಂಚು - Kannappa

ಶರಣ್ ಶರ್ಮಾ ನಿರ್ದೇಶನದ ಮಿಸ್ಟರ್ ಅಂಡ್​​ ಮಿಸೆಸ್ ಮಾಹಿ ರಾಜ್‌ಕುಮಾರ್ ರಾವ್​ ಮತ್ತು ಜಾಹ್ನವಿ ಕಪೂರ್ ಜೋಡಿಯ ಎರಡನೇ ಚಿತ್ರ. 2021ರ ರೂಹಿ ಸಿನಿಮಾದಲ್ಲಿ ಮೊದಲ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್​​ ನಿರ್ಮಾಣ ಮಾಡಿರುವ ಮಿಸ್ಟರ್ ಅಂಡ್ ಮಿಸಸ್ ಮಾಹಿ ಮೇ 31ರಂದು ಬಿಡುಗಡೆಯಾಗಲಿದೆ. ಸದ್ಯ ಸಿನಿಮಾ ಪ್ರಮೋಶನ್​ ಜೋರಾಗೇ ನಡೆಯುತ್ತಿದ್ದು, ಸಿನಿಮಾ ಎಷ್ಟರ ಮಟ್ಟಿಗೆ ಗೆಲ್ಲಲಿದೆ ಅನ್ನೋದು ಶೀಘ್ರದಲ್ಲೇ ಗೊತ್ತಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.