ETV Bharat / entertainment

ಇಂದ್ರಜಿತ್‍ ಲಂಕೇಶ್​​ ದೀರ್ಘಕಾಲದ ಸ್ನೇಹಿತ, ನಾವು ಬ್ಯಾಡ್ಮಿಂಟನ್‍ ಆಡ್ತಿದ್ವಿ: ಸುದೀಪ್ - Sudeep - SUDEEP

ಇಂದ್ರಜಿತ್‍ ಲಂಕೇಶ್​​ ನಿರ್ದೇಶಿಸಿರುವ, ಮಗ ಸಮರ್ಜಿತ್ ಲಂಕೇಶ್‍ ನಟಿಸಿರುವ 'ಗೌರಿ' ಚಿತ್ರ ಬಿಡುಗಡೆ ಹೊಸ್ತಿಲಲ್ಲಿದೆ. ಇತ್ತೀಚೆಗಷ್ಟೇ ಅದ್ಧೂರಿ ಟ್ರೇಲರ್​ ರಿಲೀಸ್​ ಈವೆಂಟ್​​ ನಡೆಯಿತು. ಸಮಾರಂಭದಲ್ಲಿ ಭಾಗಿಯಾಗಿದ್ದ ನಟ ಸುದೀಪ್,​​ ಗೆಳೆಯ ಇಂದ್ರಜಿತ್‍ ಜೊತೆಗಿನ ಹಳೇ ದಿನಗಳನ್ನು ನೆನಪಿಸಿಕೊಂಡರು.

Indrajit Lankesh, Sudeep
ಇಂದ್ರಜಿತ್‍ ಲಂಕೇಶ್, ಸುದೀಪ್ (ETV Bharat)
author img

By ETV Bharat Entertainment Team

Published : Aug 7, 2024, 4:26 PM IST

ಕನ್ನಡ ಹಾಗೂ ಬಹುಭಾಷಾ ಸಿನಿಮಾಗಳಲ್ಲಿ ಅಭಿನಯಿಸಿ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಟಾರ್​​ಡಮ್ ಹೊಂದಿರುವ ನಟ ಕಿಚ್ಚ ಸುದೀಪ್. ಸದ್ಯ 'ಮ್ಯಾಕ್ಸ್​​​' ಸಲುವಾಗಿ ಸುದ್ದಿಯಲ್ಲಿದ್ದಾರೆ. ನಟನೆ,‌ ನಿರ್ದೇಶನ, ನಿರ್ಮಾಣ, ಗಾಯನ, ನಿರೂಪಣೆ, ಕ್ರಿಕೆಟ್, ಅಡುಗೆ ಹೀಗೆ ಕಿಚ್ಚನಲ್ಲಿರುವ ಮಲ್ಟಿ ಟ್ಯಾಲೆಂಟ್ಸ್‌​ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸೆಳೆದಿದೆ.

gowri trailer release event
'ಗೌರಿ' ಟ್ರೇಲರ್​ ರಿಲೀಸ್​​ ಈವೆಂಟ್​ (ETV Bharat)

'ಮ್ಯಾಕ್ಸ್' ಸಿನಿಮಾ ಬಿಡುಗಡೆಯನ್ನು ಎದುರು ನೋಡುತ್ತಿರುವ ಸುದೀಪ್ ಇತ್ತೀಚೆಗಷ್ಟೇ 'ಗೌರಿ' ಟ್ರೇಲರ್​​ ರಿಲೀಸ್​​​ ಈವೆಂಟ್​ನಲ್ಲಿ ಭಾಗಿಯಾಗಿದ್ದರು. ಈ ಮೂಲಕ ಹಲವು ವರ್ಷಗಳ ಗೆಳೆಯ ಇಂದ್ರಜಿತ್ ಲಂಕೇಶ್ ನಿರ್ದೇಶನದ ಸಿನಿಮಾಗೆ ಸಾಥ್​ ನೀಡಿದ್ದಾರೆ. ಇಂದ್ರಜಿತ್​​ ಗೌರಿ ಚಿತ್ರದ ಮೂಲಕ ಮಗ ಸಮರ್ಜಿತ್ ಲಂಕೇಶ್‍ ಅವರನ್ನು ಸ್ಯಾಂಡಲ್​ವುಡ್​ಗೆ ಪರಿಚಯಿಸುತ್ತಿದ್ದಾರೆ.

ವರಮಹಾಲಕ್ಷ್ಮೀ ಹಬ್ಬದ ಹಿಂದಿನ ದಿನ ತೆರೆ ಕಾಣುತ್ತಿರುವ 'ಗೌರಿ' ಟ್ರೇಲರ್​ ಅನಾವರಣಗೊಳಿಸಿ ಮಾತನಾಡಿದ ಸುದೀಪ್​​, ಇಂದ್ರಜಿತ್‍ ಮತ್ತು ನಾನು ಹಳೇ ಸ್ನೇಹಿತರು. ನಾವು ಬ್ಯಾಡ್ಮಿಂಟನ್‍ ಆಡುತ್ತಿದ್ದೆವು. ಆಗ ಇಂದ್ರಜಿತ್ ಅವರು ಲಂಕೇಶ್‍ ಅವರ ಮಗ ಎಂಬುದು ನನಗೆ ಗೊತ್ತಿರಲಿಲ್ಲ. ಆದ್ರೆ ಬಹಳ ಚೆನ್ನಾಗಿ ಆಟ ಆಡೋರು. ಇಂದು ತಂದೆ-ಮಗನಿಗೆ ಆಗುವಷ್ಟು ಸಂತೋಷ ಈ ಪ್ರಪಂಚದಲ್ಲಿ ಬೇರೆ ಯಾರಿಗೂ ಆಗಲು ಸಾಧ್ಯವೇ ಇಲ್ಲ. ಸಮರ್ಜಿತ್‍ನ ಯಶಸ್ಸು ಅವರೊಬ್ಬರ ಯಶಸ್ಸಾಗಿರುವುದಿಲ್ಲ. ಅದರಲ್ಲಿ ಇಂದ್ರಜಿತ್‍ ಯಶಸ್ಸೂ ಇದೆ. ಇನ್ನೂ ಸಾನ್ಯ ಅವರು ಉತ್ತಮ ನಟಿ ಅಷ್ಟೇ ಅಲ್ಲ, ಒಳ್ಳೆಯ ಬರಹಗಾರ್ತಿ ಕೂಡ ಹೌದು. ಈ ವಿಚಾರ ನನಗೆ ಬಿಗ್ ಬಾಸ್ ಸಮಯದಲ್ಲಿ ತಿಳಿಯಿತು'' ಎಂದು ತಿಳಿಸಿದರು.

gowri trailer release event
'ಗೌರಿ' ನಾಯಕ ನಾಯಕಿಯೊಂದಿಗೆ ಸುದೀಪ್ (ETV Bharat)

ಇಂದ್ರಜಿತ್ ಲಂಕೇಶ್ ಫ್ಯಾಷನೇಟ್ ನಿರ್ದೇಶಕ. ಹೊಸ ಹೊಸ ಹೀರೋಯಿನ್​​ಗಳನ್ನು ಪರಿಚಯಿಸುವುದರಲ್ಲಿ ಮೊದಲಿಗರು. ಸಿನಿಮಾ ಕೂಡಾ ಅಷ್ಟೇ ಚೆನ್ನಾಗಿ ಮಾಡುತ್ತಾರೆ. ‌ನಾನು ಅವರ ತುಂಟಾಟ ಚಿತ್ರದ ಹಾಡೊಂದರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾಗ ಅವರ ಡೆಡಿಕೇಷನ್‌ ಇಷ್ಟ ಆಗಿತ್ತು. ನಾವಿಬ್ಬರೂ ಬ್ಯಾಡ್ಮಿಂಟನ್ ಜೊತೆಗೆ ಸಿನಿಮಾ ಗೆಳೆಯರಾದೆವು. ಬಹು ವರ್ಷದ ಸ್ನೇಹ ಇದು. ಅವರ ಬಗ್ಗೆ ಸಖತ್ ಕ್ಯೂರಿಯಾಸಿಟಿಯ ವಿಷಯಗಳಿವೆ. ಆದ್ರೆ ಹೇಳಲು ಆಗೋಲ್ಲ ಎಂದು ಸುದೀಪ್ ತಮಾಷೆ ಮಾಡಿದರು.

ಇದನ್ನೂ ಓದಿ: ಚಿತ್ರಮಂದಿರಗಳಿಗೆ ಪ್ರೇಕ್ಷಕರು ಯಾಕೆ ಬರಬೇಕು?: ನಟ ಕಿರಣ್ ರಾಜ್ ಕೊಟ್ಟ ಉತ್ತರ ಹೀಗಿದೆ - Come To Theatres

ಟ್ರೇಲರ್​ ಲಾಂಚ್​​ ಈವೆಂಟ್​ನ ಸರಣಿ ಫೋಟೋಗಳನ್ನು ಹಂಚಿಕೊಂಡ ನಟ ಸಮರ್ಜಿತ್ ಲಂಕೇಶ್‍, 'ನಮ್ಮ ಗೌರಿ ಚಿತ್ರದ ಟ್ರೇಲರ್ ಲಾಂಚ್ ಮಾಡಿದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸರ್ ಮತ್ತು ಪ್ರೀತಿಯಿಂದ ಹರಸಿದ ಪ್ರಿಯಾಂಕಾ ಉಪೇಂದ್ರ ಮೇಡಂ ಅವರಿಗೆ ನಾನು ಆಭಾರಿಯಾಗಿದ್ದೇನೆ. ನಮ್ಮ ಸಿನಿಮಾ ಟ್ರೇಲರ್ ನೋಡಿ ಹರಸಿ ಹಾರೈಸಿ. ಇದೇ ಆಗಸ್ಟ್ 15ಕ್ಕೆ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿ ಆಶೀರ್ವದಿಸಿ' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕಿಚ್ಚ ಸುದೀಪ್​​ ವ್ಯಕ್ತಿತ್ವದ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ ರೋಚಕ ಸಂಗತಿ - Indrajit Lankesh on Sudeep

ಗೌರಿ ಚಿತ್ರದ ಮೂಲಕ ಸಮರ್ಜಿತ್ ಲಂಕೇಶ್ ಹಾಗೂ ಸಾನ್ಯಾ ಅಯ್ಯರ್ ಚಂದನವನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ನೈಜ ಘಟನೆ ಆಧರಿಸಿ ನಿರ್ಮಾಣವಾಗಿರುವ 'ಗೌರಿ' ಚಿತ್ರದ ವಿಶೇಷ ಪಾತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ನಟಿಸಿದ್ದಾರೆ.‌ ಇವರ‌ೊಂದಿಗೆ ಅಕುಲ್ ಬಾಲಾಜಿ, ಸಿಹಿ ಕಹಿ ಚಂದ್ರು, ಮುಖ್ಯಮಂತ್ರಿ ಚಂದ್ರು, ಕಾಂತಾರ ಖ್ಯಾತಿಯ ಮಾನಸಿ ಸುಧೀರ್, ಸಂಪತ್ ಮೈತ್ರೇಯ, ಚಂದುಗೌಡ ಸೇರಿದಂತೆ ಬಹಳಷ್ಟು ಜನರು ನಟಿಸಿದ್ದಾರೆ. ಎ.ಜೆ.ಶೆಟ್ಟಿ ಹಾಗೂ ಕೃಷ್ಣಕುಮಾರ್ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಆಗಸ್ಟ್ 15ರಂದು ಸಿನಿಮಾ ಬಿಡುಗಡೆ ಆಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.