ETV Bharat / entertainment

ಗರ್ಲ್​ಫ್ರೆಂಡ್​ ಸಬಾ ಅಜಾದ್​ 'ಮಿನಿಮಮ್'​​ ಚಿತ್ರಕ್ಕೆ ಹೃತಿಕ್​ ಬೆಂಬಲ; ಮೆಚ್ಚುಗೆ ಪೋಸ್ಟ್​ ಹಂಚಿಕೊಂಡ ನಟ - Hrithik louds Girlfriend Saba Azad - HRITHIK LOUDS GIRLFRIEND SABA AZAD

ಟಿ, ಗಾಯಕಿಯಾಗಿ ಗುರುತಿಸಿಕೊಂಡಿರುವ ಸಬಾ ಆಜಾದ್​ ಚಿತ್ರ ಯುಕೆ ಏಷ್ಯನ್​ ಫಿಲ್ಮ್​ ಫೆಸ್ಟಿವಲ್​ನಲ್ಲಿ ಪ್ರದರ್ಶನ ಕಾಣುತ್ತಿದೆ.

Hrithik Roshan pays a nod to his girlfriend Saba Azad's film Minimum
Hrithik Roshan pays a nod to his girlfriend Saba Azad's film Minimum (Instagram image)
author img

By ETV Bharat Karnataka Team

Published : May 3, 2024, 12:14 PM IST

ಹೈದರಾಬಾದ್​: ತಮ್ಮ ಗರ್ಲ್​​ಫ್ರೆಂಡ್​ ಸಬಾ ಆಜಾದ್​ ನಟನೆಯ 'ಮಿನಿಮಮ್​' ಚಿತ್ರಕ್ಕೆ ಬಾಲಿವುಡ್​ ನಟ ಹೃತಿಕ್​ ರೋಶನ್​ ಪ್ರೋತ್ಸಾಹ ನೀಡಿದ್ದಾರೆ. 26ನೇ ಯುಕೆ ಏಷ್ಯನ್​​​ ಫಿಲ್ಮ್​ ಫೆಸ್ಟಿವಲ್​​ನಲ್ಲಿ ಚಿತ್ರ ಪ್ರದರ್ಶನದ ಕಾಣುತ್ತಿದ್ದು, ತಮ್ಮ ಗೆಳತಿಗೆ ಪ್ರೀತಿ, ಬೆಂಬಲ ವ್ಯಕ್ತಪಡಿಸಲು ನಟ ಹೃತಿಕ್​ ಹಿಂದೆ ಬಿದ್ದಿಲ್ಲ. ನಟಿ, ಗಾಯಕಿಯಾಗಿ ಗುರುತಿಸಿಕೊಂಡಿರುವ ಸಬಾ ಆಜಾದ್​ ಚಿತ್ರ ಯುಕೆ ಏಷ್ಯನ್​ ಫಿಲ್ಮ್​ ಫೆಸ್ಟಿವಲ್​ನಲ್ಲಿ ಪ್ರದರ್ಶನ ಕಾಣುತ್ತಿರುವ ಹಿನ್ನಲೆ ನಟ ಹರ್ಷ ವ್ಯಕ್ತಪಡಿಸಿ, ತನ್ನ ಪ್ರೀತಿಯ ಮನದನ್ನೆಗೆ ಶುಭ ಕೋರಿದ್ದಾರೆ.

ನಟ ಹೃತಿಕ್​ ಹಂಚಿಕೊಂಡ ಪೋಸ್ಟ್​​
ನಟ ಹೃತಿಕ್​ ಹಂಚಿಕೊಂಡ ಪೋಸ್ಟ್​​ (Hrithik Instagram image)

ಸಬಾ ನಟನೆಯ 'ಮಿನಿಮಮ್'​ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಹೃತಿಕ್​ ರೋಶನ್​, ಇದೀಗ ಇನ್​​​ಸ್ಟಾಗ್ರಾಂನಲ್ಲಿ ಆಕೆಯನ್ನು ಮನಸಾರೆ ಹೊಗಳಿ, ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇನ್​​ಸ್ಟಾಗ್ರಾಂನ ಸ್ಟೋರಿಯಲ್ಲಿ ಚಿತ್ರದ ಪೋಸ್ಟರ್​ ಹಂಚಿಕೊಂಡಿದ್ದು, ಚಿತ್ರ 26ನೇ ಯುಕೆ ಏಷ್ಯನ್​ ಫಿಲ್ಮ್​ ಫೆಸ್ಟಿವಲ್​​ನಲ್ಲಿ ಪ್ರದರ್ಶನ ಕಾಣಲಿರುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ತಮ್ಮ ಗೆಳತಿ ಜೊತೆಗೆ ಚಿತ್ರ ತಂಡವನ್ನು ಹೊಗಳಿರುವ ನಟ ರೋಶನ್​, ಚಿತ್ರದ ವೀಕ್ಷಣೆಯು ಅದ್ಬುತ ಅನುಭವ ಆಗಿರಲಿದೆ ಎಂಬ ಅಡಿಬರಹದ ಜೊತೆಗೆ ಕೈತಟ್ಟುವ ಮತ್ತು ಹೃದಯದ ಎಮೋಜಿಯೊಂದಿಗೆ ಪೋಸ್ಟ್​ ಹಂಚಿಕೊಂಡಿದ್ದಾರೆ. ರುಮನಾ ಮೊಲ್ಲಾ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಸಬಾ ಜೊತೆಗೆ ನಮಿತಾ ದಾಸ್​, ಗೀತಾಂಜಲಿ ಕಲುಕರ್ಣಿ, ರುಮನ, ನಸೀರುದ್ದೀನ್​ ಶಾ ನಟನೆ ಮಾಡುತ್ತಿದ್ದಾರೆ.

ಹಲವು ಸಮಯಗಳ ಡೇಟಿಂಗ್​ ನಂತರ ಹೃತಿಕ್​ ರೋಶನ್​ ಮತ್ತು ಸಬಾ ಆಜಾದ್​​ ತಮ್ಮ ನಡುವಿನ ಸಂಬಂಧವನ್ನು ಇನ್​​​ಸ್ಟಾಗ್ರಾಂ ಮೂಲಕ ಸಾರ್ವಜನಿಕವಾಗಿ ತಿಳಿಸಿದ್ದರು. ಈ ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕವಾಗಿ ಪರಸ್ಪರ ಅಭಿಮಾನ ವ್ಯಕ್ತಪಡಿಸುವ ಮೂಲಕ ತಮ್ಮ ನಡುವಿನ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದರು. ಜೊತೆಗೆ ಸಾರ್ವಜನಿಕ ಮತ್ತು ಖಾಸಗಿ ಸಮಾರಂಭದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದೂ ಉಂಟು.

ವೃತ್ತಿ ಜೀವನದ ಕಡೆ ಗಮನಿಸುವುದಾದರೆ, ನಟ ಹೃತಿಕ್​ ಇತ್ತೀಚಿಗೆ 'ಫೈಟರ್'​ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಆಕ್ಷ್ಯನ್​ ಥ್ರಿಲ್ಲರ್​​ನ ಈ ಸಿನಿಮಾದಲ್ಲಿ ನಟಿ ದೀಪಿಕಾ ಪಡುಕೋಣೆ, ಅನಿಲ್​ ಕಪೂರ್​, ಕರಣ್​ ಸಿಂಗ್​ ಗ್ರೋವರ್​ ಮತ್ತಿತ್ತರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರ ಹೊರತಾಗಿ 2019ರಲ್ಲಿ ತೆರೆಕಂಡಿದ್ದ ಅವರ ಚಿತ್ರ 'ವಾರ್'​​ನ ಎರಡನೇ ಭಾಗದಲ್ಲಿ ನಟ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಹೃತಿಕ್​ ರೋಷನ್​ ಜೊತೆ ಟೈಗರ್​ಶ್ರಾಫ್​, ವಾಣಿ ಕಪೂರ್​ ನಟಿಸಿದ್ದಾರೆ.

ಇದನ್ನೂ ಓದಿ: ಬಿಗಿ ಭದ್ರತೆಯೊಂದಿಗೆ ಭಾರತಕ್ಕೆ ಮರಳಿದ ಸಲ್ಮಾನ್​: ಕ್ಯಾಮರಾಗೆ ಪೋಸ್ ಕೊಡದೇ ತೆರಳಿದ ನಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.