ತಿರುವನಂತಪುರಂ (ಕೇರಳ): ಮಲಯಾಳಂ ಚಿತ್ರರಂಗದಲ್ಲಿನ ಮಹಿಳಾ ನಟರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಆಘಾತಕಾರಿ ಅಂಶಗಳನ್ನೊಳಗೊಂಡ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯನ್ನು ಕೇರಳ ಸರ್ಕಾರ ಸೋಮವಾರದಂದು ಬಿಡುಗಡೆ ಮಾಡಿದೆ.
ಮಲಯಾಳಂ ಸಿನಿರಂಗದಲ್ಲಿ 'ಕಾಸ್ಟಿಂಗ್ ಕೌಚ್' ಗಂಭೀರ ಸಮಸ್ಯೆಯಾಗಿ ಉಳಿದುಕೊಂಡಿದೆ ಎಂಬುದನ್ನು ವರದಿ ಬಹಿರಂಗಪಡಿಸಿದೆ. ಈ ಡಾಕ್ಯುಮೆಂಟ್ ಇದು 233 ಪುಟಗಳ ಮಾಹಿತಿ ಹೊಂದಿದೆ.
2019ರ ಡಿಸೆಂಬರ್ 31ರಂದು ವರದಿ ಕೇಳಲಾಗಿತ್ತು. ಐದು ವರ್ಷಗಳ ನಂತರ ವರದಿಯನ್ನು ಬಿಡುಗಡೆ ಮಾಡಲಾಗಿದೆ. ವರದಿಯನ್ನು ಕೋರಿ ಮಾಹಿತಿ ಆಯೋಗವನ್ನು ಸಂಪರ್ಕಿಸಿದ್ದ ಪತ್ರಕರ್ತರು ಸೇರಿದಂತೆ ಐದು ಜನರಿಗೆ ಈ ವರದಿಯನ್ನು ನೀಡಲಾಗಿದೆ. ಮಲಯಾಳಂ ಚಿತ್ರರಂಗದಲ್ಲಿನ ಮಹಿಳಾ ಕಲಾವಿದರ ಸಮಸ್ಯೆಗಳನ್ನು ಅಧ್ಯಯನ ಮಾಡಲು ನ್ಯಾಯಮೂರ್ತಿ ಹೇಮಾ ಸಮಿತಿಯನ್ನು ರಚಿಸಲಾಗಿತ್ತು.
ವರದಿಯಲ್ಲಿರುವ ಪ್ರಮುಖ ಅಂಶಗಳೇನು?
- ಲೈಂಗಿಕ ಕ್ರಿಯೆಗಳಿಗೆ ಸಮ್ಮತಿಸದ ನಟಿಯರಿಗೆ ಸಿನಿಮಾ ಅವಕಾಶಗಳು ತಪ್ಪಿ ಹೋಗುತ್ತವೆ.
- ಪಾತ್ರಗಳನ್ನು ಪಡೆಯಲು ನಟಿಯರು ಅಡ್ಜೆಸ್ಟ್ ಆಗಬೇಕು.
- ಪ್ರಮುಖ ನಟರು, ನಿರ್ಮಾಪಕರು ಮತ್ತು ನಿರ್ದೇಶಕರು ಈ ಆರೋಪಗಳಿಗೆ ಗುರಿಯಾಗಿದ್ದಾರೆ.
- ಚಿತ್ರರಂಗದಲ್ಲಿ ಪುರುಷ ಪ್ರಾಬಲ್ಯವಿದೆ.
- ಅವರ ಬೇಡಿಕೆಗಳಿಗೆ ಸಮ್ಮತಿಸದ ನಟಿಯರಿಗೆ ಶೂಟಿಂಗ್ನಲ್ಲಿ ರೀಟೇಕ್ ಮೂಲಕ ಗುರಿ ಮಾಡಲಾಗುತ್ತಿತ್ತು. ಕೆಲ ನಟಿಯರಿಗೆ ಶಿಕ್ಷೆಯಾಗಿ 17 ರಿಪಿಡೆಡ್ ಶಾಟ್ಸ್ ನೀಡಲಾಗಿದೆ.
- ನಟರೊಂದಿಗೆ ನಟಿಯರು ಸಹಕರಿಸಬೇಕು ಎಂಬ ಗ್ರಹಿಕೆ ಸಾಮಾನ್ಯವಾಗಿಬಿಟ್ಟಿದೆ.
- ಯುವ ನಟಿಯರಿಗೆ ಮಾತ್ರ ಮಹತ್ವದ ಪಾತ್ರಗಳಲ್ಲಿ ನಟಿಸುವ ಅವಕಾಶ ಸಿಗುತ್ತಿದೆ.
- ಸಹಕರಿಸಲು ಇಚ್ಛಿಸುವವರನ್ನು ಮಾತ್ರ ಗುರುತಿಸಲಾಗುತ್ತದೆ. ಸಮ್ಮತಿಸದವರನ್ನು ಬದಿಗೆ ಸರಿಸಲಾಗುತ್ತದೆ.
- ದೂರು ನೀಡಲು ಮುಂದಾದರೆ ಸ್ವಂತ ಜೀವನ ಮತ್ತು ಅವರ ಕುಟುಂಬಕ್ಕೆ ಬೆದರಿಕೆ ಹಾಕುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ.
- ಮಲಯಾಳಂ ಚಿತ್ರರಂಗವನ್ನು ಅಪರಾಧಿಗಳು ನಿಯಂತ್ರಿಸುತ್ತಿದ್ದಾರೆ.
- ಚಿತ್ರರಂಗದಲ್ಲಿ ಹೊರಗಿನಿಂದ ಕಾಣುವ ಗ್ಲಾಮರ್ ಇಲ್ಲ.
- ಅವರ ಬೇಡಿಕೆಗಳನ್ನು ಒಪ್ಪುವ ನಟಿಯರನ್ನು ಮಾತ್ರ ಕೋಡ್ ಹೆಸರುಗಳಿಂದ ಕರೆಯಲಾಗುತ್ತದೆ.
- ದೂರು ನೀಡಲು ನಟಿಯರು ಭಯಪಡುತ್ತಿದ್ದಾರೆ.
- ನಟಿಯರು ನೀಡಿರುವ ಮಾಹಿತಿ ಆಘಾತಕಾರಿಯಾಗಿದೆ ಎಂದು ಆಯೋಗ ತಿಳಿಸಿದೆ.
ಇದನ್ನೂ ಓದಿ: ಸಾಂಪ್ರದಾಯಿಕ ಶೈಲಿಯಲ್ಲಿ ಬೇಬಿಬಂಪ್ ಫೋಟೋಶೂಟ್ ಮಾಡಿಸಿದ ಹರ್ಷಿಕಾ ಪೂಣಚ್ಚ: ನಟಿಯ ವಿಡಿಯೋ ನಿಮಗಾಗಿ - Harshika Poonacha