ETV Bharat / entertainment

ರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ಕುಣಿದು ಕುಪ್ಪಳಿಸಿದ ಗುರುಕಿರಣ್, ಪ್ರೇಮ್ - ಗುರುಕಿರಣ್

ಸಿನಿಮಾ ಕ್ಷೇತ್ರ ದಿನದಿಂದ ದಿನಕ್ಕೆ ಅನೇಕ ಅವಕಾಶಗಳನ್ನು ತೆರೆದುಕೊಳ್ಳುತ್ತಿರುವ ಕ್ಷೇತ್ರವಾಗಿದೆ ಎಂದು ಗಾಯಕ ಗುರುಕಿರಣ್ ಅವರು ತಿಳಿಸಿದ್ದಾರೆ.

ರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ಕುಣಿದು ಕುಪ್ಪಳಿಸಿದ ಗುರುಕಿರಣ್, ಪ್ರೇಮ್

author img

By ETV Bharat Karnataka Team

Published : Feb 18, 2024, 10:53 PM IST

ಮೈಸೂರು : ಅಮೃತ ವಿಶ್ವವಿದ್ಯಾಪೀಠಂನ ದೃಶ್ಯ ಸಂವಹನ ವಿಭಾಗದ ವತಿಯಿಂದ ಆಯೋಜಿಸಿದ್ದ ’ಸಿನಿರಮಾ-2024’ 6ನೇ ರಾಷ್ಟ್ರೀಯ ಕಿರುಚಿತ್ರೋತ್ಸವದ ಸಮಾರೋಪ ಸಮಾರಂಭವು ಅಮೃತ ವಿಶ್ವವಿದ್ಯಾಪೀಠಂನ ಮೈಸೂರು ಕ್ಯಾಂಪಸ್‌ನಲ್ಲಿ ನಡೆಯಿತು.

ಕಿರುಚಿತ್ರೋತ್ಸವದ ಭಾಗವಾಗಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಕಿರುಚಿತ್ರಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಸಂಗೀತ ನಿರ್ದೇಶಕ, ಗಾಯಕ ಗುರುಕಿರಣ್ ಹಾಗೂ ನಟ ಪ್ರೇಮ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ನಂತರ ಮಾತನಾಡಿದ ಗುರುಕಿರಣ್, ಸಿನಿಮಾ ಕ್ಷೇತ್ರ ದಿನದಿಂದ ದಿನಕ್ಕೆ ಅನೇಕ ಅವಕಾಶಗಳನ್ನು ತೆರೆದುಕೊಳ್ಳುತ್ತಿರುವ ಕ್ಷೇತ್ರವಾಗಿದೆ. ಇದಕ್ಕೆ ಎಂದಿಗೂ ಸಾವಿಲ್ಲ. ಸಿನಿಮಾ ನಿರ್ಮಾಣದಲ್ಲಿ ಆಸಕ್ತಿ ಇರುವವರು ವಿವಿಧ ತಂಡಗಳ ಜೊತೆ ಕೆಲಸ ನಿರ್ವಹಿಸಿ ಅನುಭವವನ್ನು ಪಡೆದುಕೊಳ್ಳಬೇಕು. ಇಂತಹ ಅನುಭವಗಳು ಸಿನಿಮಾ ವೃತ್ತಿ ಜೀವನಕ್ಕೆ ಭದ್ರ ಬುನಾದಿಯನ್ನು ಹಾಕುತ್ತವೆ ಎಂದರು.

ರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ಕುಣಿದು ಕುಪ್ಪಳಿಸಿದ ಗುರುಕಿರಣ್, ಪ್ರೇಮ್
ರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ಕುಣಿದು ಕುಪ್ಪಳಿಸಿದ ಗುರುಕಿರಣ್, ಪ್ರೇಮ್

ನಟ ಲವ್ಲೀ ಸ್ಟಾರ್ ಪ್ರೇಮ್ ಮಾತನಾಡಿ, ಹಿಂದಿನ ದಿನಗಳಲ್ಲಿ ನಾವು ಅವಕಾಶಕ್ಕಾಗಿ ನಿರ್ದೇಶಕರ ಹಿಂದೆ ಅಲೆಯುತ್ತಿದ್ದೆವು. ಆದರೆ ಇಂದು ಉತ್ತಮ ಪ್ರತಿಭಾವಂತ ಕಲಾವಿದರನ್ನು ನಿರ್ದೇಶಕರುಗಳೇ ಹುಡುಕಿಕೊಂಡು ಬರುತ್ತಿದ್ದಾರೆ. ಕನ್ನಡ ಸಿನಿಮಾ ರಂಗ ಉತ್ತಮ ಕಲಾವಿದರು ಹಾಗೂ ತಂತ್ರಜ್ಞರಿಗೆ ಮುಕ್ತ ಅವಕಾಶಗಳನ್ನು ಕಲ್ಪಿಸುತ್ತಿದೆ. ಮೊಬೈಲ್​ನ ಹಾವಳಿ ಎಷ್ಟೇ ಇದ್ದರೂ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಿನಿಮಾ ಮಂದಿರಗಳಿಗೆ ತೆರಳಿ ಸಿನಿಮಾ ನೋಡುವಂತೆ ಸಲಹೆ ನೀಡಿದರು.

ಈ ಬಾರಿಯ ಸಿನಿರಮಾಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ದೇಶದಾದ್ಯಂತ ವಿವಿಧ ವಿಶ್ವವಿದ್ಯಾಲಯಗಳು, ಕಾಲೇಜುಗಳು ಹಾಗೂ ಫಿಲ್ಮ್ ಮೇಕಿಂಗ್ ಸ್ಕೂಲ್‌ಗಳು ಭಾಗವಹಿಸಿದ್ದವು. 100ಕ್ಕೂ ಹೆಚ್ಚು ಸಿನಿಮಾಗಳು ಈ ಕಿರುಚಿತ್ರೋತ್ಸವದಲ್ಲಿ ನೋಂದಣಿಗೊಂಡಿದ್ದು, ಟಾಪ್ ಕಿರುಚಿತ್ರಗಳನ್ನು ಪ್ರದರ್ಶನ ಮಾಡಲಾಯಿತು. ಕಿರುಚಿತ್ರ ಸ್ಪರ್ಧೆಯ ವಿಜೇತರಿಗೆ ಸುಮಾರು 1 ಲಕ್ಷ ರೂಪಾಯಿ ಮೌಲ್ಯದ ನಗದು ಬಹುಮಾನವನ್ನು ನೀಡಲಾಯಿತು.

ಸಿನಿರಮಾ-2024
ಸಿನಿರಮಾ-2024

ಕಾರ್ಯಕ್ರಮದಲ್ಲಿ ಅಮೃತ ಮೈಸೂರು ಕ್ಯಾಂಪಸ್‌ನ ಅಸೋಸಿಯೇಟ್ ಡೀನ್ ಪ್ರೊ. ಶೇಖರ್ ಬಾಬು, ಪ್ರಾಂಶುಪಾಲ ಡಾ.ಜಿ. ರವೀಂದ್ರನಾಥ್, ಮೈಸೂರು ಕ್ಯಾಂಪಸ್‌ನ ನಿರ್ದೇಶಕರಾದ ಬ್ರಹ್ಮಚಾರಿ ಅನಂತಾನಂದ ಚೈತನ್ಯ, ಸಂಚಾಲಕರಾದ ಬ್ರಹ್ಮಚಾರಿ ಮುಕ್ತಿದಾಮೃತ ಚೈತನ್ಯ, ದೃಶ್ಯ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ. ಮೌಲ್ಯ ಬಾಲಾಡಿ ಮತ್ತಿತರರು ಇದ್ದರು.

ಪ್ರಶಸ್ತಿ ವಿಜೇತರು:

ಪ್ರಥಮ ಅತ್ಯುತ್ತಮ ಕಿರುಚಿತ್ರ - ಪರಾಗ್ ಸಾವಂತ್ - ಪಂಖೋಲ್ (ಮರಾಠಿ)
ದ್ವಿತೀಯ ಅತ್ಯುತ್ತಮ ಕಿರುಚಿತ್ರ - ಪ್ರೇಮ್ ಕುಮಾರ್ ಆರ್ - ಕರ್ಪಿ (ತಮಿಳು)
ತೃತೀಯ ಕಿರುಚಿತ್ರ - ಅನಂತು ರಮೇಶ್ - ದ್ವಯಂ (ಮಲಯಾಳಂ)

ವಿಶೇಷ ವಿಭಾಗ ಪ್ರಶಸ್ತಿಗಳು:

ಅತ್ಯುತ್ತಮ ಸಂಕಲನಕಾರ - ಪ್ರದೀಪ್ ಪಾಟೀಲ್ - ಪಂಖೋಲ್ (ಮರಾಠಿ)
ಅತ್ಯುತ್ತಮ ನಿರ್ದೇಶಕ - ಅನಂತು ರಮೇಶ್ - ದ್ವಯಂ (ಮಲಯಾಳಂ)
ಅತ್ಯುತ್ತಮ ಛಾಯಾಗ್ರಾಹಕ - ಪರಾಗ್ ಸಾವಂತ್ - ಪಂಖೋಲ್ (ಮರಾಠಿ)
ಅತ್ಯುತ್ತಮ ನಟನೆ - ಭಾನುಪ್ರಿಯ - ಕರ್ಪಿ (ತಮಿಳು)
ಉತ್ತಮ ಕಥೆ - ವಿಘ್ನೇಶ್ ಪರಮಶಿವಂ - ತುಣೈ (ತಮಿಳು)

ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಲು ಹಾಗೂ ಅವರಲ್ಲಿರುವ ಸಿನಿಮಾ ಆಸಕ್ತಿಯನ್ನು ಪ್ರೋತ್ಸಾಹಿಸಲು, ಅಮೃತ ವಿಶ್ವವಿದ್ಯಾಪೀಠಂನ ವಿದ್ಯಾರ್ಥಿಗಳಿಗಾಗಿ ಅಮೃತ ವಿಶೇಷ ಪ್ರಶಸ್ತಿಗಳನ್ನು ನೀಡಲಾಯಿತು.

ಇದನ್ನೂ ಓದಿ : ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಬೇಟೆಗಿಳಿದ ಲೈನ್ ಮ್ಯಾನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.