ETV Bharat / entertainment

ನಿರ್ದೇಶನಕ್ಕಿಳಿದ ಮಾತಿನ ಮಲ್ಲ ಸೃಜನ್ ಲೋಕೇಶ್: ತಾಯಿ-ಮಗನಿಗೂ ಹೇಳುತ್ತಿದ್ದಾರೆ ಆ್ಯಕ್ಷನ್​ ಕಟ್​​ - GST movie dubbing

ಸೃಜನ್ ಲೋಕೇಶ್ ನಿರ್ದೇಶನದ ''ಜಿಎಸ್​ಟಿ'' ಸಿನಿಮಾದ ಡಬ್ಬಿಂಗ್​​ ಕೆಲಸ ಜೋರಾಗಿ ನಡೆಯುತ್ತಿದೆ.

GST movie dubbing
ಜಿಎಸ್​ಟಿ ಡಬ್ಬಿಂಗ್
author img

By ETV Bharat Karnataka Team

Published : Feb 16, 2024, 4:20 PM IST

ಸೃಜನ್ ಲೋಕೇಶ್ ಅವರು ಕನ್ನಡ ಚಿತ್ರರಂಗದ ಮಾತಿನ ಮಲ್ಲ ಅಂದ್ರೆ ತಪ್ಪಾಗ‌ಲ್ಲ. ಆಕರ್ಷಕ ಮಾತಿನ ಶೈಲಿಯಿಂದಲೇ ಸ್ಯಾಂಡಲ್​ವುಡ್​ನಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿರುವ ನಿರೂಪಕ. ನಟನಾಗಿ, ನಿರ್ಮಾಪಕನಾಗಿ ಎಲ್ಲದಕ್ಕಿಂತ ಹೆಚ್ಚಾಗಿ ಅತ್ಯುತ್ತಮ ನಿರೂಪಕನಾಗಿ ಗುರುತಿಸಿಕೊಂಡಿರುವ ಸೃಜನ್ ಲೋಕೇಶ್ ಅವರೀಗ ಡೈರೆಕ್ಷನ್ ಕ್ಯಾಪ್​​ ತೊಟ್ಟಿದ್ದಾರೆ.

ಉತ್ತಮ ಹೋಸ್ಟ್ ಆಗಿ ಗುರುತಿಸಿಕೊಂಡಿರುವ ಸೃಜನ್​​ ನಿರ್ದೇಶನದ ಅಖಾಡಕ್ಕಿಳಿದಿದ್ದಾರೆ. ಕೆಲ ತಿಂಗಳ ಹಿಂದೆ ''GST'' ಎಂಬ ವಿಭಿನ್ನ ಶೀರ್ಷಿಕೆಯುಳ್ಳ ಚಿತ್ರದ ಮುಹೂರ್ತ ಕಾರ್ಯಕ್ರಮ ಮಾಡಿದ್ದ ಸೃಜನ್ ಲೋಕೇಶ್ ತಂಡ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿದೆ. ಸದ್ಯ ಡಬ್ಬಿಂಗ್ ಕೆಲಸದಲ್ಲಿ ತಂಡ ಬ್ಯುಸಿಯಾಗಿದೆ. ಇನ್ನೂ ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಬೆಂಗಳೂರಿನಲ್ಲೇ, ಅದರಲ್ಲೂ ಅಭಿಮಾನ್ ಸ್ಟುಡಿಯೋದಲ್ಲಿ ನಿರ್ಮಿಸಲಾಗಿರುವ ಅದ್ಧೂರಿ ಸೆಟ್​ನಲ್ಲೇ ಹೆಚ್ಚಿನ ಚಿತ್ರೀಕರಣ ಮಾಡಿರುವ ಜಿಎಸ್​​ಟಿ ಸಿನಿಮಾದ ಡಬ್ಬಿಂಗ್ ಜೋರಾಗಿಯೇ ನಡೆಯುತ್ತಿದೆ.

GST movie dubbing
ಜಿಎಸ್​ಟಿ ಡಬ್ಬಿಂಗ್

ವಿಭಿನ್ನ ಶೀರ್ಷಿಕೆಯ "GST" ಚಿತ್ರದ ಮತ್ತೊಂದು ವಿಶೇಷತೆಯೆಂದರೆ, ನಿರ್ಮಾಪಕ ಸಂದೇಶ್ ಅವರು ಈ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸಿರುವುದು. ಅವರ ಪಾತ್ರ ಏನೆಂಬುದನ್ನು ನಿರ್ದೇಶಕ ಸೃಜನ್ ಲೋಕೇಶ್​​ ಸೀಕ್ರೆಟ್​​ ಆಗಿ ಇಟ್ಟಿದ್ದಾರೆ. ಅಲ್ಲದೇ ಚಿತ್ರದಲ್ಲಿ ಗಿರಿಜಾ ಲೋಕೇಶ್, ಸೃಜನ್ ಲೋಕೇಶ್ ಹಾಗೂ ಸೃಜನ್ ಪುತ್ರ ಸುಕೃತ್ ಕೂಡ ಅಭಿನಯಿಸುತ್ತಿದ್ದಾರೆ. ಅಜ್ಜಿ, ಮಗ ಹಾಗೂ ಮೊಮ್ಮಗ ಈ ಮೂವರನ್ನು ಒಟ್ಟಿಗೆ ತೆರೆ ಮೇಲೆ ನೋಡುವ ಅವಕಾಶ ಸಿಗಲಿದೆ. ತಮ್ಮ ನಿರ್ದೇಶನದ ಚೊಚ್ಚಲ ಚಿತ್ರದಲ್ಲೇ ಸೃಜನ್ ಲೋಕೇಶ್​ ತಾಯಿ ಹಾಗೂ ಮಗನಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಪರಿಶುದ್ಧ ಮನರಂಜನೆಯ ಕಥಾಹಂದರ ಹೊಂದಿರುವ "ಜಿಎಸ್​ಟಿ"ಗೆ, " ಘೋಸ್ಟ್ ಇನ್ ಟ್ರಬಲ್" ಎಂಬ ಅಡಿಬರಹವಿದೆ.

GST movie dubbing
ಜಿಎಸ್​ಟಿ ಡಬ್ಬಿಂಗ್

ಇದನ್ನೂ ಓದಿ: ಬಜೆಟ್​​​ನಲ್ಲಿ ಡಾಲಿ ಧನಂಜಯ್​ ಸಿನಿಮಾ ಸಾಲುಗಳ ಸದ್ದು: ಲಿಡ್ಕರ್ ಬ್ಯಾಗ್​ನಲ್ಲಿ ಬಂತು ಆಯವ್ಯಯದ ಪ್ರತಿ

ಸೃಜನ್ ಲೋಕೇಶ್ ಅವರಿಗೆ ನಾಯಕಿಯಾಗಿ ರಜನಿ ಭಾರದ್ವಾಜ್ ನಟಿಸುತ್ತಿದ್ದಾರೆ. ಪ್ರಮೋದ್ ಶೆಟ್ಟಿ, ಗಿರಿಜಾ ಲೋಕೇಶ್, ಶೋಭ್ ರಾಜ್, ಶರತ್ ಲೋಹಿತಾಶ್ವ, ನಿವೇದಿತಾ, ಅರವಿಂದ್ ರಾವ್, ತಬಲ ನಾಣಿ, ರವಿಶಂಕರ್ ಗೌಡ, ವಿನೋದ್ ಗೊಬ್ಬರಗಾಲ, ಮಾಸ್ಟರ್ ಸುಕೃತ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಚಂದನ್ ಶೆಟ್ಟಿ ಸಂಗೀತ ನಿರ್ದೇಶನ ಹಾಗೂ ಗುಂಡ್ಲುಪೇಟೆ ಸುರೇಶ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ರಾಜಶೇಖರ್ ಸಂಭಾಷಣೆ ಬರೆದಿದ್ದಾರೆ. ತೇಜಸ್ವಿ ಕೆ.ನಾಗ್ ಚಿತ್ರದ ಸಹ ನಿರ್ದೇಶಕರು. ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿರುವ ಸಂದೇಶ್ ನಾಗರಾಜ್ ಅರ್ಪಿಸುವ, ಸಂದೇಶ್ ಎನ್ ನಿರ್ಮಾಣದ ಜಿಎಸ್​​​ಟಿ ಸಿನಿಮಾವನ್ನು ಶೀಘ್ರದಲ್ಲೇ ತೆರೆಗೆ ತರಲು ಸಿದ್ಧತೆ ನಡೆಯುತ್ತಿದೆ.

ಇದನ್ನೂ ಓದಿ: ಬಜೆಟ್‌ನಲ್ಲಿ 'ಭೂ ಸುರಕ್ಷಾ ಯೋಜನೆ' ಘೋಷಣೆ: ನಕಲಿ ದಾಖಲೆಗಳ ಸೃಷ್ಟಿಗೆ ಕಡಿವಾಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.