ಇಂದ್ರಜಿತ್ ಲಂಕೇಶ್ ಸ್ಟೈಲಿಶ್ ಚಿತ್ರಗಳನ್ನು ಮಾಡುವುದರ ಜೊತೆಗೆ ಬ್ಯೂಟಿಫುಲ್ ಹೀರೋಯಿನ್ಗಳನ್ನ ಇಂಟ್ರಡ್ಯೂಸ್ ಮಾಡುವ ಸ್ಟೈಲಿಶ್ ಫಿಲ್ಮ್ ಮೇಕರ್. ಇದೀಗ ತಮ್ಮ ಗೌರಿ ಚಿತ್ರದ ಮೂಲಕ ಮಗ ಸಮರ್ಜಿತ್ ಲಂಕೇಶ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿರೋದು ಗೊತ್ತಿರುವ ವಿಷಯ. ಮಗ ಮತ್ತು ಗೌರಿ ಚಿತ್ರವನ್ನು ಗೆಲ್ಲಿಸಬೇಕೆಂಬ ಉದ್ದೇಶದಿಂದ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಮಾಲ್ ಒಂದರಲ್ಲಿ ಕಿಚ್ಚ ಸುದೀಪ್ ಅವರಿಂದ ಗೌರಿ ಚಿತ್ರದ ಟ್ರೇಲರ್ ಅನಾವರಣಗೊಳಿಸಿದ್ದರು. ಇದೀಗ ಬೆಂಗಳೂರಿನ ವಸಂತನಗರದಲ್ಲಿರುವ ಪ್ರತಿಷ್ಠಿತ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಗೌರಿ ಚಿತ್ರದ ಪ್ರಮೋಶನ್ ಮಾಡಲಾಗಿದೆ. ಚಿತ್ರದ ಹಾಡುಗಳಿಗೆ ಡ್ಯಾನ್ಸ್ ಮಾಡುವುದರ ಜೊತೆಗೆ, ಕೆಲ ಫನ್ನಿ ಗೇಮ್ಸ್ ಅನ್ನು ಆಡಿಸಿ ಚಿತ್ರತಂಡ ಗಮನ ಸೆಳೆದಿದೆ.
ಯುವ ನಟ ಸಮರ್ಜಿತ್ ಲಂಕೇಶ್ ಹಾಗೂ ನಾಯಕಿ ಸಾನ್ಯಾ ಅಯ್ಯರ್ ಕಾಲೇಜ್ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಹಾಗೇ ಅದೇ ಕಾಲೇಜಿನ ಹುಡುಗಿಯ ಜೊತೆ ಸಮರ್ಜಿತ್ ಲಂಕೇಶ್ ಪುಶ್ ಆಪ್ಸ್ ಮಾಡಿ ಗಮನ ಸೆಳೆದರು. ಆಟದಲ್ಲಿ ಸೋಲುವ ಮೂಲಕ ಹೆಣ್ಣು ಮಕ್ಕಳೇ ಸ್ಟ್ರಾಂಗ್ ಎಂದರು. ಇನ್ನು ಗೆದ್ದ ಹುಡುಗಿಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಒಂದು ಜಾಕೆಟ್ ಅನ್ನು ಗಿಫ್ಟ್ ಆಗಿ ಕೊಡುವ ಮೂಲಕ ಆ ವಿದ್ಯಾರ್ಥಿಯ ಜೋಷ್ ಹೆಚ್ಚಿಸಿದರು. ಹೀಗೆ ಎರಡು ಮೂರು ಫನ್ನಿ ಗೇಮ್ಗಳನ್ನ ಆಡಿಸುವ ಮೂಲಕ ವಿದ್ಯಾರ್ಥಿಗಳನ್ನು ಸಮರ್ಜಿತ್ ಹಾಗೂ ಸಾನ್ಯ ಎಂಟರ್ಟೈನ್ ಮಾಡಿದರು. ಕೊನೆಗೆ ನಿರ್ದೇಶಕ ಸೇರಿದಂತೆ ಚಿತ್ರತಂಡ ತಮ್ಮ ಗೌರಿ ಸಿನಿಮಾ ನೋಡುವಂತೆ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿಕೊಂಡರು.
'ಗೌರಿ' ಕೇವಲ ಆ್ಯಕ್ಷನ್ ಚಿತ್ರವಲ್ಲ. ಮ್ಯೂಸಿಕಲ್ ಸಿನಿಮಾ. ಇದರಲ್ಲಿ ಪ್ರೀತಿ ಇದೆ, ಎಮೋಷನ್ಸ್ ಇದೆ, ಭರ್ಜರಿ ಆ್ಯಕ್ಷನ್ ಕೂಡಾ ಇದೆ. ಅದಕ್ಕೆ ಸಾಕ್ಷಿ ಅನಾವರಣಗೊಂಡಿರುವ ಟ್ರೇಲರ್. ಉತ್ತರ ಕರ್ನಾಟಕ ಭಾಷೆಯಲ್ಲಿ ಸಮರ್ಜಿತ್ ಲಂಕೇಶ್ ಹೊಡೆದಿರುವ ಪಂಚಿಂಗ್ ಡೈಲಾಗ್ಸ್ ನೋಡುಗರ ಗಮನ ಸೆಳೆದಿದೆ. ಒಬ್ಬ ಹಳ್ಳಿ ಹುಡುಗ ತನ್ನ ಕನಸನ್ನು ಹೇಗೆ ನನಸು ಮಾಡಿಕೊಳ್ಳುತ್ತಾನೆ ಅನ್ನೋದರ ಸುತ್ತ ಸಿನಿಮಾದ ಕಥೆ ಸಾಗುತ್ತದೆ.
ಇದನ್ನೂ ಓದಿ: ಸ್ಟಾರ್ ನಟರ ಸಿನಿಮಾಗಳಿಲ್ಲದೇ ಕಾರ್ಮಿಕರು ಸಂಕಷ್ಟದಲ್ಲಿ: ಚಿತ್ರಮಂದಿರದವರು ಹೇಳಿದ್ದಿಷ್ಟು - Theaters condition
ಚಿತ್ರದಲ್ಲಿ 7 ಹಾಡುಗಳಿವೆ. 4 ಸಂಗೀತ ನಿರ್ದೇಶಕರು, 14 ಗಾಯಕರು, 5 ಗೀತರಚನೆಕಾರರು ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಜೆಸ್ಸಿ ಗಿಫ್ಟ್, ಚಂದನ್ ಶೆಟ್ಟಿ, ಶಿವು ಭೇರ್ಗಿ ಹಾಗೂ ಅನಿರುದ್ದ್ ಶಾಸ್ತ್ರಿ ಸಂಗೀತ ಸಂಯೋಜಿಸಿದರೆ, ಮ್ಯಾಥ್ಯೂಸ್ ಮನು ರೀ ರೆಕಾರ್ಡಿಂಗ್ ಮಾಡಿದ್ದಾರೆ. ವಿ.ನಾಗೇಂದ್ರಪ್ರಸಾದ್, ಕವಿರಾಜ್, ಕೆ.ಕಲ್ಯಾಣ್, ವರದರಾಜ್ ಚಿಕ್ಕಬಳ್ಳಾಪುರ, ಗುಬ್ಬಿ ಹಾಡುಗಳನ್ನು ರಚಿಸಿದ್ದಾರೆ. ಕೈಲಾಶ್ ಖೇರ್, ಚಂದನ್ ಶೆಟ್ಟಿ, ಅನಿರುದ್ಧ್ ಶಾಸ್ತ್ರಿ, ಜಾವೇದ್ ಅಲಿ, ಅನನ್ಯ ಭಟ್, ನಿಹಾಲ್ ತೌರೋ , ಅದಿತಿ ಸಾಗರ್, ಬಾಲಸುಬ್ರಹ್ಮಣ್ಯಂ, ಪ್ರಜ್ಞಾ ಮರಾಠೆ, ಸಮರ್ಜಿತ್ ಸೇರಿದಂತೆ ಮುಂತಾದವರು ಈ ಚಿತ್ರದ ಹಾಡುಗಳನ್ನು ಹಾಡಿದ್ದಾರೆ.
ಇದನ್ನೂ ಓದಿ: ಅಮೃತ, ಸಮೀರ್ ಅಭಿನಯದ 'ಓ ಏ ಲಡ್ಕಿ' ಆಲ್ಬಂ ಸಾಂಗ್ಗೆ ರಾಗಿಣಿ ದ್ವಿವೇದಿ ಸಾಥ್ - Oy Yeah Ladki
ಸಮರ್ಜಿತ್ ಲಂಕೇಶ್ ಜೊತೆ ಸಾನ್ಯಾ ಅಯ್ಯರ್ ತೆರೆ ಹಂಚಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಕಂಟೆಂಟ್ಗಳಲ್ಲಿ ಇವರಿಬ್ಬರ ಕೆಮಿಸ್ಟ್ರಿ ಚೆನ್ನಾಗಿ ವರ್ಕ್ ಔಟ್ ಆದಂತೆ ತೋರಿದೆ. ಇವರ ಜೊತೆ ನೀನಾಸಂ ಅಶ್ವಥ್, ಮಾನಸೀ ಸುಧೀರ್, ಸಂಪತ್ ಮೈತ್ರೇಯಾ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ. ಚಿತ್ರಕ್ಕೆ ಎ.ಜೆ ಶೆಟ್ಟಿ ಹಾಗೂ ಕೃಷ್ಣಕುಮಾರ್ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಮಾಸ್ತಿ ಮಂಜು, ರಾಜಶೇಖರ್ ಹಾಗೂ ಮಧು ಸಂಭಾಷಣೆ ಬರೆದಿದ್ದಾರೆ. ರವಿವರ್ಮಾ, ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನವಿದೆ. ಸದ್ಯ ಗೌರಿ ಸಿನಿಮಾ ಪ್ರಮೋಶನ್ ನಿಂದಲೇ ಟಾಕ್ ಆಗುತ್ತಿರುವ ಸ್ವಾತಂತ್ರ್ಯ ದಿನದೊಂದು ರಾಜ್ಯಾದ್ಯಂತ ತೆರೆ ಕಾಣಲಿದೆ.