ETV Bharat / entertainment

ಬಿಟೌನ್​ಗೆ ಹೊರಟ 'ವೀರಸಿಂಹ ರೆಡ್ಡಿ' ಡೈರೆಕ್ಟರ್: ಸನ್ನಿ ಡಿಯೋಲ್​ಗೆ ಗೋಪಿಚಂದ್​ ಆ್ಯಕ್ಷನ್​​​ ಕಟ್ - Sunny deols new project

author img

By ETV Bharat Karnataka Team

Published : Jun 21, 2024, 7:43 AM IST

ನಟ ಸನ್ನಿ ಡಿಯೋಲ್​ ಹಾಗೂ ನಿರ್ದೇಶಕ ಗೋಪಿಚಂದ್ ಮಲಿನೇನಿ ಕಾಂಬಿನೇಶನ್​ನ 'ಎಸ್​ಡಿಜಿಎಂ' ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನಡೆಯಿತು.

SDGM Film Team
ಎಸ್​ಡಿಜಿಎಂ ಚಿತ್ರತಂಡ (ETV Bharat)

ಬ್ಲಾಕ್​ಬಸ್ಟರ್ 'ಗದರ್ 2' ಬಳಿಕ ಬಾಲಿವುಡ್​ ನಟ ಸನ್ನಿ ಡಿಯೋಲ್ ತಮ್ಮ ಹೊಸ ಸಿನಿಮಾ ಘೋಷಿಸಿದ್ದಾರೆ. ಈ ಬಾರಿ ತೆಲುಗಿನ ಖ್ಯಾತ ನಿರ್ದೇಶಕ ಗೋಪಿಚಂದ್ ಮಲಿನೇನಿ ಜೊತೆ ಕೈ ಜೋಡಿಸಿದ್ದಾರೆ. ಈ ನಟ-ನಿರ್ದೇಶಕ ಕಾಂಬಿನೇಶನ್​ನ ಹೊಸ ಸಿನಿಮಾಗೆ 'SDGM' ಎಂಬ ತಾತ್ಕಾಲಿಕ ಶೀರ್ಷಿಕೆ ಇಡಲಾಗಿದೆ. ಇತ್ತೀಚೆಗೆ ಚಿತ್ರದ ಮುಹೂರ್ತ ಕಾರ್ಯಕ್ರಮ ನೆರವೇರಿದೆ.

SDGM Film Team
ಎಸ್​ಡಿಜಿಎಂ ಮುಹೂರ್ತ ಸಮಾರಂಭ (ETV Bharat)

ಮೈತ್ರಿ ಮೂವಿ ಮೇಕರ್ಸ್‌ನ ನವೀನ್ ಯೆರ್ನೇನಿ, ವೈ.ರವಿಶಂಕರ್ ಮತ್ತು ಪೀಪಲ್ ಮೀಡಿಯಾ ಫ್ಯಾಕ್ಟರಿಯ ಟಿ.ಜಿ ವಿಶ್ವ ಪ್ರಸಾದ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಮೂಲಕ ಗೋಪಿಚಂದ್ ಮಲಿನೇನಿ ಬಾಲಿವುಡ್ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿದ್ದಾರೆ.

SDGM Film Team
ಎಸ್​ಡಿಜಿಎಂ ಮುಹೂರ್ತ ಕಾರ್ಯಕ್ರಮ (ETV Bharat)

ಕ್ರ್ಯಾಕ್ ಮತ್ತು ವೀರಸಿಂಹ ರೆಡ್ಡಿ ಸೇರಿ ಸತತ ಎರಡು ಬ್ಲಾಕ್‌ಬಸ್ಟರ್‌ಗಳನ್ನು ನೀಡಿರುವ ನಿರ್ದೇಶಕ ಗೋಪಿಚಂದ್ ಮಲಿನೇನಿ, ಎಸ್​ಡಿಜಿಎಂ ಚಿತ್ರದ ಮೂಲಕ ಆ್ಯಕ್ಷನ್ ಎಂಟರ್‌ಟೈನರ್ ಕಥೆ ಹೇಳಲಿದ್ದಾರೆ. ಗೋಪಿಚಂದ್ ಹೇಳಿದ ಕಥೆ ಕೇಳಿ ಸನ್ನಿ ಡಿಯೋಲ್ ಕೂಡ ಥ್ರಿಲ್ ಆಗಿದ್ದಾರೆ.

ಇದನ್ನೂ ಓದಿ: ಅನಾರೋಗ್ಯದಿಂದ ಬಳಲುತ್ತಿದ್ದ ಕೆನಡಿಯನ್ ನಟ ಡೊನಾಲ್ಡ್ ಸದರ್ಲ್ಯಾಂಡ್ ನಿಧನ - Donald Sutherland death

ಸನ್ನಿ ಡಿಯೋಲ್ ಅಲ್ಲದೇ ಈ ಚಿತ್ರದಲ್ಲಿ ಸೈಯಾಮಿ ಖೇರ್ ಮತ್ತು ರೆಜಿನಾ ಕಸ್ಸಂದ್ರ ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ರಿಷಿ ಪಂಜಾಬಿ ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ತಮನ್ ಎಸ್ ಸಂಗೀತ ಒದಗಿಸಲಿದ್ದಾರೆ. ನವೀನ್ ನೂಲಿ ಅವರ ಸಂಕಲನ ಈ ಚಿತ್ರಕ್ಕಿರಲಿದೆ. ಸದ್ಯ ಮುಹೂರ್ತ ಮುಗಿಸಿರುವ ಚಿತ್ರತಂಡ ನಾಳೆಯಿಂದ ಚಿತ್ರೀಕರಣ ಶುರು ಮಾಡಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.