ETV Bharat / entertainment

ನೀನಾಸಂ ಸತೀಶ್ - ರಚಿತಾ ರಾಮ್ ನಟನೆಯ ಮ್ಯಾಟ್ನಿ ಚಿತ್ರ ತಂಡದಿಂದ ಗುಡ್ ನ್ಯೂಸ್ - Ninasam Sathish and Rachita Ram

ನೀನಾಸಂ ಸತೀಶ್ ಮತ್ತು ರಚಿತಾ ರಾಮ್ ನಟನೆಯ 'ಮ್ಯಾಟ್ನಿ' ಸದ್ಯದಲ್ಲೇ ತೆರೆ ಕಾಣಲಿದೆ ಎಂದು ಚಿತ್ರ ತಂಡ ತಿಳಿಸಿದೆ.

ಮ್ಯಾಟ್ನಿ ಚಿತ್ರ ತಂಡ
ಮ್ಯಾಟ್ನಿ ಚಿತ್ರ ತಂಡ
author img

By ETV Bharat Karnataka Team

Published : Mar 11, 2024, 7:23 PM IST

ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಜೋಡಿಯಾಗಿ ನಟಿಸಿರುವ ಬಹು ನಿರೀಕ್ಷಿತ ಚಿತ್ರ 'ಮ್ಯಾಟ್ನಿ' ಶೀಘ್ರದಲ್ಲೇ ತೆರೆ ಕಾಣದಲಿದೆ ಎಂದು ಚಿತ್ರ ತಂಡ ತಿಳಿಸಿದೆ. ಹಾಡು ಹಾಗೂ ಟ್ರೈಲರ್​ನಿಂದಲೇ ಗಮನ ಸೆಳೆಯುತ್ತಿದ್ದು ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಲು ಸಜ್ಜಾಗಿದೆ‌. 'ಅಯೋಗ್ಯ' ಚಿತ್ರದ ಬಳಿಕ ಇವರಿಬ್ಬರ ಕಾಂಬಿನೇಶನ್​ನಲ್ಲಿ ಮೂಡಿ ಬರುತ್ತಿರುವ ಎರಡನೇ ಚಿತ್ರ ಇದಾಗಿದೆ. 'ಮ್ಯಾಟ್ನಿ' ಚಿತ್ರ ಯಾವಾಗ ಬಿಡುಗಡೆ ಆಗುತ್ತೆ ಅಂತಾ ಪ್ರೇಕ್ಷಕರಲ್ಲಿ ಪ್ರಶ್ನೆ ಮೂಡಿತ್ತು. ಈಗ ಚಿತ್ರತಂಡದಿಂದ ಗುಡ್ ನ್ಯೂಸ್ ಸಿಕ್ಕಿದೆ.

ಮ್ಯಾಟ್ನಿ ಚಿತ್ರ ತಂಡ
ಮ್ಯಾಟ್ನಿ ಚಿತ್ರ ತಂಡ

ಲವ್ ಸ್ಟೋರಿ ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್ ಕಥೆ ಆಧರಿಸಿರೋ ಚಿತ್ರ ಇದಾಗಿದ್ದು, ನಾಯಕ ನಟ ನೀನಾಸಂ ಸತೀಶ್, ನಾಯಕಿ ನಟಿ ರಚಿತಾ ರಾಮ್ ಜೊತೆ ಅದಿತಿ ಪ್ರಭುದೇವ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಷ್ಟೇ ಅಲ್ಲದೆ ಪೂರ್ಣಚಂದ್ರ ಮೈಸೂರು ಹಾಗೂ ನಾಗಭೂಷಣ್, ಶಿವರಾಜ್ ಕೆ.ಆರ್. ಪೇಟೆ ಸೇರಿದಂತೆ ಹಲವು ಕಲಾವಿದರು ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ.

ಮ್ಯಾಟ್ನಿ ಚಿತ್ರ ತಂಡ
ಮ್ಯಾಟ್ನಿ ಚಿತ್ರ ತಂಡ

ಈ ಸಿನಿಮಾವನ್ನು ಯುವ ನಿರ್ದೇಶಕ ಮನೋಹರ್ ಕಾಂಪಲ್ಲಿ ನಿರ್ದೇಶನ ಮಾಡಿದ್ದು, ಅದ್ಧೂರಿ ವೆಚ್ಚದಲ್ಲಿ ಪಾರ್ವತಿ ಎಸ್ ಗೌಡ ನಿರ್ಮಾಣ ಮಾಡಿದ್ದಾರೆ. ಸದ್ಯ ಹಾಡುಗಳು ಹಾಗೂ ಟ್ರೈಲರ್​​​ನಿಂದ ಸೌಂಡ್ ಮಾಡುತ್ತಿರುವ ಮ್ಯಾಟ್ನಿ ಸಿನಿಮಾ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಲು ಸಜ್ಜಾಗಿದೆ‌.

ಇತ್ತೀಚೆಗಷ್ಟೇ ಡಾಲಿ ಧನಂಜಯ್‌ ಅವರು "ಬಾರೋ ಬಾರೋ ಬಾಟಲ್​ ತಾರೋ" ಎಂಬ ಹಾಡು ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ಸಾಥ್ ನೀಡಿದ್ದರು. ಹಾಡು ಬಿಡುಗಡೆಗೊಂಡ 24 ಗಂಟೆಯಲ್ಲಿ ಯೂಟ್ಯೂಬ್​ನಲ್ಲಿ 87 ಸಾವಿರ ವೀಕ್ಷಣೆ ಪಡೆದಿತ್ತು. ಅದಕ್ಕೂ ಮುನ್ನ ''ಸಂಜೆ ಮೇಲೆ ಸುಮ್ನೆ ಫೋನು ಮಾಡ್ಲ ನಿಂಗೆ'' ಎಂಬ ಹಾಡು ಕೂಡ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿತ್ತು. ವಿಜಯ್ ಪ್ರಕಾಶ್ ಹಾಡಿರುವ ಈ ಹಾಡಿಗೂ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ. ಚಿತ್ರ ಮತ್ತು ಹಾಡಿನ ಬಗ್ಗೆ ಚಿತ್ರತಂಡ ಸಾಕಷ್ಟು ವಿಚಾರಗಳನ್ನ ಹಂಚಿಕೊಂಡಿತ್ತು. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುವ ನೀನಾಸಂ ಸತೀಶ್​ಗೆ ಈ ಸಿನಿಮಾ ಮತ್ತಷ್ಟು ನೇಮ್ ಫೇಮ್ ತಂದು ಕೊಡುತ್ತಾ ಕಾದು‌ನೋಡಬೇಕು.

ಪ್ರೇಮಿಗಳ ದಿನಕ್ಕೆ ಟೀಸರ್​ ಅನ್ನು ಚಿತ್ರತಂಡ ಉಡುಗೊರೆಯಾಗಿ ನೀಡಿತ್ತು. ಸದ್ಯ ಹಾಡುಗಳು ಪೋಸ್ಟರ್‌ನಿಂದ‌ ಸದ್ದು ಮಾಡುತ್ತಿರುವ ಮ್ಯಾಟ್ನಿ ಈ ವರ್ಷದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.

ಇದನ್ನೂ ಓದಿ: ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಚೊಚ್ಚಲ ಚಿತ್ರ 'ಫೈರ್ ಫ್ಲೈ' ಬಿಡುಗಡೆಗೆ ಸಿದ್ಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.