ETV Bharat / entertainment

'ಗಾಳಿಪಟ 2' ನಿರ್ಮಾಪಕ ರಮೇಶ್ ರೆಡ್ಡಿ ಮಗಳ ಅದ್ಧೂರಿ ಮದುವೆ: ಸ್ಯಾಂಡಲ್‌ವುಡ್ ತಾರೆಗಳು​ ಭಾಗಿ - Ramesh Reddy Daughter Wedding - RAMESH REDDY DAUGHTER WEDDING

ನಿರ್ಮಾಪಕ ರಮೇಶ್ ರೆಡ್ಡಿ ತಮ್ಮ ಪುತ್ರಿಯ ಮದುವೆಯನ್ನು ಅದ್ಧೂರಿಯಾಗಿ ನೆರೆವೇರಿಸಿದ್ದಾರೆ.

ರಮೇಶ್ ರೆಡ್ಡಿ ಮಗಳ ಅದ್ದೂರಿ ಮದುವೆ
ರಮೇಶ್ ರೆಡ್ಡಿ ಮಗಳ ಅದ್ದೂರಿ ಮದುವೆ
author img

By ETV Bharat Karnataka Team

Published : Apr 5, 2024, 9:52 PM IST

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಫ್ಯಾಷನೇಟ್ ಪ್ರೊಡ್ಯೂಸರ್ ಎಂದೇ ಹೆಸರು ಗಳಿಸಿರುವ ರಮೇಶ್ ರೆಡ್ಡಿ ಅವರ ಮಗಳ ಮದುವೆ ಇತ್ತೀಚೆಗೆ ನಗರದ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನೆರವೇರಿತು. ರಮೇಶ್ ರೆಡ್ಡಿ ಅವರ ಪುತ್ರಿ ತೇಜಸ್ವಿನಿ ಅವರನ್ನು ಕಾರ್ತಿಕ್ ಎಂಬವರು ವರಿಸಿದರು. ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್​ನ ಹಲವು ತಾರೆಯರು, ​ರಾಜಕೀಯ ನಾಯಕರು ಮತ್ತು ಉದ್ಯಮಿಗಳು ಭಾಗವಹಿಸಿ ನವದಂಪತಿಗೆ ಶುಭ ಹಾರೈಸಿದರು.

ನಿರ್ದೇಶಕ ಎ.ಪಿ ಅರ್ಜುನ್​
ನಿರ್ದೇಶಕ ಎ.ಪಿ ಅರ್ಜುನ್​

ಸುಧಾ ಮೂರ್ತಿ, ಯೋಗರಾಜ್ ಭಟ್, ಧ್ರುವ ಸರ್ಜಾ, ದಿಗಂತ್, ರವಿಚಂದ್ರನ್, ನಿರ್ದೇಶಕ ಇಂದ್ರಜಿತ್ ಲಂಕೇಶ್, ರಮೇಶ್ ಅರವಿಂದ್, ಗುರು ದೇಶಪಾಂಡೆ, ಅರ್ಜುನ್ ಜನ್ಯ ಹಾಗು ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ್ ಸೇರಿದಂತೆ ಸ್ಯಾಂಡಲ್‌ವುಡ್‌ನ ಬಹುಪಾಲು ಗಣ್ಯರು ಕಾರ್ಯಕ್ರಮದಲ್ಲಿದ್ದರು. ಕನ್ನಡದ ಸ್ಟಾರ್ ಮ್ಯೂಜಿಕ್ ಡೈರೆಕ್ಟರ್ ಅರ್ಜುನ್ ಜನ್ಯ ನೇತೃತ್ವದಲ್ಲಿ ಸಂಗೀತ ಸಂಜೆ ನಡೆಯಿತು.

ಮ್ಯೂಜಿಕ್ ಡೈರೆಕ್ಟರ್ ಅರ್ಜುನ್ ಜನ್ಯ
ಮ್ಯೂಜಿಕ್ ಡೈರೆಕ್ಟರ್ ಅರ್ಜುನ್ ಜನ್ಯ

ಪಡ್ಡೆಹುಲಿ, ನಾತಿಚರಾಮಿ, 100, ಗಾಳಿಪಟ-2 ಹೀಗೆ ಹಲವು ಸಿನಿಮಾಗಳನ್ನು ರಮೇಶ್​ ರೆಡ್ಡಿ ನಿರ್ಮಿಸಿದ್ದಾರೆ. ಪ್ರಸ್ತುತ ಬಹುಕೋಟಿ ವೆಚ್ಚದಲ್ಲಿ ಶಿವರಾಜ್‌ಕುಮಾರ್, ಉಪೇಂದ್ರ ಮತ್ತು ರಾಜ್.ಬಿ.ಶೆಟ್ಟಿ ಅಭಿನಯದ 45 ಎಂಬ ವಿಭಿನ್ನ ಶೀರ್ಷಿಕೆಯುಳ್ಳ ಚಿತ್ರ ನಿರ್ಮಿಸುತ್ತಿದ್ದಾರೆ.

ಇದನ್ನೂ ಓದಿ: ಕನ್ನಡ ಚಿತ್ರರಂಗದಲ್ಲಿ ನಾಯಕಿಯರಿಗೆ ಅವಕಾಶ ಕಡಿಮೆಯಾಗಿವೆಯೇ? - fewer Opportunities for Heroines

ETV Bharat Logo

Copyright © 2025 Ushodaya Enterprises Pvt. Ltd., All Rights Reserved.