ETV Bharat / entertainment

ಯುಗಾದಿ ಹಬ್ಬಕ್ಕೆ 'ಫುಲ್ ಮೀಲ್ಸ್' ಚಿತ್ರತಂಡದಿಂದ ವಿಶೇಷ ಪೋಸ್ಟರ್ ರಿಲೀಸ್ - Full Meals Poster - FULL MEALS POSTER

ಫುಲ್ ಮೀಲ್ಸ್ ಚಿತ್ರದಿಂದ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಪೋಸ್ಟರ್ ಅನಾವರಣಗೊಂಡಿದೆ.

Full Meals Poster
ಫುಲ್ ಮೀಲ್ಸ್ ಪೋಸ್ಟರ್
author img

By ETV Bharat Karnataka Team

Published : Apr 9, 2024, 7:59 PM IST

ಸಂಕಷ್ಟಕರ ಗಣಪತಿ, ಫ್ಯಾಮಿಲಿ ಪ್ಯಾಕ್, ಅಬ್ಬಬ್ಬ ಚಿತ್ರಗಳ ಖ್ಯಾತಿಯ ಲಿಖಿತ್ ಶೆಟ್ಟಿ ನಟಿಸಿ, ನಿರ್ಮಿಸುತ್ತಿರುವ 'ಫುಲ್ ಮೀಲ್ಸ್' ಚಿತ್ರತಂಡ ಯುಗಾದಿ ಹಬ್ಬದ ನಿಮಿತ್ತ ವಿಶೇಷ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ. ಚಿತ್ರದ ಇಬ್ಬರು ನಾಯಕಿಯರಾದ ಖುಷಿ ರವಿ ಮತ್ತು ತೇಜಸ್ವಿನಿ ಶರ್ಮಾ ಒಂದೇ ಬಾಳೆ ಎಲೆಯಲ್ಲಿ ಊಟ ಮಾಡುತ್ತಿರುವ ಪೋಸ್ಟರ್ ಇದಾಗಿದೆ.

ಎಲ್ಲರೂ ಒಟ್ಟಿಗೆ ಸೇರಿ ಮಾಡುವ ಸಂಭ್ರಮವೇ ಹಬ್ಬ ಎಂಬ ಥೀಮ್ ಮೇಲೆ ತಯಾರಾಗಿರುವ ಈ ಪೋಸ್ಟರ್ ಬಹಳ ಸುಂದರವಾಗಿ ಕಾಣುತ್ತಿದೆ. ಪೋಸ್ಟರ್ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ನೋಡುಗರ ಗಮನ ಸೆಳೆಯುತ್ತಿದೆ.

ರಂಗಾಯಣ ರಘು, ವಿಜಯ್ ಚಂಡೂರ್, ರವಿ ಶಂಕರ್ ಗೌಡ, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಚಂದ್ರಕಲಾ ಮೋಹನ್, ಸೂರಜ್ ಲೋಕ್ರೆ, ಹೂನ್ನವಳ್ಳಿ ಕೃಷ್ಣ, ರಮೇಶ್ ಪಂಡಿತ್, ನಾಗೇಂದ್ರ ಅರಸ್, ಮೂಗು ಸುರೇಶ್ ಚಿತ್ರದ ತಾರಾ ಬಳಗದಲ್ಲಿದ್ದಾರೆ. ವೆಡ್ಡಿಂಗ್ ಫೋಟೋಗ್ರಾಫರ್ ಸುತ್ತ ಸುತ್ತುವ ಕಥಾ ಹಂದರ ಹೊಂದಿರುವ ಈ ಸಿನಿಮಾ, ಮನರಂಜನೆಯ ಜೊತೆಗೆ ಸಾಕಷ್ಟು ಹೊಸ ವಿಷಯಗಳನ್ನು ಒಳಗೊಂಡಿದೆ. ಪ್ರೇಕ್ಷಕರು ನಮ್ಮ ಸಿನಿಮಾವನ್ನು ಇಷ್ಟಪಡುತ್ತಾರೆ ಎಂಬ ವಿಶ್ವಾಸ ಚಿತ್ರತಂಡಕ್ಕಿದೆ.

ಇದನ್ನೂ ಓದಿ: 'ಕರಾವಳಿ'ಯಲ್ಲಿ ಯಕ್ಷಗಾನ ಕಲಾವಿದನಾದ ಪ್ರಜ್ವಲ್ ದೇವರಾಜ್ - Prajwal Devaraj Karavali Poster

ಚಿತ್ರದುರ್ಗದ ಪ್ರತಿಭೆ ಎನ್. ವಿನಾಯಕ ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಹರೀಶ್ ಗೌಡ ಸಂಭಾಷಣೆ ಬರೆದಿದ್ದು, ಮನೋಹರ್ ಜೋಷಿ ಛಾಯಾಗ್ರಹಣ, ಗುರು ಕಿರಣ್ ಸಂಗೀತ, ದೀಪು ಎಸ್ ಕುಮಾರ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಪೋಸ್ಟ್ ಪ್ರೊಡಕ್ಷನ್​ನಲ್ಲಿ ಬ್ಯುಸಿಯಾಗಿರೋ ಫುಲ್ ಮೀಲ್ಸ್ ಚಿತ್ರತಂಡ ಸದ್ಯದಲ್ಲೇ ತೆರೆಗೆ ಬರಲಿದೆ.

ಇದನ್ನೂ ಓದಿ: ಕೃಷ್ಣಂ ಪ್ರಣಯ ಸಖಿ: 9 ವಧು ಜೊತೆ ವರನ ಗೆಟಪ್​ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ - Krishnam Pranaya Sakhi

ETV Bharat Logo

Copyright © 2025 Ushodaya Enterprises Pvt. Ltd., All Rights Reserved.