ಹೈದರಾಬಾದ್: ಜಗತ್ತಿನ ಚಲನಚಿತ್ರೋದ್ಯಮದ ಪ್ರತಿಷ್ಠಿತ ಪ್ರಶಸ್ತಿ ಎಂದರೆ ಅಕಾಡೆಮಿ ಪ್ರಶಸ್ತಿಗಳು. ಇದನ್ನು ಆಸ್ಕರ್ ಪ್ರಶಸ್ತಿಗಳು ಎಂದೇ ಕರೆಯಲಾಗುತ್ತದೆ. ವಾರ್ಷಿಕವಾಗಿ ಅತ್ಯುತ್ತಮ ನಟಿ, ನಟ, ಅತ್ಯುತ್ತಮ ಚಿತ್ರಕಥೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಈ ಪ್ರಶಸ್ತಿಗಳನ್ನು ಕೊಡಲಾಗುತ್ತದೆ.
- " class="align-text-top noRightClick twitterSection" data="">
ಆಸ್ಕರ್ ಪ್ರಶಸ್ತಿಯನ್ನು ಪಡೆಯುವುದೇ ಮಹತ್ವದ ಗೌರವವಾಗಿದೆ. ಇತಿಹಾಸದಲ್ಲಿ ಕೆಲವು ಅದ್ಭುತ ಚಲನಚಿತ್ರಗಳು ಪ್ರಶಸ್ತಿಗೆ ಅನೇಕ ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದ್ದರೂ ನಿರಾಶೆ ಅನುಭವಿಸಿವೆ. ಕಲಾತ್ಮಕ ಉತ್ಕೃಷ್ಟತೆ ಮತ್ತು ವಿಮರ್ಶಾತ್ಮಕ ಮೆಚ್ಚುಗೆ ಹೊರತಾಗಿಯೂ ಇಂತಹ ಕೆಲ ಚಲನಚಿತ್ರಗಳು ಅಂತಿಮವಾಗಿ ಬರಿಗೈಯಲ್ಲಿ ವಾಪಸ್ ಬಂದಿವೆ. 1980ರ 'ದಿ ಎಲಿಫೆಂಟ್ ಮ್ಯಾನ್' ಚಿತ್ರದಿಂದ ಹಿಡಿದು 2013ರ 'ಅಮೆರಿಕನ್ ಹಸ್ಲ್'ನಂತಹ ಚಲನಚಿತ್ರಗಳು ಹಲವಾರು ನಾಮನಿರ್ದೇಶನಗಳನ್ನು ಹೊಂದಿದ್ದರೂ, ಒಂದೇ ಒಂದು ಪ್ರಶಸ್ತಿ ಗೆಲುವಲ್ಲಿ ವಿಫಲವಾದ ಉದಾಹರಣೆಗಳು ಇವೆ.
- " class="align-text-top noRightClick twitterSection" data="">
1. ದಿ ಎಲಿಫೆಂಟ್ ಮ್ಯಾನ್ (1980) - 8 ನಾಮನಿರ್ದೇಶನಗಳು: 1980ರ 'ದಿ ಎಲಿಫೆಂಟ್ ಮ್ಯಾನ್' ಸಂಪೂರ್ಣವಾಗಿ ಕಪ್ಪು ಮತ್ತು ಬಿಳುಪಿನಲ್ಲಿ ಸಿನಿಮಾ. ಡಾ.ಫ್ರೆಡ್ರಿಕ್ ಟ್ರೆವ್ಸ್ ಅವರು ಜಾನ್ ಮೆರಿಕ್ ಎಂಬ ವಿರೂಪ ವ್ಯಕ್ತಿಗೆ ಸಹಾಯ ಮಾಡುವ ಮತ್ತು ಸ್ನೇಹ ಬೆಳೆಸುವ ಕಥೆ ಹೆಣೆದಿದ್ದರು. ಈ ಚಿತ್ರವು 1981ರಲ್ಲಿ 53ನೇ ಅಕಾಡೆಮಿ ಪ್ರಶಸ್ತಿಗಳಿಗೆ ಎಂಟು ನಾಮನಿರ್ದೇಶನಗಳನ್ನು ಗಳಿಸಿತ್ತು. ಯಾವುದೇ ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ವಿಫಲವಾಗಿತ್ತು.
- " class="align-text-top noRightClick twitterSection" data="">
2. 'ಟ್ರೂ ಗ್ರಿಟ್' (2010) - 10 ನಾಮನಿರ್ದೇಶನಗಳು: 2010ರಲ್ಲಿ ಬಿಡುಗಡೆಯಾಗಿದ್ದ 'ಟ್ರೂ ಗ್ರಿಟ್' ಚಿತ್ರವು ಚಾರ್ಲ್ಸ್ ಪೋರ್ಟಿಸ್ ಕಾದಂಬರಿ ಆಧರಿಸಿದ ಪಾಶ್ಚಾತ್ಯ ಚಲನಚಿತ್ರ. ಈ ಚಿತ್ರದಲ್ಲಿ ಜೆಫ್ ಬ್ರಿಡ್ಜಸ್ ಮತ್ತು ಮ್ಯಾಟ್ ಡ್ಯಾಮನ್ ಅವರಂತಹ ಹೆಸರಾಂತ ನಟರು ಇದ್ದರು. ರೋಮಾಂಚಕ ಆ್ಯಕ್ಷನ್ ಸೀಕ್ವೆನ್ಸ್ ಚಿತ್ರವು ಅತ್ಯುತ್ತಮ ನಟ, ಕಲಾ ನಿರ್ದೇಶನ ಮತ್ತು ಛಾಯಾಗ್ರಹಣ ಸೇರಿದಂತೆ ವಿವಿಧ ವಿಭಾಗಗಳಲ್ಲಿ 10 ಆಸ್ಕರ್ ಪ್ರಶಸ್ತಿಗಳಿಗೆ ನಾಮ ನಿರ್ದೇಶನಗೊಂಡಿತ್ತು. ಆದರೂ, ಯಾವುದೇ ಪ್ರಶಸ್ತಿ ಪಡೆಯುವಲ್ಲಿ ಸಫಲತೆ ಕಂಡಿರಲಿಲ್ಲ.
3. ದಿ ಶಾವ್ಶಾಂಕ್ ರಿಡೆಂಪ್ಶನ್ (1994) - 7 ನಾಮನಿರ್ದೇಶನಗಳು: 1994ರಲ್ಲಿ ತೆರೆಗೆ ಬಂದ ' ದಿಶಾವ್ಶಾಂಕ್ ರಿಡೆಂಪ್ಶನ್' ಚಲನಚಿತ್ರವು ಜೈಲಿನಲ್ಲಿರುವ ಕೈದಿಗಳ ಜೀವನ ಪ್ರತಿಬಿಂಬಿಸಿತ್ತು. ಅತ್ಯಂತ ಶ್ರೇಷ್ಠ ಕ್ರೈಂ ಚಲನಚಿತ್ರಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟ ಚಿತ್ರವು ಮೋರ್ಗನ್ ಫ್ರೀಮನ್ ಅವರ ನಟನಾ ಪರಾಕ್ರಮವನ್ನು ನಿರೂಪಿಸುತ್ತದೆ. 1995ರಲ್ಲಿ ಏಳು ಆಸ್ಕರ್ ನಾಮ ನಿರ್ದೇಶನಗಳನ್ನು ಪಡೆದಿತ್ತು. ಆದರೆ, ಎಲ್ಲ ವಿಭಾಗಗಳಿಂದ ಹೊರ ಬಿದ್ದಿತ್ತು. ಇದರಿಂದ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದರು.
- " class="align-text-top noRightClick twitterSection" data="">
4. ದಿ ವುಲ್ಫ್ ಆಫ್ ವಾಲ್ ಸ್ಟ್ರೀಟ್ (2013) - 5 ನಾಮನಿರ್ದೇಶನಗಳು: 2014ರಲ್ಲಿ ಐದು ಆಸ್ಕರ್ ಪ್ರಶಸ್ತಿಗಳಿಗೆ 'ದಿ ವುಲ್ಫ್ ಆಫ್ ವಾಲ್ ಸ್ಟ್ರೀಟ್' ನಾಮನಿರ್ದೇಶನಗೊಂಡಿತ್ತು. ಮೋಸದ ಹೂಡಿಕೆ ತಂತ್ರಗಳ ಮೂಲಕ ಶ್ರೀಮಂತಿಕೆಯ ಕಥಾಹಂದರ ಹೊಂದಿತ್ತು. ಅಭಿವೃದ್ಧಿ ಹೊಂದುತ್ತಿರುವ ಉದ್ಯಮಿ ಕ್ರಿಮಿನಲ್ ಅಪರಾಧಿಯಾಗಿ ಬದಲಾಗುವುದನ್ನು ನಿರೂಪಿಸಿತ್ತು. ಅತ್ಯುತ್ತಮ ನಟ, ಅತ್ಯುತ್ತಮ ಪೋಷಕ ನಟ ಮತ್ತು ಅತ್ಯುತ್ತಮ ನಿರ್ದೇಶಕ ವಿಭಾಗಗಳಲ್ಲಿ ಆಸ್ಕರ್ ಗೆಲ್ಲುವ ನಿರೀಕ್ಷೆಯನ್ನು ಚಿತ್ರ ಹುಟ್ಟುಹಾಕಿತ್ತು. ಕೊನೆಗೆ ಖಾಲಿ ಕೈಯಲ್ಲಿ ವಾಪಸ್ ಬಂದಿತ್ತು.
- " class="align-text-top noRightClick twitterSection" data="">
5. ಅಮೆರಿಕನ್ ಹಸ್ಲ್ (2013) - 10 ನಾಮನಿರ್ದೇಶನಗಳು: ಕ್ರಿಶ್ಚಿಯನ್ ಬೇಲ್, ಬ್ರಾಡ್ಲಿ ಕೂಪರ್ ಮತ್ತು ಜೆನ್ನಿಫರ್ ಲಾರೆನ್ಸ್ ಅವರನ್ನು ಒಳಗೊಂಡಿದ್ದ 'ಅಮೆರಿಕನ್ ಹಸ್ಲ್' ಚಿತ್ರವು ಕೂಡ ಕ್ರೈಂ ಕಥೆಯಾಗಿತ್ತು. ಭ್ರಷ್ಟ ವ್ಯಕ್ತಿಗಳ ಜಾಲವನ್ನು ಬಯಲಿಗೆ ಎಳೆಯುವುದು ಚಿತ್ರದ ಕಥೆ. ಪ್ರಣಯ, ಆ್ಯಕ್ಷನ್ನಿಂದ ಕೂಡಿದ್ದ ಈ ಚಿತ್ರವು ಸಹ 2014ರಲ್ಲಿ ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ವಸ್ತ್ರ ವಿನ್ಯಾಸದಂತಹ ವಿಭಾಗಗಳನ್ನು 10 ನಾಮನಿರ್ದೇಶನಗಳನ್ನು ಗಳಿಸಿತ್ತು. ಕೊನೆಗೆ ಯಾವುದೇ ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿ ಜಯಿಸುವಲ್ಲಿ ವಿಫಲವಾಗಿತ್ತು.
ಇದನ್ನೂ ಓದಿ: ಮಂಗಳೂರಿಗೆ ಮತ್ತೊಂದು ಸೌಂದರ್ಯ ಪ್ರಶಸ್ತಿ; ಈಶಿಕಾ ಶೆಟ್ಟಿಗೆ 'ಮಿಸ್ ಟೀನ್ ಗ್ಲೋಬಲ್ ವರ್ಲ್ಡ್ ಇಂಡಿಯಾ ಓಶಿಯಾನ' ಗರಿ