ETV Bharat / entertainment

250 ಕೋಟಿ ದಾಟಿದ 'ಫೈಟರ್':​ ಸಿನಿಮಾದ ಒಂದು ವಾರದ ಕಲೆಕ್ಷನ್​ ಮಾಹಿತಿ ಇಲ್ಲಿದೆ

ಫೈಟರ್​​ ಸಿನಿಮಾ 250 ಕೋಟಿ ರೂ. ಗಡಿ ದಾಟುವಲ್ಲಿ ಯಶಸ್ವಿಯಾಗಿದೆ.

Fighter
ಫೈಟರ್
author img

By ETV Bharat Karnataka Team

Published : Feb 1, 2024, 1:41 PM IST

ಬಹುನಿರೀಕ್ಷಿತ 'ಫೈಟರ್'​ ಸಿನಿಮಾ ತೆರೆಕಂಡು ಒಂದು ವಾರ ಪೂರ್ಣಗೊಂಡಿದೆ. ಜನವರಿ 25 ರಂದು ಅಂದರೆ ಕಳೆದ ಗುರುವಾರ ತೆರೆಕಂಡ ಈ ಸಿನಿಮಾ ವಿಶ್ವದಾದ್ಯಂತ 250 ಕೋಟಿ ರೂಪಾಯಿ ದಾಟುವಲ್ಲಿ ಯಶಸ್ಸು ಕಂಡಿದೆ. ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಂಡಿರುವ ಈ ಚಿತ್ರ ಉತ್ತಮ ಪ್ರತಿಕ್ರಿಯೆ ಸ್ವೀಕರಿಸಿದ್ದು, ಈವರೆಗಿನ ಒಟ್ಟು ಬಾಕ್ಸ್ ಆಫೀಸ್​ ಅಂಕಿ ಅಂಶ ಉತ್ತಮವಾಗಿದೆ.

ಚಿತ್ರಮಂದಿರಗಳಲ್ಲಿ ಫೈಟರ್​ ಪ್ರದರ್ಶನ ಮುಂದುವರಿದಿದ್ದು, ಗಳಿಕೆಯ ಅಂಕಿ-ಅಂಶ ಇಳಿಮುಖವಾಗಿದೆ. ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಕಲೆಕ್ಷನ್​ ಇಳಿಕೆ ಕಾಣುತ್ತಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ವೈಮಾನಿಕ ಆ್ಯಕ್ಷನ್​ ಸಿನಿಮಾ ಭಾರತದಲ್ಲಿ ಬುಧವಾರ ಸುಮಾರು 6.35 ಕೋಟಿ ರೂಪಾಯಿ ಗಳಿಸಿದೆ. ಮಂಗಳವಾರ 7.5 ಕೋಟಿ ರೂ. ಗಳಿಸಿದ್ದು, 1.15 ಕೋಟಿ ರೂಪಾಯಿ ಕಡಿಮೆಯಾಗಿದೆ.

ಸ್ಯಾಕ್ನಿಲ್ಕ್ ವರದಿ ಪ್ರಕಾರ, ಫೈಟರ್ ತನ್ನ ಮೊದಲ ವಾರ ಭಾರತದಲ್ಲಿ 140.35 ಕೋಟಿ ರೂ. ಕಲೆಕ್ಷನ್​ ಮಾಡಿದ್ದು, 150 ಕೋಟಿ ದಾಟುವ ನಿರೀಕ್ಷೆಯಲ್ಲಿದೆ. ಸದ್ಯ ಈ ಚಿತ್ರಕ್ಕೆ ಯಾವುದೇ ದೊಡ್ಡ ಸಿನಿಮಾದ ಸ್ಪರ್ಧೆಯಿಲ್ಲ. ಈ ಹಿನ್ನೆಲೆ ಶೀಘ್ರವೇ 150 ಕೋಟಿ ರೂ. ದಾಟುವ ನಿರೀಕ್ಷೆಯಲ್ಲಿ ಚಿತ್ರತಂಡವಿದೆ. ಬುಧವಾರ, ಚಿತ್ರದ ಒಟ್ಟಾರೆ ಆಕ್ಯುಪೆನ್ಸಿ ರೇಟ್​ ಶೇ. 11.89 ರಷ್ಟಿತ್ತು. ತನ್ನ ಮೊದಲ ವಾರಾಂತ್ಯ 118.5 ಕೋಟಿ ರೂ. ಗಳಿಸಿ ಉತ್ತಮ ಆರಂಭಿಕ ಕಲೆಕ್ಷನ್ ಪಡೆದಿತ್ತು. ಆದ್ರೆ ಸೋಮವಾರ, ಚಿತ್ರ ಕೇವಲ 8 ಕೋಟಿ ರೂಪಾಯಿಗಳನ್ನು ಗಳಿಸಿತು. ನಂತರ ಈ ಅಂಕಿಅಂಶ ಇಳಿಯುತ್ತಲೇ ಸಾಗಿದೆ. ಅದಾಗ್ಯೂ, ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಫೈಟರ್​ ಉತ್ತಮ ಪ್ರದರ್ಶನ ನೀಡುತ್ತಿದೆ. ವಿಶ್ವದಾದ್ಯಂತ ಬಾಕ್ಸ್ ಆಫೀಸ್​ನಲ್ಲಿ ಈಗಾಗಲೇ 250 ಕೋಟಿ ರೂ.ಗಳ ಗಡಿ ದಾಟಿದೆ.

ಇದನ್ನೂ ಓದಿ: ವರ್ಷದ ಬಳಿಕ ಸಿಹಿ ಸವಿದ ಕಾರ್ತಿಕ್ ಆರ್ಯನ್: ಸಿನಿಮಾ, ಫಿಟ್ನೆಸ್​ ಸುಲಭದ ಮಾತಲ್ಲ

ಫೈಟರ್ ಥಿಯೇಟರ್​ನಲ್ಲಿ ಪ್ರದರ್ಶನ ಮುಂದುವರಿಸಿದ್ದು, ಈ ವಾರಾಂತ್ಯ ಸಂಪಾದನೆ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕು. ಚೆನ್ನೈ, ಜೈಪುರ, ಲಕ್ನೋ, ಹೈದರಾಬಾದ್, ಮುಂಬೈ, ಬೆಂಗಳೂರು, ಚಂಡೀಗಢ, ಅಹಮದಾಬಾದ್, ಕೋಲ್ಕತ್ತಾ, ಪುಣೆ, ಸೂರತ್ ಮತ್ತು ಭೋಪಾಲ್ ಪ್ರದೇಶಗಳಿಂದ ಭಾರತೀಯ ಸಿನಿಮಾಗಳಿಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಅದರಂತೆ ಫೈಟರ್ ಚಿತ್ರವೂ ಈ ಪ್ರದೇಶಗಳಲ್ಲಿ ಉತ್ತಮ ವ್ಯವಹಾರ ನಡೆಸಿದೆ.​

ಇದನ್ನೂ ಓದಿ: 'ಹೀರಾಮಂಡಿ' ಫಸ್ಟ್ ಲುಕ್ ಔಟ್; ವೇಶ್ಯೆಯರ ಬದುಕು ತೆರೆದಿಡಲಿದ್ದಾರೆ ಸಂಜಯ್​ ಲೀಲಾ ಬನ್ಸಾಲಿ

ವಯಾಕಾಮ್​ 18 ಸ್ಟುಡಿಯೋಸ್ ಮತ್ತು ಮಾರ್ಫ್ಲಿಕ್ಸ್​ ನಿರ್ಮಾಣದ ಈ ಚಿತ್ರದಲ್ಲಿ ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಅಲ್ಲದೇ ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್, ಅಕ್ಷಯ್ ಒಬೆರಾಯ್ ಮತ್ತು ಸಂಜೀದಾ ಶೇಖ್ ಸಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಹೃತಿಕ್ ಸ್ಕ್ವಾಡ್ರನ್ ಲೀಡರ್ ಶಂಶೇರ್ ಪಠಾನಿಯಾ ಅಥವಾ ಪ್ಯಾಟಿಯಾಗಿ, ದೀಪಿಕಾ ಸ್ಕ್ವಾಡ್ರನ್ ಲೀಡರ್ ಮಿನಲ್ ರಾಥೋರ್ ಅಥವಾ ಮಿನ್ನಿಯಾಗಿ ಮತ್ತು ಅನಿಲ್ ಕಪೂರ್ ಗ್ರೂಪ್ ಕ್ಯಾಪ್ಟನ್ ರಾಕೇಶ್ ಜೈ ಸಿಂಗ್ ಅಥವಾ ರಾಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರಧಾರಿಗಳೆಲ್ಲರೂ ದೇಶಕ್ಕಾಗಿ ಹೋರಾಡುತ್ತಾರೆ. ಫೈಟರ್ ಹೃತಿಕ್ ಮತ್ತು ದೀಪಿಕಾ ಕಾಂಬಿನೇಶನ್​ನ ಮೊದಲ ಸಿನಿಮಾ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.