ETV Bharat / entertainment

ಸ್ಯಾಂಡಲ್​ವುಡ್​​ ಸೂಪರ್​ ಸ್ಟಾರ್ಸ್​​​ ಸಿನಿಮಾಗಳಿಗೆ ಬಿಡುಗಡೆ ಭಾಗ್ಯ ಯಾವಾಗ? - Sandalwood Star movies - SANDALWOOD STAR MOVIES

ಸ್ಯಾಂಡಲ್​ವುಡ್​ನ ಸ್ಟಾರ್ ನಟರ ಸಿನಿಮಾಗಳು ಹೆಚ್ಚೆಚ್ಚು ಬರಲಿ ಎಂದು ಅಭಿಮಾನಿಗಳು ಆಶಿಸಿದ್ದಾರೆ.

Sandalwood Star movies
ಸ್ಯಾಂಡಲ್​ವುಡ್​ನ ಸ್ಟಾರ್ ನಟರ ಸಿನಿಮಾಗಳು
author img

By ETV Bharat Karnataka Team

Published : Apr 27, 2024, 1:00 PM IST

Updated : Apr 27, 2024, 4:07 PM IST

ಸ್ಯಾಂಡಲ್​ವುಡ್​ನ ಸ್ಟಾರ್ ನಟರು ಎರಡು ವರ್ಷಕ್ಕೊಂದು ಸಿನಿಮಾ ಮಾಡಿದರೆ ಚಿತ್ರಮಂದಿರಗಳ ಏಳಿಗೆ ಕಷ್ಟ ಎಂಬ ಮಾತುಗಳು ಕೇಳಿಬರುತ್ತಿವೆ. ಸ್ಟಾರ್ ನಟರ ಸಿನಿಮಾಗಳು ಚಿತ್ರಮಂದಿರಕ್ಕೆ ಧುಮುಕಿದಾಗಲೇ, ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹಬ್ಬ ನಡೆಯಲು ಸಾಧ್ಯ. ಆದರೆ ಅದ್ಯಾಕೋ? ಕನ್ನಡದ ಸ್ಟಾರ್‌ಗಳ ಸಿನಿಮಾಗಳು ನಿಧಾನಗತಿಯಲ್ಲಿ ಸಾಗಿದೆ.

Bheema
ಭೀಮ

ಸದ್ಯ ಚುನಾವಣೆಯ ಕಾವೇರಿದೆ. ಐಪಿಎಲ್ ಜ್ವರ ಆವರಿಸಿಕೊಂಡಿದೆ. ಈ ಸಂದರ್ಭದಲ್ಲಿ ಸಿನಿಮಾ ಬಿಡುಗಡೆ ಮಾಡಿದರೆ, ಚಿತ್ರ ಯಾವುದಾದರೇನು? ಚಿತ್ರದಲ್ಲಿ ಯಾರಿದ್ದರೇನು? ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರೋದಿಲ್ಲ ಎನ್ನುವ ವಾದ ಒಪ್ಪುವಂತಹದ್ದೇ. ಹಾಗಂತ ವರ್ಷಾನು ವರ್ಷ ಚಿತ್ರಗಳನ್ನು ಬಿಡುಗಡೆ ಮಾಡದೇ ಇದ್ದರೆ ಹೇಗೆ? ಚಿತ್ರಕ್ಕೆ ಸಿಗಬೇಕಿದ್ದ ಪ್ರಚಾರ ಸಿಕ್ಕ ನಂತರವೂ, ಸಿನಿಪ್ರಿಯರ ಗಮನ ಆ ಚಿತ್ರದತ್ತ ಹೋದ ನಂತರವೂ ಆ ಚಿತ್ರವನ್ನು ಬಿಡುಗಡೆ ಮಾಡದೇ ಇದ್ರೆ ಹೇಗೆ?. ನಿಮಗೆ ಗೊತ್ತಿರಲಿ, ಕನ್ನಡದಲ್ಲಿ ಸ್ಟಾರ್ ಫ್ಲೇವರ್ ಸಿನಿಮಾಗಳು ಬಹುತೇಕ ಅಂತಿಮ ಘಟ್ಟ ತಲುಪಿದೆ. ಆದರೆ ಆ ಪೈಕಿ ಒಂದೇ ಒಂದು ಚಿತ್ರದ ಬಿಡುಗಡೆ ದಿನಾಂಕ ಇಲ್ಲಿವರೆಗೆ ಘೋಷಣೆಯಾಗಿಲ್ಲ.

Martin
ಮಾರ್ಟಿನ್

ಉದಾಹರಣೆಗೆ 'ಭೀಮ' ಸಿನಿಮಾ. ಭೀಮ ಯಾವತ್ತೋ ಬರಬೇಕಿತ್ತು. ಸಲಗ ಚಿತ್ರದ ನಂತರ ದುನಿಯಾ ವಿಜಯ್ ನಿರ್ದೇಶನದ ಚಿತ್ರ ಎಂಬ ಕಾರಣಕ್ಕೆ ಆರಂಭದಿಂದಲೇ ಸದ್ದು ಮಾಡಿಕೊಂಡು ಬಂದಿದ್ದ ಭೀಮ ಚಿತ್ರಕ್ಕೆ, ಎರಡು ಹಾಡು, ಟೀಸರ್ ಪ್ರೋತ್ಸಾಹ ತುಂಬಿತ್ತು. ಆದರೆ ಅದ್ಯಾಕೋ? ಕಬ್ಬಿಣ ಕಾದಿರುವಾಗಲೇ ಬಡಿಯುವ ಮನಸ್ಸನ್ನು ದುನಿಯಾ ವಿಜಯ್ ಮಾಡಲಿಲ್ಲ. ನಿರ್ಮಾಪಕ ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಕೂಡ ಶೀಘ್ರ ಬಿಡುಗಡೆಗೆ ಮುಂದಾಗಿಲ್ಲ.

Bagheera
ಬಘೀರ

ನಂಬೋದು ಬಿಡೋದು ನಿಮಗೆ ಬಿಟ್ಟಿದ್ದಾದರೂ, 'ಭೀಮ' ಶುರುವಾಗಿಯೇ ಏಪ್ರಿಲ್ 18ಕ್ಕೆ ಎರಡು ವರ್ಷಗಳಾಗಿವೆ. ಈ ಎರಡು ವರ್ಷಗಳಲ್ಲಿ ಆತುರ ಆತುರವಾಗಿ ಅಲ್ಲದೇ ಇದ್ದರೂ ನಿಧಾನವಾಗಿಯೇ ಭೀಮ ಚಿತ್ರವನ್ನು ಬಿಡುಗಡೆ ಮಾಡಬಹುದಿತ್ತು. 2023ರಲ್ಲಿಯೇ ತೆರೆಕಾಣಬಹುದು ಎನ್ನುವ ನಂಬಿಕೆ ಕೂಡ ಪ್ರೇಕ್ಷಕರಲ್ಲಿತ್ತು. ಆದ್ರೆ ಪದೇ ಪದೆ ಬಿಡುಗಡೆ ದಿನಾಂಕ ಮುಂದೆ ಹೋಗ್ತಾನೆ ಬಂತು.

yash
ಯಶ್​ ಸಿನಿಮಾ

ಇನ್ನೂ, ರಿಯಲ್ ಸ್ಟಾರ್ ಉಪೇಂದ್ರ ಅವರ 'ಯುಐ' ಕಥೆ ಕೂಡ 'ಭೀಮ' ಚಿತ್ರಕ್ಕಿಂತ ಭಿನ್ನವೇನಿಲ್ಲ. 2022ರ ಏಪ್ರಿಲ್ 18ರಂದು ಭೀಮ ಸೆಟ್ಟೇರಿದ್ದರೆ, 'ಯುಐ' ಮುಹೂರ್ತ ಭಾಗ್ಯ ಕಂಡಿದ್ದು 2022ರ ಜೂನ್ ಮೊದಲ ವಾರದಲ್ಲಿ. ಯುಐ ಕೇವಲ ಕನ್ನಡ ಸಿನಿಮಾವಲ್ಲ, ಪ್ಯಾನ್ ಇಂಡಿಯಾ ಚಿತ್ರ. ಗ್ರಾಫಿಕ್ಸ್ ಕೆಲಸವನ್ನು ಹೆಚ್ಚು ಬಯಸಿರುವ ಸಿನಿಮಾ. ಹೀಗಾಗಿ ಸಿನಿಮಾ ತಡವಾಗಿರೋ ಸಾಧ್ಯತೆಗಳಿವೆ. ಆದರೆ ಪ್ರತಿಯೊಬ್ಬರೂ ದ್ವೈವಾರ್ಷಿಕ ಯೋಜನೆ ಹಾಕಿಕೊಂಡರೆ, ಕನ್ನಡ ಚಿತ್ರರಂಗದ ಸದ್ದು ಕಡಿಮೆ ಆಗೋ ಸಾಧ್ಯತೆಗಳೂ ಇವೆ.

ಕೇವಲ ಭೀಮ ಮತ್ತು ಯುಐ ಅಷ್ಟೇ ಅಲ್ಲ. ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್' ಮತ್ತು 'ಕೆ.ಡಿ' ಚಿತ್ರದ ಕಥೆ ಕೂಡ ಇದೇ ರೀತಿ ಇದೆ. ಮೈಸೂರು ನಾಡದೇವತೆ ಶ್ರೀ ಚಾಮುಂಡೇಶ್ವರಿ ತಾಯಿ ಸನ್ನಿಧಿಯಲ್ಲಿ ಪ್ರೇಮ್ ತಮ್ಮ ಕೆ.ಡಿ ಚಿತ್ರಕ್ಕೆ ಚಾಲನೆ ಕೊಟ್ಟು, ಏಪ್ರಿಲ್ 24ಕ್ಕೆ ಎರಡು ವರ್ಷವಾಗಿದೆ. ಇದೇ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಸಿನಿಮಾ ಆರಂಭವಾಗಿ ಹೆಚ್ಚು ಕಡಿಮೆ ಮೂರುವರೆ ವರ್ಷಗಳಾಗಿವೆ. ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಘೀರ ಚಿತ್ರ ಕೂಡ ಆರಂಭವಾಗಿದ್ದು ಎರಡು ವರ್ಷಗಳ ಹಿಂದೆಯೇ. ಆದ್ರೆ ಈ ಚಿತ್ರದ ಚಿತ್ರೀಕರಣ ಇನ್ನೂ ಮುಗಿದಿಲ್ಲ.

ಇದನ್ನೂ ಓದಿ: ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ ನಟ ಗುರುಚರಣ್​ ಸಿಂಗ್​ ನಾಪತ್ತೆ: ದೂರು ದಾಖಲಿಸಿದ ತಂದೆ - Gurucharan Singh Missing

ಕೆಜಿಎಫ್ ಚಾಪ್ಟರ್ 2 ಚಿತ್ರದ ಬಳಿಕ ರಾಕಿಂಗ್ ಸ್ಟಾರ್ ಯಶ್ ಕಥೆ ಕೂಡ ಇದಕ್ಕೆ ಹೊರತಾಗಿಲ್ಲ. ಯಶ್ ಸಿನಿಮಾ ಬಂದು ಮೂರು ವರ್ಷಗಳಾಗಿವೆ. ಚುನಾವಣೆ ಮತ್ತು ಐಪಿಎಲ್ ಬೆನ್ನಲ್ಲೇ T20 ವರ್ಲ್ಡ್ ಕಪ್ ಕೂಡ ಆರಂಭವಾಗಲಿದೆ. ಇದರ ನೆಪದಲ್ಲಿ, ತಮ್ಮ ಚಿತ್ರಗಳನ್ನು ಮತ್ತೆ ಕೆಲವರು ಮುಂದೂಡಿದರೂ ಮುಂದೂಡಬಹುದು.

ಇದನ್ನೂ ಓದಿ: ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು ಯಾರೆಲ್ಲಾ ವೋಟ್‌ ಮಾಡಿದ್ರು?:​ ವಿಡಿಯೋ ನೋಡಿ - Sandalwood Stars Voting

ಒಟ್ಟಿನಲ್ಲಿ ಸ್ಟಾರ್ ನಾಯಕರು ವರ್ಷಕ್ಕೆ ಎರಡು ಸಿನಿಮಾ ಮಾಡಿದರಷ್ಟೇ ಚಿತ್ರರಂಗಕ್ಕೆ ಉಳಿಗಾಲ ಎನ್ನುವ ಮಾತು ಈ ಹಿಂದಿನಿಂದಲೂ ಸ್ಯಾಂಡಲ್​​​ವುಡ್​ನಲ್ಲಿ ಕೇಳಿ ಬರುತ್ತಿದೆ. ಬಹುತೇಕ ಸಿನಿಪ್ರಿಯರ ಅಭಿಪ್ರಾಯವೂ ಇದೆ. ದೊಡ್ಡ ಮಟ್ಟದಲ್ಲಿ ಸಿನಿಮಾಗಳು ನಿರ್ಮಾಣ ಆಗುತ್ತಿರುವ ಹಿನ್ನೆಲೆ ಕೊಂಚ ತಡವಾಗಿರಬಹುದು. ಆದಷ್ಟು ವರ್ಷಕ್ಕೆ ಒಂದೆರಡಾದರೂ ಸ್ಟಾರ್ ನಟರ ಸಿನಿಮಾ ಬರಲಿ ಅನ್ನೋದು ಪ್ರೇಕ್ಷಕರ ಅಭಿಪ್ರಾಯ.

Last Updated : Apr 27, 2024, 4:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.