ETV Bharat / entertainment

ಕಿಚ್ಚ ಸುದೀಪ್​ ಬದಲು ಬಿಗ್​​ ಬಾಸ್​ ಪಂಚಾಯ್ತಿ ನಡೆಸಲು ಬಂದ ಖ್ಯಾತ ನಿರ್ದೇಶಕ ಯೋಗರಾಜ್​ ಭಟ್​​

ಇಂದಿನ ಬಿಗ್​ ಬಾಸ್​ ಪಂಚಾಯ್ತಿಯನ್ನು ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಯೋಗರಾಜ್​ ಭಟ್​​ ನಡೆಸಿಕೊಡಲಿದ್ದಾರೆ.

Director Yogaraj Bhat
ನಿರ್ದೇಶಕ ಯೋಗರಾಜ್​ ಭಟ್​​ (ETV Bharat)
author img

By ETV Bharat Entertainment Team

Published : Oct 26, 2024, 1:16 PM IST

ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ಬಿಗ್​​​ ಬಾಸ್​​​ನಲ್ಲಿ ಒಂದಿಷ್ಟು ವಾರಗಳ ನಂತರ ಅತಿಥಿಗಳು ಆಗಮಿಸೋದು ಸಹಜ. ಆದರೆ ಸೀಸನ್​ 11ರಲ್ಲಿ ಈಗಾಗಲೇ ಹಲವು ಬದಲಾವಣೆ, ಮಹತ್ತರ ಘಟನೆಗಳು ನಡೆದು ಹೋಗಿವೆ. ಈಗಾಗಲೇ ಜನಪ್ರಿಯ ನ್ಯೂಸ್​ ಆ್ಯಂಕರ್​ ರಾಧಾ ಹಿರೇಗೌಡರ್​ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ನಿರ್ದೇಶಕರಾದ ಯೋಗರಾಜ್​ ಭಟ್​​ ಆಗಮಿಸಿದ್ದಾರೆ.

ಈ ವಾರ ಅಭಿನಯ ಚಕ್ರವರ್ತಿ ಸುದೀಪ್​ ಅವರು ವಾರದ ಕಥೆ ಕಿಚ್ಚನ ಜೊತೆ ಮತ್ತು ಸೂಪರ್ ಸಂಡೇ ವಿತ್​ ಸುದೀಪ್​ ಸಂಚಿಕೆಗಳನ್ನು ನಡೆಸಿಕೊಡುವುದಿಲ್ಲ ಎನ್ನಲಾಗಿದೆ. ಹೀಗಾಗಿ, ಈ ವಾರ ಇಬ್ಬರು ಅತಿಥಿಗಳು ಮನೆ ಪ್ರವೇಶಿಸಿದ್ದಾರೆ. ನಿನ್ನೆಯ ಸಂಚಿಕೆಯಲ್ಲಿ ನ್ಯೂಸ್​ ಆ್ಯಂಕರ್​ ರಾಧಾ ಹಿರೇಗೌಡರ್​ ಆಗಮಿಸಿ ರಾಜಕೀಯ ಟಾಸ್ಕ್​ ಒಂದನ್ನು ನಡೆಸಿಕೊಟ್ಟರು. ನ್ಯೂಸ್​ ನಡೆಸಿಕೊಡುವಂತೆಯೇ ಇಲ್ಲಿಯೂ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯಿತು. ಸಂಚಿಕೆಗೆ ವೀಕ್ಷಕರು ಅಪಾರ ಮೆಚ್ಚುಗೆ ಸೂಚಿಸಿದ್ದಾರೆ. ಇದೀಗ ಮನೆಗೆ ಭಟ್ಟರ ಎಂಟ್ರಿಯಾಗಿದೆ.

ಇಂದು ಮನೆಗೆ ಆಗಮಿಸಿರುವ ಯೋಗರಾಜ್​ ಭಟ್​ ಅವರು ಸಂಪೂರ್ಣ ದಿನ ಮನೆಯಲ್ಲಿಯೇ ಇರುತ್ತಾರೋ? ಇಲ್ಲವೋ? ಎಂಬುದನ್ನು ಕಾದು ನೋಡಬೇಕಿದೆ. ಸದ್ಯ ಅನಾವರಣಗೊಂಡಿರುವ ಪ್ರೋಮೋ ನೋಡಿದ್ರೆ ವಾರದ ಪಂಚಾಯ್ತಿಯನ್ನು ತಮ್ಮದೇ ಶೈಲಿಯಲ್ಲಿ ನಡೆಸಿಕೊಡುವಂತೆ ತೋರುತ್ತಿದೆ. ''ದೊಡ್ಮನೆ ಬೊಂಬೆಗಳಿಗೆ ಕೀ ಕೊಡಲು ಬಂದ್ರು ಯೋಗರಾಜ್ ಭಟ್!'' ಎಂಬ ಕ್ಯಾಪ್ಷನ್​​​ನೊಂದಿಗೆ ಪ್ರೋಮೋ ಅನಾವರಣಗೊಂಡಿದ್ದು ಸಂಪೂರ್ಣ ಸಂಚಿಕೆ ವೀಕ್ಷಿಸಲು ಪ್ರೇಕ್ಷಕರು ಉತ್ಸುಕರಾಗಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಇತಿಹಾಸದಲ್ಲೇ ಇದೇ ಮೊದಲು: ಮನೆಯೊಳಗೆ ಜನಸಾಗರ, ಧಿಕ್ಕಾರದ ಕೂಗು...!

ವ್ಯವಸ್ಥೆಗಳು, ನಮಸ್ತೆಗಳು, ಸ್ವಾಗತಗಳು ಎನ್ನುತ್ತಾ ತಮ್ಮದೇ ಶೈಲಿಯಲ್ಲಿ ಯೋಗರಾಜ್​ ಭಟ್​​​ ಅವರು ಡೈಲಾಗ್​ ಹೊಡೆಯುತ್ತಾ ಬಿಗ್​ ಬಾಸ್​ ಮನೆ ಪ್ರವೇಶಿಸಿದ್ದಾರೆ. ಬಿಗ್​ ಮನೆಗೆ ಪಂಚಾಯ್ತಿ ಮಾಡಲು ಬಂದ್ರು ವಿಕಟಕವಿ ಯೋಗರಾಜ್​ ಭಟ್​ ಎಂದು ಹಿನ್ನೆಲೆಯಲ್ಲಿ ಬಿಗ್​ ಬಾಸ್​ ದನಿ ಕೇಳಿಬಂದಿದೆ. ಮಾತು ಶುರು ಮಾಡಿದ ನಿರ್ದೇಶಕರು, ಹನುಮಂತ ಎಲ್ಲಿ? ನೀವಿಲ್ಲಿ ಸ್ಪರ್ಧಿಯೋ? ವೀಕ್ಷಕರೋ? ಎಂದು ಪ್ರಶ್ನಿಸಿದ್ದಾರೆ. ನಂತರ, ಇವರೆಲ್ಲರನ್ನು ಕುರಿಗಳು ಅಂದುಕೋ? ಒಬ್ಬಬ್ಬರದ್ದೂ ಇಂಟ್ರುಡಕ್ಷನ್​ ಕೊಡಿ ಎಂದು ಕೇಳಿದ್ದಾರೆ. ಅದಕ್ಕೆ ಸುರೇಶ್​​ ಕಳ್ಳ ಟಗರು, ಧರ್ಮ ಕೋಡಿಲ್ಲದ ಟಗರು ಎಂದು ಉತ್ತರಿಸಿದ್ದಾರೆ. ನಂತರ, ಗಂಡಸು ಮಾನಸಾ ಅವರ ಬಗ್ಗೆ ಹೇಳು ಎಂದು ಪ್ರಶ್ನಿಸಿದ್ದಾರೆ. ಆಗ ಮಾನಸಾ ಅವರು ಎಲ್ಲರೂ ಹೀಗೆ ಅಂತಾರೆ ಎಂದಿದ್ದಾರೆ. ಆಗ ಭಟ್ರು ಕೂಡಾ ಹೊರಗೂ ಹಾಗೇ ಅಂತಾರೆ ಎಂದು ಹಾಸ್ಯಚಟಾಕಿ ಹಾರಿಸಿದ್ದಾರೆ.

ಇದನ್ನೂ ಓದಿ: ನನಸಾಯ್ತು ಜಗ್ಗೇಶ್ 40 ವರ್ಷಗಳ ಹಿಂದಿನ ಕನಸು: ಸಿನಿಮಾ ಇಂಡಸ್ಟ್ರಿ ಸೇವೆಗಾಗಿ 'ಜಗ್ಗೇಶ್ ಸ್ಟುಡಿಯೋಸ್'

ಮನೆಯಲ್ಲಿ ನಗುವಿನ ವಾತಾವರಣ ನಿರ್ಮಾಣ ಆಗುವಂತೆ ತೋರಿದೆ. ಅದಾಗ್ಯೂ ಪಂಚಾಯ್ತಿ ಹೇಗಿರಲಿದೆ ಎಂಬ ಕುತೂಹಲವೂ ಪ್ರೇಕ್ಷಕರಲ್ಲಿದೆ. ಸಂಪೂರ್ಣ ಸಂಚಿಕೆಗಾಗಿ ನೀವು ಸಂಜೆವರೆಗೂ ಕಾಯಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.