ETV Bharat / entertainment

ಸಿಂಹವನ್ನು ಕೂಡಿಹಾಕಿದ ’ಬಾಹುಬಲಿ‘: ಶೂಟಿಂಗ್​​​​​​​​ ಮುಗಿಯೋವರೆಗೂ ಹೊರಗೆ ಬರುವಂತಿಲ್ಲ ’ಪ್ರಿನ್ಸ್’​​ - SSMB 29

ಎಸ್.ಎಸ್.ರಾಜಮೌಳಿ ಶೇರ್ ಮಾಡಿರೋ ವಿಡಿಯೋ ನೆಟ್ಟಿಗರ ಗಮನವನ್ನು ವ್ಯಾಪಕವಾಗಿ ಸೆಳೆದಿದೆ.

SS Rajamouli, Mahesh Babu
ಎನ್​ಎಸ್​​ ರಾಜಮೌಳಿ, ಮಹೇಶ್​ ಬಾಬು (Photo: ETV Bharat)
author img

By ETV Bharat Entertainment Team

Published : Jan 25, 2025, 4:21 PM IST

ಟಾಲಿವುಡ್ ಸೂಪರ್‌ ಸ್ಟಾರ್ ಮಹೇಶ್ ಬಾಬು ಹಾಗೂ ಸ್ಟಾರ್ ಡೈರೆಕ್ಟರ್​​ ಎಸ್.ಎಸ್.ರಾಜಮೌಳಿ ಕಾಂಬಿನೇಷನ್​​ನಲ್ಲಿ ನಿರ್ಮಾಣಗೊಳ್ಳುತ್ತಿರೋ ಆ್ಯಕ್ಷನ್​​ ಸಿನಿಮಾ ಸಖತ್​ ಸದ್ದು ಮಾಡುತ್ತಿದೆ. 'SSMB 29' ಎಂಬ ತಾತ್ಕಾಲಿಕ ಶೀರ್ಷಿಕೆಯುಳ್ಳ ಸಿನಿಮಾಗೆ ಸಂಬಂಧಿಸಿದಂತೆ ನಿರ್ದೇಶಕರು ಇಂಟ್ರೆಸ್ಟಿಂಗ್​ ವಿಡಿಯೋ ಹಂಚಿಕೊಂಡಿದ್ದಾರೆ. ಜಕ್ಕಣ್ಣ ಶೇರ್ ಮಾಡಿರೋ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.​

ಎಸ್.ಎಸ್. ರಾಜಮೌಳಿ ತಮ್ಮ ಅಫೀಶಿಯಲ್​​ ಇನ್​ಸ್ಟಾಗ್ರಾಮ್​ನಲ್ಲಿ ಶಾರ್ಟ್ ವಿಡಿಯೋ ಶೇರ್ ಮಾಡಿದ್ದಾರೆ. ಸಿಂಹದ ಫೋಟೋ ನೋಡುತ್ತಾ ನಿಂತ ನಿರ್ದೇಶಕರು ಕ್ಯಾಮರಾಗೆ ಪಾಸ್​ಪೋರ್ಟ್ ತೋರಿಸಿದ್ದಾರೆ. ಕೂಡಲೇ ಸಿಂಹ ಬೋನ್​ನೊಳಗೆ ಬಂಧಿಯಾದಂತೆ ತೋರಿದೆ. ಸಿಂಹವನ್ನು ಬಂಧಿಸಿದಂತೆ ತೋರುವ ದೃಶ್ಯ ಹಂಚಿಕೊಂಡ ಅವರು, 'ಕ್ಯಾಪ್ಚರ್' ಎಂಬ ಕ್ಯಾಪ್ಷನ್​​ ನೀಡಿದ್ದಾರೆ.

ಪಾಸ್​ಪೋರ್ಟ್ ಯಾರದ್ದು? ಅಲ್ಲಿಗೆ, ಶೂಟಿಂಗ್​ ಪೂರ್ಣಗೊಳ್ಳೋವರೆಗೂ ನಾಯಕ ನಟ ಮಹೇಶ್​ ಬಾಬು ಎಲ್ಲೂ ಹೋಗುವಂತಿಲ್ಲ ಎಂಬುದನ್ನು ನಿರ್ದೇಶಕರು ಇಂಟ್ರೆಸ್ಟಿಂಗ್​ ವಿಡಿಯೋ ಮೂಲಕ ತಿಳಿಸಿದ್ದಾರೆ ಎಂದು ಅಭಿಮಾನಿಗಳು ಊಹಿಸಿದ್ದಾರೆ. ಮಹೇಶ್​ ಬಾಬು ಹೆಚ್ಚು ವಿದೇಶ ಪ್ರವಾಸ ಕೈಗೊಳ್ಳುವ ಭಾರತೀಯ ನಟ. ಹಾಗಾಗಿ ಈ ಪಾಸ್​ಪೋರ್ಟ್ ಅವರದ್ದೇ ಎಂದು ಅಭಿಮಾನಿಗಳು ಅಂದಾಜಿಸಿದ್ದಾರೆ.

ಸಿನಿಮಾ ಯಾವ ಮಟ್ಟಿಗೆ ಮೂಡಿ ಬರಬಹುದು? ಮಹೇಶ್​ ಬಾಬು ಅವರನ್ನು ಸಿಂಹಕ್ಕೆ ಹೋಲಿಸಿದ್ದಾರೆ. ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದ್ದು, ಸಿನಿಮಾ ಯಾವ ಮಟ್ಟಿಗೆ ಮೂಡಿ ಬರಬಹುದು ಎಂದು ಪ್ರೇಕ್ಷಕರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಈ ಪೋಸ್ಟ್​​ಗೆ ಮಹೇಶ್ ಬಾಬು ಮತ್ತು ಪ್ರಿಯಾಂಕಾ ಚೋಪ್ರಾ ಪ್ರತಿಕ್ರಿಯಿಸಿದ್ದಾರೆ.

ಸೆಲೆಬ್ರಿಟಿಗಳ ಪ್ರತಿಕ್ರಿಯೆ: ನಟಿ ಪ್ರಿಯಾಂಕಾ ಚೋಪ್ರಾ "ಫೈನಲಿ" (ನಗುವ ಎಮೋಜಿಯೊಂದಿಗೆ) ಎಂದು ಕಾಮೆಂಟ್ ಮಾಡಿದ್ರೆ, ಮಹೇಶ್​ ಬಾಬು ಒಮ್ಮೆ ಕಮಿಟ್​ ಆದ್ರೆ ನನ್ನ ಮಾತು ನಾನೇ ಕೇಳೋದಿಲ್ಲ ಎಂದು ತಿಳಿಸಿದ್ದಾರೆ. ಶೂಟಿಂಗ್​ ಸುತ್ತಲಿನ ಉತ್ಸಾಹ ದುಪ್ಪಟ್ಟಾಗಿದೆ.

ಈ ವಿಡಿಯೋ ಈಗ ಇಂಟರ್ನೆಟ್​ನಲ್ಲಿ ಟ್ರೆಂಡಿಂಗ್​ನಲ್ಲಿದೆ. ಅಭಿಮಾನಿಗಳು ಪ್ರತಿಕ್ರಿಯಿಸಿ, ಚಿತ್ರದ ಚಿತ್ರೀಕರಣ ಪ್ರಾರಂಭಿಸಲು ಸಿದ್ಧರಾಗಿದ್ದಾರೆಂದು ತಿಳಿಸಿದ್ದಾರೆ. ಮಹೇಶ್​​ ಬಾಬು ಸೆಟ್‌ಗೆ ಮರಳುವ ಸಮಯ ಬಂದಿದೆ ಎಂಬ ಕಾಮೆಂಟ್‌ಗಳು ಹರಿದು ಬಂದಿವೆ. ಹೀಗೆ ಚಿತ್ರದ ಅಪ್ಡೇಟ್ ಕೊಡುವಂತೆ ತಿಳಿಸಿದ್ದಾರೆ.

ಇದನ್ನೂ ಓದಿ: ಸುದೀಪ್​ ನಿರೂಪಣೆಯ ಕೊನೆ 'ಬಿಗ್​ ಬಾಸ್' ​​​​: ವೇದಿಕೆಗೆ ಕಿಚ್ಚು ಹಚ್ಚಿತು ಕಿಚ್ಚನ​ 'ಮ್ಯಾಕ್ಸಿಮಮ್' ಎಂಟ್ರಿ - ಗೆಲುವು ಯಾರಿಗೆ?

ಮಹೇಶ್​ ಬಾಬು ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ: ಬಾಲಿವುಡ್ - ಹಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಅವರು ಮಹೇಶ್ ಬಾಬು ಚಿತ್ರದ ಭಾಗವಾಗಲಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಅದರಂತೆ, ಅವರು ಇತ್ತೀಚೆಗೆ ಹೈದರಾಬಾದ್‌ಗೆ ಬಂದಿಳಿದರು. ನಟಿ ಈ ಸಿನಿಮಾಗಾಗಿಯೇ ಬಂದಿದ್ದಾರೆಯೇ ಎಂಬ ಪ್ರಶ್ನೆಗಳು ಉದ್ಭವಿಸಿದವು. ಆ ಬೆನ್ನಲ್ಲೇ ಪ್ರಿಯಾಂಕಾ ಈ ವಿಡಿಯೋಗೆ ಮಾಡಿರುವ ಕಾಮೆಂಟ್‌ನಿಂದಾಗಿ, ನಟಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ. ಮತ್ತೊಂದೆಡೆ, ಅವರು ಇತ್ತೀಚೆಗಷ್ಟೇ ಲುಕ್ ಟೆಸ್ಟ್ ಪೂರ್ಣಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: 'ಟಾಕ್ಸಿಕ್​'ನಲ್ಲಿ ರಾಕಿಂಗ್​​ ಸ್ಟಾರ್​ ಯಶ್​ಗೆ ಜೋಡಿಯಾದ ನಯನತಾರಾ: ದೃಢಪಡಿಸಿದ ನಟ ಅಕ್ಷಯ್​

ಚಿತ್ರದ ಕಥೆಯ ಬಗ್ಗೆ ಗಮನಿಸೋದಾದರೆ, ಬರಹಗಾರ ವಿಜಯೇಂದ್ರ ಪ್ರಸಾದ್ ಹಿಂದಿನ ಸಂದರ್ಶನವೊಂದರಲ್ಲಿ ಮಾತನಾಡಿ ರಾಜಮೌಳಿ ಭಾರತೀಯ ಚಲನಚಿತ್ರೋದ್ಯಮದಲ್ಲಿ ಈವರೆಗೆ ನೋಡಿರದ ಹೊಸ ಜಗತ್ತನ್ನು ಬಿಗ್ ಸ್ಕ್ರೀನ್​​​ ಮೇಲೆ ಅನಾವರಣಗೊಳಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು. ಹಾಗಾಗಿ ಸಿನಿಮಾ ಸುತ್ತಲಿನ ನಿರೀಕ್ಷೆಗಳು ಶಿಖರದಷ್ಟಿವೆ. ಅಮೆಜಾನ್ ಕಾಡಿನ ಹಿನ್ನೆಲೆಯಲ್ಲಿ ನಡೆಯುವ ಈ ಕಥೆಯಲ್ಲಿ ಹಲವು ವಿದೇಶಿ ನಟರು ಸಹ ಕಾಣಿಸಿಕೊಳ್ಳಲಿದ್ದಾರೆ. ದುರ್ಗಾ ಆರ್ಟ್ಸ್ ಅಡಿಯಲ್ಲಿ ಕೆ.ಎಲ್.ನಾರಾಯಣ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮಹೇಶ್ ಬಾಬು ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.