ETV Bharat / entertainment

'ದೇವರು ರುಜು ಮಾಡಿದನು': ಹೊಸ ಹೀರೋ ಜೊತೆ ಸಿಂಪಲ್ ಸುನಿ ಸಿನಿಮಾ ಘೋಷಣೆ - DEVARU RUJU MADIDANU CINEMA

ಸ್ಯಾಂಡಲ್​ವುಡ್​ನಲ್ಲಿ ಈಗಾಗಲೇ ಕೆಲವು ಹಿಟ್ ಚಿತ್ರಗಳನ್ನು ಮಾಡಿರುವ ಸಿಂಪಲ್ ಸುನಿ ಇನ್ನೊಂದು ಸಿನಿಮಾ ಘೋಷಣೆ ಮಾಡಿದ್ದಾರೆ.

devaru ruju madidanu cinema
ದೇವರು ರುಜು ಮಾಡಿದನು ಸಿನಿಮಾ (Cinema Team)
author img

By ETV Bharat Karnataka Team

Published : Oct 18, 2024, 12:09 PM IST

ಸಿನಿಮಾ ಪ್ರೇಮಿಗಳ ನಾಡಿಮಿಡಿತ ಅರಿತಿರುವ ಹಾಗೂ ನಮ್ಮ ನಡುವೆ ನಡೆಯುವ ಘಟನೆಯನ್ನು ನಿರ್ಮಾಪಕರಿಗೆ ಹೊರೆಯಾಗದೇ, ದೃಶ್ಯ ರೂಪಕ್ಕೆ ಇಳಿಸುವ ನಿರ್ದೇಶಕರಲ್ಲಿ ನಿಸ್ಸೀಮರಾದ ಸಿಂಪಲ್ ಸುನಿ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ.

ರಾಷ್ಟ್ರಕವಿ ಕುವೆಂಪು ಅವರ ಆಶೀರ್ವಾದದೊಂದಿಗೆ 'ದೇವರು ರುಜು ಮಾಡಿದನು' ಎಂಬ ರಸವತ್ತಾದ ಪದ್ಯದ ಸಾಲನ್ನು ತಮ್ಮ ಮುಂದಿನ ಚಿತ್ರದ ಶೀರ್ಷಿಕೆಯಾಗಿಸಿದ್ದಾರೆ. ಇದರ ಮೂಲಕ ಬೆಳ್ಳಿ ಪರದೆಗೆ ಹೊಸ ನಾಯಕನನ್ನು ಪರಿಚಯಿಸಿದ್ದಾರೆ. ರಂಗಭೂಮಿ ಕಲಾವಿದ, ಅಪಾರ ಸಿನಿಮಾ ಪ್ರೀತಿ ಹೊಂದಿರುವ ವಿರಾಜ್ ಹೀರೋ ಆಗಿ ಸ್ಯಾಂಡಲ್​ವುಡ್​​ಗೆ ಅಡಿ ಇಡುತ್ತಿದ್ದಾರೆ. ಕೈಯಲ್ಲಿ ಗಿಟಾರ್ ಹಿಡಿದು, ರಕ್ತಸಿಕ್ತರಾಗಿ ಕಾಣಿಸಿಕೊಂಡಿರುವ ವಿರಾಜ್​ಗೆ ಸುನಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸುನಿ ಅವರ ಕಥನ, ವಚನ, ರಚನೆ ಹಾಗೂ ನಿರ್ದೇಶನ ಈ ಚಿತ್ರಕ್ಕಿದೆ.

ಪುಟ್ಟದೊಂದು ಝಲಕ್ ಮೂಲಕ ಹೀರೋ ಹಾಗೂ ಟೈಟಲ್ ರಿವೀಲ್ ಮಾಡಲಾಗಿದೆ. ಈಗಾಗಲೇ ನಾಯಕ ವಿರಾಜ್ ಚಿತ್ರದ ಟೀಸರ್ ಚಿತ್ರೀಕರಣ ಮಾಡಲಾಗಿದೆ. ರಕ್ತಚರಿತ್ರೆ ಜೊತೆಗೆ ಸಂಗೀತದ ಕಥೆಯನ್ನು ದೇವರು ರುಜು ಮಾಡಿದನು ಸಿನಿಮಾ ಮೂಲಕ ಸುನಿ ತೆರೆಯಲ್ಲಿ ಅನಾವರಣ ಮಾಡಲು ಹೊರಟಿದ್ದಾರೆ.

ಇದನ್ನೂ ಓದಿ: ಕನ್ನಡ ಬಿಗ್ ಬಾಸ್​ ಶೋಗೆ ಮತ್ತೊಂದು ಸಂಕಷ್ಟ: ಸಾಗರದ ನ್ಯಾಯಾಲಯದಿಂದ ತುರ್ತು ನೋಟಿಸ್

ಗ್ರೀನ್ ಹೌಸ್ ಮೂವೀಸ್ ಬ್ಯಾನರ್​ನಡಿ ಮೂಡಿ ಬರುತ್ತಿರುವ 'ದೇವರು ರುಜು ಮಾಡಿದನು' ಸಿನಿಮಾವನ್ನು ಗೋವಿಂದ್ ರಾಜ್ ಸಿಟಿ ನಿರ್ಮಾಣ ಮಾಡುತ್ತಿದ್ದಾರೆ. ಜೆಜೆ ಮತ್ತು ಜೇಡ್ ಸ್ಯಾಂಡಿ ಸಂಗೀತ ನಿರ್ದೇಶನ, ಸಂತೋಷ್ ರೈ ಪತಾಜಿ ಛಾಯಾಗ್ರಹಣ, ವಿನಯ್ ಸಂಕಲನ ಚಿತ್ರಕ್ಕಿದೆ.

ಬೆಂಗಳೂರು, ಉತ್ತರ ಕನ್ನಡ ಹಾಗೂ ಗೋವಾ ಸುತ್ತಮುತ್ತ ದೇವರು ರುಜು ಮಾಡಿದನು ಚಿತ್ರದ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಇದೇ ತಿಂಗಳ 20ರಂದು ಸಿನಿಮಾದ ಮುಹೂರ್ತ ನಡೆಯಲಿದ್ದು, ಆ ನಂತರ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ.

ಇದನ್ನೂ ಓದಿ: 'ಬಘೀರ' ಚಿತ್ರದಲ್ಲಿ 'ರುಧಿರ'ನಾಗಿ ಎಂಟ್ರಿ ಕೊಟ್ಟ ರೋರಿಂಗ್ ಸ್ಟಾರ್ ಶ್ರೀಮುರಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.