'ಮಾರ್ಟಿನ್'. ಅದ್ದೂರಿ ಮೇಕಿಂಗ್ ಹಾಗೂ ಟ್ರೇಲರ್ನಿಂದಲೇ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಸೌಂಡ್ ಮಾಡುತ್ತಿರುವ ಸಿನಿಮಾ. ಪೊಗರು ಹುಡುಗ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎರಡು ವಿಭಿನ್ನ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಿರುವ ಬಹುನಿರೀಕ್ಷಿತ ಸಿನಿಮಾ ಬಿಡುಗಡೆಗೆ ಕೌಂಟ್‌ಡೌನ್ ಶುರುವಾಗಿದೆ. ಈಗಾಗಲೇ ಮಾರ್ಟಿನ್ ಚಿತ್ರದ ಟೈಟಲ್ ಸಾಂಗ್ ರಿಲೀಸ್ ಆಗಿದ್ದು, ಧ್ರುವ ಸರ್ಜಾ ಅಭಿಮಾನಿ ಬಳಗದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದೆ.
ಇದೀಗ ಮಾರ್ಟಿನ್ ಚಿತ್ರತಂಡ ಚಿತ್ರದ ಅದ್ದೂರಿ ಮೇಕಿಂಗ್ಗಳನ್ನು ರಿವೀಲ್ ಮಾಡುತ್ತಿದೆ. ಮಾರ್ಟಿನ್ ಚಿತ್ರದ ಕ್ಯಾಮರಾ ಹಿಂದೆ ಎಷ್ಟು ತಂತ್ರಜ್ಞನರು ಹಾಗೂ ಕಾರ್ಮಿಕರು ಕೆಲಸ ಮಾಡಿದ್ದಾರೆ ಅನ್ನೋದು ಗೊತ್ತಾಗುತ್ತದೆ. ನಿರ್ದೇಶಕ ಎ.ಪಿ.ಅರ್ಜುನ್ ಆ್ಯಕ್ಷನ್ ಸನ್ನಿವೇಶಗಳನ್ನು ಧ್ರುವ ಸರ್ಜಾ ಕೈಯಲ್ಲಿ ಮಾಡಿಸಿರೋ ಪರಿ ನಿಜಕ್ಕೂ ಥ್ರಿಲ್ಲಿಂಗ್!. ಕಾರು ಚೇಸಿಂಗ್, ಅದ್ದೂರಿ ಸೆಟ್ಟುಗಳು, ಸಹ ಕಲಾವಿದರ ನೋಟ ಈ ಮೇಕಿಂಗ್ ವಿಡಿಯೋಗಳಲ್ಲಿ ಅನಾವರಣಗೊಂಡಿವೆ. ಧ್ರುವ ಸರ್ಜಾ, ಅಚ್ಯುತ್ ಕುಮಾರ್, ಸಾಹಸ ನಿರ್ದೇಶಕರಾದ ರವಿಮರ್ಮ, ರಾಮ ಲಕ್ಷಣ್, ಕ್ಯಾಮರಾಮ್ಯಾನ್ ಸತ್ಯ ಹೆಗ್ಡೆ ಸೇರಿದಂತೆ ಸಾಕಷ್ಟು ಸಹ ಕಲಾವಿದರ ದಂಡು ಇದರಲ್ಲಿದೆ.
ಈ ಸಿನಿಮಾದ ಶೂಟಿಂಗ್ ಆಗಿ ಎಡಿಟಿಂಗ್ ಅಂತಾ ಕುಳಿತಾಗ ಸಂಕಲನಕಾರರಾದ ಕೆ.ಎಂ.ಪ್ರಕಾಶ್ ಹಾಗೂ ಮಹೇಶ್ ರೆಡ್ಡಿ ಚಿತ್ರದ ಮೇಕಿಂಗ್ ವಿಡಿಯೋಗಳನ್ನು ನೋಡಿ ಮೊದಲು ಶಾಕ್ ಆಗಿದ್ರಂತೆ. ಈ ಚಿತ್ರದ ಮೇಕಿಂಗ್, ಧ್ರುವ ಸರ್ಜಾ ನಟನೆ, ನಿರ್ಮಾಪಕ ಉದಯ್ ಕೆ.ಮೆಹ್ತಾ ಅವರ ಸಿನಿಮಾ ಫ್ಯಾಷನ್ ಬಗ್ಗೆ ಸಂಕಲನಕಾರರಾದ ಕೆ.ಎಂ.ಪ್ರಕಾಶ್ ಹಾಗೂ ಮಹೇಶ್ ರೆಡ್ಡಿ ಮಾತನಾಡಿದ್ದಾರೆ.
ಇನ್ನೂ ಮಾರ್ಟಿನ್ ಚಿತ್ರ ಔಟ್ ಆ್ಯಡ್ ಔಟ್ ಸಾಹಸಮಯ ಚಿತ್ರವಾಗಿದ್ದು ದೇಶ ಪ್ರೇಮ, ಮುದ್ದಾದ ಲವ್ ಸ್ಟೋರಿ ಹಾಗೂ ಕೌಟುಂಬಿಕ ಕಥೆಯನ್ನೊಳಗೊಂಡಿದೆ. ಧ್ರುವಗೆ ಜೋಡಿಯಾಗಿ ವೈಭವಿ ಶಾಂಡಿಲ್ಯಾ ನಟಿಸಿದ್ದು ಅನ್ವೇಶಿ ಜೈನ್, ನಿಕಿತಿನ್ ಧೀರ್ ಸೇರಿದಂತೆ ದೊಡ್ಡ ತಾರಾಬಳಗವಿದೆ. ಬೆಂಗಳೂರು ಹಾಗೂ ಕಾಶ್ಮೀರದ ಸುಂದರ ತಾಣಗಳಲ್ಲಿ ಶೂಟಿಂಗ್ ನಡೆಸಲಾಗಿದೆ. ಕಾಶ್ಮೀರದ ಐಸ್‌ವಾರ್ ಸಾಹಸ ದೃಶ್ಯಗಳ ಜೊತೆಗೆ ರೋಮಾಂಚನಕಾರಿ ಸ್ಕೇಟಿಂಗ್ ಆ್ಯಕ್ಷನ್ ಸೀನ್‌ಗಳು ಚಿತ್ರದಲ್ಲಿದೆ. ಕ್ಲೈಮ್ಯಾಕ್ಸ್ ಸನ್ನಿವೇಶಗಳನ್ನು ಸಾಹಸ ನಿರ್ದೇಶಕರಾದ ರವಿವರ್ಮ ಹಾಗೂ ರಾಮ್ ಲಕ್ಷ್ಮಣ್ ಕಂಪೋಸ್ ಮಾಡಿದ್ದಾರೆ.
ಇದನ್ನೂ ಓದಿ: 'ಕಾಂತಾರ'ಗೆ ಅತ್ಯುತ್ತಮ ಮನರಂಜನಾ ಸಿನಿಮಾ ರಾಷ್ಟ್ರಪ್ರಶಸ್ತಿ ಪ್ರದಾನ
ಧ್ರುವ ಸರ್ಜಾ ಮಾವ ಅಂದ್ರೆ ಅರ್ಜುನ್ ಸರ್ಜಾ ಈ ಸಿನಿಮಾದ ಕಥೆ ಬರೆದಿದ್ದು, ಎ.ಪಿ.ಅರ್ಜುನ್ ನಿರ್ದೇಶನ ಮಾಡಿದ್ದಾರೆ. ತೆಲುಗಿನ ಹೆಸರಾಂತ ಮ್ಯೂಸಿಕ್ ಡೈರೆಕ್ಟರ್ ಮಣಿಶರ್ಮಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನೊಂದು ವಿಶೇಷತೆಯೆಂದರೆ, ಸಂಗೀತ ನಿರ್ದೇಶಕ ರವಿ ಬಸ್ರೂರ್ ಈ ಚಿತ್ರತಂಡದ ಜೊತೆ ಕೈಜೋಡಿಸಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ, ಮಹೇಶ್ ರೆಡ್ಡಿ ಸಂಕಲನ ಈ ಚಿತ್ರಕ್ಕಿದೆ.
ಇದನ್ನೂ ಓದಿ: 'ಅತ್ಯುತ್ತಮ ನಟ' ರಾಷ್ಟ್ರಪ್ರಶಸ್ತಿ ಸ್ವೀಕರಿಸಿದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ: ಕರ್ನಾಟಕ ಜನತೆಗೆ ಅರ್ಪಣೆ
ಕನ್ನಡದಲ್ಲಿ ಕೃಷ್ಣನ್ ಲವ್ ಸ್ಟೋರಿ, ಬಚ್ಚನ್, ಬ್ರಹ್ಮಚಾರಿ ಅಂತಹ ಸಿನಿಮಾಗಳನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿರುವ ನಿರ್ಮಾಪಕ ಉದಯ್ ಮೆಹ್ತಾ ಮೊದಲ ಬಾರಿಗೆ ಲೆಕ್ಕಾಚಾರ ಹಾಕಿ ಪ್ಯಾನ್ ವರ್ಲ್ಡ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ 3000 ಚಿತ್ರಮಂದಿರಗಳಲ್ಲಿ ಅಕ್ಟೋಬರ್ 11ರಂದು ಮಾರ್ಟಿನ್ ಬಿಡುಗಡೆ ಆಗಲಿದೆ. ಇಷ್ಟೆಲ್ಲಾ ಕ್ರೇಜ್ ಹುಟ್ಟಿಸಿರೋ ಧ್ರುವ ಸರ್ಜಾ ಮಾರ್ಟಿನ್ ಅಬ್ಬರಕ್ಕೆ ಅಭಿಮಾನಿಗಳ ರೆಸ್ಪಾನ್ಸ್ ಹೇಗಿರುತ್ತದೆ ಅನ್ನೋದನ್ನು ಕಾದುನೋಡಬೇಕಿದೆ.