ETV Bharat / entertainment

ರಶ್ಮಿಕಾ ಬೆನ್ನಲ್ಲೇ ಅಪಾಯದಿಂದ ಪಾರಾದ 'ಮಾರ್ಟಿನ್'​ ಚಿತ್ರತಂಡ: ಧ್ರುವ ಸರ್ಜಾ ಹೇಳಿದ್ದಿಷ್ಟು! - ಧ್ರುವ ಸರ್ಜಾ

ಹವಾಮಾನ ವೈಪರೀತ್ಯದಿಂದಾಗಿ ವಿಮಾನ ಪ್ರಯಾಣದ ವೇಳೆ ಉಂಟಾದ ಕಹಿ ಘಟನೆಯ ಬಗ್ಗೆ ಧ್ರುವ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Dhruva Sarja and Martin team
'ಮಾರ್ಟಿನ್'​ ಚಿತ್ರತಂಡ
author img

By ETV Bharat Karnataka Team

Published : Feb 20, 2024, 7:06 AM IST

Updated : Feb 20, 2024, 6:16 PM IST

'ಮಾರ್ಟಿನ್​​' ಕನ್ನಡ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಆ್ಯಕ್ಷನ್​ ಪ್ರಿನ್ಸ್​​ ಧ್ರುವ ಸರ್ಜಾ ಅಭಿನಯದ ಈ ಸಿನಿಮಾ ಮೇಲೆ ಸಾಕಷ್ಟು ಕುತೂಹಲವಿದೆ. ಇದೀಗ 'ಮಾರ್ಟಿನ್​​' ಚಿತ್ರ ತಂಡ ವಿಮಾನ ಪ್ರಯಾಣದ ವೇಳೆ ಅನುಭವಿಸಿದ ಆತಂಕದ ಘಟನೆಯನ್ನು ವಿಡಿಯೋ ಮೂಲಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಹವಾಮಾನ ವೈಪರೀತ್ಯದಿಂದಾಗಿ ಧ್ರುವ ಸರ್ಜಾ ಸೇರಿ ಮಾರ್ಟಿನ ಚಿತ್ರ ತಂಡ ಮತ್ತು ಬೇರೆ ಪ್ರಯಾಣಿಕರಿದ್ದ ವಿಮಾನಕ್ಕೆ ಅಪಾಯ ಎದುರಾಗಿತ್ತು. ಈ ವೇಳೆ ಪೈಲಟ್ ಸಮಯ ಪ್ರಜ್ಞೆಯಿಂದ ಎಲ್ಲರೂ ಸುರಕ್ಷಿತವಾಗಿದ್ದಾರೆ.

ನಾಯಕ ನಟ ಧ್ರುವ ಸರ್ಜಾ ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಮಾರ್ಟಿನ್​​ ತಂಡವನ್ನು ಕಾಣಬಹುದು. ''ಇಂದು ಆಗಿದ್ದು ಬಹಳ ಕೆಟ್ಟ ಅನುಭವ. ಇಡೀ ಜೀವನದಲ್ಲೇ ಇಂತಹ ವರ್ಸ್ಟ್ ಎಕ್ಸ್​​​ಪೀರಿಯನ್ಸ್ ಆಗಿರಲಿಲ್ಲ. ದೇವರಿಗೆ ಬಹಳ ಧನ್ಯವಾದಗಳು. ಪೈಲಟ್​ಗೆ ಧನ್ಯವಾದಗಳು, ನಾವು ಸುರಕ್ಷಿತವಾಗಿದ್ದೇವೆ. ಜೀ ಶ್ರೀರಾಮ್​​, ಜೈ ಆಂಜನೇಯ'' ಎಂದು ತಿಳಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಹವಾಮಾನ ವೈಪರೀತ್ಯದಿಂದ ವಿಮಾನ ಹಾರಾಟಕ್ಕೆ ತೊಂದರೆಯಾಗಿದೆ. ಆದ್ರೆ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್​ ಮಾಡುವಲ್ಲಿ ಪೈಲಟ್​ ಯಶಸ್ವಿಯಾಗಿದ್ದಾರೆ.

ಸೋಷಿಯಲ್​ ಮೀಡಿಯಾಗಳಲ್ಲಿ ಶೇರ್ ಮಾಡಲಾಗುತ್ತಿರುವ ಮಾಹಿತಿ ಪ್ರಕಾರ, ಸೋಮವಾರದಂದು ನವದೆಹಲಿಯಿಂದ ಶ್ರೀನಗರಕ್ಕೆ ಸಂಜೆ 5:2 ಕ್ಕೆ ಟೇಕ್ ಆಫ್ ಆಗಿದ್ದ ವಿಮಾನ ಹವಾಮಾನ ಸಮಸ್ಯೆ ಎದುರಿಸಿದೆ. ಚಂಡಮಾರುತ ಹಿನ್ನೆಲೆ ವಿಮಾನ ಹಾರಾಟಕ್ಕೆ ತೊಂದರೆಯಾಗಿದೆ. ಅದಾಗ್ಯೂ ಸೇಫ್​ ಲ್ಯಾಂಡ್​​ ಮಾಡುವಲ್ಲಿ ಪೈಲಟ್​ ಯಶಸ್ವಿಯಾಗಿದ್ದಾರೆ. 'ಮಾರ್ಟಿನ್'​ ಚಿತ್ರೀಕರಣಕ್ಕಾಗಿ ತಂಡ ಶ್ರೀನಗರಕ್ಕೆ ಪ್ರಯಾಣ ಬೆಳೆಸಿತ್ತು. ಎ.ಪಿ ಅರ್ಜುನ್​​ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಇದ್ದ ವಿಮಾನ ತುರ್ತು ಭೂಸ್ಪರ್ಶ: 'ಪ್ರಾಣಾಪಾಯದಿಂದ ಪಾರಾದೆ' ಎಂದ ನಟಿ

ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರೂ ಕೂಡ ಇದೇ ರೀತಿಯ ಸಮಸ್ಯೆ ಎದುರಿಸಿದ್ದರು. ಶೋ ಒಂದರ ಶೂಟಿಂಗ್​ಗಾಗಿ ರಶ್ಮಿಕಾ ಮಂದಣ್ಣ ಮುಂಬೈಗೆ ತೆರಳಿದ್ದರು. ತಮ್ಮ ಕೆಲಸವನ್ನು ಪೂರ್ಣಗೊಳಿಸಿ, ಹೈದರಾಬಾದ್​ಗೆ ಮರಳಲು ವಿಮಾನ ಹತ್ತಿದ್ದಾರೆ. ನಟಿ ಶ್ರದ್ಧಾ ದಾಸ್ ಅವರೂ ಕೂಡ ರಶ್ಮಿಕಾ ಅವರ ಜೊತೆ ಇದ್ದರು. ಇವರುಗಳು ಪ್ರಯಾಣಿಸುತ್ತಿದ್ದ ವಿಮಾನ ತಾಂತ್ರಿಕ ಸಮಸ್ಯೆಗೆ ಒಳಗಾಗಿದೆ. ಈ ಹಿನ್ನೆಲೆ, ಮುಂಬೈ ಏರ್​ಪೋರ್ಟ್​​ಗೆ ವಾಪಸ್​ ಬಂದು ವಿಮಾನ ತುರ್ತು ಭೂಸ್ಪರ್ಶ ಮಾಡಿತ್ತು. ಈ ವಿಚಾರವನ್ನು ಸ್ವತಃ ಪುಷ್ಪ ನಟಿ ರಶ್ಮಿಕಾ ತಮ್ಮ ಇನ್​ಸ್ಟಾಗ್ರಾಮ್ ಸ್ಟೋರಿನಲ್ಲಿ ಹಂಚಿಕೊಂಡಿದ್ದರು. "ಇಂದು ಸಾವಿನಿಂದ ಪಾರಾಗಿದ್ದೇವೆ" ಎಂದು ಬರೆದುಕೊಂಡಿದ್ದರು. ಇದು ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಶಾಕ್​ ನೀಡಿತ್ತು. ಜೊತೆಗೆ, ನಟಿ ಸುರಕ್ಷಿತವಾಗಿದ್ದಾರೆಂದು ತಿಳಿದು ಸಮಾಧಾನ ಮಾಡಿಕೊಂಡಿದ್ದರು.

ಇದನ್ನೂ ಓದಿ: ಕೆರೆಬೇಟೆ ಸಿನಿಮಾಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಸಾಥ್

Last Updated : Feb 20, 2024, 6:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.