ETV Bharat / entertainment

ಚುನಾವಣೆ, ಐಪಿಎಲ್​ ಅಬ್ಬರದ ನಡುವೆಯೂ ಪ್ರೇಕ್ಷಕರ ಮನಗೆದ್ದ 'ಯುವ' - Yuva Movie

ಯುವ ರಾಜ್​ಕುಮಾರ್ ಅಭಿನಯದ ಚೊಚ್ಚಲ ಸಿನಿಮಾ 'ಯುವ' ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಚಿತ್ರತಂಡವು ರಾಜ್ಯದ ವಿವಿಧ ನಗರಗಳಿಗೆ ಭೇಟಿ ನೀಡುತ್ತಿದೆ.

yuva movie
ಚುನಾವಣೆ, ಐಪಿಎಲ್​ ಅಬ್ಬರದ ನಡುವೆಯೂ 'ಯುವ' ಸಿನಿಮಾಗೆ ಭರ್ಜರಿ ​ರೆಸ್ಪಾನ್ಸ್​
author img

By ETV Bharat Karnataka Team

Published : Apr 1, 2024, 6:10 PM IST

ಇಂದಿನ ದಿನಮಾನಗಳಲ್ಲಿ ಕನ್ನಡ ಸಿನಿಮಾಗಳ ಪರಿಸ್ಥಿತಿ ಕಷ್ಟಕರವಾಗಿದೆ. ಚಿತ್ರಮಂದಿರಗಳತ್ತ ಪ್ರೇಕ್ಷಕರನ್ನು ಸೆಳೆಯುವುದು ದೊಡ್ಡ ಸವಾಲೆಂದೇ ಹೇಳಬಹುದು. ಸ್ಟಾರ್ ನಟರ ಸಿನಿಮಾ ಬಿಡುಗಡೆಯಾದಾಗ ಸಾಮಾನ್ಯವಾಗಿ ಥಿಯೇಟರ್​ಗಳು ಕೆಲದಿನಗಳ ಮಟ್ಟಿಗಾದರೂ ಫುಲ್​ ಆಗುತ್ತವೆ. ಆದರೆ, ಹೊಸ ಪ್ರತಿಭೆಗಳು ಚಿತ್ರಗಳಿಗೆ ಪ್ರೇಕ್ಷಕರ ಕೊರತೆ ಸಾಮಾನ್ಯ ಎಂಬಂತಾಗಿದೆ. ಇದೆಲ್ಲದರ ನಡುವೆ ಇತ್ತೀಚೆಗೆ ತೆರೆಕಂಡ 'ಯುವ' ಸಿನಿಮಾ ಯಶಸ್ಸು ಸಾಧಿಸಿದೆ.

ಕಳೆದ ಶುಕ್ರವಾರ ಬಿಡುಗಡೆಯಾದ 'ಯುವ' ಇತರ ಭಾಷಾ ಚಿತ್ರಗಳ ಪೈಪೋಟಿ ನಡುವೆಯೂ ವಿಜಯಪಥದಲ್ಲಿ ಸಾಗುತ್ತಿದೆ. ಯುವ ರಾಜ್​ಕುಮಾರ್ ಅಭಿನಯದ ಚೊಚ್ಚಲ ಸಿನಿಮಾ ಇದಾಗಿದ್ದು, ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. 'ಯುವ'ನನ್ನು ಮನೆ ಮಂದಿ ಸಮೇತ ಹೆಚ್ಚೆಚ್ಚು ಜನರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

'ಯುವ'ಗೆ ಭರ್ಜರಿ ಓಪನಿಂಗ್​​: ಮೊದಲ ದಿನವೇ ಕಲೆಕ್ಷನ್ ವಿಚಾರದಲ್ಲಿ ಕಮಾಲ್ ಮಾಡಿದ್ದ ಸಿನಿಮಾ, 275ಕ್ಕೂ ಹೆಚ್ಚು ಶೋಗಳಲ್ಲಿ ಪ್ರದರ್ಶನಗೊಂಡಿತ್ತು. ಆರಂಭಿಕ ದಿನವೇ ಬಾಕ್ಸ್ ಆಫೀಸ್​​ನಲ್ಲಿ 2 ಕೋಟಿ 72 ಲಕ್ಷ ರೂ. ಕೊಳ್ಳೆ ಹೊಡೆದಿದೆ ಎನ್ನಲಾಗಿದೆ. ಎರಡನೇ ದಿನ 1 ಕೋಟಿ 31 ಲಕ್ಷ ರೂ. ವಹಿವಾಟು ಮಾಡಿದೆಯಂತೆ. ಮೂರನೇ ದಿನ ಅಂದರೆ ಕಳೆದ ಭಾನುವಾರದಂದು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾದ ಚಿತ್ರ, ಅಂದಾಜು 2 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನುತ್ತಿದೆ ಗಾಂಧಿನಗರದ ಲೆಕ್ಕಾಚಾರ.

ಚುನಾವಣೆ, ಐಪಿಎಲ್​ ನಡುವೆಯೂ ಸಕ್ಸಸ್​: ರಾಜ್ಯದಲ್ಲಿ ಸದ್ಯ ಬರ ಮತ್ತು ಬಿಸಿಲಿನ ಅಬ್ಬರವಿದೆ. ಇದರೊಂದಿಗೆ ಲೋಕಸಭೆ ಚುನಾವಣೆ ಕಾವು ಕೂಡಾ ಜೋರಾಗಿದೆ. ಅಲ್ಲದೆ, ಇಂಡಿಯನ್​ ಪ್ರೀಮಿಯರ್​ ಲೀಗ್​ ಕ್ರಿಕೆಟ್​ ಟೂರ್ನಿಯೂ ನಡೆಯುತ್ತಿದೆ. ಶಾಲಾ ಮಕ್ಕಳಿಗೆ ಪರೀಕ್ಷೆಗಳು ಬೇರೆ. ಇದಲ್ಲದೆ, ಬಾಲಿವುಡ್​ ತೆಲುಗು ಹಾಗೂ ಮಲಯಾಳಂ ಚಿತ್ರಗಳೂ ತೆರೆಕಂಡಿವೆ. ಇದೆಲ್ಲದರ ನಡುವೆಯೂ ಯುವ ಚಿತ್ರ ಸಿನಿಪ್ರಿಯರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದೆ. ಮೂರು ದಿನಕ್ಕೆ 7.5 ಕೋಟಿ ರೂ. ಬಾಚಿಕೊಂಡಿದೆ.

ಚಿತ್ರತಂಡದ ಪ್ರವಾಸ: ಯಶಸ್ಸಿನ ಜೋಶ್​ನಲ್ಲೇ ಚಿತ್ರತಂಡ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದೆ. ನಟ ಯುವ ರಾಜ್​ಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್​​ರಾಮ್ ಚಿತ್ರಮಂದಿರಗಳಿಗೆ ಭೇಟಿ ನೀಡುತ್ತಿದ್ದಾರೆ. ನಿನ್ನೆ ಬೆಂಗಳೂರಿನ ಸಿದ್ದೇಶ್ವರ ಚಿತ್ರಮಂದಿರ, ಬಾಲಾಜಿ, ವೆಂಕಟೇಶ್ವರ ಚಿತ್ರಮಂದಿಗಳಿಗೆ ಯುವ ರಾಜ್​ಕುಮಾರ್, ನಿರ್ದೇಶಕ ಸಂತೋಷ್ ಆನಂದರಾಮ್ ಸೇರಿ ಚಿತ್ರತಂಡ ಭೇಟಿ ನೀಡಿದ್ದು, ಸಿನಿಮಾಕ್ಕೆ ಪ್ರತಿಕ್ರಿಯೆ ನೋಡಿ ದಿಲ್ ಖುಷ್ ಆಗಿದ್ದಾರೆ.

ರಾಮನಗರ, ಚನ್ನಪಟ್ಟಣ, ಮಂಡ್ಯ, ಮೈಸೂರು, ಹಾಸನ, ಬೆಳಗಾವಿ, ಗದಗ ಹಾಗೂ ಹುಬ್ಬಳಿಯಲ್ಲಿನ ಪ್ರಮುಖ ಚಿತ್ರಮಂದಿರಗಳಿಗೂ ಯುವ ತಂಡ ಭೇಟಿ ನೀಡಲಿದೆ. ಬುಧವಾರ ದಾವಣಗೆರೆ, ಚಿತ್ರದುರ್ಗ, ಶಿರಾ ಹಾಗೂ ತುಮಕೂರು ನಗರಗಳಿಗೂ ಭೇಟಿ ನೀಡುವ ಯೋಜನೆಯಲ್ಲಿ ಚಿತ್ರತಂಡವಿದೆ.

ಇದನ್ನೂ ಓದಿ: ಸಾಗರ್ ಪುರಾಣಿಕ್ ನಿರ್ದೇಶನದ ‘ವೆಂಕ್ಯಾ’ ಚಿತ್ರಕ್ಕೆ ಶಿಮ್ಲಾ ಸುಂದರಿ ರೂಪಾಲಿ ಎಂಟ್ರಿ - roopali sood entry for venkya

ETV Bharat Logo

Copyright © 2024 Ushodaya Enterprises Pvt. Ltd., All Rights Reserved.