ಹೈದರಾಬಾದ್: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಲಂಡನ್ನ ಸಣ್ಣ ಪ್ರವಾಸ ಮುಗಿಸಿ ಮಂಗಳವಾರ ಮುಂಬೈಗೆ ಬಂದಿಳಿದಿದ್ದಾರೆ. ಬಿಎಎಫ್ಟಿಎ ಫಿಲ್ಮ್ ಆವಾರ್ಡ್ಸ್ 2024ನಲ್ಲಿ ನಿರೂಪಕಿಯಾಗಿ ಮೊದಲ ಬಾರಿಗೆ ಮಿಂಚುವ ಮೂಲಕ ಎಲ್ಲರ ಗಮನ ಸೆಳೆದಿದ್ದ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ತಮ್ಮ ಅದ್ವುತ ಲುಕ್ನಿಂದ ಗಮನ ಸೆಳೆದರು.
ಭಾರತದಿಂದ ಮೊದಲ ಬಾರಿಗೆ ಬಿಎಎಫ್ಟಿಎ ಫಿಲ್ಮ್ ಅವಾರ್ಡ್ಸ್ನಲ್ಲಿ ನಿರೂಪಣೆಯಲ್ಲಿ ಭಾಗಿಯಾದ ಖ್ಯಾತಿ ಸದ್ಯ ದೀಪಿಕಾ ಪಾಲಾಗಿದೆ. ಅವರು ಮುಂಬೈನಲ್ಲಿ ಬಂದಿಳಿದ ವಿಡಿಯೋವನ್ನು ಪ್ಯಾಪಾರಾಜಿಗಳು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಟಿ ನೀಲಿ ಬಣ್ಣದ ಕ್ರೀಡಾ ಉಡುಪಿನ ಜೊತೆಗೆ ಕಂದು ಬಣ್ಣದ ಓವರ್ಕೋಟ್ ಧರಿಸಿದ್ದು, ಕಪ್ಪು ಗಾಗಲ್ಸ್ ಮತ್ತು ವೈಟ್ ಸ್ನಿಕರ್ಸ್ ಜೊತೆಗೆ ಸ್ಟೈಲಿಶ್ ಆಗಿ ಕಂಗೊಳಿಸಿದ್ದಾರೆ.
ಬಿಎಫ್ಟಿಎ ಪ್ರಶಸ್ತಿ ಸಮಾರಂಭದಲ್ಲಿ ಗೋಲ್ಡನ್ ಮತ್ತು ಸಿಲ್ವರ್ನ ಶೈನಿ ಸಿಕ್ವೆನ್ಸ್ ಸ್ಯಾರಿಯಲ್ಲಿ ನಟಿ ಮಿಂಚಿದ್ದರು. ಈ ಸೀರೆಯನ್ನು ಖ್ಯಾತ ಡಿಸೈನರ್ ಆದ ಸಬ್ಯಸಾಚಿ ವಿನ್ಯಾಸ ಮಾಡಿದ್ದರು. ಕಣ್ಣಿನ ಅಲಂಕಾರಕ್ಕೆ ಹೆಚ್ಚು ಒತ್ತು ನೀಡಿದ್ದ ನಟಿ ಕನಿಷ್ಠ ಮೇಕಪ್ ಲುಕ್ ನೊಂದಿಗೆ ಮೆಸ್ಸಿ ಬನ್ ಹಾಕಿ ಕೂದಲನ್ನು ಕಟ್ಟಿದ್ದರು. ತಮ್ಮ ಅಲಂಕಾರಕ್ಕೆ ತಕ್ಕಂತೆ ಕಿವಿಯೋಲೆ ಮೂಲಕ ಗಮನ ಸೆಳೆದರು. ಗಾಲಾದ ಬಳಿಕ ಈ ಪ್ರತಿಷ್ಠಿತ ಸಮಾರಂಭದಲ್ಲಿ ತಮ್ಮ ಸ್ಟನ್ನಿಂಗ್ ಲುಕ್ ಮೂಲಕ ಅಭಿಮಾನಿಗಳನ್ನು ಸೆಳೆದಿದ್ದಾರೆ.
ಚಿತ್ರದ ವಿಷಯದಲ್ಲಿ ಮಾತನಾಡುವುದಾದರೆ, ನಟಿ ದೀಪಿಕಾ ಹೃತಿಕ್ ರೋಷನ್ ಅಭಿನಯದ ಆ್ಯಕ್ಷನ್ ಥ್ರಿಲ್ಲರ್ ಚಿತ್ರ 'ಫೈಟರ್' ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಂಡಿದೆ. ಸಿದ್ದಾರ್ಥ್ ಆನಂದ್ ನಿರ್ದೇಶಿಸಿದ ಈ ಚಿತ್ರದಲ್ಲಿ ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್ ಮತ್ತು ಅಕ್ಷಯ್ ಒಬೆರಾಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿತ್ತು.
'ಕಲ್ಕಿ 2898 ಎಡಿ' ಚಿತ್ರದಲ್ಲಿ ನಟಿ ದೀಪಿಕಾ ಪ್ರಭಾಸ್ಗೆ ಜೊತೆಯಾಗಿ ನಟಿಸುತ್ತಿದ್ದಾರೆ. ವೈಜ್ಞಾನಿಕ ಕಾಲ್ಪನಿಕ ಸಾಹಸಮಯ ಚಿತ್ರ ಇದಾಗಿದ್ದು, ನಾಗ್ ಅಶ್ವಿನ್ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟ ಅಮಿತಾಬ್ ಬಚ್ಚನ್ ಕೂಡ ನಟಿಸುತ್ತಿದ್ದು, ಇದೇ ವರ್ಷ ಮೇ 9ರಂದು ಚಿತ್ರ ಬಿಡುಗಡೆಯಾಗಲಿದೆ. ಇದರ ಹೊರತಾಗಿ ರೋಹಿತ್ ಶೆಟ್ಟಿ ನಿರ್ದೇಶನದ 'ಸಿಂಗಂ ಎಗೈನ್' ಅಲ್ಲಿ ಕೂಡ ದೀಪಿಕಾ ಬಣ್ಣ ಹಚ್ಚಿದ್ದಾರೆ.
ಇದನ್ನೂ ಓದಿ: BAFTA ಫಿಲ್ಮ್ ಅವಾರ್ಡ್ಸ್ 2024: ಶ್ವೇತ ವರ್ಣದ ಸಾರಿಯಲ್ಲಿ ಭರ್ಜರಿ ಮಿಂಚಿದ ದೀಪಿಕಾ ಪಡುಕೋಣೆ