ETV Bharat / entertainment

'ದರ್ಶನ್ ಅಪರಾಧಿ ಅಲ್ಲ, ಅವರ ಮೇಲೆ ಗಂಭೀರ ಆರೋಪವಿದೆ': ನಟ ಚೇತನ್ ಅಹಿಂಸಾ - ACTOR CHETAN ON DARSHAN CASE - ACTOR CHETAN ON DARSHAN CASE

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪ ಹೊತ್ತಿರುವ ನಟ ದರ್ಶನ್​​​​ ಅವರೀಗ ಜೈಲಿನಲ್ಲಿದ್ದಾರೆ. ಕನ್ನಡದ ಕೆಲ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ, ದರ್ಶನ್ ವಿಚಾರವಾಗಿ ಮತ್ತೊಮ್ಮೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿನಿಮಾ ಓಡೋದು ಸ್ಟಾರ್ ಕಲ್ಚರ್​​ನಿಂದ ಅಲ್ಲ, ಕಂಟೆಂಟ್​ನಿಂದ ಎಂಬುದನ್ನು ಒತ್ತಿ ಹೇಳಿದ್ದಾರೆ.

actor Chetan Ahimsa
ನಟ ಚೇತನ್ ಅಹಿಂಸಾ (ETV Bharat)
author img

By ETV Bharat Entertainment Team

Published : Jul 31, 2024, 1:43 PM IST

Updated : Jul 31, 2024, 2:10 PM IST

'ಆ ದಿನಗಳು', 'ಮೈನಾ' ಸಿನಿಮಾಗಳ‌ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಐಡೆಂಟಿಟಿ ಹೊಂದಿರುವ ನಟ ಚೇತನ್ ಅಹಿಂಸಾ. ಕೆಲ ವರ್ಷಗಳಿಂದ ಸಾಮಾಜಿಕ ಹೋರಾಟಗಾರನಾಗಿ ಗುರತಿಸಿಕೊಂಡಿರುವ ಚೇತನ್ ಚಿತ್ರರಂಗದ ವಾತಾವರಣ ಹಾಗೂ ನಟ ದರ್ಶನ್ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ.

ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಚೇತನ್, ಒಬ್ಬ ನಟನಾಗಿ ಹಾಗೂ ಹೋರಾಟಗಾರನಾಗಿ ನಾನು ಒಂದು ಸಮಸ್ಯೆ ಬಗ್ಗೆ ಟ್ಟೀಟ್ ಮಾಡಿದ್ದಕ್ಕೆ ನನ್ನನ್ನೂ ಜೈಲಿಗೆ ಹಾಕಿದರು. ಆ ಜೈಲಿನ ಸ್ಥಿತಿಗತಿ ಬಗ್ಗೆ ಹೇಳೋದಂದ್ರೆ ಅದು ತುಂಬಾನೇ ಕೆಟ್ಟ ಅನುಭವ ಎಂದು ತಿಳಿಸಿದ್ದಾರೆ.

ದರ್ಶನ್ ಅಪರಾಧಿ ಅಲ್ಲ, ಆರೋಪವಿದೆ: ನಟ ದರ್ಶನ್ ವಿಚಾರವಾಗಿ ಮತ್ತೊಮ್ಮೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಚೇತನ್, ''ದರ್ಶನ್ ಅಪರಾಧಿ ಅಲ್ಲದಿದ್ರೂ ಅವರ ಮೇಲೆ ಗಂಭೀರ ಆರೋಪವಿದೆ. ಮೃತ ರೇಣುಕಾಸ್ವಾಮಿ ಅವರು ನಟಿ ಪವಿತ್ರಾರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದನ್ನು ನಂಬುತ್ತೇವೆ. ನಮ್ಮಲ್ಲಿ ಸ್ಟಾರ್ ಸಂಸ್ಕೃತಿ ಅನ್ನೋದು ಅಳಿಸಬೇಕು. ಇನ್ನೂ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಮಾತ್ರ ಚಿತ್ರರಂಗ ಮಾತನಾಡೋದಲ್ಲ, ಇಂತಹ ಸಮಸ್ಯೆ ಎದುರಾದಾಗ ಅವರು ಮೌನ ವಹಿಸುತ್ತಾರೆ'' ಎಂದು ತಿಳಿಸಿದ್ದಾರೆ.

ದರ್ಶನ್ ಜೊತೆ ಅಷ್ಟೊಂದು ಒಡನಾಟವಿಲ್ಲ: ಸದ್ಯ ಈಗಲಾದರೂ ಮಾತನಾಡುತ್ತಿದ್ದಾರೆ. ಇದೊಂದು ಒಳ್ಳೆ ಬೆಳವಣಿಗೆ. ರೇಣುಕಾಸ್ವಾಮಿ ಮಾಡಿದ್ದು ತಪ್ಪೇ, ಆದ್ರೆ ಅದಕ್ಕೆ ಕೊಲೆಯೊಂದೇ ಪರಿಹಾರ ಅಲ್ಲ. ನನಗೆ ದರ್ಶನ್ ಅವರ ಜೊತೆ ಅಷ್ಟೊಂದು ಒಡನಾಟವಿಲ್ಲ. 2009ರ ಅಮೃತ ಮಹೋತ್ಸವ, ಬಿರುಗಾಳಿ ರಿಲೀಸ್ ಆದ ಬಳಿಕ ಮೊದಲ ಬಾರಿಗೆ ದರ್ಶನ್ ಜೊತೆ ಮಾತುಕತೆ ಆಗಿತ್ತು. ನಂತರ ಡಬ್ಬಿಂಗ್ ಸ್ಟುಡಿಯೋ ಒಂದರಲ್ಲಿ ಮಾತನಾಡಿದ್ದೇವಷ್ಟೇ ಎಂದು ಚೇತನ್​ ತಿಳಿಸಿದರು.

ಜೈಲುವಾಸದ ದಿನಗಳನ್ನು ನೆನಪಿಸಿಕೊಂಡ ನಟ: ಜೈಲುವಾಸದ ದಿನಗಳನ್ನು ನೆನಸಿಕೊಂಡರೆ ಭಯ ಆಗುತ್ತದೆ. ಸೆಲ್​ನಲ್ಲಿ ಇರಬಹುದು, ಆದ್ರೆ ಬ್ಯಾರೆಕ್ಸ್ ನಲ್ಲಿ ಕಷ್ಟ. ಒಂದು ಟ್ವೀಟ್ ಮಾಡಿದ್ದಕ್ಕೆ, ಕ್ರಿಮಿನಲ್ಸ್ ಜೊತೆ ಬ್ಯಾರೆಕ್ಸ್​​ನಲ್ಲಿ ಹಾಕಿದ್ರು. ಜೈಲಿನ ಗಟ್ಟಿ ನೆಲ ಹಾಗೂ ಬಾತ್ ರೂಂ ನೆನಪಿಸಿಕೊಂಡ್ರೆ ಛೇ ಛೇ. ಅದು ಸಣ್ಣ ಬಾತ್ ರೂಂ, ಅಲ್ಲೇ ಕೈ ತೊಳೆಯಬೇಕು, ಅಲ್ಲೇ ಹಲ್ಲು ಉಜ್ಜಬೇಕು, ಅಲ್ಲೇ ಸ್ನಾನ, ಡಸ್ಟ್ ಬಿನ್ ಕೂಡ ಅಲ್ಲೇ ಇತ್ತು. ಎಲ್ಲಾ ಅಲ್ಲೇ ಆಗಿ ತಿಪ್ಪೆ ಗುಂಡಿಯಂತಿತ್ತು. ಬೆಡ್​​, ಟಿವಿ ಏನೂ ಕೊಟ್ಟಿಲ್ಲ. ಅಷ್ಟೇ ಅಲ್ಲ, ಕೈದಿಗಳೇ ಅಡುಗೆ ಮಾಡುತ್ತಾರೆ. ಜೈಲು ಊಟ ನನಗೆ ಬಹಳ ಇಷ್ಟ ಆಗಿತ್ತು. ಮುದ್ದೆ ಸ್ವಲ್ಪ ಗಟ್ಟಿ ಇರುತ್ತೆ, ಆದ್ರೂ ಪರವಾಗಿಲ್ಲ. ಜೈಲಿನಲ್ಲಿ ಶಿಸ್ತುಬದ್ಧ ಜೀವನ ಶೈಲಿ ಇರುತ್ತದೆ. ತೂಕ ಇಳಿಸಿಕೊಂಡಿದ್ದೆ ಎಂದು ಹೇಳಿದರು.

''ಅಭಿಮಾನಿಯೋರ್ವ ನನ್ನ ಸಿನಿಮಾ ನೋಡಿ ಕೊಲೆ ಮಾಡಿದ್ದ'': 2022ರಲ್ಲಿ ನನ್ನ ಅಭಿಮಾನಿಯೋರ್ವ ಜೈಲಿನಲ್ಲಿ ಸಿಕ್ಕಿದ್ದ. ನಿಮ್ಮ ಸಿನಿಮಾ ನೋಡಿ ನಾನು ಕೊಲೆ ಮಾಡಿ ಜೈಲಿಗೆ ಬಂದಿದ್ದೇನೆ ಎಂದು ತಿಳಿಸಿದಾಗ ನಿಜಕ್ಕೂ ಶಾಕ್ ಆಗಿತ್ತು. ಮೈನಾ ಸಿನಿಮಾ ನೋಡಿ ಲವ್ ಮಾಡಿದೆ. ನಂತರ ಕೊಲೆ ಮಾಡಿ ಇಲ್ಲಿಗೆ ಬಂದಿದ್ದೇನೆ ಅಂದಾಗ ನಂಬಲು ಆಗಲಿಲ್ಲ‌. ಈ ವಿಚಾರವನ್ನು ಏಕೆ ತಿಳಿಸುತ್ತಿದ್ದೇನಂದ್ರೆ, ಸಿನಿಮಾ ಜನರ ಮೇಲೆ ಎಷ್ಟೊಂದು ಪರಿಣಾಮ ಬೀರುತ್ತೆ ಅನ್ನೋದಕ್ಕೆ ಇದೇ ಸಾಕ್ಷಿ ಎಂದು ತಿಳಿಸಿದರು.

ನಮ್ಮ ಚಿತ್ರರಂಗದಲ್ಲಿ ಸಿನಿಮಾ ಓಡೋದು ಸ್ಟಾರ್ ಕಲ್ಚರ್​​ನಿಂದ ಅಲ್ಲ. ಕಥೆ ಚೆನ್ನಾಗಿದ್ದು, ಸಂದೇಶ ಇದ್ರೆ ಸಿನಿಮಾಗಳು ಓಡುತ್ತವೆ. ಕೇವಲ ಸ್ಟಾರ್​ನಿಂದ ಸಿನಿಮಾ ಯಶಸ್ಸು ಕಾಣಲ್ಲ, ಜನರಿಗೆ ಕಂಟೆಂಟ್ ಬೇಕು ಎಂದು ಚೇತನ್​ ತಿಳಿಸಿದರು.

ಇದನ್ನೂ ಓದಿ: ಸಾಮಾಜಿಕ ಸಂದೇಶದ 'ಕೋಟಿ ಕೋಟಿ ರೊಕ್ಕ ಗಳಿಸಿ' ಗೀತೆ ಬಿಡುಗಡೆ - Koti Koti Rokka Galisi Song

ಇದರ ಜೊತೆಗೆ ಸ್ಟಾರ್​ಗಳಿಗೆ ತೆರಿಗೆ ಹಣದಿಂದ ಸ್ಮಾರಕ ಕಟ್ಟಿಸೋದಲ್ಲ. ದುಡ್ಡು ಇರುವವರು ಅವರೇ ಕಟ್ಟಿಕೊಳ್ತಾರೆ, ಸ್ಮಾರಕ ಕಟ್ಟಿಸೋಕೆ ಅವರ ಅಭಿಮಾನಿಗಳಿದ್ದಾರೆ. ಅಪ್ಪು ಸರ್ ಜೊತೆ 10 ವರ್ಷಗಳ ಸ್ನೇಹ ಹೊಂದಿದ್ದೆ‌. ಅಪ್ಪು ಬಾಕ್ಸ್ ಆಫೀಸ್ ಕಲೆಕ್ಷನ್ ಎಂದು ಯಾವತ್ತೂ ನೋಡಿಲ್ಲ, ನಿರ್ಮಾಪಕರಿಗೆ ಒಳ್ಳೆಯದಾಗಬೇಕೆಂದು ಹೇಳುತ್ತಿದ್ದರು ಎಂದರು.

ಇದನ್ನೂ ಓದಿ: ಕೋಟಿ ಕೋಟಿ ಕಲೆಕ್ಷನ್‌ ಮಾಡಿದ್ದ 'ಮುಂಗಾರು ಮಳೆ': ಗಣೇಶ್​ಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ? - Ganesh Mungaru Male

ಸದ್ಯ ದರ್ಶನ್ ಅವರಿಗಾಗಿ ಅವರ ಪತ್ನಿ ವಿಜಯಲಕ್ಷ್ಮಿ ಫೈಟ್ ಮಾಡುತ್ತಿದ್ದಾರೆ, ಒಳ್ಳೇದಾಗಲಿ. ಇದೇ ರೀತಿ ವಿಜಯಲಕ್ಷ್ಮಿ ಅವರು ಕಷ್ಟದಲ್ಲಿದ್ದಾಗ ದರ್ಶನ್ ಫೈಟ್ ಮಾಡಬೇಕು. ಪವಿತ್ರಾ ಗೌಡ ಈ ಪ್ರಕರಣದಲ್ಲಿ ಬಲಿಪಶು. ಪುರುಷರು ಶೌರ್ಯ ತೋರಿಸಿಕೊಳ್ಳೋಕೆ ಮಹಿಳೆಯರು ಬಲಿಪಶು ಆಗಿದ್ದಾರೆಂದು ಚೇತನ್ ತಮ್ಮ ಅಭಿಪ್ರಾಯ ಹೊರಹಾಕಿದರು.

Last Updated : Jul 31, 2024, 2:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.