ಮುಂಬೈ: ಕನ್ನಡ ಹಾಗೂ ಹಿಂದಿ ಬಿಗ್‌ಬಾಸ್ ರಿಯಾಲಿಟಿ ಶೋ ಒಂದೇ ದಿನ ಮುಕ್ತಾಯವಾಗಿದೆ. ಕನ್ನಡ ಬಿಗ್‌ಬಾಸ್ ಸೀಸನ್ 10ರ ವಿನ್ನರ್ ಆಗಿ ಕಾರ್ತಿಕ್ ಮಹೇಶ್ ಹೊರಹೊಮ್ಮಿದರೆ, ಹಿಂದಿ ಬಿಗ್‌ಬಾಸ್ ಸೀಸನ್ 17ರ ಕಪ್ ಅನ್ನು ಸ್ಟಾಂಡಪ್ ಕಾಮಿಡಿಯನ್ ಮುನಾವರ್ ಫಾರೂಕಿ ಗೆದ್ದಿದ್ದಾರೆ. ಮೊದಲ ರನ್ನರ್ ಅಪ್ ಆಗಿ ಅಭಿಷೇಕ್ ಕುಮಾರ್, 2ನೇ ರನ್ನರ್ ಅಪ್ ನಟಿ ಅಂಕಿತಾ ಲೋಖಂಡೆ ಮತ್ತು ಅರುಣ್ ಮಹಾಶೆಟ್ಟಿ ಮೂರನೇ ರನ್ನರ್ ಅಪ್ ಆದರು.
ಭಾನುವಾರ ರಾತ್ರಿ ನಡೆದ ಕೊನೆಯ ಶೋನಲ್ಲಿ ನಟ ಅಜಯ್ ದೇವಗನ್ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ನಟ ಸಲ್ಮಾನ್ ಖಾನ್ ಹಿಂದಿ ಬಿಗ್‌ಬಾಸ್ ನಿರೂಪಣೆಯಲ್ಲಿ ಬಿಗ್ ಬಾಸ್ ಮೂಡಿಬರುತ್ತಿದೆ.
-
#AbhishekKumar deserved to WIN but #MunawarFaraqui𓃵 also deserved as he is more loved by his fans...
— Bigg Boss 17 live (@Biggboss17_live) January 28, 2024 " class="align-text-top noRightClick twitterSection" data="
Imp thing is ki TOP 2 me mere dono Favourite the
Follow us @Biggboss17_live
Like❤️❤️. Retweet🔗🔗 for #AbhishekKumar#BiggBoss17Finale #BiggBoss17grandfinale… pic.twitter.com/a01BxXtDwG
">#AbhishekKumar deserved to WIN but #MunawarFaraqui𓃵 also deserved as he is more loved by his fans...
— Bigg Boss 17 live (@Biggboss17_live) January 28, 2024
Imp thing is ki TOP 2 me mere dono Favourite the
Follow us @Biggboss17_live
Like❤️❤️. Retweet🔗🔗 for #AbhishekKumar#BiggBoss17Finale #BiggBoss17grandfinale… pic.twitter.com/a01BxXtDwG#AbhishekKumar deserved to WIN but #MunawarFaraqui𓃵 also deserved as he is more loved by his fans...
— Bigg Boss 17 live (@Biggboss17_live) January 28, 2024
Imp thing is ki TOP 2 me mere dono Favourite the
Follow us @Biggboss17_live
Like❤️❤️. Retweet🔗🔗 for #AbhishekKumar#BiggBoss17Finale #BiggBoss17grandfinale… pic.twitter.com/a01BxXtDwG
ಸ್ಪರ್ಧೆಯ ಕೊನೆಯ ಇಬ್ಬರು ಸ್ಪರ್ಧಿಗಳಾದ ಅಭಿಷೇಕ್ ಕುಮಾರ್ ಮತ್ತು ಮುನಾವರ್ ಫಾರೂಕಿ ಅವರ ಕೈಗಳನ್ನು ಬಿಗಿಯಾಗಿ ಹಿಡಿದುಕೊಂಡ ಸಲ್ಮಾನ್ 4-5 ಬಾರಿ 'ವಿನ್ನರ್ ಈಸ್' ಎಂದು ಕೈ ಮೇಲಕ್ಕೆತ್ತಿ ಎಲ್ಲರ ಬೆವರಿಳಿಸುತ್ತಿದ್ದರು. ಅಂತಿಮವಾಗಿ, ಮುನಾವರ್ ಫಾರೂಕಿ ಅವರನ್ನು ವಿಜೇತರೆಂದು ಘೋಷಿಸಿದರು.
₹50 ಲಕ್ಷ ಬಹುಮಾನ, ಐಷಾರಾಮಿ ಕಾರು: ವಿಜೇತರಾದ ಮುನಾವರ್ ಫಾರೂಕಿಗೆ ಆಕರ್ಷಕ ಟ್ರೋಫಿ, 50 ಲಕ್ಷ ರೂಪಾಯಿ ಮತ್ತು ಐಷಾರಾಮಿ ಕಾರನ್ನು ಬಹುಮಾನವಾಗಿ ನೀಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಫಾರೂಕಿ ಗೆಲುವಿನ ಬಗ್ಗೆ ಹಲವರು ಮೊದಲೇ ಭವಿಷ್ಯ ನುಡಿದಿದ್ದರು.
1 ತಿಂಗಳು ಜೈಲುವಾಸ ಅನುಭವಿಸಿದ್ದ ಫಾರೂಖಿ: ತನ್ನ ಸ್ಟಾಂಡಪ್ ಕಾಮಿಡಿಯ ಮೂಲಕ ಜನಪ್ರಿಯತೆ ಗಳಿಸಿದ್ದ ಮುನಾವರ್ ಫಾರೂಕಿ, 2021ರಲ್ಲಿ ಹಿಂದೂ ದೇವತೆಗಳ ವಿರುದ್ಧ ಟೀಕಾತ್ಮಕ ಹೇಳಿಕೆ ನೀಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದಕ್ಕಾಗಿ ಒಂದು ತಿಂಗಳು ಜೈಲುವಾಸ ಅನುಭವಿಸಿದ್ದರು.
2022ರಲ್ಲಿ ನಟಿ ಕಂಗನಾ ರಣಾವತ್ ನಡೆಸಿ ಕೊಡುತ್ತಿದ್ದ ರಿಯಾಲಿಟಿ ಟಿವಿ ಶೋ 'ಲಾಕ್ ಅಪ್' ಸೀಸನ್ ಅನ್ನು ಫಾರೂಕಿ ಗೆದ್ದಿದ್ದಾರೆ. ಬಿಗ್ಬಾಸ್ನಲ್ಲಿ ಮಾತಿನ ಮೋಡಿ, ಕಾಮಿಡಿ, ಬುದ್ಧಿವಂತಿಕೆಯ ಮೂಲಕ ಮುನಾವರ್ ಪ್ರೇಕ್ಷಕರನ್ನು ರಂಜಿಸುತ್ತಿದ್ದರು.
17 ಸ್ಪರ್ಧಿಗಳು: ಈ ಆವೃತ್ತಿಯು 2023ರ ಅಕ್ಟೋಬರ್ 15ರಂದು ಆರಂಭಗೊಂಡಿತ್ತು. ಒಟ್ಟು 17 ಸ್ಪರ್ಧಿಗಳು ಭಾಗವಹಿಸಿದ್ದರು. ಮನ್ನಾರಾ ಚೋಪ್ರಾ, ಮುನಾವರ್ ಫಾರೂಕಿ, ಐಶ್ವರ್ಯ ಶರ್ಮಾ, ನೀಲ್ ಭಟ್, ನಾವಿದ್ ಸೋಲೆ, ಅನುರಾಗ್ ದೋಭಾಲ್, ಸನಾ ರಯೀಸ್ ಖಾನ್, ಜಿಗ್ನಾ ವೋರ್, ಅಂಕಿತಾ ಲೋಖಂಡೆ, ವಿಕ್ಕಿ ಜೈನ್, ಸೋನಿಯಾ ಬನ್ಸಾಲ್, ಫಿರೋಜಾ ಖಾನ್, ಸನ್ನಿ ಆರ್ಯ, ರಿಂಕು ಧವನ್, ಅರುಣ್ ಶ್ರೀಕಾಂತ್ ಮಾಶೆಟ್ಟೆ, ಅಭಿಷೇಕ್ ಕುಮಾರ್, ಇಶಾ ಮಾಳವಿಯಾ ಇದ್ದರು.
ಇದನ್ನೂ ಓದಿ: ಬಿಗ್‌ಬಾಸ್ ಕನ್ನಡ ಸೀಸನ್ 10ರ ಸ್ಮರಣೀಯ ಕ್ಷಣಗಳು