ETV Bharat / entertainment

ಬಿಗ್​ ಬಾಸ್​ನಲ್ಲಿ ಕಣ್ಣೀರಿಟ್ಟ ಚೈತ್ರಾ ಕುಂದಾಪುರ: ಕಾರಣ ಪಾಸಿಟಿವಿಟಿ ಗೌತಮಿ.. ನಿಮ್ಮ ಅಭಿಪ್ರಾಯವೇನು?

ಬಿಗ್​ ಬಾಸ್ ಮನೆಯಲ್ಲಿ ತಮಗೆ ಆಡಲು ಅವಕಾಶ ಸಿಗುತ್ತಿಲ್ಲವೆಂದು ಚೈತ್ರಾ ಕುಂದಾಪುರ ಕಣ್ಣೀರಿಟ್ಟಿದ್ದಾರೆ.

Chaitra kundapura, Gauthami Jadav
ಚೈತ್ರಾ ಕುಂದಾಪುರ, ಗೌತಮಿ ಜಾಧವ್ (Photo: Bigg boss team)
author img

By ETV Bharat Entertainment Team

Published : 2 hours ago

ಬಿಗ್​ ಬಾಸ್​ ಸೀಸನ್​ 11 ಈಗಾಗಲೇ 70 ದಿನಗಳನ್ನು ಪೂರೈಸಿದೆ. ಫಿನಾಲೆಗೆ ಇನ್ನೇನು ಕೆಲವೇ ವಾರಗಳು ಬಾಕಿ. ಆಟ ಮತ್ತಷ್ಟು ರೋಮಾಂಚನಗೊಂಡಿದೆ. ಮನೆಗೆ ಕ್ಯಾಪ್ಷನ್​ ಆಗುವ ಬಯಕೆ ಪ್ರತೀ ಸ್ಪರ್ಧಿಗಳದ್ದು. ಕ್ಯಾಪ್ಟನ್ಸಿ ಗೆದ್ದರೆ ಒಂದು ವಾರ ಮನೆಯ ನಾಮಿನೇಷನ್​ನಿಂದ ಬಚಾವ್​​ ಆಗುವ ಸುವರ್ಣಾವಕಾಶ ಆ ಸ್ಪರ್ಧಿಗಳಿರುತ್ತದೆ. ಫಿನಾಲೆ ಸಮೀಪಿಸುತ್ತಿರುವ ಈ ಹೊತ್ತಲ್ಲಿ ಮನೆಯಲ್ಲಿ ಉಳಿದುಕೊಳ್ಳೋದು ಬಹಳ ಮುಖ್ಯ. ಹಾಗಾಗಿ ಕ್ಯಾಪ್ಟನ್ಸಿ ಟಾಸ್ಕ್​ ಗೆಲ್ಲೋದೂ ಕೂಡಾ ಅತ್ಯವಶ್ಯಕ. ಈ ಹಿಂದೆ ಒಂದಿಷ್ಟು ಟಾಸ್ಕ್​ ಗೆದ್ದು ಕೊನೆಯಲ್ಲಿ ಉಳಿದುಕೊಳ್ಳುವವರು ಕ್ಯಾಪ್ಟನ್ಸಿ ಟಾಸ್ಕ್​​ನಲ್ಲಿ ಭಾಗಿಯಾಗುತ್ತಿದ್ದರು. ಆದರೆ, ಈ ಬಾರಿ ಇದು ಕ್ಯಾಪ್ಟನ್ಸಿ ಟಾಸ್ಕ್ ಎಂದು ಮೊದಲೇ ಬಿಗ್​ ಬಾಸ್​ ಘೋಷಿಸಿಬಿಟ್ಟಿದ್ದಾರೆ. ಹಾಗಾಗಿ ವಿಜಯಕ್ಕೆ ಪ್ರತೀ ಸ್ಪರ್ಧಿಗಳು ಸಂಪೂರ್ಣ ಶ್ರಮ ಹಾಕುತ್ತಿದ್ದಾರೆ.

''ನಾಯಕತ್ವಕ್ಕಾಗಿ ನಾನಾ ಕಸರತ್ತು!'' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್​​​ನೊಂದಿಗೆ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಂಡಿದೆ. ಇದರಲ್ಲಿ ಚೈತ್ರಾ ಕುಂದಾಪುರ ಅವರು ಕಣ್ಣೀರಿಟ್ಟಿರೋದನ್ನು ಕಾಣಬಹುದು. ಸಂಪೂರ್ಣ ಮಾಹಿತಿ ತಿಳಿಯಲು ರಾತ್ರಿ ಪ್ರಸಾರ ಕಾಣಲಿರುವ ಸಂಚಿಕೆ ವೀಕ್ಷಿಸಬೇಕಾಗಿದೆ.

ನನಗೆ ಈ ಮನೆಯಲ್ಲಿ ಆಟ ಆಡಲು ಅವಕಾಶ ಕೊಡೋದಿಲ್ಲ. ನಂತರ ನಾಮಿನೇಷನ್​ನಲ್ಲಿ ಇದೇ ಕಾರಣ ಕೊಡುತ್ತಾರೆ. ಈ ಬಾರಿ ನಾಮಿನೇಟ್​ ಆಗಿ ಎಲಿಮಿನೇಷನ್​ ಅಂದ್ರೆ ಏನು ಅನ್ನೋದನ್ನು ಅನುಭವಿಸಿ ಬಂದಿದ್ದೇನೆ. ಆಡಲು ನನಗೆ ಅವಕಾಶ ಬೇಕು. ಆದರೆ ಅವಕಾಶ ಸಿಗುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

ಕ್ಯಾಪ್ಟನ್​ ಗೌತಮಿ ಜಾಧವ್ ನಿರ್ಧಾರ! ಸ್ಪರ್ಧಿಗಳನ್ನು ಆರಿಸೋ ಸಂದರ್ಭದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಮಾತಿಗೆ ಗೌತಮಿ ಮತ್ತು ಹನುಮಂತ ಅವರು ಚೈತ್ರಾ ಅವರ ಹೆಸರನ್ನು ತೆಗೆದುಕೊಂಡಿದ್ದರು. ಬಹುತೇಕ ಸಂದರ್ಭಗಳಲ್ಲಿ ಚೈತ್ರಾ ಅವರನ್ನು ಉಸ್ತುವಾರಿಗೇನೆ ಹಾಕಲಾಗಿತ್ತು. ಹಾಗಾಗಿ ನಾಮಿನೇಷನ್​ ಸಂದರ್ಭಗಳಲ್ಲಿ ಚೈತ್ರಾ ಅವರ ಆಟ ನೋಡಿಲ್ಲ ಎಂಬ ಮಾತುಗಳು ವ್ಯಕ್ತವಾಗಿದ್ದವು. ಈಗಲೂ ಗೌತಮಿ ಅವರು ಚೈತ್ರಾರಿಗೆ ಉಸ್ತುವಾರಿ ಜವಾಬ್ದಾರಿ ಕೊಡಲು ಮುಂದಾಗಿದ್ದಾರೆ. ಇದು ಚೈತ್ರಾರನ್ನು ಕೆರಳಿಸಿದೆ. ಹಾಗಾಗಿ ಕಣ್ಣೀರಿಟ್ಟು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಬಾಲಿವುಡ್ ದಂತಕಥೆ​​​ ರಾಜ್ ಕಪೂರ್ ಜನ್ಮ ಶತಮಾನೋತ್ಸವ: ಪ್ರಧಾನಿ ಮೋದಿಗೆ ಕಪೂರ್ ಕುಟುಂಬದಿಂದ ಆಹ್ವಾನ

ಒಮ್ಮೆ, ನೀವು ಆಡುತ್ತೀರಾ ಎಂದಾದರೆ ನಾನು ನಿಮ್ಮನ್ನು ಸುಮ್ಮನೇ ಕೂರಿಸುವುದಲ್ಲ ಎಂದು ಚೈತ್ರಾ ಬಳಿ ಗೌತಮಿ ತಿಳಿಸಿದ್ದರು. ನಂತರ ಟಾಸ್ಕ್​ ಕೊಟ್ಟಾಗ ನಾನು ಆಡುತ್ತೇನೆ ಎಂದು ಚೈತ್ರಾ ತಿಳಿಸಿದ್ರೂ ಕೂಡಾ ಗೌತಮಿ ಉಸ್ತುವಾರಿ ಜವಾಬ್ದಾರಿ ಕೊಟ್ಟಿದ್ದಾರೆ. ಅಷ್ಟು ಕೇಳಿಕೊಂಡರೂ ತಮಗೆ ಅವಕಾಶ ಕೊಡಲಿಲ್ಲ ಎಂದು ಚೈತ್ರಾ ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ: Watch: ದೇಸಿ ಗರ್ಲ್ ಸಾಂಗ್​ಗೆ ಐಶ್ವರ್ಯಾ ಅಭಿಷೇಕ್ ಡ್ಯಾನ್ಸ್,​ ಬ್ಯೂಟಿಫುಲ್​ ವಿಡಿಯೋ ವೈರಲ್​

ಗೌತಮಿ ಜಾಧವ್​ ಅವರು ಕ್ಯಾಪ್ಟನ್​ ಆಗಿರೋ ಹಿನ್ನೆಲೆ ತಮ್ಮ ವಿವೇಚನೆಗೆ ತಕ್ಕಂತೆ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಆದ್ರೆ ಇದು ಚೈತ್ರಾರ ಅಸಮಾಧಾನಕ್ಕೆ ಕಾರಣವಾಗಿದೆ. ವಿಷಯ ಏನೆಂಬುದು ಸಂಪೂರ್ಣ ಸಂಚಿಕೆ ವೀಕ್ಷಿಸಿದ ಬಳಿಕವೇ ತಿಳಿದುಬರಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.