ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕಾಟೇರ' ನಂತರ ಯಾವುದೇ ಕನ್ನಡ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿಲ್ಲ. ಕನ್ನಡದ ಜೊತೆಗೆ ಬಹುಭಾಷಾ ಸಿನಿಮಾಗಳಿಗೂ ಕರ್ನಾಟಕದಲ್ಲಿ ಡಿಮ್ಯಾಂಡ್ ಇವೆ. ಆದರೆ ಈ ವಾರ ಹಾಗಾಗೋಕೆ ಸಾಧ್ಯವೇ ಇಲ್ಲ. ಯಾಕೆ ಅಂತೀರಾ? ಬಹುನಿರೀಕ್ಷಿತ ಕನ್ನಡ ಸಿನಿಮಾಳಿಂದು ಚಿತ್ರಮಂದಿರ ಪ್ರವೇಶಿಸಿದೆ. ಅದರಲ್ಲೊಂದು ಬಹಳಾನೇ ಸದ್ದು ಮಾಡಿರುವ ಚಿತ್ರ 'ಕೇಸ್ ಆಫ್ ಕೊಂಡಾಣ'. ಹೌದು, ಖ್ಯಾತ ನಟ ವಿಜಯ್ ರಾಘವೇಂದ್ರ ಮುಖ್ಯಭೂಮಿಕೆಯ ಈ ಚಿತ್ರ ಇಂದು ತೆರೆಕಂಡಿದ್ದು, ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ.
- " class="align-text-top noRightClick twitterSection" data="">
ಮಲೆನಾಡಿನ ಪ್ರತಿಭಾವಂತರೇ ಸೇರಿ ಮಾಡಿದ್ದ 'ಸೀತಾರಾಮ್ ಬೆನೋಯ್ ಕೇಸ್ ನಂಬರ್ 18' ತಂಡದ ಮತ್ತೊಂದು ಪ್ರಯತ್ನವೇ ಕೇಸ್ ಆಫ್ ಕೊಂಡಾಣ. ಟ್ರೇಲರ್ ಹಾಗೂ ಮೇಕಿಂಗ್ನಿಂದ ಕುತೂಹಲ ಹುಟ್ಟಿಸಿರೋ 'ಕೇಸ್ ಆಫ್ ಕೊಂಡಾಣ' ಇಂದು, ಗಣರಾಜ್ಯೋತ್ಸವದ ದಿನದಂದು ಪ್ರೇಕ್ಷಕರಿಗೆ ದರ್ಶನ ಕೊಟ್ಟಿದೆ.
ವಿಜಯ್ ರಾಘವೇಂದ್ರ ಅಭಿನಯದ 50ನೇ ಚಿತ್ರ 'ಸೀತಾರಾಮ್ ಬೆನೋಯ್ ಕೇಸ್ ನಂಬರ್ 18'. ಈ ಕ್ರೈಂ ಥ್ರಿಲ್ಲರ್ ಕಥೆ ಹೇಳಿದ್ದ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಅವರ ಮತ್ತೊಂದು ವಿಭಿನ್ನ ಕಥಾಹಂದರವುಳ್ಳ ಸಿನಿಮಾವೇ 'ಕೇಸ್ ಆಫ್ ಕೊಂಡಾಣ'. ಹೈಪರ್ ಲಿಂಕ್ ಇನ್ವೆಸ್ಟಿಗೇಷನ್ ಚಿತ್ರವನ್ನು ಇಂದು ಪ್ರೇಕ್ಷಕರ ಎದುರು ತಂದಿದ್ದು, ಬಹುತೇಕ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಹಿಂದೆಂದೂ ಕಾಣಿಸಿಕೊಳ್ಳದ ರೀತಿಯಲ್ಲಿ ವಿಜಯ್ ರಾಘವೇಂದ್ರ ಪ್ರೇಕ್ಷಕರೆದುರು ಬಂದಿದ್ದಾರೆ. ಭಾವನಾ, ಖುಷಿ ರವಿ, ರಂಗಾಯಣ ರಘು ಸೇರಿದಂತೆ ಬಹುದೊಡ್ಡ ತಾರಾ ಬಳಗವಿದೆ. 'ಸೀತಾರಾಮ್ ಬೆನೋಯ್ ಕೇಸ್ ನಂಬರ್ 18' ತಂಡದಲ್ಲಿ ಕೆಲಸ ಮಾಡಿರುವ ಟೆಕ್ನೀಷಿಯನ್ ಇಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: ಸಂಗೀತ ಮಾಂತ್ರಿಕ ಇಳಯರಾಜರ ಪುತ್ರಿ ಭವತಾರಿಣಿ ಕ್ಯಾನ್ಸರ್‌ನಿಂದ ನಿಧನ
ಗಗನ್ ಬಡೇರಿಯಾ ಸಂಗೀತ, ವಿಶ್ವಜಿತ್ ರಾವ್ ಛಾಯಾಗ್ರಹಣ, ಭವಾನಿ ಶಂಕರ್ ಆನೇಕಲ್ ಕಲಾ ನಿರ್ದೇಶನ ಹಾಗೂ ಶಶಾಂಕ್ ನಾರಾಯಣ್ ಸಂಕಲನವಿದೆ. ಪ್ರಮೋದ್ ಮರವಂತೆ, ವಿಶ್ವಜಿತ್ ರಾವ್ ಸಾಹಿತ್ಯದ ಚಿತ್ರಕ್ಕೆ ಜೋಗಿ ಸಂಭಾಷಣೆ ಬರೆದಿದ್ದಾರೆ. ನಿರ್ದೇಶನದ ಜೊತೆಗೆ ದೇವಿಪ್ರಸಾದ್ ಶೆಟ್ಟಿ ಅವರು ಸಾತ್ವಿಕ್ ಹೆಬ್ಬಾರ್ ಜೊತೆ ನಿರ್ಮಾಣಕ್ಕೂ ಕೈ ಜೋಡಿಸಿದ್ದಾರೆ.
ಇದನ್ನೂ ಓದಿ: ಚಿರಂಜೀವಿಗೆ 'ಪದ್ಮವಿಭೂಷಣ': ಧನ್ಯವಾದ ಅರ್ಪಿಸಿದ ಮೆಗಾಸ್ಟಾರ್
ಚಿನ್ನಾರಿಮುತ್ತ ವಿಜಯ್ ರಾಘವೇಂದ್ರ ಹಾಗೂ ಭಾವನಾ ಡೆಡ್ಲಿ ಕಾಂಬೋದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅನಿರೀಕ್ಷಿತ ಘಟನೆಗಳಿಂದ ಕೂಡಿದ ಕಥೆ ಅತ್ಯಂತ ಕುತೂಹಲಕಾರಿಯಾಗಿದೆ. ಚಿತ್ರದ ಶೇ. 80ರಷ್ಟು ಭಾಗ ಒಂದು ರಾತ್ರಿಯಲ್ಲಿ ನಡೆಯುವ ಘಟನೆ. ಕೊಂಡಾಣ ಎನ್ನುವ ಕಾಲ್ಪನಿಕ ಸ್ಥಳದಲ್ಲಿ ಆ ರಾತ್ರಿ ನಡೆಯುವ ಘಟನೆ ಏನು ಎಂಬ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳಲು ಚಿತ್ರಮಂದಿರಗಳಿಗೆ ಹೋಗಬೇಕಿದೆ.