ETV Bharat / entertainment

ಕೆನೆಡಿಯನ್​ ನಟ ಡೊನಾಲ್ಡ್​ ಸದರ್ಲ್ಯಾಂಡ್​ ನಿಧನ: ಕರೀನಾ ಕಪೂರ್​, ಸಮಂತಾರಿಂದ ಸಂತಾಪ - Donald Sutherland Dies

ಇತ್ತೀಚೆಗೆ ನಿಧನ ಹೊಂದಿದ ಕೆನೆಡಿಯನ್​ ನಟ ಡೊನಾಲ್ಡ್​ ಸದರ್ಲ್ಯಾಂಡ್​ ಅವರ ನಿಧನ ಭಾರತದ ಚಿತ್ರರಂಗವೂ ತೀವ್ರ ಸಂತಾಪ ವ್ಯಕ್ತಪಡಿಸಿದೆ.

Canadian actor Donald Sutherland passes away: Kareena Kapoor, Samantha offer condolences
ಕೆನೆಡಿಯನ್​ ನಟ ಡೊನಾಲ್ಡ್​ ಸದರ್ಲ್ಯಾಂಡ್​ ನಿಧನ: ಕರೀನಾ ಕಪೂರ್​, ಸಮಂತಾರಿಂದ ಸಂತಾಪ (ANI Instagram)
author img

By ETV Bharat Karnataka Team

Published : Jun 22, 2024, 6:32 PM IST

ಹೈದರಾಬಾದ್​: ದೀರ್ಘಕಾಲ ಅನಾರೋಗ್ಯದಿಂದ ಗುರುವಾರ ಇಹಲೋಕ ತ್ಯಜಿಸಿದ ಕೆನೆಡಿಯನ್​ ನಟ ಡೊನಾಲ್ಡ್​ ಸದರ್ಲ್ಯಾಂಡ್​ ಅವರ ನಿಧನಕ್ಕೆ ಭಾರತೀಯ ಚಿತ್ರರಂಗ ಚಿತ್ರರಂಗ ಕಂಬನಿ ಮಿಡಿದೆ. ಬಾಲಿವುಡ್​ ನಟಿ ಕರೀನಾ ಕಪೂರ್​ ಖಾನ್​, ಸೌತ್​ ನಟಿ ಸಮಂತಾ ರುತ್​ ಪ್ರಭು ಸೇರಿದಂತೆ ಹಲವಾರು ಚಿತ್ರತಾರೆಯರು ಸಾಮಾಜಿಕ ಜಾಲತಾಣಗಳಲ್ಲಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಕರೀನಾ ಕಪೂರ್​ ಖಾನ್​ ಅವರು ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಲೆಜೆಂಡರಿ ನಟ ಸದರ್ಲ್ಯಾಂಡ್​ ಅವರ ಫೋಟೋವನ್ನು ಹಂಚಿಕೊಂಡು ಸಂತಾಪ ಸೂಚಿಸಿದ್ದಾರೆ. ಫೋಟೋದ ಜೊತೆಗೆ 'ಸದಾಕಾಲ' (Forever) ಎಂದು ಬರೆದು ರೆಡ್​ ಹಾರ್ಟ್​ ಇಮೋಜಿಯನ್ನು ಹಾಕಿದ್ದಾರೆ. ಅದೇರೀತಿ ಸಮಂತಾ ರುತ್​​ ಪ್ರಭು ಅವರು ಕೂಡ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ದಿವಂಗತ ನಟನ ಚಿತ್ರವನ್ನು ಪೋಸ್ಟ್​ ಮಾಡುವ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. ಫೋಟೋದ ಜೊತೆಗೆ ಹಾರ್ಟ್​ ಬ್ರೇಕಿಂಗ್​ ಇಮೋಜಿಯನ್ನು ಹಾಕಿದ್ದಾರೆ.

ಆರು ದಶಕಗಳ ಕಾಲ ಚಿತ್ರರಂಗದಲ್ಲಿ ಪ್ರಸಿದ್ಧನಟನಾಗಿ ಗುರುತಿಸಿಕೊಂಡಿದ್ದ ಡೊನಾಲ್ಡ್​ ಸದರ್ಲ್ಯಾಂಡ್​ ವಿಶಾಲ ವ್ಯಾಪ್ತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ವಿಭಿನ್ನ ಪಾತ್ರಗಳ ಮೂಲಕ ತಮ್ಮ ಬಹುಮುಖ ನಟನೆಯನ್ನು ಪ್ರದರ್ಶಿಸಿದ್ದರು. ದಿ ಡರ್ಟಿ ಡಜನ್​ (1967) ಮತ್ತು ರಾಬರ್ಟ್​ ಅಲ್ಟ್​ಮ್ಯಾನ್​ರ M*A*S*H ನಂತಹ ಸಿನಿಮಾಗಳಲ್ಲಿ ಅವರ ಅದ್ಭುತ ಅಭಿನಯ ಅವರನ್ನು ಖ್ಯಾತಿಯ ಉತ್ತುಂಗಕ್ಕೆ ಕೊಂಡೊಯ್ದಿತ್ತು. ಅವರು ಕ್ಲೂಟ್, ಕೆಲ್ಲಿಸ್ ಹೀರೋಸ್, ಡೋಂಟ್ ಲುಕ್ ನೌ, ಆರ್ಡಿನರಿ ಪೀಪಲ್, 1900, ದಿ ಹಂಗರ್ ಗೇಮ್ಸ್ ಸೀರೀಸ್ ಮತ್ತು ಆಡ್ ಅಸ್ಟ್ರಾ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾ ಜಗತ್ತಿಗೆ ಅವರು ನೀಡಿದ ಅಪಾರ ಕೊಡುಗೆಯನ್ನು ಗುರುತಿಸಿ ಅಕಾಡೆಮಿ 2017ರಲ್ಲಿ ಗೌರವ ಪ್ರಶಸ್ತಿ ನೀಡಿ ಗೌರವಿಸಿದೆ.

ಜೇನ್ ಫೋಂಡಾ ಮತ್ತು ಜೂಲಿ ಕ್ರಿಸ್ಟಿಯಂತಹ ಲೆಜೆಂಡರಿ ನಟಿಯರೊಂದಿಗೆ ಗಂಭೀರ ಪಾತ್ರಗಳು ಮತ್ತು ಪ್ರಣಯ ಪಾತ್ರಗಳ ನಡುವೆ ಸಲೀಸಾಗಿ ಪರಿವರ್ತನೆ ಮಾಡಿಕೊಂಡು ಅಭಿನಯಿಸುತ್ತಿದ್ದರು. 1960ರ ದಶಕದಲ್ಲಿ ಪ್ರಾರಂಭವಾದ ಅವರ ವೃತ್ತಿಜೀವನದ ಉದ್ದಕ್ಕೂ, ಅವರು ವಿಭಿನ್ನ ಪಾತ್ರಗಳು ಮತ್ತು ಖಳನಾಯಕರ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಮೂಲಕ ಅವರ ಕರಕುಶಲತೆಯ ಮಾಸ್ಟರ್ ಎಂಬ ಖ್ಯಾತಿಯನ್ನು ಗಟ್ಟಿಗೊಳಿಸಿದ್ದರು. ತಮ್ಮ 80ರ ದಶಕದಲ್ಲಿಯೂ ಸಹ, ಸದರ್ಲ್ಯಾಂಡ್ ಚಲನಚಿತ್ರ ಮತ್ತು ಟಿವಿ ಪ್ರಾಜೆಕ್ಟ್​ಗಳಿಗೆ ಹೆಚ್ಚಿನ ಬೇಡಿಕೆಯನ್ನು ಉಳಿಸಿಕೊಂಡಿದ್ದರು. ಅವರ ಬಹುಮುಖ ಅಭಿನಯ ಅವರಿಗೆ ಸ್ಮರಣೀಯ ಪಾತ್ರಗಳಿಗೆ ಜೀವ ತುಂಬುವಂತಹ ಅವಕಾಶ ಮಾಡಿಕೊಟ್ಟಿದ್ದವು.

ಇದನ್ನೂ ಓದಿ: ಅನಾರೋಗ್ಯದಿಂದ ಬಳಲುತ್ತಿದ್ದ ಕೆನಡಿಯನ್ ನಟ ಡೊನಾಲ್ಡ್ ಸದರ್ಲ್ಯಾಂಡ್ ನಿಧನ - Donald Sutherland death

ETV Bharat Logo

Copyright © 2024 Ushodaya Enterprises Pvt. Ltd., All Rights Reserved.