ETV Bharat / entertainment

'ಭೀಮ'ನ ಅದ್ಧೂರಿ ಎಂಟ್ರಿ: ವಿಶೇಷಚೇತನ ಅಭಿಮಾನಿಯನ್ನು ಥಿಯೇಟರ್​ಗೆ ಸ್ವಾಗತಿಸಿದ ದುನಿಯಾ ವಿಜಯ್​​ - Bheema Grand Release

ಜನಪ್ರಿಯ ನಟ ದುನಿಯಾ ವಿಜಯ್​​​ ನಟಿಸಿ, ನಿರ್ದೇಶಿಸಿರುವ ಕನ್ನಡದ ಬಹುನಿರೀಕ್ಷಿತ ಚಿತ್ರ 'ಭೀಮ' ಇಂದು ಅದ್ಧೂರಿಯಾಗಿ ತೆರೆಕಂಡಿದೆ. ಅನೇಕ ಚಿತ್ರಮಂದಿರಗಳ ಎದುರು ಹಬ್ಬದ ವಾತಾವರಣ ನಿರ್ಮಾಣ ಆಗಿದ್ದು, ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

Duniya Vijay with a fan
ಅಭಿಮಾನಿಯೊಂದಿಗೆ ದುನಿಯಾ ವಿಜಯ್​​ (ETV Bharat)
author img

By ETV Bharat Karnataka Team

Published : Aug 9, 2024, 12:45 PM IST

Updated : Aug 9, 2024, 1:02 PM IST

'ಭೀಮ' ಅದ್ಧೂರಿ ಬಿಡುಗಡೆ (ETV Bharat)

ಬೆಂಗಳೂರು: ಬಹುನಿರೀಕ್ಷಿತ 'ಭೀಮ' ಸಿನಿಮಾ ಬಿಡುಗಡೆ ಆಗುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಿನಿಸುಗ್ಗಿ ಶುರುವಾಗಿದೆ. ಸ್ಯಾಂಡಲ್​ವುಡ್​ನಲ್ಲಿ ಸ್ಟಾರ್​ ಸಿನಿಮಾಗಳ ಸಂಖ್ಯೆ ಕಡಿಮೆ ಆಗಿದೆ, ಚಿತ್ರಮಂದಿರಗಳಿಗೆ ಬರುವ ಪ್ರೇಕ್ಷಕರ ಅಂಕಿ - ಅಂಶವೂ ಇಳಿಕೆ ಆಗಿದೆ ಎಂಬ ಮಾತು ಕೇಳಿಬರುತ್ತಿರುವ ನಡುವೆ ಬಹುನಿರೀಕ್ಷಿತ ಚಿತ್ರ ತೆರೆಕಂಡಿದೆ. ರಾಜ್ಯ ರಾಜಧಾನಿಯ ಅನೇಕ ಚಿತ್ರಮಂದಿರಗಳ ಎದುರು ಹಬ್ಬದ ವಾತಾವರಣ ನಿರ್ಮಾಣ ಆಗಿದೆ ಎಂದೇ ಹೇಳಬಹುದು.

ಕನ್ನಡ ಸಿನಿಮಾ ಇಂಡಸ್ಟ್ರಿಯ ಅತ್ಯಂತ ಜನಪ್ರಿಯ ನಟರ ಸಾಲಿನಲ್ಲಿ ಗುರುತಿಸಿಕೊಂಡಿರುವ ದುನಿಯಾ ವಿಜಯ್​​​ ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ನಟ, ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಅವರು ಅಭಿನಯಿಸುವುದರ ಜೊತೆಗೆ ಆ್ಯಕ್ಷನ್​ ಕಟ್​​​ ಹೇಳಿರುವ ಚಿತ್ರವಿದು. ಈ ಹಿಂದೆ ಸಲಗ ಚಿತ್ರವನ್ನು ನಿರ್ದೇಶಿಸಿ, ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. 2021ರ ಅಕ್ಟೋಬರ್​​​ನಲ್ಲಿ ಈ ಚಿತ್ರ ತೆರೆಕಂಡು ಸೂಪರ್ ಹಿಟ್​ ಆಗಿತ್ತು. ಇದೀಗ ತಾವೇ ನಟಿಸಿ, ನಿರ್ದೇಶಿಸಿರುವ ಎರಡನೇ ಸಿನಿಮಾ 'ಭೀಮ' ಬಹುನಿರೀಕ್ಷೆಗಳೊಂದಿಗೆ ಬಿಡುಗಡೆ ಆಗಿದೆ.

18 ಥಿಯೇಟರ್​​​ಗಳು ರೀ ಓಪನ್: ಇಂದು ರಾಜ್ಯಾದ್ಯಂತ 400 ಚಿತ್ರಮಂದಿರಗಳಲ್ಲಿ ಭೀಮ ಬಿಡುಗಡೆ ಆಗಿದೆ. ಈ ಸಿನಿಮಾದ ಮೂಲಕ ಮುಚ್ಚಿರುವ 18 ಥಿಯೇಟರ್​​​ಗಳು ರೀ ಓಪನ್ ಆಗಿರುವುದು ಚಿತ್ರರಂಗದಲ್ಲಿ ಭರವಸೆ ಮೂಡಿಸಿದೆ.

'ಭೀಮ'ನ ಸ್ವಾಗತಕ್ಕಾಗಿ ಅನೇಕ ಚಿತ್ರಮಂದಿರಗಳು ಶೃಂಗಾರಗೊಂಡಿದ್ದವು. ನಗರ ಖ್ಯಾತ ಸಂತೋಷ್ ಚಿತ್ರಮಂದಿರದಲ್ಲಿ ಭೀಮನ ಸಂಭ್ರಮಾಚರಣೆ ಜೋರಾಗಿದೆ. ಅಭಿಮಾನಿಗಳು ಅದ್ಧೂರಿಯಾಗಿ ಸಿನಿಮಾವನ್ನು ಬರಮಾಡಿಕೊಂಡಿದ್ದಾರೆ. ಡೊಳ್ಳಿನ ಸದ್ದಿಗೆ ಬ್ಲ್ಯಾಕ್​​ ಕೋಬ್ರಾ ಫ್ಯಾನ್ಸ್ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ. ಬೆಳಗ್ಗೆಯೇ ಥಿಯೇಟರ್​ಗೆ ಆಗಮಿಸಿದ ದುನಿಯಾ ವಿಜಯ್ ವಿಶೇಷಚೇತನ ಅಭಿಮಾನಿಯನ್ನು ಮಾತನಾಡಿಸಿ ಥಿಯೇಟರ್ ಒಳಗೆ ಕರೆದುಕೊಂಡು ಹೋಗಿದ್ದಾರೆ.

ಇಂದು ಸಿನಿಮಾ ಅದ್ಧೂರಿಯಾಗಿ ಬಿಡುಗಡೆ ಆಗಿದ್ದರೆ, ಕಳೆದ ಎರಡ್ಮೂರು ವಾರಗಳಿಂದ ಚಿತ್ರದ ಪ್ರಚಾರ ದೊಡ್ಡ ಮಟ್ಟದಲ್ಲೇ ನಡೆಯುತ್ತಿದೆ. ಕನ್ನಡದ ಅನೇಕ ಸಿನಿಮಾಗಳು ಬಿಡುಗಡೆ ಹೊಸ್ತಿಲಿನಲ್ಲಿದ್ದು, ಭೀಮ ಗೆಲುವಿನ ಭರವಸೆ ಕೊಟ್ಟಿದ್ದಾನೆ. ಕಳೆದ ವಾರ ಚಿತ್ರದ ಅಧಿಕೃತ ಟ್ರೇಲರ್ ಅನ್ನು ಹ್ಯಾಟ್ರಿಕ್​​ ಹೀರೋ ಶಿವರಾಜ್​ಕುಮಾರ್ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅನಾವರಣಗೊಳಿಸಿದ್ದರು. ಪಂಚಿಂಗ್​ ಡೈಲಾಗ್​​​​ಗಳುಳ್ಳ ಟ್ರೇಲರ್​​, ಹಾಡುಗಳು, ಪೋಸ್ಟರ್​​ಗಳು ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಇನ್ನು ಸಿನಿಮಾ ಗಲ್ಲಾಪಟ್ಟಿಗೆಯಲ್ಲಿ ಎಷ್ಟರ ಮಟ್ಟಿಗೆ ಸಂಪಾದಿಸಲಿದೆ ಎಂಬುದು ಶೀಘ್ರದಲ್ಲೇ ತಿಳಿಯಲಿದೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ಷಷ್ಠಿಪೂರ್ತಿ ಪೂಜೆಯಲ್ಲಿ ಭಾಗಿಯಾದ ಶಿವ ರಾಜ್​​ಕುಮಾರ್ ದಂಪತಿ- ವಿಡಿಯೋ - Shiva Rajkumar

ಬೆಂಗಳೂರಿನಲ್ಲೇ ಬಹುತೇಕ ಚಿತ್ರೀಕರಣ ನಡೆದಿದೆ. ಸಮಾಜಕ್ಕೊಂದು ಸಂದೇಶವನ್ನು ಈ ಸಿನಿಮಾ ಒಳಗೊಂಡಿದೆ. ಹೆಚ್ಚುತ್ತಿರುವ ಡ್ರಗ್ಸ್ ದಂಧೆ, ಯುವಕರೇಕೆ ರೌಡಿಸಂಗೆ ಎಂಟ್ರಿ ಕೊಡ್ತಾರೆ ಎಂಬಂತ ಅಂಶಗಳನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಸಾಮಾಜಿಕ ಸಂದೇಶವುಳ್ಳ ಈ ಚಿತ್ರದಲ್ಲಿ ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಿ ಕಾಕ್ರೋಚ್, ಕಲ್ಯಾಣಿ, ಅಶ್ವಿನಿ, ಪ್ರಿಯಾ, ಡ್ರಾಗನ್ ಮಂಜು ಸೇರಿದಂತೆ ಹಲವರು ನಟಿಸಿದ್ದಾರೆ.

ಇದನ್ನೂ ಓದಿ: ಆ.15ಕ್ಕೆ ಟ್ರೇಲರ್, 30ಕ್ಕೆ ಸಿನಿಮಾ: ಚಿತ್ರದ ಅನುಭವ ಹಂಚಿಕೊಂಡ 'ಲಾಫಿಂಗ್ ಬುದ್ದ' ತಂಡ - Laughing Buddha

ಸಿನಿಮಾದಲ್ಲಿ ಶಿವಸೇನಾ ಕ್ಯಾಮರಾ ಕೈಚಳಕವಿದ್ದು, ದೀಪು ಎಸ್.ಕುಮಾರ್ ಎಡಿಟಿಂಗ್​ ಮಾಡಿದ್ದಾರೆ. ಚರಣ್ ರಾಜ್ ಅವರ ಸಂಗೀತ, ಮಾಸ್ತಿ ಡೈಲಾಗ್ಸ್, ಚೇತನ್ ಡಿಸೋಜಾ, ವಿನೋದ್, ಗೌತಮ್ ಅವರ ಆ್ಯಕ್ಷನ್​ ಡೈರೆಕ್ಷನ್​​ ಮತ್ತು ಧನು ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಕೃಷ್ಣ ಸಾರ್ಥಕ್, ಜಗದೀಶ್ ಗೌಡ ಅದ್ಧೂರಿಯಾಗಿ ನಿರ್ಮಾಣ ಮಾಡಿರುವ ಚಿತ್ರ ಸದ್ಯ ಅನೇಕ ಚಿತ್ರಮಮದಿರಗಳಲ್ಲಿ ಸದ್ದು ಮಾಡುತ್ತಿದೆ.

Last Updated : Aug 9, 2024, 1:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.