ETV Bharat / entertainment

'ಭೈರತಿ ರಣಗಲ್' ಆಡಿಯೋ ರೈಟ್ಸ್ ದೊಡ್ಡ ಮೊತ್ತಕ್ಕೆ ಮಾರಾಟ: ಶುಕ್ರವಾರ ಟೀಸರ್ ರಿಲೀಸ್ - Bhairathi Ranagal Audio Rights - BHAIRATHI RANAGAL AUDIO RIGHTS

ಭೈರತಿ ರಣಗಲ್ ಚಿತ್ರದ ಆಡಿಯೋ ಹಕ್ಕನ್ನು ಒಂದು ಕೋಟಿ ಹತ್ತು ಲಕ್ಷ ರೂಪಾಯಿಗೆ ಆನಂದ್ ಆಡಿಯೋ ಕಂಪನಿ ಖರೀದಿಸಿದೆ ಎಂದು ಮೂಲಗಳು ತಿಳಿಸಿವೆ.

Bhairathi Ranagal poster
'ಭೈರತಿ ರಣಗಲ್' ಪೋಸ್ಟರ್ (ETV Bharat)
author img

By ETV Bharat Karnataka Team

Published : Jul 9, 2024, 12:58 PM IST

ಸ್ಯಾಂಡಲ್​​ವುಡ್​ ಹ್ಯಾಟ್ರಿಕ್ ಹೀರೋ ಶಿವ ರಾಜ್​​ಕುಮಾರ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ 'ಭೈರತಿ ರಣಗಲ್'. ನರ್ತನ್ ನಿರ್ದೇಶನದಲ್ಲಿ ಅದ್ಧೂರಿಯಾಗಿ ಮೂಡಿಬರುತ್ತಿರುವ ಈ ಚಿತ್ರ ಒಂದಿಲ್ಲೊಂದು ವಿಚಾರವಾಗಿ ಸಖತ್​​​ ಸುದ್ದಿಯಲ್ಲಿದೆ. ಇದೀಗ ಟೀಸರ್​​ ಬಿಡುಗಡೆಯ ಸಿದ್ಧತೆಯಲ್ಲಿದೆ ಚಿತ್ರತಂಡ. ಹೌದು, ಶಿವಣ್ಣನ ಬರ್ತ್‌ಡೇಗೆ 'ಭೈರತಿ ರಣಗಲ್' ಟೀಸರ್ ಬಿಡುಗಡೆ ಆಗಲಿದೆ. ಈ ಟೀಸರ್ ಅನ್ನು 'First Verdict' ಎಂದು ಚಿತ್ರತಂಡ ಬಣ್ಣಿಸಿದೆ.

ಇದೇ ಶುಕ್ರವಾರ, ಜುಲೈ 12ರಂದು ಶಿವಣ್ಣ ತಮ್ಮ 62ನೇ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ. ತಮ್ಮ ಮೆಚ್ಚಿನ ನಟನ ಜನ್ಮದಿನವನ್ನು ಹಬ್ಬದಂತೆ ಆಚರಿಸಿ ಸಂಭ್ರಮಿಸಲಿರುವ ಫ್ಯಾನ್ಸ್, ಮುಂದಿನ ಸಿನಿಮಾಗಳ ಅಪ್ಡೇಟ್ಸ್ ನಿರೀಕ್ಷಿಸಿದ್ದಾರೆ.

ಅಂದಹಾಗೆ, 'ಭೈರತಿ ರಣಗಲ್', 'ಮಫ್ತಿ' ಸಿನಿಮಾದ ಪ್ರೀಕ್ವೆಲ್ ಆಗಿದ್ದು, ನರ್ತನ್ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಚಿತ್ರದಲ್ಲಿ ಶಿವ ರಾಜ್‌ಕುಮಾರ್ ಎರಡು ಶೇಡ್​​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವರ್ಷ ತೆರೆ ಕಾಣುತ್ತಿರುವ ಕನ್ನಡದ ಬಿಗ್​ ಪ್ರಾಜೆಕ್ಟ್​ ಇದು. ಇದೀಗ ಚಿತ್ರದ ಜೊತೆ ಕೈ ಜೋಡಿಸಿರುವುದು ನಮಗೂ ಖುಷಿ ತಂದಿದೆ. ಪ್ರಚಾರ ಕೆಲಸವೂ ದೊಡ್ಡ ಮಟ್ಟದಲ್ಲಿಯೇ ಸಾಗಲಿದೆ ಎಂದಿದ್ದಾರೆ ಆನಂದ್ ಆಡಿಯೋದ ಶ್ಯಾಮ್ ಚಾಬ್ರಿಯಾ.

ಇದನ್ನೂ ಓದಿ: ದರ್ಶನ್ ಜೈಲುವಾಸದ ಮಧ್ಯೆ 2005ರ ಮಾಸ್‌ ಹಿಟ್‌ 'ಶಾಸ್ತ್ರೀ' ಶುಕ್ರವಾರ ಮರು ಬಿಡುಗಡೆ - Shastri Re Release

'ಭೈರತಿ ರಣಗಲ್' ಆಡಿಯೋ ಹಕ್ಕನ್ನು ಒಂದು ಕೋಟಿ ಹತ್ತು ಲಕ್ಷ ರೂಪಾಯಿಗೆ ಆನಂದ್ ಆಡಿಯೋ ಕಂಪನಿ ಖರೀದಿಸಿದೆ ಎಂದು ಶಿವ ರಾಜ್​​ಕುಮಾರ್ ಆಪ್ತರು ಹೇಳಿದ್ದಾರೆ. ಚಿತ್ರದಲ್ಲಿ ರುಕ್ಮಿಣಿ ವಸಂತ್‍, ರಾಹುಲ್ ಬೋಸ್‍, ಅವಿನಾಶ್‍, ದೇವರಾಜ್‍, ಮಧು ಗುರುಸ್ವಾಮಿ, ಛಾಯಾ ಸಿಂಗ್‍, ಬಾಬು ಹಿರಣ್ಣಯ್ಯ ಸೇರಿದಂತೆ ಮುಂತಾದವರು ಅಭಿನಯಿಸುತ್ತಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ ನಿರ್ವಹಿಸುತ್ತಿದ್ದು, ರವಿ ಬಸ್ರೂರು ಸಂಗೀತವಿದೆ.

ಇದನ್ನೂ ಓದಿ: 'ಮುದುಡಿದ ಎಲೆಗಳು' ಚಿತ್ರದಲ್ಲಿ 'ಡೇಂಜರಸ್​' ನಟಿ ಅಪ್ಸರ ರಾಣಿ - Apsara Rani

ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿ, ಗೀತಾ ಶಿವ ರಾಜಕುಮಾರ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ವೇದ ಸಿನಿಮಾ ಯಶಸ್ಸಿನ ಬಳಿಕ ಗೀತಾ ಪಿಕ್ಚರ್ಸ್ ನಿರ್ಮಿಸುತ್ತಿರುವ ಎರಡನೇ ಸಿನಿಮಾವಿದು. ಶೀಘ್ರದಲ್ಲೇ ಸಿನಿಮಾ ಬಿಡುಗಡೆ ದಿನಾಂಕವನ್ನು ತಂಡ ಘೋಷಿಸಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ಸಿನಿಮಾ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.