ETV Bharat / entertainment

ಕಿಚ್ಚನ 'ಮ್ಯಾಕ್ಸ್' ಬಿಡುಗಡೆಗೆ ಮುಹೂರ್ತ ಫಿಕ್ಸ್: ಇನ್ಮುಂದೆ ವರ್ಷಕ್ಕೆ 2 ಸಿನಿಮಾ ಕೊಡಲಿದ್ದಾರೆ ಸುದೀಪ್ - MAX movie - MAX MOVIE

ವಿಜಯ್ ಕಾರ್ತಿಕೇಯ ಆ್ಯಕ್ಷನ್​​ ಕಟ್​ ಹೇಳಿರುವ 'ಮ್ಯಾಕ್ಸ್' ಸಿನಿಮಾ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಅಭಿನಯ ಚಕ್ರವರ್ತಿ ಖ್ಯಾತಿಯ ಸುದೀಪ್​ ಸಿನಿಮಾ ಮೇಲೆ ಅಭಿಮಾನಿಗಳು ಸಾಕಷ್ಟು ನಿರಿಕ್ಷೆಗಳನ್ನಿಟ್ಟುಕೊಂಡಿದ್ದು, ಅವರ ಆಪ್ತರೋರ್ವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

MAX Poster
ಮ್ಯಾಕ್ಸ್ ಪೋಸ್ಟರ್ (ETV Bharat)
author img

By ETV Bharat Entertainment Team

Published : Jul 31, 2024, 2:09 PM IST

'ಮ್ಯಾಕ್ಸ್', ತನ್ನ ಶೀರ್ಷಿಕೆಯಿಂದಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಖತ್​​ ಟಾಕ್ ಆಗುತ್ತಿರುವ ಸಿನಿಮಾ. ಸೂಪರ್ ಹಿಟ್ 'ವಿಕ್ರಾಂತ್ ರೋಣ' ಚಿತ್ರದ ಬಳಿಕ ಕಿಚ್ಚ ಸುದೀಪ್ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಚಿತ್ರ. ಹೀಗಾಗಿ, ಕಿಚ್ಚನ‌ ಅಭಿಮಾನಿ ಬಳಗದಲ್ಲಿ ದೊಡ್ಡ ಮಟ್ಟದ ನಿರೀಕ್ಷೆಯಿದೆ. ಇತ್ತೀಚೆಗೆ ರಿವೀಲ್ ಆದ ಟೀಸರ್ ಚಿತ್ರದ ಮೇಲಿನ ನಿರೀಕ್ಷೆ, ಕುತೂಹಲವನ್ನು ದುಪ್ಪಟ್ಟುಗೊಳಿಸಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಅಭಿನಯ ಚಕ್ರವರ್ತಿಯ 'ಮ್ಯಾಕ್ಸ್' ಆಗಸ್ಟ್​​ನಲ್ಲಿ ರಿಲೀಸ್ ಆಗಬೇಕಿತ್ತು. ಆದ್ರೆ ಈ ಚಿತ್ರದ ಗ್ರಾಫಿಕ್ಸ್, ವಿಎಫ್​​ಎಕ್ಸ್ ಕೆಲಸ ಮುಗಿಯದ ಕಾರಣ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ.

ಇತ್ತೀಚೆಗೆ ಅನಾವರಣಗೊಂಡಿರುವ 'ಮ್ಯಾಕ್ಸ್' ಟೀಸರ್‌ ನೋಡಿದ್ರೆ, ಇದೊಂದು ಪಕ್ಕಾ ಮಾಸ್ ಆ್ಯಕ್ಷನ್ ಜೊತೆಗೆ ಸಸ್ಪೆನ್ಸ್ ಥ್ರಿಲ್ಲರ್ ಜಾನರ್​​ನ ಸಿನಿಮಾ ಅನ್ನೋದು ಬಹುತೇಕ ಪಕ್ಕಾ ಆಗಿದೆ. ಕಿಚ್ಚನನ್ನು ಟೀಸರ್​ನಲ್ಲಿ ಮಾಸ್ ಅವತಾರದಲ್ಲಿ ತೋರಿಸಲಾಗಿದೆ. ಆದ್ರೆ ಈ ಸಿನಿಮಾದಲ್ಲಿ ಕಿಚ್ಚ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳಲಿದ್ದು, ಕಥೆಯ ಸುತ್ತಲಿನ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

ಚಿತ್ರದಲ್ಲಿ ಸುದೀಪ್ ಭರ್ಜರಿ ಸಾಹಸ ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಈ ಟೀಸರ್ ಮೂಲಕ ಸುಳಿವು ಸಿಕ್ಕಿದೆ.​ ಆ್ಯಕ್ಷನ್ ದೃಶ್ಯಗಳು ಮೈಜುಂ ಎನ್ನಿಸುವಂತಿದ್ದು, ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಟೀಸರ್‌ನ ಕೊನೆಯಲ್ಲಿ ಬರುವ ಸುದೀಪ್ ಡ್ಯಾನ್ಸ್ ದೃಶ್ಯ, ಥಿಯೇಟರ್‌ನಲ್ಲಿ ಫ್ಯಾನ್ಸ್‌ಗೆ ಭರ್ಜರಿ ಟ್ರೀಟ್ ಸಿಗಲಿದೆ ಅನ್ನೋ ವಿಶ್ವಾಸವಿದೆ.

ಚಿತ್ರದಲ್ಲಿ ಸುದೀಪ್ ಜೊತೆ ವರಲಕ್ಷ್ಮೀ ಶರತ್‌ಕುಮಾರ್, ತೆಲುಗು ನಟ ಸುನೀಲ್, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ನರೇನ್, ಸಂಯಕ್ತಾ ಹೊರನಾಡು ಸೇರಿದಂತೆ ಹಲವರು ನಟಿಸಿದ್ದಾರೆ. ಸುದೀಪ್ ಈ ಚಿತ್ರದಲ್ಲಿ ಅಭಿನಯ ಅಷ್ಟೇ ಅಲ್ಲದೇ, ನಿರ್ಮಾಪಕರಾಗಿಯೂ ಜವಾಬ್ದಾರಿ ಹೊತ್ತಿದ್ದಾರೆ. ತಮಿಳು ನಿರ್ಮಾಪಕ ಕಲೈಪುಲಿ ಎಸ್ ತನು ಅವರ ವಿ‌. ಕ್ರಿಯೇಷನ್ಸ್ ಹಾಗೂ ಕಿಚ್ಚ ಸುದೀಪ್ ಅವರ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಬರೋಬ್ಬರಿ 50 ಕೋಟಿ ರೂ. ಬಜೆಟ್​ನಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಹಾಗಾಗಿ ನಿರೀಕ್ಷೆ ಕೊಂಚ ಹೆಚ್ಚೇ ಇದೆ.

ಸಂಪೂರ್ಣ ಚಿತ್ರೀಕರಣವನ್ನು ತಮಿಳುನಾಡಿನ ಮಹಾಬಲಿಪುರಂ ಬಳಿ ಹಾಕಿದ್ದ ಬೃಹತ್ ಸೆಟ್‌ನಲ್ಲಿ ಮಾಡಲಾಗಿದೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಮೂಡಿಬರಲಿದೆ. ಸಿನಿಮಾಗೆ ವಿಜಯ್ ಕಾರ್ತಿಕೇಯ ಆ್ಯಕ್ಷನ್​​ ಕಟ್​ ಹೇಳಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

ಇದನ್ನೂ ಓದಿ: 'ದರ್ಶನ್ ಅಪರಾಧಿ ಅಲ್ಲ, ಅವರ ಮೇಲೆ ಗಂಭೀರ ಆರೋಪವಿದೆ': ನಟ ಚೇತನ್ ಅಹಿಂಸಾ - ACTOR CHETAN ON DARSHAN CASE

ಸುದೀಪ್ ಆಪ್ತರೊಬ್ಬರ ಪ್ರಕಾರ, ವಿಎಫ್​​ಎಕ್ಸ್ ಕೆಲಸಗಳಿನ್ನೂ ಮುಗಿದಿಲ್ಲ. ಹಾಗಾಗಿ ಸಿನಿಮಾ ಬಿಡುಗಡೆಗೆ ತಡವಾಯಿತು. ಇದೇ ಸೆಪ್ಟೆಂಬರ್ ತಿಂಗಳು ವಿಶ್ವದಾದ್ಯಂತ ಮ್ಯಾಕ್ಸ್ ಸಿನಿಮಾ ಬಿಡುಗಡೆ ಆಗಲಿದ್ದು, ಮ್ಯಾಕ್ಸ್ ಸಿನಿಪ್ರಿಯರಿಗೆ ಇಷ್ಟ ಆಗಲಿದೆ. ಜೊತೆಗೆ, ಸುದೀಪ್ ಅವರು ಇನ್ಮುಂದೆ ವರ್ಷಕ್ಕೆ ಎರಡು ಸಿನಿಮಾ ಮಾಡಲು ನಿರ್ಧರಿಸಿದ್ದಾರೆಂದು ತಿಳಿಸಿದರು‌.

ಇದನ್ನೂ ಓದಿ: ಸಾಮಾಜಿಕ ಸಂದೇಶದ 'ಕೋಟಿ ಕೋಟಿ ರೊಕ್ಕ ಗಳಿಸಿ' ಗೀತೆ ಬಿಡುಗಡೆ - Koti Koti Rokka Galisi Song

ಒಟ್ಟಾರೆ ಈ ಏಳು ತಿಂಗಳಲ್ಲಿ ಯಾವುದೇ ಸ್ಟಾರ್ ಚಿತ್ರಗಳಿರಲಿಲ್ಲ. ಕನ್ನಡದ ಚಿತ್ರಮಂದಿರಗಳಲ್ಲಿ ಪರಭಾಷೆಯ ಸಿನಿಮಾಗಳು ಬಿಡುಗಡೆ ಆಗುತ್ತಿದ್ದವು. ಉಳಿದ ಐದು ತಿಂಗಳಲ್ಲಿ ಒಂದರ ಹಿಂದೆ ಒಂದರಂತೆ ಸ್ಟಾರ್ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಇವರಲ್ಲಿ ಯಾರು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನ ರಂಜಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.